Wednesday, January 28, 2009

ದೊರೆ ಮಾಡಿದ್ದಕ್ಕೆ ದಂಡ ಇಲ್ಲ.........!!!


ಇದು ನಾನು ಕೇಳಿದ್ದು ಕೆಲವು ಸಂದರ್ಭ ಕಣ್ಣಾರೆ ಕಂಡಿದ್ದು....
ಇತ್ತೀಚೆಗೆ ಎಲ್ಲರಿಗೊ ತಿಳಿದ ಹಾಗೆ ಹಣದ ಇಳಿಕೆಯಿಂದ ಪ್ರಪಂಚದ ಎಲ್ಲಾ ಕಡೆಗಳಲ್ಲೊ ಎಲ್ಲಾ ಕಂಪನಿಗಳಲ್ಲೊ ನೌಕರರ ಕಡಿತ ನೆಡೆಯುತ್ತಲೇ ಇದೆ ಎಲ್ಲಿ ನೋಡಿದರು ಹಣದ ವ್ಯಯ ಎಲ್ಲಿ ಉಳಿಸಬಹುದು ಎಂಬ ಚಿಂತೆಯಲ್ಲೇ ಕಂಪನಿಯಲ್ಲಿರುವ ಎಲ್ಲರ ಮೇಲೆ ಒತ್ತಡವೇರುವ ಸ್ಥಿತಿ ಬಂದಿದೆ...
ಹೀಗಿರುವಾಗ ನನ್ನದೊಂದು ಸಣ್ಣ ಪ್ರಶ್ನೆ ಕಾಡಿದ್ದೇನೆಂದರೆ.... ಮೊನ್ನೆ ನಮ್ಮ ಚಿರಪರಿಚಿತರೇಳಿದರು ಅವರ ಕಂಪನಿಯ ವ್ಯವಸ್ಥಾಪಕರು ಜರ್ಮನಿ,ಯೂರೋಪ್ ಅಂತ ಹೇಳಿ ನಾಲ್ಕಾರು ದೇಶ ಸುತ್ತಿ ಅಲ್ಲಿರುವ ಕೆಲವು ಕಂಪನಿಗಳನ್ನು ಪರಿಶೀಲಿಸಿ ಅಲ್ಲಿನ ವ್ಯವಸ್ಥೆ ಇವರ ಕಂಪನಿಗೆ ಬೇಕಾದ ಸಾಮಗ್ರಿಗಳನ್ನು ತರಿಸಿಕೊಳ್ಳಲು ಎಲ್ಲದರ ವಿಶ್ಲೇಷಣೆಗೆಂದು ಇವರ ಜೊತೆ ಮತ್ತೂ ಕೆಲವರನ್ನು ಕರೆದುಕೊಂಡು ಹೋಗಿದ್ದಾರೆಂದು ನಾನು ಕೇಳಿದೆ ಅಷ್ಟು ಅವಶ್ಯಕತೆಯೇ ಹೋಗಲು ಇತ್ತೀಚೆಗಷ್ಟೆ ಅವರ ಕಂಪನಿಯಲ್ಲಿ ಸುಮಾರು ೩೦ ರಿಂದ ೪೦ ಜನರನ್ನು ಕೆಲಸದಿಂದ ತೆಗೆದಿದ್ದರು ಅದು ೧೦ ದಿನಗಳ ಅವಧಿ ಕೊಟ್ಟು ಕೆಲಸದಿಂದ ಹೋಗಬೇಕೆಂದು ..ಅವರು ೧೦ ದಿನದಲ್ಲಿ ಹೇಗೆ ತಯಾರಿ ನೆಡೆಸುತ್ತಾರೆ ಅವರಿಗೆ ಆದ ಸಂಸಾರ, ಅವರದೆ ಆದ ಕೆಲವು ಖರ್ಚು ವೆಚ್ಚ ಎಲ್ಲವೊ ನಿಭಾಯಿಸುವುದು ಬಲು ಕಷ್ಟ ಅಲ್ಲವೇ..? ಕಾರಣ ಕೇಳಿದರೆ ನಮ್ಮ ಕಂಪನಿಯಲ್ಲಿ ಹಣ ಇಲ್ಲ ಯಾವುದೆ ವ್ಯವಹಾರಗಳು ನೆಡೆಯುತ್ತಿಲ್ಲ ಇದೆ ಉತ್ತರಗಳು ಬರುತ್ತೆಂದು ನನ್ನ ಸ್ನೇಹಿತೆ ಹೇಳಿದಳು...

ಇನ್ನು ಇಷ್ಟೆಲ್ಲ ತೊಂದರೆ ಇರುವಾಗ ವ್ಯವಸ್ಥಾಪಕರಾಗಲಿ ಅವರೊಂದಿಗೆ ಹೋಗೊ ಜನರಾಗಲಿ ಬೇಕಿತ್ತೆ ಎಂಬ ಪ್ರಶ್ನೇ... ನನ್ನದು... ಅವರ ಕಚೇರಿಯಲ್ಲಿ ಇದು ಹೊಸತೆನಲ್ಲ ತಿಂಗಳಿಗೆ ೩,೪ ಭಾರಿ ಹಲವು ದೇಶ ಸುತ್ತುವುದೇ ಕೆಲಸ ಹೀಗೆ ಹಲವು ಕಂಪನಿಗಳಲ್ಲಿ ನೆಡೆಯುತ್ತಲಿದೆ... ಒಂದು ಭಾರಿ ಹೊರದೇಶಕ್ಕೆಂದು ಹೋಗಿ ಬಂದರೆ ಸಾಕು ಲಕ್ಷಾಂತರ ದಿನಾರುಗಳು ಖರ್ಚು ವೆಚ್ಚ ಭರಿಸಬೇಕಾಗುತ್ತದೆ.....

ಈ ಮಾತಿನ ಮಧ್ಯೆ ನನ್ನ ಸ್ನೇಹಿತೆಗೆ ಹೇಳಿದೆ ಅವರು ಒಂದು ಭಾರಿ ಭರಿಸೊ ಹಣ ೩ ನೌಕರರ ಸಂಬಳಕ್ಕೆ ಸಮಾನ ಸಣ್ಣ ಕೆಲಸದಲ್ಲಿರುವ ಆ ಬಡ ಜೀವಿಗಳಿಗೆ ಕೊಡಲು ಹಣವಿಲ್ಲ ಇವರ ಮಜಕ್ಕೆ ಹಣವೆಲ್ಲಿಂದ ಬರುತ್ತೆಂದು ಕೇಳಿದಕ್ಕೆ ಅವಳ ಉತ್ತರ ದೊರೆ ಮಾಡಿದ್ದು ದಂಡಂ ಲೇದು...! ಎಂದು ತೆಲುಗಿನ ನುಡಿ ಮುತ್ತು ಸುರಿಸಿದಳು... ನನಗು ಆ ಮಾತು ಸರಿ ಎನಿಸಿತು.. ದೊಡ್ಡವರು ಸ್ವಲ್ಪ ಯೋಚಿಸಿ ಎಲ್ಲಿ ಉಳಿಸಬೇಕು.. ಹೇಗೆ ಉಳಿತಾಯಕ್ಕೆ ಕೈಚಾಚಬೇಕು ಎಂದು ಯೋಚನಾಶೀಲರಾಗ ಬೇಕೆಂದು ನನ್ನಾಸೆ..

ಇನ್ನು ಹಣವಿಲ್ಲ ಎಲ್ಲ ಕಡೆ ಹಣ ಇಳಿಕೆ ಹೆಚ್ಚಾಗಿದೆ...ಹಾಗೆ ಹೀಗೆ ಎಂದು ಹೇಳುತ್ತಾರೆ ಇನ್ನು ಕಂಪನಿಗಳಿಗೆ ವರಮಾನ ಹೆಚ್ಚು ಬಂದರೆ ಅವರೆಲ್ಲ ಕೆಳವರ್ಗದ ನೌಕರರಲ್ಲಿ ಹಂಚುತ್ತಾರ..? ಖಂಡಿತ ಇಲ್ಲ...
ಪ್ರಪಂಚದಲ್ಲಾಗಿರೋ ಈ ಹಣದ ಒಡೆತಕ್ಕೆ ಬಡ ಕುಟುಂಬಗಳು ಮಮ್ಮಲಮರುಗಿಹೋಗಿವೆ... ನಾನು ಭಾರತದಲ್ಲಿ ಇಲ್ಲದಿದ್ದರೊ ಇಲ್ಲಿರುವ ಭರತ ಮಕ್ಕಳ ನೋವು ಅವರಲ್ಲಿನ ಮನದ ತುಳಿತ ಎಲ್ಲವೊ ಕಣ್ಣ ಮುಂದೆ ನೆಡೆಯುತಿದೆ.
ಅರಬ್ಬಿ ರಾಷ್ಟ್ರಗಳಿಗೆ ಬಂದಿರುವ ಕೂಲಿವರ್ಗದ ಜನ ಏಜೆಂಟರುಗಳಿಗೆಂದು ಒಂದಷ್ಟು ಹಣ ನೀಡಿ ಇಲ್ಲಿ ಬರಿ ೮ ರಿಂದ ೧೦ ಸಾವಿರ ರೂಪಾಯಿಗೆಂದು ಕೆಲಸಕ್ಕೆ ಬಂದಿರುತ್ತಾರೆ (ಕೆಲವರೊ ಇನ್ನು ಕಡಿಮೆ ಸಂಬಳಕ್ಕೆ ಬಂದಿದ್ದಾರೆ) ದಿನವಿಡಿ ದುಡುದು ಅದರಲ್ಲಿ ತಮ್ಮ ಖರ್ಚು ವೆಚ್ಚ ಎಲ್ಲ ಕಳೆದು ಊರಿಗೆ ಅವರನ್ನೆ ಅವಲಂಬಿಸಿರುವವರಿಗೆಂದು ತಿಂಗಳಲ್ಲಿ ಸ್ವಲ್ಪ ಹಣ ಕಳಿಸಬೇಕು... ಇಂತಹ ಸ್ಥಿತಿಯಲ್ಲಿ ಇರೊ ಈ ಪುಟ್ಟ ಸಂಸಾರಗಳ ಹೂರೆ ಹೊರುವುದು ಬಲು ಕಷ್ಟ....

ಇಲ್ಲಿನ ಹವಮಾನ ಅಷ್ಟು ಸರಿ ಇಲ್ಲ ಬೇಸಿಗೆಯಲ್ಲಿ ಬಿಸಿ ಹೆಚ್ಚು ಕೆಲವರು ಈ ತಾಪಕ್ಕೆ ಸತ್ತದ್ದು ಉಂಟು... ಇನ್ನು ಚಳಿಗಾಲದಲ್ಲಿ ತುಂಬ ಚಳಿ... ಹೀಗಿರುವಾಗ ಅವರು ಯಾವುದೇ ಒಡೆತಕ್ಕೊ ಎದೆಗುಂದದೆ ಕಂಪನಿಯ ಏಳ್ಗೆಗೆಂದು ಶ್ರಮಿಸುತ್ತಾರೆ ಇಂತಹ ಬಡ ಜೀವಕ್ಕೆ ಯಾರು ಆಸರೆ ...ಈ ಹಣ ಏನೆಲ್ಲ ಮಾಡಿಸುತ್ತೆ... ?
ಕಂಪನಿಗಳಲ್ಲಿ ಕೆಲಸವಿಲ್ಲವೆಂದು ಕಳಿಸದೆ ಬರುತ್ತಿರುವ ಸಂಬಳದಿ ಸ್ವಲ್ಪ ಕಡಿತ ಮಾಡಿಯಾದರು ಅಲ್ಲಿರುವ ನೌಕರರನ್ನು ಮುಂದುವರಿಸಿದರೆ... ಅವರ ಕುಟುಂಬವೂ ಉಳಿಯುತ್ತೆಂಬುದು ನನ್ನ ಅಭಿಪ್ರಾಯ... ವ್ಯವಸ್ಥಪಾಕರಾಗಲಿ ಕಂಪನಿಗೆ ಸಂಬಂದಿಸಿದ ಎಲ್ಲ ಮೇಲ್ದರ್ಜೆಯ ಅಧಿಕಾರಿಗಳು ಐಶಾರಾಮಿ ಜೀವನಕ್ಕೆ ಕಡಿವಾಣವಾಕಿ ಬಡ ಜೀವಕ್ಕೆ ಆಸರೆಯಾದರೆ ಬಲು ಒಳಿತು ಎಂಬುದು ನನ್ನ ಮಹದಾಸೆ... ಆದರೆ ಇದೆಲ್ಲ ಕೈಗೂಡುವುದು ಸಾಧ್ಯವೇ ತಿಳಿಯದು..

ಹೂರದೇಶದಲ್ಲಿ ಕೆಲಸವಿಲ್ಲದೆ ಇರುವುದು ಬಲು ಕಷ್ಟ....ನಮ್ಮೂರಾದರೇನೊ ಅಲ್ಪಸ್ವಲ್ಪ ನಿಭಾಯಿಸೊ ಧೈರ್ಯ, ನನ್ನವರೊ ಅನ್ನೊ ಜನ, ನನ್ನದೊ ಎಂಬ ವಸ್ತು ಎಲ್ಲವೊ ಇರುತ್ತೆ ಆದರಿಲ್ಲಿ ನನ್ನದೂ ಎನ್ನುವುದೇನು ಇಲ್ಲ... ಎಲ್ಲವೊ ಪರರದೆ
...

Monday, January 26, 2009

ಗಣ ರಾಜ್ಯೋತ್ಸವದ ಶುಭಾಶಯಗಳು..


ದೇಶಕ್ಕಾಗಿ ಪ್ರಾಣ ತೆತ್ತ ಎಲ್ಲಾ ಯೋಧರಿಗೂ.. ಹಾಗು ಮುಂಬೈ ದಾಳಿಗೆ ತುತ್ತಾದ ಯೋಧರಿಗೂ ಮತ್ತು ಸಾಮಾನ್ಯ ಜನರಿಗೂ ಈ ಮೂಲಕ ನನ್ನ ಶ್ರದ್ಧಾಂಜಲಿ ಅರ್ಪಿಸುತ್ತಾ ...
ನಮ್ಮ ನಾಡಿಗೆ ಉಗ್ರರ ಕರಿನೆರಳು ಬೀಳದಿರಲೆಂದು ದೇವರಲ್ಲಿ ಪ್ರಾರ್ಥಿಸುತ್ತಾ ೫೯ನೇ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತೇನೆ...
ನಮ್ಮಲ್ಲಿ ಸಾಧ್ಯವಾಗೋ ಒಳಿತನ್ನು ನಮ್ಮ ಭರತಮಾತೆಗೆ ನೀಡೋಣ ... ಎಲ್ಲರು ಒಂದಾಗಿ....... ಸಹಬಾಳ್ವೆ ನಡೆಸೋಣ
ಜೈ ಭಾರತಾಂಬೆ !!!!
ಜೈ ಹಿಂದ್!!








Saturday, January 17, 2009

ದೇಶ ಪ್ರೇಮವೊ... ಏನೊ.. ತಿಳಿಯದು...?

ಮನೆಯಲ್ಲಿ ನೆನ್ನೆಯಷ್ಟೇ ತಂದಿದ್ದ ಎರಡು ಮುಖಕ್ಕೆ ಬಳಸೋ ಕ್ರೀಮ್ ಗಳು ಅಲ್ಲೆ ಕನ್ನಡಿಯ ಮುಂದಿತ್ತು, ಅದನ್ನು ತೆಗೆದು ಮಗ ಎಲ್ಲ ಮಾಹಿತಿಯನ್ನು ನೋಡುತ್ತಲಿದ್ದ... ನಾನು ಅವನ ಹೆಚ್ಚು ಗಮನಿಸದೆ ಫೈರ್ ಅಂಡ್ ಲವ್ ಲಿ ಕ್ರೀಮ್ ತೆಗೆದು ಅವನ ಮುಖಕ್ಕೆ ಸಿಂಗರಿಸಲು ಹೋದಾಗ ತಟ್ ಎಂದು ಹಿಂದೆ ಸರಿದಾ, ಏಕೆ...? ಎನಾಯಿತು ಬೇಗ ಬಾ ಶಾಲಾ ವಾಹನ ೬.೨೦ ಕ್ಕೆ ಬಂದು ಬಿಡುತ್ತಾನೆಂದೆ, ಅವನು ಅಮ್ಮ ಇರು ಸ್ವಲ್ಪ ಇನ್ನೊಂದು ಇದೆಯಲ್ಲ ಹಿಮಾಲಯ ಕ್ರೀಮ್ ಅದು ಕೊಡು ನನಗೆ ಅದೆ ಅಚ್ಚುಕೊತೀನಿ ಎಂದಾ ನಾನು ಇದು ಅಚ್ಚಿದರೆ ಏನಾಗುತ್ತೆ ತಗೊ ಬಾ .......ಸಮಯ ಇಲ್ಲ ನಿನ್ನ ಹತ್ತಿರ ಆಡೋಕೆ ಅಲ್ಲದೆ ಕೈನಲ್ಲಿ ಕ್ರೀಮ್ ತಗೋಂಡು ಬಿಟ್ಟಿದ್ದೀನಿ ಎಂದೆ......... ಇಲ್ಲ ನನ್ನ್ಗೆ ಅದೆ ಕೋಡು ಎಂದು ಹಠ ಮಾಡುತ್ತಲಿದ್ದ, ಅವನ ಹಠ ನೋಡಿ ಒಮ್ಮೆಲೆ ಸರಿ ಕಂದ ಎಂದು............ನಾನು ಹಿಮಾಲಯವನ್ನೆ ಕ್ರೀಮ್ ಬಳಸಿ ಸಿಂಗರಿಸಿದೆ....... ಸ್ವಲ್ಪ ಸಮಯದ ನಂತರ ಕೇಳಿದೆ ಏಕೆ ..? ನಿನಗೆ ಇಷ್ಟ ಇಲ್ಲವಾ ಆ ಕ್ರೀಮ್ ಎಂದೂ ಆ ರೀತಿ ಎದುರು ಮಾತನಾಡದವ ಹೀಗೆ ಹೇಳಿದನಲ್ಲ ಎಂಬ ಉತ್ಸುಕದೊಂದಿಗೆ ಕೇಳಿದೆ.........

ಅಮ್ಮ ನಿನಗೆ ಗೊತ್ತಿಲ್ಲವ ಹಿಮಾಲಯ ನಮ್ಮ ಬೆಂಗಳೂರಿನದು (Manufactured in Bangalore) ಎಂದು ಇತ್ತು ಅದಕ್ಕೆ ನಮ್ಮೊರಿನದನ್ನ ಬಳಸೋಣ ಅಂತ ಹೇಳಿದೆ ಅವತ್ತು ಒಂದು ದಿನ ನೀನೆ ಹೇಳ್ತಾ ಇದ್ದೆ ನಮ್ಮ ಇಂಡಿಯಾದಲ್ಲಿ ಮ್ಯಾನುಫ್ಯಾಕ್ಚರ್ ಮಾಡಿರೊ ವಸ್ತುನ ಬಳಸಬೇಕೆಂದು ಅದಕ್ಕೆ ನಾನು ಹಾಗೆ ಹೇಳಿದೆ ಎಂದ......(ಇತ್ತಿಚೆಗೆ ಒಂದು ಈ-ಮೈಲ್ ನಲ್ಲಿ ಭಾರತದ ವಸ್ತುಗಳನ್ನೇ ಕೊಳ್ಳಿ ಎಂದು ಬಂದಿತ್ತು ಅದನ್ನು ನಾನು ಮತ್ತು ನಮ್ಮ ಮನೆಯವರು ಆ ವಿಷಯವಾಗಿ ಚರ್ಚಿಸಿದ್ದೆವು).

ನನಗೆ ಹಿಂದೆಯೇ ಅವನ ಮಾತು ನಿಜ ಅಲ್ಲವೇ ಓಹ್ ನಾವು ಬರಿ ಮಾತಲ್ಲಿ ಹೇಳುತ್ತೇವೆ..... ಅವನು ಅದರ ಕಾರ್ಯಗತಗೊಳಿಸಿದ್ದಾನೆ......

ಇದಿಷ್ಟು ಬೆಳ್ಳಿಗ್ಗೆ ನೆಡೆದಿದ್ದರೆ ಸಂಜೆ ತ್ಯಾಗರಾಜರ ಆರಾದನ ಕಾರ್ಯಕ್ರಮಕ್ಕೆಂದು ನನ್ನ ಸ್ನೇಹಿತೆ ಆಹ್ವಾನದ ಮೆರೆಗೆ ತೆರೆಳಿದ್ದೆ ... ಅಲ್ಲಿಯೊ ಇದೆ ಅನುಭವ ಸ್ನೇಹಿತೆಯ ಮಗನನ್ನು ನನ್ನೊಂದಿಗೆ ಬಿಟ್ಟು ಆಕೆ ಕಾರ್ಯಕ್ರಮದ ಮೇಲ್ವಿಚಾರಣೆಗೆಂದು ತೆರಳಿದ್ದಳು... ಸ್ನೇಹಿತೆಯ ಮಗ ತಿಂಡಿ ಬೇಕೆಂದ ಕಾರಣ ನನ್ನ ಬ್ಯಾಗನಲ್ಲಿದ್ದ ಕಿಟ್-ಕ್ಯಾಟ್ ಕೊಡಲು ಹೊಗಿದ್ದಕ್ಕೆ ತಕ್ಷಣವೇ ಬೇಡ ನನಗೆ ಅಮೇರಿಕ ಮಾಡಿರೊ ತಿಂಡಿ ಇಷ್ಟ ಇಲ್ಲ ನಾನು ತಿನ್ನೊಲ್ಲವೆಂದ ಏಕೆ ಇನ್ನು ಯಾವುದು ತಿನ್ನುತ್ತೀಯಾ ಅಂದರೆ ಇಂಡಿಯಾದ್ದು (india made) ಮಾತ್ರ ತಿನ್ನುತೇನೆಂದ.... ನನಗೆ ಒಂದು ಕಡೆ ನಗು ಒಂದು ಕಡೆ ಆಶ್ಚರ್ಯ ಏನು ನಿಜವಾಗಿಯು ಮಕ್ಕಳು ಭಾರತ ಮೇಲೆ ಅಷ್ಟು ಪ್ರೀತಿಯೇ ಅಥವ ಆ ತಿಂಡಿ ತಿನ್ನುವ ಮನಸಿಲ್ಲದೆ ಹಾಗಂದನೇ......ಎಂದು.... ಇನ್ನು ಆ ಪ್ರಶ್ನೇಗೆ ಉತ್ತರ ಹುಡುಕುತ್ತಲೇ ಇರುವೆ........

ಒಟ್ಟಲ್ಲಿ ಬೇರೆನೆ ಅರ್ಥವಿದ್ದರು... ನಾವುಗಳು ಕಲಿಯುವುದು ಬಹಳ ಇದೆ.... ಇದೊಂದು ಮಾತ್ರ ಹೇಳಬಲ್ಲೆ.... ದೇಶಪ್ರೇಮ... ರಕ್ತಗತವಾಗಿ ಬಂದಿರುತ್ತದೆ.. ಅದು ಹುಡುಗಾಟಿಕೆಯೊ ಅಥವ ನಿಜವೋ ತಿಳಿಯದು ಆದರು ಎಲ್ಲೊ ಒಂದು ಕಡೆ ನಮ್ಮ ನೆಲ,ಜಲ, ಭಾಷೆ ಎಲ್ಲವನ್ನು ದೇವರು ಹುಟ್ಟುವಾಗಲೇ ಬಿತ್ತಿರುತ್ತಾನೆ....

Wednesday, January 14, 2009

ಮಕರ ಸಂಕ್ರಾಂತಿ ಶುಭಾಶಯಗಳು

ನೇಸರ ತನ್ನ ದಿಕ್ಕು ಬದಲಿಸಲು
ಜಗಕೆ ಹೊಸಚೈತನ್ಯದಾಯಕ...

ಮಾಗಿಯ ಚುಮುಚುಮು ಚಳಿಗೆ ವಿದಾಯ
ಭೂಮಿತಾಯಿ ಮಗನ ಹೊಸ ಬೆಳೆಗೆ ಆದಾಯ

ಭಾನಂಗಳದಿ ಪತಂಗಗಳ ಸಂಚಾರ
ಭುವಿಯಂಗಳದಿ ರಂಗೋಲಿಯ ಚಿತ್ತಾರ

ಹೊಸ ಬೆಳೆ ಹೊಸ ದಿಕ್ಕು
ಜಗದಿ ಹೊಸ ಕ್ರಾಂತಿ ಹರಡಲು...
ಬಂದಿದೆ ಸಂಕ್ರಮಣ...

ಈ ಮಕರ ಸಂಕ್ರಮಣ
ಗೆಣಸು,ಕಬ್ಬಿನೊಂದಿಗೆ ಕಿಚಡಿಯ ದಿಬ್ಬಣ

ಎಳ್ಳು ಬೆಲ್ಲದೊಂದಿಗೆ
ಒಳ್ಳೊಳ್ಳೆ ಮಾತು....
ಎಂಬ ನಾನ್ನುಡಿ ಎಲ್ಲರು ಪಾಲಿಸೋಣ.....

Thursday, January 8, 2009

ಧರಣಿ ಮಂಡಲದ ಪುಣ್ಯಕೋಟಿ... ನಾನಾದೆ ...

ನನ್ನ ಮಗನಿಗೆ ಕೆಲವೊಮ್ಮೆ ಕತೆಗಳನ್ನ ಹೇಳುತ್ತಲೇ ಇರಬೇಕು.... ನಾನು ಕೇಳ್ಳಿದ್ದೊ, ಓದಿದ್ದೊ, ಹೇಳುತ್ತಲಿದ್ದೆ ಕೆಲವೊಮ್ಮೆ ನಾನೆ ಸೃಷ್ಠಿಸಿಕೊಂಡು ಸುಳ್ಳು ಕತೆ ಹೇಳಲು ಹೋಗಿ ಮಗನಲ್ಲಿ ಸಿಕ್ಕಿಹಾಕಿಕೊಂಡು ಇದ್ದೇನೆ ಕೊಡ ಹ ಹಹ , ಓಹ್ ಅಮ್ಮ ನೀನು ಸುಮ್ಮನೆ ಹೇಳುತ್ತ ಇರೋದು ಇದು ಕತೆ ಅಲ್ಲ ಎಂದೆಲ್ಲ ಪೇಚಾಡಿದ್ದಾನೆ.... ಹೀಗೆ ಒಂದು ದಿನ ಯಾವುದಾದರು ಒಳ್ಳೆ ಕತೆ ಹೇಳಮ್ಮ ಆದರೆ ಅದು ನಿಜ ಇರಬೇಕು ಎಂದು ಮೊದಲೆ ತಾಕೀತು ಮಾಡಿದ್ದ... ನಾನು ಯೊಚಿಸುತ್ತಾ ಏನು ಹೇಳುವುದು ಎಂದು ಕೊನೆಯಲ್ಲಿ ಒಂದು ನೆನಪಾಯಿತು......... ಅದು ಎಲ್ಲರಿಗು ತಿಳಿದಹಾಗೆ ಇದು ಪ್ರಸಿದ್ದ ಹಾಗು ಮನೆಮಾತಾದ ಹಾಡು....

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರುನಾಡದೇಶದಿ
ಇರುವ ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು....

ಈ ಹಾಡು ಹೇಳುತ್ತಾ ಅದರ ಅರ್ಥ ಅದರಲ್ಲಿನ ವಿಶೇಷತೆ ಎಲ್ಲವನ್ನು ಒಂದೊಂದಾಗಿ ಬಿಡಿಸುತ್ತ ಹೇಳಿದೆ, ಅವನೊ ಕೂಡ ಭಾರಿ ಮಗ್ನನಾಗಿ.......ತುಂಬ ಉತ್ಸುಕದಿಂದ ಕೇಳುತ್ತಲಿದ್ದನು.... ಆ ಆಕಳು ಮಗುವಿನ ಪ್ರೀತಿ ಸಂಭಾಷಣೆ.... ಎಲ್ಲವೊ ಮನಕಲಕುವಂತಹುದೇ........?

ನನ್ನ ಕತೆ ಕೇಳಿ ಮುಗಿದ ನಂತರ ಅವನಿಂದ ಬಂದ ಉತ್ತರವೇನು ಗೊತ್ತೆ...? ಅಮ್ಮ ಕತೆ ಚೆನ್ನಾಗಿತ್ತು.. ಈಗ ಏನೋ ಒಂದು ಹೇಳ್ತಿನಿ ನೀವು ಅದನ್ನ ಕೇಳ್ಬೇಕು ಸರಿನಾ... ಅಂದಾ..

ಇನ್ನು ಮೇಲೆ ನೀನು ಪುಣ್ಯಕೋಟಿ.. ನಾನು ಕರು ಅಪ್ಪ ಹುಲಿರಾಜ.. ಎಂದು ತಟ್ಟನೆ ಹೇಳಿಬಿಟ್ಟ.... ನನಗೆ ಆಶ್ಚರ್ಯ ಜೊತೆಗೆ ಅವನು ಏನೆಲ್ಲ ಲೆಕ್ಕಾಚಾರ ಮಾಡಿದ್ದ ನಾನು ಕತೆ ಹೇಳುವಾಗ ಎಂದು ಊಹಿಸಿತ್ತಲಿದ್ದೆ. ಜೊತೆಗೆ ನಗು.. ನಾನು ನನ್ನ ಮನೆಯವರು ಒಟ್ಟಿಗೆ ಜೋರಾಗಿ ನಕ್ಕು ಬಿಟ್ಟೆವು.. ಅದಕ್ಕೆ ಆಗ ಅವನು ವಿಶ್ಲೇಷಣೆ ಕೂಡ ಕೊಟ್ಟ... ಹಸು ಅಮ್ಮ ಅಲ್ಲವಾ ಕರು ಮಗ ಅಲ್ಲವಾ ಹಾಗಿದ್ದರೆ ನಾನು ನೀನೆ ಅದು... ನನ್ಗೆ ಆಗ ಉತ್ತರ ಕೊಡಲು ಆಗಲೇ ಇಲ್ಲ........

ಅಂದಿನಿಂದ ನಾನು ಪುಣ್ಯಕೋಟಿ...ನನ್ನ ಪತಿ ಹುಲಿರಾಜ.... ಮಗ ಕರು ಆದೆವು... ನಾವು ಈಗಲು ನಮ್ಮ ಹೆಸರಿನಿಂದ ನಾವು ಕರೆಯುವುದೇ ಇಲ್ಲ ಮಗನನ್ನು ಕರು ಎಂದೆ ಕರೆಯೊದು ಇನ್ನು ಅಪ್ಪನ ಕೇಳಲು ಏನಾದರಿದ್ದರೆ ಹುಲಿರಾಜ, ನಾನು ಪುಣ್ಯಕೋಟಿ ದೂಡ್ಡ ಹೆಸರಿನಿಂದ ಪುಟ್ಟದಾಗಿ ಪುಣ್ಯ ಆಗಿದ್ದೇನೆ...............

ಆಗಾಗ ಮಗನಿಗೆ ಹುಲಿರಾಯ ಪ್ರಶ್ನೆ ಮಾಡುತ್ತಲೆ ಇರುತ್ತಾರೆ ಈ ಹೆಸರು ಹೊರಗಡೆ ಕರೆಯಬಹುದ ಎಂದರೆ ಇಲ್ಲ ಬೇರೆ ಎಲ್ಲು ಹೇಳೊಹಾಗಿಲ್ಲ ನಾವು ಮೊವರಲ್ಲಿ ಮಾತ್ರ ಇರಬೇಕೆಂದು........

ಏನೊ ಮಗನ ಬಾಯಿಂದಲಾದರು ನಾನು ಪುಣ್ಯ ಆದೆ......... ಜೀವಮಾನವಿಡಿ ಪುಣ್ಯಕೋಟಿಯಾಗಲು ಪ್ರಯತ್ನಿಸುತ್ತೇನೆ ನೊಡೋಣ ಎಷ್ಟು ದಿನ ಈ ಹೆಸರು ಇರುವುದೆಂದು ಆಹಾ ಆಹಾ......