Thursday, January 8, 2009

ಧರಣಿ ಮಂಡಲದ ಪುಣ್ಯಕೋಟಿ... ನಾನಾದೆ ...

ನನ್ನ ಮಗನಿಗೆ ಕೆಲವೊಮ್ಮೆ ಕತೆಗಳನ್ನ ಹೇಳುತ್ತಲೇ ಇರಬೇಕು.... ನಾನು ಕೇಳ್ಳಿದ್ದೊ, ಓದಿದ್ದೊ, ಹೇಳುತ್ತಲಿದ್ದೆ ಕೆಲವೊಮ್ಮೆ ನಾನೆ ಸೃಷ್ಠಿಸಿಕೊಂಡು ಸುಳ್ಳು ಕತೆ ಹೇಳಲು ಹೋಗಿ ಮಗನಲ್ಲಿ ಸಿಕ್ಕಿಹಾಕಿಕೊಂಡು ಇದ್ದೇನೆ ಕೊಡ ಹ ಹಹ , ಓಹ್ ಅಮ್ಮ ನೀನು ಸುಮ್ಮನೆ ಹೇಳುತ್ತ ಇರೋದು ಇದು ಕತೆ ಅಲ್ಲ ಎಂದೆಲ್ಲ ಪೇಚಾಡಿದ್ದಾನೆ.... ಹೀಗೆ ಒಂದು ದಿನ ಯಾವುದಾದರು ಒಳ್ಳೆ ಕತೆ ಹೇಳಮ್ಮ ಆದರೆ ಅದು ನಿಜ ಇರಬೇಕು ಎಂದು ಮೊದಲೆ ತಾಕೀತು ಮಾಡಿದ್ದ... ನಾನು ಯೊಚಿಸುತ್ತಾ ಏನು ಹೇಳುವುದು ಎಂದು ಕೊನೆಯಲ್ಲಿ ಒಂದು ನೆನಪಾಯಿತು......... ಅದು ಎಲ್ಲರಿಗು ತಿಳಿದಹಾಗೆ ಇದು ಪ್ರಸಿದ್ದ ಹಾಗು ಮನೆಮಾತಾದ ಹಾಡು....

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರುನಾಡದೇಶದಿ
ಇರುವ ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು....

ಈ ಹಾಡು ಹೇಳುತ್ತಾ ಅದರ ಅರ್ಥ ಅದರಲ್ಲಿನ ವಿಶೇಷತೆ ಎಲ್ಲವನ್ನು ಒಂದೊಂದಾಗಿ ಬಿಡಿಸುತ್ತ ಹೇಳಿದೆ, ಅವನೊ ಕೂಡ ಭಾರಿ ಮಗ್ನನಾಗಿ.......ತುಂಬ ಉತ್ಸುಕದಿಂದ ಕೇಳುತ್ತಲಿದ್ದನು.... ಆ ಆಕಳು ಮಗುವಿನ ಪ್ರೀತಿ ಸಂಭಾಷಣೆ.... ಎಲ್ಲವೊ ಮನಕಲಕುವಂತಹುದೇ........?

ನನ್ನ ಕತೆ ಕೇಳಿ ಮುಗಿದ ನಂತರ ಅವನಿಂದ ಬಂದ ಉತ್ತರವೇನು ಗೊತ್ತೆ...? ಅಮ್ಮ ಕತೆ ಚೆನ್ನಾಗಿತ್ತು.. ಈಗ ಏನೋ ಒಂದು ಹೇಳ್ತಿನಿ ನೀವು ಅದನ್ನ ಕೇಳ್ಬೇಕು ಸರಿನಾ... ಅಂದಾ..

ಇನ್ನು ಮೇಲೆ ನೀನು ಪುಣ್ಯಕೋಟಿ.. ನಾನು ಕರು ಅಪ್ಪ ಹುಲಿರಾಜ.. ಎಂದು ತಟ್ಟನೆ ಹೇಳಿಬಿಟ್ಟ.... ನನಗೆ ಆಶ್ಚರ್ಯ ಜೊತೆಗೆ ಅವನು ಏನೆಲ್ಲ ಲೆಕ್ಕಾಚಾರ ಮಾಡಿದ್ದ ನಾನು ಕತೆ ಹೇಳುವಾಗ ಎಂದು ಊಹಿಸಿತ್ತಲಿದ್ದೆ. ಜೊತೆಗೆ ನಗು.. ನಾನು ನನ್ನ ಮನೆಯವರು ಒಟ್ಟಿಗೆ ಜೋರಾಗಿ ನಕ್ಕು ಬಿಟ್ಟೆವು.. ಅದಕ್ಕೆ ಆಗ ಅವನು ವಿಶ್ಲೇಷಣೆ ಕೂಡ ಕೊಟ್ಟ... ಹಸು ಅಮ್ಮ ಅಲ್ಲವಾ ಕರು ಮಗ ಅಲ್ಲವಾ ಹಾಗಿದ್ದರೆ ನಾನು ನೀನೆ ಅದು... ನನ್ಗೆ ಆಗ ಉತ್ತರ ಕೊಡಲು ಆಗಲೇ ಇಲ್ಲ........

ಅಂದಿನಿಂದ ನಾನು ಪುಣ್ಯಕೋಟಿ...ನನ್ನ ಪತಿ ಹುಲಿರಾಜ.... ಮಗ ಕರು ಆದೆವು... ನಾವು ಈಗಲು ನಮ್ಮ ಹೆಸರಿನಿಂದ ನಾವು ಕರೆಯುವುದೇ ಇಲ್ಲ ಮಗನನ್ನು ಕರು ಎಂದೆ ಕರೆಯೊದು ಇನ್ನು ಅಪ್ಪನ ಕೇಳಲು ಏನಾದರಿದ್ದರೆ ಹುಲಿರಾಜ, ನಾನು ಪುಣ್ಯಕೋಟಿ ದೂಡ್ಡ ಹೆಸರಿನಿಂದ ಪುಟ್ಟದಾಗಿ ಪುಣ್ಯ ಆಗಿದ್ದೇನೆ...............

ಆಗಾಗ ಮಗನಿಗೆ ಹುಲಿರಾಯ ಪ್ರಶ್ನೆ ಮಾಡುತ್ತಲೆ ಇರುತ್ತಾರೆ ಈ ಹೆಸರು ಹೊರಗಡೆ ಕರೆಯಬಹುದ ಎಂದರೆ ಇಲ್ಲ ಬೇರೆ ಎಲ್ಲು ಹೇಳೊಹಾಗಿಲ್ಲ ನಾವು ಮೊವರಲ್ಲಿ ಮಾತ್ರ ಇರಬೇಕೆಂದು........

ಏನೊ ಮಗನ ಬಾಯಿಂದಲಾದರು ನಾನು ಪುಣ್ಯ ಆದೆ......... ಜೀವಮಾನವಿಡಿ ಪುಣ್ಯಕೋಟಿಯಾಗಲು ಪ್ರಯತ್ನಿಸುತ್ತೇನೆ ನೊಡೋಣ ಎಷ್ಟು ದಿನ ಈ ಹೆಸರು ಇರುವುದೆಂದು ಆಹಾ ಆಹಾ......

6 comments:

ಮೂರ್ತಿ ಹೊಸಬಾಳೆ. said...

ಸುಗುಣಕ್ಕ,
ಮನುವಿನ ಮಾತು ಒಮ್ಮೆ ಬಾಲಭಾಷೆ ಅನ್ನಿಸಿದರೂ ಒಂದಲ್ಲಾ ಒಂದು ರೀತಿಯಲ್ಲಿ ಸತ್ಯಕ್ಕೆ ಹತ್ತಿರವಾದುದು ಮುಗ್ದನಾದ ಮನು ತನ್ನಲ್ಲಿ ಕರುವನ್ನು ಆರೋಪಿಸಿಕೊಳ್ಳುತ್ತನೆ, ಪ್ರೀತಿ,ವಾತ್ಸಲ್ಯ,ತೋರಿಸುವ ನಿಮ್ಮಲ್ಲಿ ಪುಣ್ಯಕೋಟಿಯನ್ನ ಕಾಣುತ್ತಾನೆ ಆದರೆ............. ಮಹೇಶ್ ಸಾಹೆಬರು ಅವನಿಗೆ ಯಾವ ಕೋನದಲ್ಲಿ ಹುಲಿರಾಯ ನಾಗಿ ಕಂಡರೋ ತಿಳಿಯುತ್ತಿಲ್ಲ.

ಮನಸು said...

ಹ ಹ ಹ ಗೊತ್ತಿಲ್ಲ ಮಹೇಶ್ ಅವರಿಗೆ ಯಾಕೆ ಆ ಹೆಸರು ಅಂತ ಮತೆಷ್ಟೋ ಸಾರಿ ಮಹೇಶ್ ಕೇಳಿದರೆ ಹೆಸರು ಬದಲಾಯಿಸೋನವ ನಾನು ಪುಣ್ಯಕೋಟಿ ಅಕ್ತೀನಿ ಅಮ್ಮ ಹುಲಿರಾಯ ಆಗಲಿ ಅಂಥ ಅವ್ನು ಒಪ್ಪಲೇ ಇಲ್ಲ ಹ ಹ ಹ ....
ಅದಕ್ಕೆ ಉತ್ತರ ಮಹೇಶ್ ನಿಮಗೆ ಸಿಕ್ಕಾಗ ಕೇಳಿ ...

ಮಕ್ಕಳ ಮನಸು ಭಾವನೆ ಕೆಲವು ಭಾರೆ ಅರ್ಥ ಆಗುವುದೇ ಇಲ್ಲ........

Ittigecement said...

ಮನಸು...

ತುಂಬ ಚಂದವಾಗಿ ಬರೆದಿದ್ದೀರಿ...
ಮಕ್ಕಳು ಎಷ್ಟು ಮುಗ್ಧವಾಗಿರುತ್ತಾರೆ...
ಆ ಪುಣ್ಯಕೋಟಿಯ "ಕರುವಿನ" ಥರಹ...
.. ಅಲ್ಲವಾ..?

ನಿಮ್ಮ ಚಂದದ ಸಂಸಾರ ಹೀಗೆ ನಗುತ್ತ..ಇರಲಿ..
ಕೆಟ್ಟ ದ್ರಷ್ಟಿ ಬೀಳದಿರಲಿ..

ಧನ್ಯವಾದಗಳು...

ಮನಸು said...

ಧನ್ಯವಾದಗಳು ಸರ್,

ಮಕ್ಕಳೇ ಹಾಗೆ ಸ್ವಲ್ಪ ನನ್ನ ಮಗ ಹೆಚ್ಚು ಅಮ್ಮನ ಪರ ಜಾಸ್ತಿ ಹ ಹ ಹ ....

Anonymous said...

nijawaglu neevu punya ne...

ಮನಸು said...

ಧನ್ಯವಾದಗಳು
ನಿಮ್ಮ ನಾಮಧೇಯದೊಂದಿಗೆ ಪ್ರತಿಕ್ರಿಯಿಸಿದ್ದರೆ ಚೆನ್ನಾಗಿ ಇರುತ್ತಿತು..

ನಿಮ್ಮ ಹೆಸರಿನೊಂದಿಗೆ ಹೀಗೆ ಭೇಟಿ ಕೊಡುತ್ತಿರಿ...