@ಚಿತ್ರ ಪ್ರಕಾಶಣ್ಣ
-೧-
ನನ್ನ ದಾಹ
ತೀರಿಸಿ
ದಣಿವಾರಿಸುವ
ಹನಿ ಹನಿಯ ಮುತ್ತು ನೀನು. .
---
ಬಿಸಿಲ ತಾಪ
ಸರಿಸಿ
ಬಾಯಾರಿಕೆಯ
ಮರೆಸಿ
ನಗುವ ತರಿಸಿದ
ಪ್ರಾಣ ನೀನು. .
--------
ದಣಿದ ದೇಹಕೆ
ಬಾಡಿದ ಮೊಗಕೆ
ಒಣಗಿದ ಗಂಟಲಿಗೆ
ತೃಪ್ತಿ ತರಿಸಿದ
ತಂಪು ನೀನು. .
-----------------
-೨-
ಕೊಳವು ನಾನು
ಮಲೀನ ನೀನು
ಸ್ತಬ್ಧ ಸ್ಥಿತಿಗೆ
ಅಲೆಯ ಎಳೆ
ತಂದವಳು ನೀನು. .
-----
ಪ್ರಶಾಂತ ಕೊಳದಿ
ಗುಟುಕೇರಿಸುವುದೇನೋ ಸರಿ. .
ಆದರೆ
ನನ್ನ ಒಡಲಲಿರುವ
ಮೀನುಗಳ
ನುಂಗದಿದ್ದರೆ ಸಾಕು. .
--------
ದಣಿದು ಬಂದವಗೆ
ನೀರನುಣಿಸಿ
ಆತಿಥ್ಯ ನೀಡೋ
ಒಡಲು ನಾನು. .