ಹುಟ್ಟುವಾಗ ಬೆತ್ತಲೆ
ಹೋಗುವಾಗ ಬೆತ್ತಲೆ
ಇರುವ ಮೂರುದಿನಕೆ
ಏಕೀ ಜೀವಕೊಡ್ಡುವೆ ಕತ್ತಲೆ....?
ಇರುವಾಗ ಎಲ್ಲರನು ಪ್ರೀತಿಸು
ಎಲ್ಲರಲಿ ಒಂದಾಗಿ ನೆಲೆಸು
ಇರುವ ಕ್ಷಣಿಕ ಜೀವಕೆ
ಕಲ್ಮಶ ಒಡ್ಡದಿರು ಮನಕೆ...!!!
ನೆನ್ನೆ ಇಂದಿನ ದಿನಗಳ ಅಂತರ ಅಲ್ಪ
ಇಂದು ನಾಳೆಗಳ ಅಂತರ ಸ್ವಲ್ಪ
ಇರುವ ಅಲ್ಪ-ಸ್ವಲ್ಪಗಳಲಿ
ನಗು ನಗುತ ಇರುವುದ ಕಲಿ...!!!
ಮನುಜನ ಸಾವು ನಿಶ್ಚಿತ
ಇದು ಆ ಬ್ರಹ್ಮ ಬರೆದ ಅಂಕಿತ
ನಾವು ಇರುವಷ್ಟು ದಿನ
ತಿಳಿಯ ಬೇಕಿದೆ ಜೀವನದ ಸಂಕೇತ...!!!
ಸಿರಿವಂತನಲಿ ಹಣದ ಆರ್ಭಟ
ಬಡವನಲ್ಲಿ ಕಷ್ಟದ ತೂಗಾಟ
ಇರುವವ ಇಲ್ಲದವನ
ನೋಡಿ ಅಣಕಿಸದೆ ಆಡದಿರಲಿ ಜೂಟಾಟ...!!!
ಜೀವನದ ಬೇಕುಬೇಡಗಳಲಿ
ಇಲ್ಲ ಸಲ್ಲದ ನಿಂದೆಗಳಲಿ
ಮನದಾಳದ ಬಿರುಕಿನಲಿ
ಬಾಳು ಮುಸುಕಿನಂಚಿನಲಿ ಸಾಗದಿರಲಿ...!!!
ಹೋಗುವಾಗ ಬೆತ್ತಲೆ
ಇರುವ ಮೂರುದಿನಕೆ
ಏಕೀ ಜೀವಕೊಡ್ಡುವೆ ಕತ್ತಲೆ....?
ಇರುವಾಗ ಎಲ್ಲರನು ಪ್ರೀತಿಸು
ಎಲ್ಲರಲಿ ಒಂದಾಗಿ ನೆಲೆಸು
ಇರುವ ಕ್ಷಣಿಕ ಜೀವಕೆ
ಕಲ್ಮಶ ಒಡ್ಡದಿರು ಮನಕೆ...!!!
ನೆನ್ನೆ ಇಂದಿನ ದಿನಗಳ ಅಂತರ ಅಲ್ಪ
ಇಂದು ನಾಳೆಗಳ ಅಂತರ ಸ್ವಲ್ಪ
ಇರುವ ಅಲ್ಪ-ಸ್ವಲ್ಪಗಳಲಿ
ನಗು ನಗುತ ಇರುವುದ ಕಲಿ...!!!
ಮನುಜನ ಸಾವು ನಿಶ್ಚಿತ
ಇದು ಆ ಬ್ರಹ್ಮ ಬರೆದ ಅಂಕಿತ
ನಾವು ಇರುವಷ್ಟು ದಿನ
ತಿಳಿಯ ಬೇಕಿದೆ ಜೀವನದ ಸಂಕೇತ...!!!
ಸಿರಿವಂತನಲಿ ಹಣದ ಆರ್ಭಟ
ಬಡವನಲ್ಲಿ ಕಷ್ಟದ ತೂಗಾಟ
ಇರುವವ ಇಲ್ಲದವನ
ನೋಡಿ ಅಣಕಿಸದೆ ಆಡದಿರಲಿ ಜೂಟಾಟ...!!!
ಜೀವನದ ಬೇಕುಬೇಡಗಳಲಿ
ಇಲ್ಲ ಸಲ್ಲದ ನಿಂದೆಗಳಲಿ
ಮನದಾಳದ ಬಿರುಕಿನಲಿ
ಬಾಳು ಮುಸುಕಿನಂಚಿನಲಿ ಸಾಗದಿರಲಿ...!!!
ವಿ. ಸೂ: ಈ ಪುಟ್ಟ ಕವನದೂಂದಿಗೆ ಅಲ್ಪ ವಿರಾಮವನ್ನು ನನ್ನ ಬ್ಲಾಗಿಗೆ ನೀಡುತ್ತಲಿದ್ದೇನೆ. ನಲ್ಮೆಯ ಬ್ಲಾಗ್ ಸ್ನೇಹಿತರೆಲ್ಲರು ಇದುವರೆಗು ನನ್ನೂಂದಿಗಿದ್ದು ತಮ್ಮೆಲ್ಲ ಅನಿಸಿಕೆಗಳನ್ನು ನೀಡಿ ಪ್ರೋತ್ಸಾಹ ನೀಡಿದ ನಿಮ್ಮೆಲ್ಲರಿಗು ಧನ್ಯವಾದಗಳು. ನಾನು ನಿಮ್ಮೆಲ್ಲರಿಗು ಸದಾ ಚಿರಋಣಿ. ೪೫ ದಿನಗಳ ರಜೆಯ ಮೇಲೆ ಬೆಂಗಳೂರಿಗೆ ತೆರೆಳುವ ಕಾರಣ ನಿಮ್ಮೆಲ್ಲರ ಲೇಖನಗಳನ್ನು ಓದಲಾಗುತ್ತೋ ಇಲ್ಲವೋ ಸಮಯ ಸಿಕ್ಕಾಗ ಖಂಡಿತ ಅನಿಸಿಕೆಗಳನ್ನು ತಿಳಿಸುವೆ. ಸಾಧ್ಯವಾದರೆ ಆಗೊಮ್ಮೆ ಈಗೊಮ್ಮೆ ಬ್ಲಾಗಿಸುವೆ ಇದುವರೆಗೂ ಇದ್ದ ಪ್ರೋತ್ಸಾಹ ಹಸ್ತ ಕೊನೆವರೆಗೂ ಹೀಗೆ ಇರಲೆಂದು ಆಶಿಸುತ್ತೇನೆ.
ನಿಮ್ಮೆಲ್ಲರಿಗು
ನಿಮ್ಮೆಲ್ಲರಿಗು
ವಂದನೆಗಳು
ಶುಭಮಸ್ತು
ಶುಭಮಸ್ತು
22 comments:
ಬದುಕಿನ ಕವನ ಚೆನ್ನಾಗಿದೆ...
ಮತ್ತೆ ಬೆಂಗಳೂರಿಗೆ ಸ್ವಾಗತ. ಬಿಡುವಾದಾಗ ಬೇಟಿಯಾಗೋಣ...
ಮನಸು ಅಕ್ಕ ,
ಬದುಕಿನ ವಾಸ್ತವವನ್ನು ಬಿಂಬಿಸುವ ಕವನ ತುಂಬಾ ಚನ್ನಾಗಿದೆ..
ಮರಳುಗಾಡಿನಿಂದ ಕರುನಾಡಿಗೆ ಸ್ವಾಗತ....
ಮನಸು ಮೇಡಮ್,
ಕವನ ಸಕತ್ತಾಗಿದೆ.
ಬನ್ನಿ ಬನ್ನಿ ಬೆಂಗಳೂರಿಗೆ ಹಾರ್ಧಿಕ ಸ್ವಾಗತ...
ಮನಸು ಅವರೇ,
ಕವನ ತುಂಬಾ ಚನ್ನಾಗಿದೆ.
ನಮ್ಮ ಊರಿಗೆ ಸ್ವಾಗತ..
ನಿಮ್ಮ ಪ್ರಯಾಣ ಸುಖಕರವಾಗಿರಲಿ.
DDLG ಚಿತ್ರದ ಈ ಹಾಡು ನಿಮಗಾಗಿ....
"ghar aaja pardesi tera desh bulayi ri..."
ಮನಸು
ಕವನ ಎಂದಿನಂತೆ ಚುಟುಕಾಗಿ ತುಂಬ ಚೆನ್ನಾಗಿ ಇದೆ.....
ಬೆಂಗಳೂರಿಗೆ ಬರುತ್ತಿದ್ದಿರ ಅಂತ ಕೇಳಿ ಸಂತೋಷ ಆಯಿತು.... ಬಿಡುವಾದಾಗ ಒಮ್ಮೆ ಬೇಟಿಯಗೋಣ...
ಗುರು
ಕವನ ಚೆನ್ನಾಗಿದೆ. ಕವನದ ಹಿಂದಿನ ಆಲೋಚನ ಪರಿ ಹಿಡಿಸಿತು.
ಕವನದ ಮಧ್ಯದಲ್ಲಿ ಪ್ರಥಮ ಮತ್ತು ಮಧ್ಯಮ ಪುರುಷಗಳ ಪ್ರಯೋಗ ನಡುವಣದ ತೊಯ್ದಾಟ ಕವನದ ಲಯಕ್ಕೆ ಅಭಾಸವನ್ನುಂಟುಮಾಡುತ್ತಿದೆ ಎನಿಸಿತು. ಬಹುಶಃ ಇಡಿ ಕವನದಲ್ಲಿ ಬರೇ ಪ್ರಥಮ ಇಲ್ಲವೇ ಮಧ್ಯಮ ಪುರುಷದ ಪ್ರಯೋಗ ಮಾಡಿದರೆ ವಿಚಾರಗಳು ಇನ್ನಷ್ಟು ಸ್ಪಷ್ಟವೆನಿಸುವುದು.
ಕವನದಲ್ಲಿಯ ಸಂದೇಶ ಸೊಗಸಾಗಿದೆ.
Blogಲೋಕಕ್ಕೆ ಬೇಗನೇ ಮರಳಿರಿ.
ಸರಿ ನಾ ಹೋಗಿ ಬರುವೆ...
ಮತ್ತೆ ನೀ ಎಂದು ಬರುವೆ...
ಈ ನಾಡಿಗೆ..ಮರಳುಗಾಡಿಗೆ...???
ಈ ಬಾರಿ ಖಂಡಿತ ಬೆಂಗಳೂರಲ್ಲಿದ್ದೀರಾ ಎಂದುಕೊಳ್ಳೋಣವೇ??
ಹೋಗ್ತಾ ಹೋಗ್ತಾ..ಒಂದು ಮಸ್ತ್ ಕವನ ಕುಸುಮಾನ ಹರಡಿದ್ದೀರಾ..?? ಮತ್ತೆ ನೀವು ಬ್ಲಾಗಿಸೋ ವರೆಗೆ ಕಂಪು ಹರಡಲಿ ಅಂತ...
ಒಂದೂವರೆ ತಿಂಗಳ ರಜೆ ಮಜೆಯಲಿ ಕಲೆಯಲಿ....ಹಾರೈಕೆ....
ಚೆನ್ನಾಗಿದೆ... ನಿಮ್ಮ ಪ್ರಯಾಣ ಸುಖಕರವಾಗಿರಲಿ...
ಮನಸು,
ಒಳ್ಳೆಯ ಕವನ,
೪೫ ದಿನಗಳು ನಿಮಗೆ ಹರುಷ ಸಂತಸ ನೀಡಲಿ, ತಾಯ್ನಾಡು ಯಾವತ್ತು ಚಂದವೇ, ಅದರ ಭೇಟಿಯೇ ಒಂದು ರೋಮಾಂಚನ.
Manasu,
Happy Holidays
Cheers
ಮನಸು....
ಭಾವ ಪೂರ್ಣವಾದ ಕವನ...
ಓದಿ ಮನತುಂಬಿ ಬಂದಿದೆ....
ಬೆಂಗಳೂರಿಗೆ ಬರುತ್ತಿದ್ದೀರಾ...
ಬನ್ನಿ... "ನಮ್ಮನೆಗೂ ಬನ್ನಿ"
ವಾಹನ ಸಂದಣಿ ನಗರಕ್ಕೆ
ಸುಸ್ವಾಗತ...
ನಿಮ್ಮ ರಜಾ ದಿನಗಳು...
ಆನಂದವಾಗಿರಲೆಂದು ಹಾರೈಸುವೆ...
ಮನಸು, ಬೆಂಗಳೂರಿಗೆ ಸ್ವಾಗತ
ಮನಸು ಅವರೇ,
ಕವನ ತುಂಬಾ ಚೆನ್ನಾಗಿದೆ.
ನಿಮಗೆ, ನಮ್ಮೂರಿಗೆ (ಬೆಂಗಳೂರಿಗೆ) ಆದರದ ಸ್ವಾಗತ!!!
ಬೆಂಗಳೂರಿಗೆ ಸ್ವಾಗತ, ನಿಮ್ಮ ರಜಾದಿನಗಳು ಮಜವಾಗಿ ಕಳೆಯಲಿ, ಮತ್ತೆ ಬ್ಲಾಗ್ ಲೋಕಕ್ಕೆ ಬೇಗ ಮರಳಿ ಬನ್ನಿ. ಬೆಂಗಳೂರಿನಲ್ಲಿ ನಮ್ಮನೆಗೆ ನಿಮ್ಮನ್ನ ಕರೆಯೋಣ ಅಂದ್ರೆ ನನ್ನಾಕೆ ಇನ್ನೂ ನನ್ನ ಕಲ್ಪನೆ, ನನಗೆ ನನ್ನಾಕೆ ಅಂತ ಜತೆ ಸಿಕ್ಕ ಮೇಲೆ ಮನೆ ಮಾಡಿದಾಗ ಖಂಡಿತ ನಮ್ಮನೆಗೆ ಬರಬೇಕು.
ellarigu dhanyavadagaLu bangalorige bantu talupiddene... nannooru hegiddaru chendaveniside... vandanegalu
mrudhumanasu@gmail.com
ಮನುಜನ ಸಾವು ನಿಶ್ಚಿತ
ಇದು ಆ ಬ್ರಹ್ಮ ಬರೆದ ಅಂಕಿತ
ನಾವು ಇರುವಷ್ಟು ದಿನ
ತಿಳಿಯ ಬೇಕಿದೆ ಜೀವನದ ಸಂಕೇತ...!!!
ನಿಮ್ಮ ಈ ಸಾಲುಗಳು ತುಂಬಾ ಹಿಡಿಸಿದವು.
ಸುಮನಸಿನ ’ಮನಸು’ ಅವರಿಗೆ!
ಓ ಮನಸೆ! ನಿಮ್ಮ ಕವನವೈಖರಿ ಬಲು ಸೊಗಸು,
’ನೀವ್’ ಕಾವ್ಯವತಿ, ಅತಿ ಮತಿಯ ಭಾವ ಸರಸ್ಸು,
ಮನಸಿನ ಪುಷ್ಪವನದಲಿ ಪರಾಗದ ಸೂಸು
ಕುಸುಮವೃಂದ ಪ್ರಸರಿಪ ಕಂಪಿನ ಮೆರಸು!
*
ಓ ಮನಸೆ! ಅನಿತು ಮೆರೆವ ಭಾವಗೀತೆ
ಹೊರಗಿರಬೇಕು ದಿನದಿರುಳ ಬೆಳಕಿನ ಜೊಜೆ
ಬಂಧಿಸಿದಿರೇಕೆ ಕಾರ್ಗತ್ತಲ ಕೊಟಡಿಯಲಿ,
ಕಪ್ಪುಬಿಳಿ ಮಾಡಿ ಗೃಹದೊಳಗೋಡೆಗಳು ನೀಲಿ?
*
ಶ್ರಮವಹಿಸಿ ಓದಿ ನೊಂದವು ನಯನಗಳು,
ರವಾನಿಸಿ ಮೆದುಳಿಗೆ ದೂರು ತಙ್ಞತೆಗೆ ಕೊಲ್ಲು,
ಓದುವಾಕಾಂಕ್ಷೆ ಪಡೆಯಿತು ತಕ್ಷಣ ನಿಲ್ಲು,
ತತ್ಪರತೆ ಮುರಿದು ಮನಸಿಗೆ ಬೇಸರದ ನರಳು.
*
ನಕ್ಷತ್ರಗಳು ರಾತ್ರಿಯಾಗಸಕೆ ಚಂದ,
ಈಕ್ಷಿಸುವವರಿಗೆಲ್ಲ ಆಗುವುದಾನಂದ.
ದಿನದಿರುಳಲಿ ರಾರಾಜಿಸಲಿ ರವಿಕಿರಣಗಳು
ಬಿಳಿಹಾಳೆಗಳಲಿ ನಿಮ್ಮ ಕಾವ್ಯಗೀತೆಗಳು!
*
- ವಿಜಯಶೀಲ
*
vijayasheela,
nimma comment kavana saha chennagidhe!!!! 2nd para nali belakina joje athawa jothe na thapidhare sari maadi
ಆಯಿತು...ನಾವೆಲ್ಲೂ ಹೋಗಲ್ಲ..ಆದರೆ ಇಲ್ಲಿ ಬಂದು ನಮಗೆ ಮುಖ ತೋರಿಸಿ ಹೋಗದಿದ್ರೆ ಟೂಊಊಊ ಅಕ್ಕಾ..
-ಧರಿತ್ರಿ
dhanyavadagaLu nEranudiyavarige... heege baruttaliri..
vijaya sheela nimma kavana tumba ista ayitu neevu yarendu tiLiyalilla aadaru nimma atmeeyatege nanna dhanyavadagaLu heege baruttaliri..
chandru dhanyavadagaLu neevu illi bandu vijaya avara kavana mechidakke..
dharitri,
kandita mukha torisuteeni ninna meet madade irteena hahaha
Post a Comment