http://thatskannada.oneindia.in/nri/article/2009/0429-kuwait-kannadigas-celebrate-basava-jayanti.ಹ್ತ್ಮ್ಲ್
http://www.kendasampige.com/article.php?id=1774
ಕಾಯಕದಲ್ಲೇ ಕೈಲಾಸಕಾಣಬೇಕೆಂದು ಕೊಂಡೆವು, ಆದರೆ ದಿನವೆಲ್ಲಾ ಕಾಯಕವೆಂಬ ಕೈಲಾಸದಲ್ಲೇ ಇರುತ್ತೇವಲ್ಲ ಇಂದಾದರು ಕೈಲಾಸದಲ್ಲಿರುವವರನೊಮ್ಮೆ ನೆನೆದು ಅವರ ನುಡಿಮುತ್ತುಗಳನ್ನ ಅವರು ತಿಳಿಸಿದ ಹಾದಿಯನ್ನೊಮ್ಮೆ ನಾವು ಅರಿತು ಪೂಜಿಸೋಣವೆಂದು ಕೆಲವೇ ಕೆಲವು ಕುಟುಂಬಗಳು ಸೇರಿ ಬಸವಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದೆವು.ದೇವರು ಇದ್ದಾನೋ ಇಲ್ಲವೋ ತಿಳಿಯದು ದೇವರಂತಹ ಮಾನವರು ಇದ್ದೇ ಇದ್ದಾರೆ ಅಂತಹವರನ್ನು ಪೂಜಿಸುವುದರಲ್ಲಿ ಯಾವುದೇ ಕಟ್ಟುಪಾಡುಗಳು ಬೇಕಿಲ್ಲ...

ವಚನ ಗಾಯನಕ್ಕೆ ತಕ್ಕಂತೆ ತಾಳ ಮೇಳಗಳು ಸಹ ಸಜ್ಜಾಗಿ ನಿಂತಿದ್ದವು..ಕಿವಿಗೆ ಇಂಪು, ಮನಕೆ ತಂಪು ಎನ್ನುವಂತೆ ಗಾಯನಕ್ಕೆ ತಕ್ಕಂತೆ ಸಂಗೀತದ ಹೊಳೆ ಹರಿಸಿದರು...ಬಸವ ಜಯಂತಿ ವಚನ ಸಂಜೆಯಾಗಿ ಮೂಡಿತ್ತು..

ಹಾಗೆ ವಚನ ಗಾಯನ, ಪೂಜೆ ಒಂದೇ ಆದರೆ ಹೇಗೆ ವಚನ ಕಾರರನ್ನು ಮನನ ಮಾಡಲೇಬೇಕಲ್ಲವೇ.. ೧೨ನೇ ಶತಮಾನದ ವಚನಕಾರರು ಹಾಗು ಬಸವಣ್ಣನವರ ಹುಟ್ಟೂರು, ಐಕ್ಯಸ್ಥಳ ಎಲ್ಲದರ ವಿವರಣೆಯನ್ನು ಬಿಂಬಿಸುತ್ತಿವೆ ಈ ಚಿತ್ರ ಲೋಕಗಳು..

ಕೆಲವು ಆಯ್ದ ವಚನಗಳ ಸಾಲುಗಳು
ಎಲ್ಲರು ವಚನದಲ್ಲಿ ಮಗ್ನರಾಗಿಬಿಟ್ಟಿದ್ದರು ಎಲ್ಲರೂ ವಚನದಲ್ಲಿನ ಅರ್ಥಗಳನ್ನು ಮನದಲ್ಲೇ ಅರ್ಥೈಸಿಕೊಳ್ಳುತ್ತಲಿದ್ದರು...ಅಂತಿಮ ಪೂಜೆ ಶ್ರಿ ಬಸವೇಶ್ವರನಿಗೆ ಸಲ್ಲಿಸುತ್ತಲಿರುವುದು...

ಮಂಗಳಾರತಿ ಸಾಂಘವಾಗಿ ನೆರೆವೇರಿಸಲು ಒಟ್ಟಾಗಿ ನಿಂತ ನಮ್ಮೆಲ್ಲಾ ಸ್ನೇಹಿತರು
ಪೂಜಾವಿಧಿ ವಿಧಾನಗಳು ಸಾಂಘವಾಗಿ ನೆರೆವೇರಿದ ನಂತರ ಪ್ರಸಾದ ಸೇವನೇ ಆಗಲೇಬೇಕಲ್ಲವೆ... ಈ ಪ್ರಸಾದದಲ್ಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ (ಬಕರಿ) ಅದಕ್ಕೆ ಬೇಕಾದ ಎಣ್ಣಿಗಾಯಿ ಪಲ್ಯ, ಕಾರ ಚಟ್ನಿ ಅದಕ್ಕೆ ಸೆಬ್ಬೆಯಂತೆ ತುಪ್ಪ, ಶೇಂಗಾ ಚಟ್ನಿ ಅದಕ್ಕೆ ಮೊಸರು, ಕಾಳಿನ ಪಲ್ಯ, ಹೋಳಿಗೆ(ಒಬ್ಬಟ್ಟು) ಹೋಳಿಗೆ ಸಾರು ಅನ್ನ, ಮೊಸರನ್ನ ಇನ್ನು ಹಲವು ಬಗೆ ಬಗೆಯ ಪದಾರ್ಥಗಳಿದ್ದವು...ಅವೆಲ್ಲವನ್ನು ಸವಿದು ಮನೆ ತಲುಪಲು ಅತುರಾತುರದ ತಯಾರಿಯಲ್ಲಿದ್ದರು ನಮ್ಮ ಸ್ನೇಹಿತರು ಏಕೆಂದರೆ ಬೆಳ್ಳಂಬೆಳ್ಳಿಗೆ ಎದ್ದು ೭ಗಂಟೆಗೆಲ್ಲ ಕಚೇರಿಗೆ ತಲುಪಬೇಕಲ್ಲ...ಮತ್ತದೆ ಕಾಯಕದಲ್ಲಿ ಕೈಲಾಸ ಕಾಣಬೇಕಲ್ಲ ಹಾಗೆ ಎಲ್ಲರು ಸಂತೋಷದಿ ತೆರಳಿದರು...



ಹಾಗೆ ವಚನ ಗಾಯನ, ಪೂಜೆ ಒಂದೇ ಆದರೆ ಹೇಗೆ ವಚನ ಕಾರರನ್ನು ಮನನ ಮಾಡಲೇಬೇಕಲ್ಲವೇ.. ೧೨ನೇ ಶತಮಾನದ ವಚನಕಾರರು ಹಾಗು ಬಸವಣ್ಣನವರ ಹುಟ್ಟೂರು, ಐಕ್ಯಸ್ಥಳ ಎಲ್ಲದರ ವಿವರಣೆಯನ್ನು ಬಿಂಬಿಸುತ್ತಿವೆ ಈ ಚಿತ್ರ ಲೋಕಗಳು..




ಮಂಗಳಾರತಿ ಸಾಂಘವಾಗಿ ನೆರೆವೇರಿಸಲು ಒಟ್ಟಾಗಿ ನಿಂತ ನಮ್ಮೆಲ್ಲಾ ಸ್ನೇಹಿತರು



ಊರಿಂದ ಬಂದ ಅಪ್ಪ ಅಮ್ಮಂದಿರೆಲ್ಲ ನಮ್ಮ ಆಚರಣೆ ಕಂಡು ಬಹಳ ಖುಷಿಯೊಂದಿಗೆ ನಮ್ಮೆಲ್ಲರಿಗೆ ಆಶೀರ್ವದಿಸಿದರು.
ಈ ಸಮಾರಂಭದ ಚಿತ್ರಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ ಈ ಸುಂದರ ಕಾರ್ಯಕ್ರಮಕ್ಕೆ ಮೆರುಗು ಕೊಟ್ಟು ಸುಸಂಪನವಾಗಿಸಿದ ಎಲ್ಲರಿಗು ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನ ತಿಳಿಸುತ್ತಾ... ಅಣ್ಣನವರ ವಚನದೊಂದಿಗೆ ಕೊನೆಕೊಳ್ಳಿಸುತಲಿದ್ದೇನೆ. ಹಾಗು ಶರಣರ ಬರವೆಮಗೆ ಜೀವಾಳವಯ್ಯ!! ಎಂಬಂತೆ ಈ ಪುಟ್ಟ ಮನೆಗೆ ಬಂದು ಹೋಗುತ್ತಿರುವ ಬ್ಲಾಗ್ ಶರಣ ಶರಣೆಯರೆಲ್ಲರಿಗು ನನ್ನ ಧನ್ಯವಾದಗಳು ಹೀಗೆ ಬರುತ್ತಲಿರಿ.. ಹರಸುತ್ತಲಿರಿ...ತಪ್ಪು ಒಪ್ಪುಗಳನ್ನು ತಿದ್ದುತ್ತಲಿರಿ...
ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟ ಕೊಟ್ಟು
ಸುರಕ್ಷಿತವ ಮಾಡುವ ಭರವ ನೋಡಾ!
ಮಹದಾನಿ ಕೂಡಲಸಂಗಮ ದೇವನ ಪೊಜಿಸಿ ಬದುಕುವೋ
ಕಾಯವ ನಿಶ್ಚಯಿಸುವೆ!
ಎಲ್ಲರಿಗು ಶುಭವಾಗಲಿ...ಶುಭದಿನ...
ಮನಸು