
ಅಮ್ಮ ನಿನ್ನದು ನೂರೆಂಟು ನೋವುಂಡ ಒಡಲು
ನಿನ್ನ ನೋವಿಗೆ ಸಂತೈಸಿದ್ದು ಅಪ್ಪನ ಹೆಗಲು
ಅಂದು ಆ ನೋವಿಂದ ನಿನಗಾಗಲಿಲ್ಲವೇ ದಿಗಿಲು ?
ಅದು ಏನೇ ಇರಲಿ ನೀವಿಬ್ಬರು ಜೋಡಿ ಎತ್ತಿನ ನೇಗಿಲು
ನಿನ್ನ ಒಡಲ ಬೇಗೆಗೆ ತೆರೆದಿದೆ ನಮಗಿಂದು ಸುಖದ ಬಾಗಿಲು
ನನಗೆ ಸ್ವಲ್ಪ ನೋವಾದರೂ ಬಲು ಕಷ್ಟ ತಡೆಯಲು
ಅಂದಿನ ನಿನ್ನ ಜೀವನದ ದಾರಿಯನು ನಾನಿಂದು ನೆನೆಯಲು
ನೆನಪಿಗೆನೇ, ಧೈರ್ಯ ನುಸುಳಿ ಸೇರಿದೆಯೆನ್ನ ಮಡಿಲು
ಅಮ್ಮ, ಇನ್ನು ನನಗೇಕೆ ಭಯದ!!!! ಅಹವಾಲು
ಭಯ ದೂಡಿ ಹೊಮ್ಮಿಸಿದೆನಗೆ, ನಗೆಯ ಹೊನಲು
ನಿನ್ನ ಜೀವನ ಶೈಲಿ ಎನಗೆ ಚಿಗುರೊಡೆದ ಹೊಂಬಿಸಿಲು
1 comment:
Hey!! nice one, good keep writing!!
Post a Comment