ಗುರುವೆಂದರೆ ಅನ್ನಬ್ರಹ್ಮ
ಬೆಳೆಯುವ ಕೂಸುಗಳಿಗೆ
ತಂದೆಯಂತೆ ಬೆನ್ನೆಲುಬು
ತಾಯಿಯಾ ಕೈತುತ್ತು
ಗುರುವೆಂದರೆ ಬದುಕು
ಅಕ್ಷರ ದಾಹದಲಿ
ಕಲ್ಲುಮುಳ್ಳು ಸರಿಸಿ
ಸಾಧನೆಯ ಹಾದಿಗೆ ತೋರ್ಬೆರಳು
ಗುರುವೆಂದರೆ ಜೀವನ
ಕಾಯಕದ ಶ್ರದ್ಧೆ ಕಲಿಸಿ
ಅರಿವಿನ ಕಣ್ಣು ತೆರೆಸುವ
ಬಾಳ್ವೆಗೊಬ್ಬ ಮಾರ್ಗದರ್ಶಿ
ಗುರುವೆಂದರೆ ನೀನೇ
ನಿಸ್ವಾರ್ಥದ ನೆಲೆಕಟ್ಟಿ
ಸಹಸ್ರರಿಗೆ ಆಶ್ರಯವಾಗಿ
ನಮ್ಮೊಳಗಿನ ದಾರಿದೀಪವೇ
ಈ ನಮ್ಮ ನಡೆದಾಡುವ ದೇವರು....
ನಾಳೆ ಅಂದರೆ ಏಪ್ರಿಲ್ ೧ ರಂದು ಶ್ರೀಗಳ ೧೦೯ನೇ ಹುಟ್ಟುಹಬ್ಬದ ಸಂಭ್ರಮ.
ತ್ರಿವಿದ ದಾಸೋಹಿ ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಹುಟ್ಟುಹಬ್ಬದ ಶುಭಾಶಯಗಳು
Tomorrow is 109th Birthday of Our living legend his Holiness
"Shri Shri Shri Dr. Shivakumar Swamiji".