Monday, September 28, 2009

ಬೆಳ್ಳಂಬೆಳಗಿನ ಕನಸು


ಎಲ್ಲ ನಿದ್ರಿಸುವಾಗ ನಾ ಎಚ್ಚೆತ್ತಂತ್ತಾಯ್ತು
ಬೆಳಗಿನಜಾವದ ಮಸುಕು ಮೊಗ್ಗಿನಲಿ
ಮನದಲ್ಲೆಲ್ಲೋ ಹೂ ಅರಳಿದಂತಾಯ್ತು
ತುಟಿಯ ಮೇಲೆ ಮುಗುಳುನಗೆ ಬೀರುತಿತ್ತು ....

ಹಕ್ಕಿಯ ಚಿಲಿಪಿಲಿ ಗಾನ ಕೇಳಲಿಲ್ಲ
ದನಕರುಗಳು ಅಂಬಾ ಎನುವ ಧನಿಯು ಮೂಡಲಿಲ್ಲ
ಮೈಮರೆತಂತೆ ಭಾಸವಾಗಿತ್ತಿಂದ್ದು
ಮುಂಜಾವಿನ ಕನಸಿನಲಿ ನಿನ್ನದೇ ಚಿತ್ರ ಮೂಡಿತ್ತು ...

ನನ್ನ ಹೆಜ್ಜೆಗೆ ನಿನ್ನ ಹೆಜ್ಜೆ ಜೊತೆಗೂಡಿ ಸಾಗಲು
ಬೆಳದಿಂಗಳ ಚೆಂದಿರನು ಕಿರುನಗೆಯ ಬೀರಿದಂತಾಯ್ತು
ಸಾಲು ಸಾಲು ಮರಗಳು ತಂಗಾಳಿ ಬೀಸಲು
ನಿನ್ನ ಅಪ್ಪುಗೆಯಡೇ ಬರಸೆಳೆದಂತಾಯ್ತು .....

ಒಲವೆಂಬ ಹಣತೆ ನೀಡಿದೆಯೆನಗೆ
ಸವಿಭಾವ ಪ್ರೀತಿ ಬರಲು ನನ್ನೆಡೆಗೆ
ನಾ ಸೋತು ನಿನಗೆ ಸೆರೆಯಾದ ಭಾವ
ಮೂಡಿತಿಂದು ಬೆಳ್ಳಂಬೆಳಗಿನ ಜಾವ .....

ಮುಂಜಾವ ಸವಿಗನಸು ನಿಜವೆಂದು ತಿಳಿದು
ಕಣ್ಣ್ಬಿಟ್ಟು ನಗಲು ಒಲವುಕ್ಕಿ ಹರಿಯಲು
ಮಂಜು ಮುಸುಕಿನಲಿ ನೀ ಬಂದು ಸೇರಲು
ಕನಸುನನಸಾದಂತೆ ಆಗಸಕೆ ಎರಡೇ ಮೆಟ್ಟಿಲೇರಿ ನಿಂತೆ ...

ಮುಂಜಾವಿನ ಕನಸಿನೊಂದಿಗೆ ಎಲ್ಲರಿಗು ದಸರಾ ಹಬ್ಬದ ಶುಭಾಶಯಗಳು..
ಒಲವೆಂಬ ಹಣತೆ, ಸಹೃದಯತೆಯೆಂಬ ನಂದಾದೀಪ ನಿಮ್ಮನೆಯೂಳಗೆ ಹಾಗು ನಿಮ್ಮೊಳಗೆ ಸದಾ ಬೆಳಗಲಿ.
ವಂದನೆಗಳು
ಶುಭದಿನ

27 comments:

ಮೂರ್ತಿ ಹೊಸಬಾಳೆ. said...

ಮುಂಜಾವಿನ ಕನಸನ್ನು ಚಂದವಾಗಿ ವರ್ಣಿಸಿದ್ದೀರಿ.
ನಿಮಗೂ ನಿಮ್ಮ ಕುಟುಂದವರಿಗೂ ನವರಾತ್ರಿಯ ಶುಭಾಷಯಗಳು.

Guru's world said...

ತುಂಬ ಚೆನ್ನಾಗಿ ಇದೆ ಮುಂಜಾವಿನ ಕನಸು,,,
ನಿಮಗೂ ದಸರಾ ಹಬ್ಬದ ಶುಭಾಶಯಗಳು....

shivu said...

ಮುಂಜಾನೆ ಕನಸನ್ನು ತುಂಬಾ ಚೆನ್ನಾಗಿ ಕವನದಲ್ಲಿ ಬರೆದಿದ್ದೀರಿ...
ನಿಮಗೂ ದಸರಾ ಹಬ್ಬದ ಶುಭಾಶಯಗಳು.

PARAANJAPE K.N. said...

ನಿಮ್ಮ ಮುಂಜಾವಿನ ಕನಸಿನ ಕವನ ಚೆನ್ನಾಗಿದೆ. ಕನಸು ನನಸಾಗಲಿ., ದಸರೆಯ ಶುಭಹಾರೈಕೆಗಳು

ದಿನಕರ ಮೊಗೇರ said...

ನಿಮ್ಮ ಬೆಳಗಿನ ಕನಸು ನಿಜವಾಗಲಿ. ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.

Prabhuraj Moogi said...

ನೀವು ಮನಸು, "ಸವಿಗನಸು" ಬಗ್ಗೇನೆ ಕನಸು ಕಾಣ್ತೀರಾ ಬಿಡಿ :)
ಮುಂಜಾವಿನ ಕನಸುಗಳು ನಿಜವಾಗುತ್ತವಂತೆ, ಕವನ ಚೆನ್ನಾಗಿದೆ, ಕವನದ ಪಕ್ಕದ ಫೋಟೋ ಕೂಡ...

Laxman (ಲಕ್ಷ್ಮಣ ಬಿರಾದಾರ) said...
This comment has been removed by the author.
Laxman (ಲಕ್ಷ್ಮಣ ಬಿರಾದಾರ) said...

Manasu avare sogasagide kavan. nimagu Dasar habbada subhashayagalu.
Maga hegiddane?

ಸಿಮೆಂಟು ಮರಳಿನ ಮಧ್ಯೆ said...

ಮನಸು...

ಬಲು ಸುಂದರ ನಿಮ್ಮ ಮುಂಜಾವಿನ ಕನಸು...
ಬಹಳ ಪ್ರೀತಿಯಿಂದ ಬರೆದಿದ್ದೀರಿ,,,

ನಿಮಗೂ ವಿಜಯದಶಮಿಯ ಶುಭಾಶಯಗಳು...

Laxman (ಲಕ್ಷ್ಮಣ ಬಿರಾದಾರ) said...

ನಿಮ್ಮ ಕವನ ಚೆನ್ನಾಗಿದೆ. ಈ ಶುಭದಿನದಂದು ನಾನೋಂದು ಮೊಟ್ಟ ಮೊದಲ ಬಾರಿಗೆ ಒಂದು ಕಥೆ ಬರೆದಿದ್ದೆನೆ. ನೋಡಿ ನಿಮ್ಮ ಆಭಿಪ್ರಾಯ ತಿಳಿಸಿ

ಮನಸು said...

ಮೂರ್ತಿ,ಗುರು
ಧನ್ಯವಾದಗಳು ಕವನ ಮೆಚ್ಚಿದ್ದಕ್ಕೆ... ನಿಮಗೂ ಇಂತ ಸವಿಯಾದ ಕನಸು ಬರುತ್ತೆಂದು ಭಾವಿಸುವೆ ಹಹಹ
ವಂದನೆಗಳು..

ಶಿವುಸರ್,
ಧನ್ಯವಾದಗಳು ನಿಮ್ಮ ಅನಿಸಿಕೆ ನಮಗೆ ಸ್ಪೂರ್ತಿ....ಓದುತ್ತಲೇ ಇರಿ...

ಪರಾಂಜಪೆ ಸರ್,
ಧನ್ಯವಾದಗಳು ನಿಮ್ಮ ಹಾರೈಕೆಯಂತೆ ಆಗಲಿ..

ದಿನಕರ್ ಸರ್,
ಧನ್ಯವಾದಗಳು ನೀವು ಹೀಗೆ ಬರುತ್ತಲಿರಿ..
ಸರ್ ನಿಮ್ಮ ಬ್ಲಾಗ್ನಲ್ಲಿ ಕಾಮೆಂಟ್ ಹಾಕಲು ಆಗುತ್ತಿಲ್ಲ ಏನೋ ತೊಂದರೆ ಇದೆ. ನಿಮ್ಮ ಬರಹಗಳೆಲ್ಲವನ್ನು ಓದಿದೆ ಚೆನ್ನಾಗಿವೆ ಮುಂದುವರಿಸಿ..

ಪ್ರಭು,
ಮನಸು ಯಾವಾಗಲು ಸವಿ ಸವಿಯಾದ ಕನಸನ್ನೇ ಕಾಣುತ್ತೆ... ನಿಜನೇ ಆಗುತ್ತೆ ಮುಂಜಾನೆಯ ಕನಸು...ಧನ್ಯವಾದಗಳು

ಲಕ್ಷ್ಮಣ್ ಸರ್,
ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು... ಮಗ ಚೆನ್ನಾಗಿದ್ದನೆ... ಖಂಡಿತ ನಿಮ್ಮ ಬ್ಲಾಗ್ನಲ್ಲಿನ ಕಥೆಯನ್ನು ಓದುವೆ..

ಪ್ರಕಾಶಣ್ಣ
ಬಹಳ ಪ್ರೀತಿಯಿಂದನೇ ಬರೆದಿದ್ದು ನೀವೆಲ್ಲ ಇಷ್ಟಪಟ್ಟಿದ್ದು ನನಗೆ ಬಹಳ ಖುಷಿಕೊಟ್ಟಿದೆ, ಧನ್ಯವಾದಗಳು

ಸಾಗರದಾಚೆಯ ಇಂಚರ said...

ಮನಸು,
ನಿಮಗೂ ತಡವಾಗಿ ದಸರಾ ಹಬ್ಬದ ಶುಭಾಶಯಗಳು,
ಸುಂದರ ಕವಿತೆ

ಮುಸ್ಸ೦ಜೆ ಇ೦ಪು said...

ಸು೦ದರವಾದ ಕನಸು...ಇನ್ನೂ ಸು೦ದರ ಕವನ...ಚೆನ್ನಾಗಿದೆ....

ಅನಿಲ್ ರಮೇಶ್ said...

ಮನಸು,
ನಿಮ್ಮ ಕವನ ಇಷ್ಟ ಆಯ್ತು.

-ಅನಿಲ್

ಮನಸು said...

ಗುರು, ಮುಸ್ಸಂಜೆ ಇಂಪು, ಅನಿಲ್
ಎಲ್ಲರಿಗೂ ಧನ್ಯವಾದಗಳು... ಹೀಗೆ ಬರುತ್ತಲಿರಿ

ಶಿವಪ್ರಕಾಶ್ said...

ಮುಂಜಾವಿನ ಕನಸು ತುಂಬಾ ಚನ್ನಾಗಿತ್ತು..
ನಿಮಗೂ ದಸರಾ ಹಬ್ಬದ ಶುಭಾಶಯಗಳು....

ರವಿಕಾಂತ ಗೋರೆ said...

ಮುಂಜಾವಿನ ಕನಸು ನಿಜವಾಗುತ್ತಂತೆ... ನಿಮ್ಮ "ಸವಿಗನಸೂ" ನನಸಾಗಲಿ...:-)

ಮನಸು said...

ರವಿಕಾಂತ್ , ಶಿವು
ನಿಮ್ಮ ಮೆಚ್ಚುಗೆಯ ಅನಿಸಿಕೆಗೆ ನಮ್ಮ ಧನ್ಯವಾದಗಳು
ವಂದನೆಗಳು

sunaath said...

ಸುಪ್ರಭಾತದಷ್ಟೇ ಸುಂದರವಾಗಿದೆ ನಿಮ್ಮ ಕನಸು ಹಾಗು ಕವನ.

ತೇಜಸ್ವಿನಿ ಹೆಗಡೆ- said...

ಸುಂದರ ಮುಂಜಾವಿಗೆ ತಕ್ಕಂತಿತೆ ನಿಮ್ಮ ಕವನ. ಬಲು ಚೆನ್ನಾಗಿದೆ... ನನಸಾಗಲೆಂದೇ ಹಾರೈಸುವೆ :)

ಮನಸು said...

ಸುನಾಥ್ ಸರ್,
ಧನ್ಯವಾದಗಳು ಕನಸು ನನಸೇ ಆಗುವುದೇನೋ ನೋಡಬೇಕು.. ಹಹಹ
ತೇಜಸ್ವಿನಿಯವರೆ
ಮುಂಜಾನೆ ಮೂಡಿದ್ದು ಅದಕ್ಕೆ ಹಾಗಿದೆ ಹಹಹ.. ಧನ್ಯವಾದಗಳು ನಿಮ್ಮ ಅಭಿಪ್ರಾಯ ಸಂತಸ ನೀಡಿದೆ ಬರುತ್ತಲೇ ಇರಿ

ಗೌತಮ್ ಹೆಗಡೆ said...

:)

ಮಲ್ಲಿಕಾರ್ಜುನ.ಡಿ.ಜಿ. said...

ನಿಮಗೂ ದಸರೆಯ ಶುಭಾಶಯಗಳು.

Anonymous said...

you write so nicely da

keep writing

:-)

malathi S

ಮನಸು said...

ಗೌತಮ್,ಮಲ್ಲಿಕಾರ್ಜುನ್ ಸರ್,ಮಾಲತಿ
ಎಲ್ಲರಿಗು ಧನ್ಯವಾದಗಳು

ಸುಧೇಶ್ ಶೆಟ್ಟಿ said...

ಮನಸು ಅವರೇ....

ತಡವಾಗಿ ಬ೦ದಿದ್ದಕ್ಕೆ ಕ್ಷಮೆ ಇರಲಿ... ಕವನ ತು೦ಬಾ ಚೆನ್ನಾಗಿದೆ.... "ಒ೦ದು ಮು೦ಜಾವಿನಲಿ..." ಕವನವನ್ನು ನೆನಪಿಸಿತು...

ಸೀತಾರಾಮ. ಕೆ. said...

nice