Thursday, December 11, 2008

ದೇಗುಲದಲ್ಲಿ ದೇವರ ದರ್ಶನ

ಇದು ಒಂದು ಪವಿತ್ರ ಸ್ಥಳ ಬೆಟ್ಟದ ತಪ್ಪಲಿನಲ್ಲಿ ಸಿದ್ದಲಿಂಗೇಶನ ಸನ್ನಿದಿಯಲ್ಲಿ ಜನ ಸೇವೆ ಮಾಡುತ್ತಿರುವ ನೆಡೆದಾಡೋ ದೇವರ ದೇಗುಲ.... ಇದುವೇ ಸಿದ್ದಗಂಗಾ ಮಠ

ನಾನು ಇತೀಚೆಗಸ್ಟೆ ಈ ಪವಿತ್ರ ಸ್ಥಳವನ್ನು ನೋಡಿ ಬಂದೆ, ನನ್ನ ಮನಸಿಗೆ ಏನೋ ಒಂದು ರೀತಿ ಸಂತೋಷ ಏನೂ ತಿಳಿಯದ ಅನುಭವ, ಅಂದು ಬೆಳಗಿನಜಾವ ನಾವೆಲ್ಲ ಶಿವಪೂಜೆಗೆಂದು ಶ್ರೀಗಳ ಮಠಕ್ಕೆ ತೆರಳಿದೆವು ನಾವು ತಲುಪುವಸ್ಟರಲ್ಲಿ ಸ್ವಾಮೀಜಿ ತಮ್ಮ ಬೆಳಗಿನಜಾವದ ಪೂಜೆಗೆ ಅಣಿಯಾಗುತ್ತಲಿದ್ದರು . ಮಠದ ಶಿಷ್ಯರು ನಮ್ಮನು ಆತ್ಮೀಯತೆಯಿಂದ ಬರಮಾಡಿಕೊಂಡು ಸ್ವಲ್ಪ ಸಮಯ ನಿಲ್ಲಲು ಹೇಳಿ ಸ್ವಾಮಿಜಿಯ ಪೂಜಾ ಕೋಣೆಗೆ ತೆರಳಿದರು, ಸ್ವಾಮಿಜಿಯವರು ಪೂಜೆಗೆ ಅಣಿಯಾದಾಗ ನಮ್ಮನು ಒಳ ಹೋಗಲು ಸಮ್ಮತಿಸಿದರು. ನಾನು ಒಳಹೊಕ್ಕ ತಕ್ಷಣ ನೆಡೆದಾಡೊ ದೇವರ ಕಂಡು ನನ್ನ ಜೀವನ ಸಾರ್ಥಕವೆನ್ದು ಭಾವಿಸಿದೆ. ನಾವು ಅವರ ಜೊತೆ ೧೦ ರಿಂದ ೨೦ ನಿಮಿಷಗಳ ಕಾಲ ಪೂಜೆ ಮುಗಿಸಿ ಹೊರ ಬಂದ ತಕ್ಷಣ ನಮ್ಮ ಬಗ್ಗೆ ವಿಚಾರಿಸಿದರು ಸ್ವಾಮಿಜಿ ಯಾರು ಎಲ್ಲಿಂದ ಬಂದಿದರೆಂದು, ಅಲ್ಲಿಯೇ ಇದ್ದ ಶಿಷ್ಯರೊಬ್ಬರು ಮೊದಲೇ ನಮ್ಮ ಬಗ್ಗೆ ವಿಚಾರಿಸಿದ್ದಾರೆ ಅವರು ಕುವೈತ್ನಿಂದ ರಜೆಗಾಗಿ ಬಂದಿದ್ದಾರೆ ಎಂದು ಹೇಳಿದ್ದಾರೆ . ಅವರಿಗೆ ಪ್ರಸಾದದ ವ್ಯವಸ್ಥೆ ಮಾಡಲು ತಿಳಿಸಿದ್ದಾರೆ , ಅವರಿಗೆ ಬಂದ ಭಕ್ತರಿಗೆ ಯಾವುದೇ ಕೊರತೆ ಬಾರದಿರಲೆಂದು ಅಷ್ಟು ಬೇಗ ಸೂಚಿಸಿದ್ದಾರೆ, ಇದು ಅವರು ಅಲ್ಲಿಗೆ ಬರುವ ಎಲ್ಲಾ ಭಕ್ತಾದಿಗಳಿಗೆ ಸಲ್ಲಿಸೋ ಉಪಚಾರ ( ಇಲ್ಲಿ ನಮ್ಮ ಸಂಸ್ಕೃತಿಯ ಅತಿಥಿ ದೇವೋ ಭವ ಎಂಬ ಮಾತನ್ನು ಇಲ್ಲಿ ರೂಢಿಗೆ ತಂದಿದ್ದಾರೆ) ಇದು ಇಷ್ಟು ನಡೆದಿದ್ದು ಬೆಳಗಿನ ಜಾವಾ ಸುಮಾರು ೫ .೩೦ ಇರಬೇಕು ನಮಗೋ ಅಸ್ಟು ಬೇಗ ಉಪಹಾರ ತಿಂದು ಅಭ್ಯಾಸವಿರಲ್ಲಿಲ ಮಠದಲ್ಲಿದ್ದವರು ಬಿಡಲೇ ಇಲ್ಲ ನಾವು ಆ ಬೆಳಗಿಜಾವ ಅದು ಸ್ವಾಮಿಜಿಗಾಗಿ ಮಾಡಿದ್ದ ಬೆಳಗಿನ ಉಪಹಾರ ತಿನ್ನಲು ಪುಣ್ಯವಂತರೆ ಆಗಿರಬೇಕು, ಇನ್ನು ಬೆಳಗಿನ ಉಪಹಾರ ತಿನ್ನುತ್ತಲೇ ಸ್ವಾಮೀಜಿಗಳು ಮಕ್ಕಳ ಪ್ರಾರ್ಥನೆಗೆ ತೆರಳುತ್ತಿದ್ದಾರೆಂದು ಯಾರೋ ಹೇಳಿದ್ದು ಕೇಳಿ ಬೇಗ ಬೇಗ ನಾವು ತಿಂದು ನನ್ನ ಮಗನಿಗೂ ಬೇಗ ತಿನ್ನಲು ಹೇಳಿ ಹೊರಟೆವು ನೋಡಿದರೆ ಸ್ವಾಮಿಜಿ ಆಗಲೇ ತಾವು ಬೆಳಗಿನ ಉಪಹಾರ ಮುಗಿಸಿ ಕೈಯಲ್ಲಿ ಕೋಲು ಹಿಡಿದು ದಾಪುಗಾಲು ಹಾಕುತ್ತಾ ಹೊರಡುತಲಿದ್ದರು ನಾವು ಅವರನ್ನು ಹಿಂಬಾಲಿಸುತ್ತಾ ಓಡುತ್ತಾ ಪ್ರಾರ್ಥನೆ ನೋಡಲು ನಡೆದೆವು, ಅಲ್ಲಿ ನೋಡಿದರೆ ಇನ್ನೊಂದು ಅಶ್ಚರ್ಯ ಕಾದಿತ್ತು ೧,೦೦೦ ಕ್ಕೊ ಹೆಚ್ಹು ಮಕ್ಕಳು ಅಲ್ಲಿ ಅಷ್ಟುಬೇಗ ನಿತ್ಯಕರ್ಮ, ಜಳಕ (ತಣ್ಣಿರಿನ ಸ್ನಾನ ಮುಗಿಸಿದ್ದರು ಆ ಮಕ್ಕಳು)ಎಲ್ಲವನ್ನು ಮುಗಿಸಿ ಮಯ್ಯಮೇಲೊಂದು ವಸ್ತ್ರ ಜೊತೆಗೆ ಬಿಳಿಯ ಪಂಚೆ ಉಟ್ಟು ಸಾಲಾಗಿ ಕುಳಿತಿದ್ದರು... ಸ್ವಾಮೀಜಿಯವರು ಆಸೀನರಾಗುತ್ತಲಿದ್ದ ಹಾಗೆ ಎಲ್ಲರು ಅವರಿಗೆ ನಮಸ್ಕರಿಸಿ ಬೆಳಗಿನ ಮಂತ್ರಗಳು , ವಚನಗಳು, ದೇವರ ಗೀತೆಗಳ ಗಾಯನ ಸುದೆ ಹರಿಸಿದ ಆ ಪುಟ್ಟ ಮಕ್ಕಳಿಗೆ ನನ್ನ ಹೃದಯ ಪೂರ್ವಕ ವಂದನೆಗಳು, ಏನು ವಿನಯ ಆ ಮಕ್ಕಳಲ್ಲಿ ಎಲ್ಲಿಂದಲೋ ಬಂದು ಜಾತಿ ಮತ ಭೇದವೆನ್ನದೆ ಒಗ್ಗಟ್ಟಿನಿಂದ ಶ್ರಮದಿಂದ ವಿದ್ಯಾಭ್ಯಾಸ ಮಾಡುತ್ತಿರುವ ಆ ಮಕ್ಕಳಿಗೆ ದೇವರು ಸರ್ವ ಸಂಪತ್ತು ಕೊಡಲೆಂದು ಆಶಿಸುತ್ತೇನೆ. ಮಕ್ಕಳು ಬರಿ ಬೆಳಗಿನ ಪ್ರಾರ್ಥನೆ ಮುಗಿಸಿ ಮತ್ತೆ ತಮ್ಮ ಕೊಠಡಿಗೆ ತೆರಳದೆ ನೇರವಾಗಿ ಸಂಸ್ಕೃತ ಪಾಠಕ್ಕೆ ಸಾಲಾಗಿ ತೆರಳುತ್ತಿದ್ದರು , ಆಹಾ!! ಆ ಮಕ್ಕಳ ಸಾಲು ನೋಡಲು ಬಲು ಚೆಂದ ಹಾಗೆ ಸಾಲಾಗಿ ನಿಂತ ಮಕ್ಕಳು ತಮ್ಮ ಶಾಲಾ ಕೊಠಡಿಗೆ ತೆರಳುವ ಮುನ್ನ ಪ್ರಾರ್ಥನೆ ಸಲ್ಲಿಸಿ ಸಂಸ್ಕೃತ ಪಾಠ ಕಲಿಯಲು ತೆರಳಿದರು.
ಇನ್ನು ಸ್ವಾಮೀಜಿಗಳು ಮಕ್ಕಳ ಪ್ರಾರ್ಥನೆ ನಂತರ ಮಠದ ಕಛೇರಿಗೆ ತೆರಳಿದರು ಅಲ್ಲಿ ನೆರೆದಿದ್ದ ಭಕ್ತಾದಿಗಳು ಒಬ್ಬೋರಾಗಿ ಸ್ವಾಮೀಜಿಗಳ ದರುಶನಕ್ಕೆ ಒಳ ನಡೆದರು ನಾವು ಕೂಡ ಅ ಸಾಲಿನಲ್ಲಿದ್ದೆವು ನಮಗೆ ಮೊದಲೇ ದರುಶನವಾಗಿತ್ತು ಆದರು ಅದೇನೋ ಕುತೂಹಲ ಜೊತೆಗೆ ಅವರೊಂದಿಗೆ ಇನ್ನು ಕೆಲವು ಸಮಯ ಕಳೆಯಬೇಕೆಂಬ ಆಸೆ. ಅಲ್ಲಿ ನೆರೆದಿದ್ದ ಎಲ್ಲ ಭಕ್ತರು ನಮಸ್ಕರಿಸಿ ಸ್ವಾಮೀಜಿಯವರಿಂದ ಕೆಲಸ ಅಥವಾ ತಮ್ಮ ಮಕ್ಕಳ ವಿದ್ಯಾಭ್ಯಾಸ ಪ್ರವೇಶಕ್ಕೆ ಕೋರಿಕೆ ಸಲ್ಲಿಸಲು ಬಹಳಷ್ಟು ಜನ ಅಲ್ಲಿ ನೆರೆದಿದ್ದರು ಇದೆ ರೀತಿ ದಿನಕ್ಕೆ ಎಷ್ಟು ಜನ ಬಂದು ಹೋಗುತ್ತಾರೋ ಲೆಕ್ಕವೇ ಇಲ್ಲ, ಎಲ್ಲಾ ಭಕ್ತಾದಿಗಳ ಅಹವಾಲು ಸ್ವಿಕರಿಸಲು ಆ ನೂರರ ಹರಯದ ದೇವರು ಸದಾ ಸನ್ನದ್ದರಾಗಿ ಕುಳಿತಿರುತ್ತಾರೆ. ಇದು ನಮ್ಮಂತ ಸಾಮಾನ್ಯರಿಂದ ಸಾಧ್ಯವಾಗದ ಕೆಲಸ ಇದರ ಮಧ್ಯೆ ಸ್ವಾಮೀಜಿಗಳು ಭಕ್ತರ ಮನೆಗಳಿಗೆ ತೆರಳಿ ಪೂಜಾವಿದಿಗಳನ್ನು ಸಲ್ಲಿಸುತ್ತಾರೆ.
ತನ್ನ ಬಾಗಿದ ಬೆನ್ನು, ಸುಕ್ಕಲುಗಟ್ಟಿದ ಚರ್ಮ, ನಡೆಯಲು ಆಗದೆ ಸೋತಿರುವ ಕಾಲುಗಳು ಇಷ್ಟೆಲ್ಲಾ ಇದ್ದರು ಒಂದನ್ನು ತೋರ್ಪಡಿಸದೆ ಇನ್ನು ಮಠದ ಏಳಿಗೆಗೆ ಶ್ರಮಿಸುತ್ತಲಿದ್ದಾರೆ, ಈ ವಯಸ್ಸಿನಲ್ಲಿ ಇಷ್ಟು ತೆಜೋಮಯಿಯಾಗಿ ಕಾರ್ಯ ನಿರ್ವಹಿಸುತ್ತಲಿರುವ ಈ ನೂರು ತುಂಬಿದ ಶತಾಯುಷಿ ನಿಜಕ್ಕೂ ಕಲಿಯುಗದ ದೇವರು. ಇನ್ನು ಈಗ ಇಷ್ಟು ಚಟುವಟಿಕೆಯಿಂದ ಇರುವ ಇವರು ಆಗ ವಯಸ್ಕರಾಗಿದ್ದಾಗ ಎಷ್ಟರಮಟ್ಟಿಗೆ ಕೆಲಸ ಕಾರ್ಯಗಳು ಸರಾಗವಾಗಿ ನೆಡೆಯುತ್ತಲಿದ್ದವೋ ತಿಳಿಯೆ.... ಇದೆ ಸ್ವಾಮೀಜಿಗಳು ನೂರಾರು ಮಕ್ಕಳಿಗೆ ವಿದ್ಯಾದಾನ ಸಲ್ಲಿಸಿದ್ದಾರೆ, ಹಲವು ಬಡ ಮತ್ತು ಸಾಮಾನ್ಯ ಕುಟುಂಬಕ್ಕೆ ಆಧಾರ ಸ್ತಂಭವು ಆಗಿದ್ದಾರೆ ಹೇಗೆಂದರೆ ಬಡ ಕುಟುಂಬದ ವಿದ್ಯಾವಂತರಿಗೆ ಕೆಲಸಗಳನ್ನು ಕೊಟ್ಟು ಅವರ ಸಂಸಾರಕ್ಕೆ ನೆಲೆ ಒದಗಿಸಿದ್ದಾರೆ.
ನಾನು ಇಷ್ಟೆಲ್ಲಾ ಹೇಳಿದರು ಆ ಸ್ಥಳ ನೋಡದೆ ಇರುವಂತವರು ಯಾರು ಒಪ್ಪಿಕೊಳ್ಳುವುದಿಲ್ಲ ಅಲ್ಲಿ ಒಮ್ಮೆ ಹೋಗಿ ನೋಡಿದರೆ ನಿಜಕ್ಕೂ ನನ್ನ ಮಾತು ಒಪ್ಪುತ್ತಾರೆ.
ಹೀಗೆಯೇ ಎಂದೆಂದೂ ಈ ದೇಗುಲ ಬಡ ಮಕ್ಕಳಿಗೆ ಆಧಾರವಾಗಲ್ಲೆಂದು ಆಶಿಸುತ್ತಾ, ನೆಡೆದಾಡೋ ದೇವರಿಗೆ ಇನ್ನು ಹೆಚ್ಚು ಆಯ್ಯುಷು, ಆರೋಗ್ಯ, ಭಾಗ್ಯ, ಧನ, ಸಂಪತ್ತು ಎಲ್ಲವನ್ನು ಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಇಂತಹ ವಿರಾಗಿಗಳಿಗೆ ದೇವರು ದಯಪಾಲಿಸಿದರೆ ಊರು ಜನ ದೇಶ ಎಲ್ಲವು ಏಳಿಗೆ ಜೊತೆಗೆ ಉದ್ದಾರವಾಗುತ್ತದೆ ಹಾಗು ಅವರ ಸೇವೆ ದಾರಿದೀಪವಾಗುತ್ತದೆ . ನಮ್ಮಂತ್ತವರಿಗೆ ದೇವರು ಎಲ್ಲವನ್ನು ಕೊಟ್ಟರೆ ನಾನು ನನ್ನ ಸಂಸಾರ ಮಾತ್ರ ಉದ್ದಾರವಾಗುತ್ತದೆ , ನನ್ನ ಮನೆ ಒಂದು ಮುಂದುವರಿಯೋದಕ್ಕಿಂತ ನಮ್ಮ ಊರು ಮುಂದುವರಿಯೋದು ಮುಖ್ಯ. ನಮ್ಮಂತವರಿಗೆ ದೇವರು ಜೀವನ ನಡೆಸಲು ಕೊಟ್ಟಿರುವುದನ್ನು ಉಳಿಸಿ ಬೆಳೆಸಿದರೆ ಸಾಕು.
ಈ ರೀತಿ ಹೊಗಳಿಕೆಯನ್ನು ಅವರು ಎಂದೂ ಸ್ವೀಕರಿಸುವುದಿಲ್ಲ ಆದರು ನನ್ನ ಮನಸ್ಸಿನ ಭಾವನೆ, ಅನಿಸಿಕೆ ಎಲ್ಲವು ಬಿತ್ತರಿಸಿದ್ದೇನೆ.2 comments:

ಸಿಮೆಂಟು ಮರಳಿನ ಮಧ್ಯೆ said...

ನಾನು ಈ "ನಡೆದಾಡುವ ದೇವರ" ಬಗೆಗೆ ಬಹಳ ಕೇಳಿದ್ದೇನೆ..
ಇಂಥವರಿಂದಾಗಿ ನಮ್ಮ ಧರ್ಮ ಹೆಮ್ಮೆಪಡುವಂತಾಗಿದೆ...
ಪರಮ ಪೂಜ್ಯ ಸ್ವಾಮೀಜಿಯವರಿಗೆ ಕೋಟಿ..ಕೋಟಿ ವಂದನೆಗಳು...
ಸಧ್ಯದಲ್ಲೇ ಅವರ ಆಶೀರ್ವಾದ ನನಗೆ ಸಿಕ್ಕಲಿದೆ..

ಈ ಸಿದ್ಧಗುರುವಿನ ಬಗೆಗೆ ಬರೆದ ನಿಮಗೆ ಧನ್ಯವಾದಗಳು...

ಮನಸು said...

ಧನ್ಯವಾದಗಳು....