ಮನುಜನ ನಡೆನುಡಿಯಾದರೆ ಸರಳ
ಅಂದು, ಎಲ್ಲಿಯೂ ಇರದು ಜಗಳ
ಸರಳ ಮನುಜ ಸಿಗುವುದು ಬಲು ವಿರಳ
ಜಗತ್ತು ಹೇಗಿದೆಯೆಂದರೆ!! ಮೋಸಬಲ್ಲವಗೆ ಹೆಚ್ಚು ಸಂಬಳ
ಸಂಬಳದ ಜೊತೆಗೆ ಗಳಿಸುವನು ಗಿಂಬಳ
ಮೋಸದ ಮಾತು ಬಲ್ಲವರೇ ಇಂದು ಹೆಚ್ಚಳ
ಯಾರು? ಆ ಮೋಸದ ಬಾಯ್ಗಳಿಗೆ ಹಾಕುವರು ಮುಚ್ಚಳ
ಎಂದು! ಮೋಸ ತೊಲಗುವುದೋ ಅಂದೇ ಜಗತ್ತು ನಿರಾಳ
ಆದರಿಂದು, ನಿರಾಳತೆಯಿಲ್ಲದೆ ಪ್ರಪಂಚವಾಗಿದೆ ಕಪ್ಪು ಕರಾಳ
ಕರಾಳತೆ ಹೊರದೋಡಿಸಲು ಬೀಸಬೇಕೊಂದು ಪರಿಮಳ
ಎಂದು! ಬರುವುದೋ ಪರಿಮಳ ಬೀರೋ ಝೇಂಕಾರದ ಮಂಜುಳ
ಇಂದಲ್ಲಾ ನಾಳೆ.. ಮೋಸದ ಕರಾಳತೆಗೆ ಆಡುವೇಯಾ? ದೇವಾ ಮಂಗಳ.
1 comment:
ಕವನ ಪ್ರಾಸಬದ್ಧವಾಗಿದೆ..
ಭಾವಾರ್ಥವೂ ಚೆನ್ನಾಗಿದೆ...
Post a Comment