Wednesday, April 8, 2009

ನಿನ್ನ-ಸ್ನೇಹ

ಸ್ನೇಹದ ಹೆಸರಲ್ಲಿ ನೀ ಒಲಿದು ಬಂದೆ
ನಿನ್ನ ಸ್ನೇಹಕೆ ನಾ ಸೋತು ನಿಂದೆ
ಕೆಲವೇ ದಿನವಾದರು ಸ್ನೇಹ
ಅದು ಭದ್ರಬುನಾದಿಯಾಗಿದೆ

ಅದೇಕೊ ಇಷ್ಟುಕಾಲ ಜೊತೆಗಿದ್ದು
ಇಂದು ದೂರ ಸರಿವ ಮಾತಾಡಿದೆ
ನನ್ನ ಮನಕೆ ಚೂರಿ ಚುಚ್ಚಂತಾಯಿತು
ಹೃದಯ ಒಮ್ಮೆಲೆ ಮಮ್ಮಲ ಮರುಗಿತು...

ನಾನೆಲ್ಲೊ ಸೋತೆ ಸ್ನೇಹದ ಆಯ್ಕೆಯಲಿ
ಎಂದು ಭಾವಿಸಿ ಮೂಕಳಾದೆ
ಕಡಲ ಅಲೆಯ ಅಬ್ಬರಕೆ
ಕೊಚ್ಚುಹೋದಂತೆ ಭಾಸವಾಯ್ತು..

ಹೋದ ರಭಸಕೆ ಕಣ್ಣೀರ ಧಾರೆ
ಧರೆಗಿಳಿಸಿ ಭುವಿಯ ತೊಯಿಸಿಬಿಟ್ಟೆ
ಮತ್ತದೆ ಕಡಲ ಅಲೆಯು ನಿನ್ನ
ಭಾಚಿ ತಬ್ಬಿ ನಾನಿರುವ ದಡಕೆ
ತಂದೆಸೆಯಿತು.....

ನೀ ಬಂದಿದ ಕಂಡು ಮನಹಗುರಾಯಿತು
ನೀ ಸಿಗುವುದಿಲ್ಲದ ಮಾತು ಮರೆಮಾಚಿಸಿತು
ಮತ್ತೊಮ್ಮೆ ಹೇಳಿದೆ ಮನವೇಕೋ ಭಾರ
ಕೆಲವರ ಮಾತು ಕೇಳಿ ನಿಂತಿದೆ ಸ್ವರ...

ನೀ ಮಾಡಿದು ತಪ್ಪಲ್ಲವೇ ಸ್ನೇಹಿ
ಗೌಡನ ಮೇಲ್ಲಿದ್ದ ಸಿಟ್ಟನು...
ಗೋಡೆಗೆ ತಟ್ಟಿಬಿಟ್ಟೆಯಲ್ಲಾ...
ಸ್ನೇಹದ ಮನ ಕ್ಷಣದಲೇ ನೋಯಿಸಿಬಿಟ್ಟೆಯಲ್ಲಾ...

ನಿನ್ನ ನೋವೆನಿತಿದ್ದರು ತಿಳಿಸಿಬಿಡು
ನಿನ್ನ ಮನವ ಹಗುರಾಗಲು ಬಿಡು
ನೀನು, ನಾನು ಶಾಶ್ವತವಲ್ಲ ಅಲ್ಲವೆ ...?
ಸ್ನೇಹ ಮಾತ್ರ ಚಿರಾಯು.. ಅದ ಅರಿತುಬಿಡು

ಮತ್ತೆಂದು ದೂರಸರಿವ ಮಾತಾಡದಿರು
ಹೃದಯ ವಿದ್ರಾವಕೆ ಸ್ನೇಹಿಯ ತಳ್ಳದಿರು
ಸ್ನೇಹ ಸಿಂಚನದ ಸಿಹಿ ನೀ ಅರಿತಿರು
ನೀ ಎಂದಿದ್ದರು ಸ್ನೇಹ ಜೀವಿ.. ಅದ ಮರೆಯದಿರು
ಸ್ನೇಹದ ಹೆಸರಲ್ಲಿ ಕೆಲವು ಏರುಪೇರು ನೆಡೆಯುತ್ತವೆ ಸ್ನೇಹ ಕೈಜಾರಿ ಹೋಗಲು ಬಿಡದೆ ಕಾಪಡಿಕೊಳ್ಳಬೇಕು...ಸ್ನೇಹಕ್ಕೆ ಸ್ನೇಹವೇ ಸರಿಸಾಟಿ.....ಮನವೆಂಬ ಮಂಟಪದಿ ಮನುವೆಂಬ ಜೀವಿಯಿರಲು ಅದೇ ನಮಗೆ ಸ್ನೇಹಿ ಆ ಸ್ನೇಹಿಗೆ ಕೈಜೋಡಿಸುವ ಸ್ನೇಹಿ ಸಿಕ್ಕರೆ ಅವರು ಧನ್ಯರು. ಸ್ನೇಹ ಮಾಡುವುದು ನಿಮಿಷದಲ್ಲಿ ಅದ ನಿಭಾಯಿಸುವುದು ಜೀವನಪರ್ಯಂತದಲ್ಲಿ....ಯಾರು ಎಷ್ಟು ನಿಭಾಯಿಸುತ್ತೆವೊ ತಿಳಿಯದು.... ಒಳ್ಳೆ ಸ್ನೇಹಿ ಎಂದು ತಿಳಿದರೆ ಅವರು ನಿಮ್ಮಿಂದ ದೂರಾಗಲು ಬಿಡದಿರಿ....
ಶುಭದಿನ
ಮನಸು...

24 comments:

ಸಾಗರದಾಚೆಯ ಇಂಚರ said...

ಮನಸು,
ನೀವು ಅನ್ನೋದು ನಿಜ, ಸ್ನೇಹಿತರನ್ನು ಮಾಡಿಕೊಳ್ಳುವುದು ಸುಲಭ ಆದರೆ ಸ್ನೇಹ ಕಾಪಾಡಿಕೊಳ್ಳೋದು ಕಷ್ಟ. ಅದನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು. ಒಂದು ಒಳ್ಳೆಯ ಕವನ,
ಸ್ನೇಹ ಚಿರಾಯುವಾಗಲಿ,

Laxman (ಲಕ್ಷ್ಮಣ ಬಿರಾದಾರ) said...

Olleya kavan

ಸಿಮೆಂಟು ಮರಳಿನ ಮಧ್ಯೆ said...

ಮನಸು...

ನನಗೊಬ್ಬ ಸ್ನೇಹಿತ ಇದ್ದಾನೆ...
ಕಾರಣವಿಲ್ಲದೆ ದೂರವಾಗುತ್ತಿದ್ದಾನೆ...
ಅವನಿಗೆ ಈ ಕವನ ಕಳಿಸುತ್ತಿದ್ದೇನೆ..

ಸುಂದರ, ಭಾವಾರ್ಥದ
ಕವನ...

ಅಭಿನಂದನೆಗಳು...

ಶಿವಪ್ರಕಾಶ್ said...

ಮನಸು ಅವರೇ,
ಚಿರಕಾಲ ಇರಲಿ ನಿಮ್ಮ ಈ ಸ್ನೇಹ...
ಕವನ ತುಂಬಾ ಚನ್ನಾಗಿದೆ.
ಧನ್ಯವಾದಗಳು

ಮನಸು said...

ಗುರು,
ಧನ್ಯವಾದಗಳು....ಸ್ನೇಹನೆ ಹಾಗೆ ಸ್ನೇಹಿತರು ಆದಮೇಲೆ ನಾವು ಅವನ್ನು ನಿಭಾಯಿಸಬೇಕು... ಒಂದಾಗಿ ಬಾಳಬೇಕು..ಒಳ್ಳೆಯ ಸ್ನೇಹಿ ಸಿಗೋದು ಬಹಳ ಕಷ್ಟ..
ವಂದನೆಗಳು..
ಲಕ್ಷ್ಮಣ್ ಅವರಿಗೆ..
ಧನ್ಯವಾದಗಳು ನನ್ನ ಕವನ ಮೆಚ್ಚಿದ್ದಕ್ಕೆ ಹೀಗೆ ಬರುತ್ತಲಿರಿ..ಸರಿ ತಪ್ಪು ತಿಳಿಹೇಳುತ್ತಲಿರಿ..

ಮನಸು said...

ಪ್ರಕಾಶ್ ಸರ್,
ನಿಮ್ಮಿಂದ ಜಾರುವ ಮುನ್ನ ನಿಮ್ಮ ಸ್ನೇಹಿತನ ಬರಮಾಡಿಕೊಳ್ಳಿ... ಏನೇ ತಪ್ಪುಒಪ್ಪಿದ್ದರು ಎದುರೆದುರು ಮಾತಾಡಿ ಬಗೆಹರಿಸಿಬಿಡಿ.. ಸ್ನೇಹಿತರು ಯಾಕೋ ದೂರ ಸರಿಯೋ ಮನಸ್ಸು ಮಾಡುತ್ತಲಿದ್ದರೆ ಎಂದೆನುಸುತ್ತೆ ಕೆಲವೊಮ್ಮೆ..
ಕವನ ಮೆಚ್ಚಿದ್ದಕ್ಕೆ ನಿಮ್ಮ ಸ್ನೇಹಿತರಿಗೆ ಕಳಿಸುವುದಕ್ಕೆ ಎಲ್ಲದಕ್ಕೂ ನನ್ನ ತುಂಬು ಹೃದಯದ ಧನ್ಯವಾದಗಳು..
ಸ್ನೇಹ ಬೆಸೆಯಲೆಂದು ಆಶಿಸುತ್ತೇನೆ..

ಮನಸು said...

ಶಿವಪ್ರಕಾಶ್,
ಸ್ನೇಹ ಚಿರಕಾಲ ಇರುತ್ತೆಂದು ನಾನು ಭಾವಿಸಿದ್ದೇನೆ...ಎಷ್ಟು ಕಾಲ ನನ್ನೊಂದಿಗಿರುತೋ ಅಷ್ಟು ಕಾಲ ನಾನು ಕುಶಿ ಅಸ್ಟೇ..
ಕವನ ಮೆಚ್ಚುಗೆಗೆ ನನ್ನ ಧನ್ಯವಾದಗಳು..

shivu said...

ಮನಸು ಮೇಡಮ್,

ಸ್ನೇಹದ ಬಗೆಗಿನ ಕವನ ಚೆನ್ನಾಗಿದೆ...ಗೆಳೆತನವೆನ್ನುವುದು ಒಂದು ಸುಂದರ ಅನುಭವ...ಬಿಟ್ಟುಕೊಡಬಾರದು....

ಭಾವಾರ್ಥಗಳು....ಮನದಲ್ಲುಳೀಯುತ್ತವೆ...
ಧನ್ಯವಾದಗಳು...

Guru's world said...

ಮನಸು,
ಸ್ನೇಹದ ಕವನ,, ತುಂಬ ಚೆನ್ನಾಗಿ ಅತ್ಮ್ಯಿಯವಾಗಿ ಇದೆ.. ಸಿಂಪಲ್ ಆಗಿ ಹೇಳಿದಿರ ಸ್ನೇಹದ ಅರ್ಥವನ್ನು ...
ಹೌದು ಸ್ನೇಹಕ್ಕೆ ಸ್ನೇಹಾನೆ ಸಾಟಿ,, ಇದನ್ನ ವರ್ಣಿಸುವುದಕ್ಕೆ ಆಗೋಲ್ಲ... ಅಸ್ಟೊಂದು ಗಾಡ ಈ ಸ್ನೇಹ ಎಂಬುದು. ಯಾವೊತ್ತು ಸ್ನೇಹಿತರಲ್ಲಿ igo problem ಬರಬಾರದು,,, ಏನೆ ಇದ್ದರು share ಮಾಡಿಕೊಂಡು ಹೋಗ್ತಾ ಇರಬೇಕು .... ಅವಗ್ಲೆ ಕೊನೆ ತನಕ ಚೆನ್ನಾಗಿರಲು ಸಾದ್ಯ...
ಸ್ನೇಹದ ಬಗ್ಗೆ ಒಳ್ಳೆ ಕವನ ಕೊಟ್ಟಿದಕ್ಕೆ ಧನ್ಯವಾದಗಳು.....

ನಿಮ್ಮ ಬ್ಲಾಗ್ ಸ್ನೇಹಿತ.... :-)
ಗುರು

sunaath said...

ಮನಸು,
ಭಾವಪೂರ್ಣ ಕವನ ಬರೆದಿರುವಿರಿ.

Anonymous said...

ಚೆನ್ನಾಗಿದೆ,

ಗೌಡನ ಮೇಲ್ಲಿದ್ದ ಸಿಟ್ಟನು...
ಗೋಡೆಗೆ ತಟ್ಟಿಬಿಟ್ಟೆಯಲ್ಲಾ... ಇದು ಗಾದೆಯೇ?

ಮನಸು said...

ಶಿವೂ ಸರ್,
ಸ್ನೇಹವೇ ಹಾಗಲ್ಲವೇ.. ಬಾವುಕವು ಮಾಡಿಸಿಬಿಡುತ್ತೆ ಸ್ನೇಹ ...
ಗುರು,
ಹೌದು ಸ್ನೇಹಕ್ಕೆ ಸ್ನೇಹವೇ ಸರಿಸಾಟಿ.. ಸಾವಿರ ಸ್ನೇಹಿತರು ಸಿಗಬಹುದು ಆದರೆ ಒಬ್ಬ ಒಳ್ಳೆ ಸ್ನೇಹಿತ ನಿಜ ಸ್ನೇಹಿತ ಸಿಗೋದು ಕಷ್ಟ..
ಧನ್ಯವಾದಗಳು ಗುರು ನಿಮ್ಮ ಸ್ನೇಹದ ನಗೆ ಎಂದೆಂದೂ ಸ್ವೀಕೃತ..
ಸುನಾಥ್ ಸರ್,
ನಿಮಗೆ ನನ್ನ ಬಾವಪೂರ್ಣ ಸ್ನೇಹದ ವಂದನೆಗಳು..

ಮನಸು said...

@ ರಾಘವೇಂದ್ರ
ಧನ್ಯವಾದಗಳು.. ಹೌದು ಅದು ಗಾದೆಯೇ.. ಗೌಡನ ಮ್ಯಾಗ ಸಿಟ್ಟು ಗ್ವಾಡೆಗಾಕಿ ತಟ್ಟು.. ಎಂದು ಹಳ್ಳಿ ಭಾಷೆಯಲ್ಲಿದೆ ಇಲ್ಲಿ ಸಂದರ್ಭಕ್ಕೆ ಸೂಕ್ತವೆನಿಸಿ ಬಳಸಿದೆ..
ಹೀಗೆ ಬರುತ್ತಲಿರಿ..

ಧರಿತ್ರಿ said...

ಯಾಕೋ ಪ್ರಸ್ತುತ ಕಾಲಘಟ್ಟದಲ್ಲಿ ನಿಜವಾದ ಸ್ನೇಹಿತರು ಸಿಗೋದು ಅಪರೂಪ ಅನಿಸುತ್ತೆ.
-ಧರಿತ್ರಿ

ಜ್ಞಾನಮೂರ್ತಿ said...

ಅಕ್ಕ ನಿಮ್ಮ ಕವನ ತುಂಬಾ ಚನ್ನಾಗಿದೆ ಇಷ್ಟ ಆಯಿತು ....

ಜಲನಯನ said...

ಮನಸು ಮುದುಡಿದೆ
ಮನವ ಕಲಕಿದೆ
ಮನಮೆಚ್ಚಿದವ
ಮನಚುಚ್ಚಿದರೆ

these are my lines in one of my Kvanas...
Manasu madam thanks for kindling these thoughts..in me..

ಕನಸು said...

ಹಲೋ ರಿ ಮೇಡಂ.
ನಿಮ್ಮ ಹಾಡು ತುಂಭಾ ವಂಡರ ಪುಲ್ ಆಗಿದೆ
ಧನ್ಯವಾದಗಳು

ಮನಸು said...

ಧರಿತ್ರಿ,
ತುಂಬು ಹೃದಯದ ಸ್ವಾಗತ, ಎಲ್ಲೆಲ್ಲು ಸ್ನೇಹದ ನಂಟು ಕಳಚುತಿದೆ ಅದು ನಿಜ ಕೂಡ...ನೀವು ಹೇಳುವುದು ನೂರಕ್ಕೆ ನೂರು ನಿಜ...
ಜ್ಞಾನಮೂರ್ತಿ,
ಧನ್ಯವಾದಗಳು ಕವನ ಮೆಚ್ಚಿದಕ್ಕೆ..
ಜಲನಯ,
ಸರ್ ನಿಮ್ಮ ಆ ಸಾಲುಗಳು ಚೆನ್ನಾಗಿವೆ.. ಕೆಲವು ಸಮಯ ಒಳ್ಳೊಳೆ ಸಾಲುಗಳು ಒಮ್ಮೆಲೇ ಮೂಡಿ ಬರುತ್ತವೆ..
ಕನಸು,
ಧನ್ಯವಾದಗಳು ಹೀಗೆ ಬರುತ್ತಲಿರಿ... ನನ್ನ ಮನಸಿನ ಕನಸಿಗೂ ಸ್ವಲ್ಪ ತಣಿಸಿಬಿಡಿ ಹ ಹ ಹ

Prabhuraj Moogi said...

ಸ್ನೇಹ ಅನ್ನೊದು ಹಾಗೇನೆ, ಶಾಲೇಲಿ ಪಕ್ಕ ಕೂರುತ್ತಿದ್ದವನಿಂದ ಹಿಡಿದು, ಅಫೀಸಿನಲ್ಲಿ ಪಕ್ಕ ಕೂರುವ ಗೆಳೆಯನವರೆಗೆ ಎಷ್ಟು ಸ್ನೇಹಿತರು ಸಿಕ್ಕಿಲ್ಲ, ಕಳೆದು ಹೋಗಿಲ್ಲ... ಅದರೂ ಸ್ನೇಹ ಮಾಡುವುದು ಬಿಡುವುದಿಲ್ಲ, ಮಾಡುತ್ತಲೇ ಇರುತ್ತೇವೆ... ಕೆಲ ಸ್ನೇಹಿತರನ್ನು ಮಾತ್ರ ಮರೆಯಲಾಗಲ್ಲ...

Ranjita said...

ಚೆನ್ನಾಗಿದೆ ... ಕಳೆದುಕೊಂಡ ಸ್ನೇಹಿತರನ್ನು ನೆನೆದು ನೋವೂ ಆಗ್ತಿದೆ ..

ಮನಸು said...

ಪ್ರಭು,
ಎಲ್ಲಿ ಹೋದರಲ್ಲಿ ಸ್ನೇಹಿತರು ಸಿಕ್ಕುತಾರೆ ಆದರೆ ಒಳ್ಳೆ ಸ್ನೇಹಿ ಸಿಗುವುದು ಬಹಳ ಕಷ್ಟ ಅಲ್ಲವೇ...? ನಾವು ಅವರನ್ನು ಉಳಿಸಿಕೊಲ್ಲಬೇಕಲ್ಲವೇ...?

ಮನಸು said...

ರಂಜಿತ,
ನಿಮಗೆ ಸ್ವಾಗತ ನನ್ನ ಬ್ಲಾಗಿಗೆ... ನಿಮ್ಮ ಹನಿಗವನಗಳು ನನಗೆ ತುಂಬಾ ಇಡಿಸಿತು.. ಸ್ನೇಹಿತರು ದೂರಾದರೆ ಅಗೊನೋವು ಹೇಳಲಾಗದು ಅಲ್ಲವೇ? ಹೀಗೆ ಬರುತ್ತಲಿರಿ..ಸ್ನೇಹದಿ..
ವಂದನೆಗಳು..

ದಿನಕರ ಮೊಗೇರ said...

'ಗೌಡರ ಮೇಲಿನ ಸಿಟ್ಟು, ಗೋಡೆಯ ಮೇಲೆ ತೀರಿಸಿಕೊಂಡೆ ...' ಅದ್ಭುತ ಕಲ್ಪನೆ.......ಕವನ ಸ್ನೇಹವನ್ನ ಸರಳವಾಗಿ ತಿಳಿಸಿದೆ....

Anonymous said...

super