Saturday, December 27, 2008

ಉಗ್ರತೆಯೋ, ವ್ಯಾಘ್ರತೆಯೋ



ಏಯ್!! ನಿನ್ನಲ್ಲಿನ ಮನುಷ್ಯತ್ವ ಹಾರಿಹೋಯಿತೆ
ನಿನ್ನ ಆತ್ಮಕ್ಕೆ ತಿಳಿಯಲಿಲ್ಲವೇ? ಎನೊ ಅರಿಯದವರ ಮುಗ್ಧತೆ
ನಿನಗೆಲ್ಲಿ ಅರಿವಿದೆ ಮುಗ್ಧತೆ ನೀನೂಬ್ಬ ವ್ಯಾಘ್ರ
ವ್ಯಾಘ್ರದಿ ನರ್ತಿಸಿದಂದು ಪಾಕಿಸ್ತಾನಿ ಉಗ್ರ

ಉಗ್ರನ ಅಟ್ಟಹಾಸ ತಲ್ಲಣಿಸಿದೆ ಭಾರತೀಯರ
ಅವನ ವ್ಯಾಘ್ರತೆ ಹರಿಸಿದೆ ಎಲ್ಲೆಲ್ಲೂ ನೆತ್ತರ
ಉಗ್ರ ಪ್ರತಿಷ್ಠೆ ಬಲಿತೆಗೆದಿದೆಯಲ್ಲಾ ಆಮಾಯಕರ
ಎಲ್ಲೆಲ್ಲೂ ಪಸರಿಸಿದೆ ಭಯಭೀತಿಯ ಹಂದರ
ಉಗ್ರ ನಿನಗರಿಯದೆ ಮುಗ್ಧನ ಆಹಾಕಾರ!!!!!!!!!!!

ಈ ವ್ಯಾಘ್ರಪ್ರತಿಷ್ಠೆಗೆ ಪರಿಹಾರ ಅಘೋಚರ
ಹಾಗೆಂದು ಕೈಕಟ್ಟಿಕುಳಿತರೆ ಎಲ್ಲವೂ ನಿಶಾಚರ....
ನಾವೇ ಎಚ್ಚೆತ್ತಿಕೊಳ್ಳದಿದ್ದರೆ ರಾಜಕೀಯರು ಬಳಸಿಕೂಳ್ಳುವರು ಪ್ರಚಾರ

ಅದು ಉಗ್ರತೆಯೋ, ವ್ಯಾಘ್ರತೆಯೋ ಒಟ್ಟಲ್ಲಿ ತಲ್ಲಣಿಸಿದೆ
ಭಾರತವೆಂಬ ಭವ್ಯ ವೈಭವ ರಾಷ್ಟ್ರವನು ನಲುಗಿಸಿದೆ
ನಮ್ಮೊಳಗಿರುವ ವೈರಿಗಳ ಸಂಚಿಗೆ ಚೆಲ್ಲಿದೆ ರಕ್ತದೋಕುಳಿ
ನಮ್ಮಲಿರೋ ವೈರಿಗಳ ಬಗ್ಗು ಬಡಿಯಲೆಂದು ಆಶಿಸುವೆ

ಯುದ್ದವೊಂದೆ ಎಲ್ಲಕ್ಕೂ ಪರಿಹಾರವಲ್ಲ
ಅಲ್ಲೂ ಅಮಾಯಕ ಸೈನಿಕರು ಬಲಿಯಾಗುವರಲ್ಲ
ವೈಷಮ್ಯದ ಬೀಜಬಿತ್ತೋ ವಿಷಜಂತುವ ಕೊನೆಗಾಣಿಸಿ
ಅದುವೊಂದೆ ಸರಿಯಾದ ಪರಿಹಾರ ಈ ಉಗ್ರತೆಗೆ

ಒಂದು ತಿಂಗಳಾದರು ಮಾಸದ ಗಾಯ.... ವೀರಮರಣಿಗರ ಆತ್ಮಕ್ಕೆ ದೊರಕಿಲ್ಲ ಇನ್ನು ಶಾಂತಿ.... ಅದು ಯುದ್ದ ಮೂಲಕವೋ ಶಾಂತಿಯ ಮೂಲಕವೋ ತಿಳಿಯದು ಒಟ್ಟಲ್ಲಿ ಅಮಾಯಕರ ಜೀವ ಪರದೇಶದ ಉಗ್ರರ ಕೈಯಲ್ಲಿದೆ ....... ಇದಕ್ಕೆ ಪರಿಹಾರ......ತಿಳಿಯದು.... ಅಲ್ಲವೇ ?????

5 comments:

Ittigecement said...

ಮನಸು...

ದೂರದ ಕುವೈತಿನಿಂದ ಬರೆದಿದ್ದೀರಲ್ಲ...
ಭಲೇ ಧೈರ್ಯ ನಿಮಗೆ...
ನಮ್ಮ ದೇಶ ಶತ ಶತಮಾನಗಳಿಂದ ಇದಕ್ಕಿಂತ ದೊಡ್ಡ ಸವಲುಗಳನ್ನು ಎದುರಿಸಿದೆ...
ಊಟಕ್ಕೆ ಗತಿ ಇಲ್ಲದವರ ಬೆದರಿಕೆಗೆ ಹೆದರ ಬೇಕಿಲ್ಲ..
ನಮ್ಮ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಸ್ವಲ್ಪ ಹಿನ್ನಡೆಯಾಗಿದೆ...
ಯಾರಿಂದಲೂ ಏನೂ ಮಾಡಲಾಗುವದಿಲ್ಲ...

ನಿಮ್ಮ ಕವನ , ಕವನದ ಭಾವಾರ್ಥ ನನಗಿಷ್ಟವಾಯಿತು...
ಅಭಿನಂದನೆಗಳು...

ಮನಸು said...

ಇದು ಧೈರ್ಯಯದ ಪ್ರಶ್ನೆ ಅಲ್ಲವೇಅಲ್ಲ ಸರ್,

ನಮ್ಮ ವ್ಯವಸ್ಥೆಯ ವಿರುದ್ದ ಕೋಪ ಅಷ್ಟೇ, ನಮ್ಮಲಿರೋರು ಯಾರೋ ಸಹಾಯ ಮಾಡಿದ್ದಕ್ಕೆ ಅಲ್ಲವೇ ಹೊರಗಿನವರು ಬಂದು ನಮ್ಮ ನೆಮ್ಮದಿ ಹಾಳು ಮಾಡುತ್ತಲಿರುವುದು.. ಮೊದಲು ನಮ್ಮಲಿರೋರನ್ನ ಬಗ್ಗು ಬಡಿದರೆ ಎಲ್ಲವು ಸರಿ ಹೋಗುತ್ತದೆ .

ಧನ್ಯವಾದಗಳು....

Unknown said...

kavana tumbaa channagi bandide suguna..nammellara manassina bhavanegalannu bimbisidiraa...good work!

ಮನಸು said...

ಧನ್ಯವಾದಗಳು ಜಯ...
ಹೀಗೆ ನಿಮ್ಮ ಅನಿಸಿಕೆಗಳನ್ನು ಬರೆಯುತ್ತಲಿರಿ

Ittigecement said...

ಹೊಸವರುಷದ
ಶುಭಕಾಮನೆಗಳು...

ನಿಮ್ಮೆಲ್ಲ...

ಆಸೆ,, ಆಕಾಂಕ್ಷೆಗಳು...
ಈಡೇರಲಿ...

ಶುಭ ಹಾರೈಕೆಗಳು...