Monday, December 15, 2008
ಅಮ್ಮನಿಂದ ಧೈರ್ಯ
ಅಮ್ಮ ನಿನ್ನದು ನೂರೆಂಟು ನೋವುಂಡ ಒಡಲು
ನಿನ್ನ ನೋವಿಗೆ ಸಂತೈಸಿದ್ದು ಅಪ್ಪನ ಹೆಗಲು
ಅಂದು ಆ ನೋವಿಂದ ನಿನಗಾಗಲಿಲ್ಲವೇ ದಿಗಿಲು ?
ಅದು ಏನೇ ಇರಲಿ ನೀವಿಬ್ಬರು ಜೋಡಿ ಎತ್ತಿನ ನೇಗಿಲು
ನಿನ್ನ ಒಡಲ ಬೇಗೆಗೆ ತೆರೆದಿದೆ ನಮಗಿಂದು ಸುಖದ ಬಾಗಿಲು
ನನಗೆ ಸ್ವಲ್ಪ ನೋವಾದರೂ ಬಲು ಕಷ್ಟ ತಡೆಯಲು
ಅಂದಿನ ನಿನ್ನ ಜೀವನದ ದಾರಿಯನು ನಾನಿಂದು ನೆನೆಯಲು
ನೆನಪಿಗೆನೇ, ಧೈರ್ಯ ನುಸುಳಿ ಸೇರಿದೆಯೆನ್ನ ಮಡಿಲು
ಅಮ್ಮ, ಇನ್ನು ನನಗೇಕೆ ಭಯದ!!!! ಅಹವಾಲು
ಭಯ ದೂಡಿ ಹೊಮ್ಮಿಸಿದೆನಗೆ, ನಗೆಯ ಹೊನಲು
ನಿನ್ನ ಜೀವನ ಶೈಲಿ ಎನಗೆ ಚಿಗುರೊಡೆದ ಹೊಂಬಿಸಿಲು
Subscribe to:
Post Comments (Atom)
-
- ೧ - ಮಧ್ಯರಾತ್ರಿ ಸಾಕು ನಾಯಿ ಗೂಳಿಡುತ್ತ ಅಳುತ್ತಿತ್ತು.. ಎಲ್ಲಿಂದಲೋ ಸಾವಿನ ಸೂತಕ ಛಾಯೆ ಬರುವುದೆಂದು ಮನೆಯೇ ಆತಂಕದಲ್ಲಿತ್ತು.... ಸಾವಿನ ಸೂತಕ ಎಲ್ಲಿಂದಲೋ ಅಲ್ಲ ಮನ...
-
ದೀಪ-೧ ಪುಟ್ಟ ಸಂಸಾರ ಗಂಡ ಹೆಂಡತಿ ಮೂರು ಮಕ್ಕಳು.......ಬೃಹತ್ ನಗರದ ಮಧ್ಯದಲ್ಲಿ ಪುಟ್ಟ ಗುಡಿಸಿಲಿನ ವಾಸ, ಸುತ್ತಲೂ ಅದ್ಧೂರಿ ಬಂಗಲೆಗಳಿದ್ದರೂ, ಅಲ್ಲಿ ಕೆಲವೇ ಕೆಲವು ಗು...
1 comment:
Hey!! nice one, good keep writing!!
Post a Comment