Saturday, October 24, 2009

ಪ್ರೀತಿಯ ಸ್ನೇಹಿತೆಗೊಂದು ಪತ್ರ ಬೇಗ ತಲುಪಿಸಿಬಿಡಿ ಅವಳ ಹತ್ರ....

ಪ್ರೀತಿಯ ಮನಸು....
ಅಂದಿನಿಂದ ಇಂದಿನವರೆಗೆ ನನಗೆ "ಅತಿ ಆತ್ಮೀಯ" ಸ್ನೇಹಿತರು ಎಂದು ಯಾರು ಇರಲ್ಲಿಲ ಸ್ನೇಹಿತರೆಲ್ಲ ಇದ್ದರೋ ಯಾರು ನನ್ನ ಹೃದಯಕ್ಕೆ ಹತ್ತಿರವಾದವರಲ್ಲ ಏಕೋ ಕಾಣೆ ನಾನು ಸ್ನೇಹ ಗುರುತಿಸುವುದರಲ್ಲಿ ಅಥವಾ ಆಯ್ಕೆ ಮಾಡಿಕೊಳ್ಳುವುದರಲ್ಲಿ ಎಡವಿದ್ದೇನೆನಿಸುತ್ತೆ ಆದರೆ ನೀ ಸಿಕ್ಕ ಮೇಲೆ ಆ ಭಾವನೆಯೆಲ್ಲಾ ಮಾಯವಾಗಿದೆ.

ಮನಸು ನನ್ನ ಅತಿ ಆತ್ಮೀಯ ಸ್ನೇಹಿ ನಿನ್ನೊಟ್ಟಿಗಿನ ಸ್ನೇಹ ಎಂದೊ ಬೇಸರ ಮೂಡಿಸಿಲ್ಲ, ಮನಸು ನೀನು ಮಿತ ಭಾಷಿ, ಮೌನ ಗೌರಿ, ಹಸಿರ ಕಾನನವೆಂದರೆ ನಿನಗೇನೋ ಪ್ರೀತಿ ಅಲ್ಲಲ್ಲ ಮೋಹ... ಕಷ್ಟ ಜೀವಿಗೆ ಸಹಾಯ ಹಸ್ತ ಎಂದೆಂದು ನಿನ್ನದಿರುತ್ತೆ, ಇಂತ ಸ್ನೇಹಿ ನನ್ನೊಟ್ಟಿಗುರುವುದು ಖುಷಿ ಅಲ್ಲದೆ ಮತ್ತೇನು... ಮನಸು ನೀ ಹೇಳುತ್ತಿದ್ದೆ ನೀ ನನ್ನ ಮಾತು ನೀ ಯಾವಾಗಲೂ ಮಾತಾಡು ನಿನ್ನ ಮೌನ ನನಗೆ ಬೇಡ ಮಾತಾಡುತ್ತಿದ್ದರೆ ಚೆನ್ನ.. ದಿನವೆಲ್ಲ ಹರಟುತ್ತಲಿದ್ದರು ಯಾವುದೇ ಬೇಸರವಿಲ್ಲದೇ ಮಾತಾಡುತ್ತಿದ್ದೆ... ಒಮ್ಮೆ ಎಲ್ಲೂ ಹೋಗಿದ್ದೆ ನನಗಾಗಿ ಓಡೋಡಿ ಬಂದು ನಿನ್ನೊಟ್ಟಿಗೆ ಮಾತಾಡಲು ಎಲ್ಲ ಕೆಲಸ ಮುಗಿಸಿ ಓಡಿಬಂದೆ ಗೆಳತಿ ಎಂದಾಗ ನನಗಾದ ಆನಂದ ಹೇಳ ತೀರದು. ನೀ ನಿನ್ನೊಳಗಿಲ್ಲದಿದ್ದರೊ ನಿನ್ನ ಮಾತು ಮಿತಿಯಾಗಿದ್ದರೂ ನನಗಾಗಿ ಎಷ್ಟೋ ಸಲ ಮಾತನಾಡಿರುವೇ ಅಲ್ಲವೆ ಗೆಳತಿ.

ನೀ ಮೈದಡವಿ ನಿನ್ನ ಪ್ರೀತಿ ನೀಡಿ ನನಗೆ ಸಲಹೆಯಿತ್ತ ದಿನವೆಲ್ಲ ನನಗೆ ಖುಷಿ, ನೀ ಬಲು ಮೃದು ನೀ ಬೇಗ ನೊಂದು ಬಿಡುತ್ತೀಯ ನಿನ್ನ ಮನಕೆ ನೋಯಿಸದಿರು ನಗು ನಗುತ್ತಲಿರು ನಿನ್ನ ನಗುವಲ್ಲೇನೋ ಆಕರ್ಷಣೆ ಇದೆ ನಗುವೇ ಚೆನ್ನ.. ನಿನ್ನ ಈ ಕಣ್ಣು ಎಲ್ಲರನು ಸೆಳೆಯುತ್ತೆ ನಿನ್ನ ಕಂಡೊಡೆ ಕಣ್ಣು, ನಗು ಎರಡು ಎಲ್ಲರನ್ನು ಸ್ನೇಹಜೀವಿಯಾಗಿಸುತ್ತೆ... ಹೀಗೆ ನಗುತ್ತಲಿರು ಎಂದೆಲ್ಲ ನನ್ನ ಹೊಗಳುತ್ತಿದ್ದೆ.... ಜೊತೆಗೆ ನಾ ಅಳುಮುಂಜಿ ಎಂದು ನನ್ನ ಅಳುವನ್ನು ಕಡಿಮೆ ಮಾಡಲು ಹೇಳುತ್ತಿದ್ದೆ ಅಲ್ಲವೇ ಮನಸು....
ನೀ ಎಲ್ಲ ವಿಷಯವನ್ನು ನನೂಟ್ಟಿಗೆ ಹೇಳುತ್ತಿದ್ದೆ ನಾನು ನಿನ್ನೂಟ್ಟಿಗೆ ಎಲ್ಲ ವಿಷಯವನ್ನು ಮುಚ್ಚುಮರೆಯಿಲ್ಲದೆ ಹೇಳುತ್ತಿದ್ದೆ.... ನನ್ನ ಸ್ನೇಹಕ್ಕೆ ನೀ ಸೋತಿದ್ದೋ ಎನೋ ಅಂದು ನಿನ್ನ ಕಣ್ಣಾಣೆ ನಿನ್ನ ನಾ ಪ್ರೀತಿಸುವೆ ಸ್ನೇಹಿಯಾಗಿ ಎಂದೇಳಿದ್ದೆ ಇದೆಲ್ಲ ನಿಜವೇ ಎಂದು ನನ್ನ ಕಾಡುತ್ತಿದೆ. ನೀ ನನ್ನ ಪ್ರಾಣ ಸ್ನೇಹಿತೆ, ನೀ ನನ್ನ ಅರಿವು, "ಅರಿವೇ ಗುರು" ಎಂದು ದೊಡ್ಡವರು ಹೇಳಿದ್ದಾರೆ ಅಲ್ಲವೇ ಅಂತೆಯೇ ನೀನು ನನ್ನ ಗುರು ನಿನ್ನ ನಡೆ ನುಡಿ ಎಲ್ಲವೊ ನನಗೆ ಮಾದರಿ...

ಇಷ್ಟು ಕಾಲ ಸ್ನೇಹಿಯಾಗಿದ್ದ ನೀನು ಏಕೆ ಈಗ ನನ್ನೊಡನೆ ಮಾತನಾಡದೆ ಮರೆಯಾಗಿ ಕುಳಿತಿರುವೆ ಮೋಡದ ಮರೆಯ ಚಂದ್ರನಂತೆ ಬೆಳದಿಂಗಳ ಚೆಲ್ಲದೆ ಮುಸುಕು ಮಬ್ಬಿನಲಿ ನನ್ನ ತಳ್ಳಿರುವೆ.. ಮೌನ ದೂಡಿ ಮಂಜು ಮುಸುಕಿದ ಹಾದಿಯಿಂದ ಹೊರಗೊಮ್ಮೆ ಬಾ ಆ ನಿನ್ನ ಮೃದು ಸ್ನೇಹಿತೆ ಬಳಲಿ ಬೆಂಡಾಗಿದ್ದಾಳೆ ಮುದ ನೀಡೋ ಮನಸಿಗೆ ಏಕೀ ಮುಸುಕು ಸ್ನೇಹಿತೆ ನೀ ಬಂದು ಮೃದು ಸ್ನೇಹಿಯನೊಮ್ಮೆ ನಲುಗದಂತೆ ನಲಿವಿನೆಡೆಗೆ ತೆಗೆದುಕೊಂಡೋಗು.

ಇಂತಿ ನಿನ್ನ ಸ್ನೇಹಿತೆ..
ಮೃದು...

24 comments:

ದಿನಕರ ಮೊಗೇರ said...

ತುಂಬಾ ಉತ್ತಮ ಪತ್ರ, ನಿಮ್ಮ ಗೆಳತಿ ಓದಿ, ಓಡಿ ಬರುತ್ತಾಳೆ.... ನೋಡುತ್ತಿರಿ......... ನಿಮ್ಮ ಪದ ಜೋಡಣೆ ತುಂಬಾ ಚೆನ್ನಾಗಿತ್ತು...

shivu.k said...

ಮನಸು ಮೇಡಮ್

ಪತ್ರ ಹೇಗಿದೆಯೆಂದರೆ ನಿಮ್ಮ ಗೆಳತಿ ಎಲ್ಲಿದ್ದರೂ ಬಂದುಬಿಡಬಹುದು ಅನ್ನಿಸುತ್ತೆ...

ಭಾವನೆಗಳು ತುಂಬಿರುವ ಪತ್ರ ತುಂಬಾ ಚೆನ್ನಾಗಿದೆ..

jomon varghese said...

ಪತ್ರ ತುಂಬಾ ಚೆನ್ನಾಗಿದೆ..

jithendra hindumane said...

ಹೌದೂರೀ.. ನಿಮ್ಮ ಬರಹ ನೋಡಿ ನನ್ನ ಕಣ್ಣ ತೇವವಾಯ್ತು...
೪ ದಿನಗಳಿಂದ ನನ್ನ ಗೆಳತಿ ಕೂಡ ನನ್ನ ಜೊತೆ ಮುನಿಸಿಕೊಂಡಿದ್ದಾಳೆ.. ಹೇಗೆ ಸರಿ ಹೋಗುವುದೋ ದೇವರೆ ಬಲ್ಲ.

ನಿಮ್ಮ ಬರಹ ಚೆನ್ನಾಗಿದೆ.

SSK said...

Nice one.....!!!

ಮನಸು said...

ಧನ್ಯವಾದಗಳು ದಿನಕರ್ ಸರ್,
ಖಂಡಿತ ಸ್ನೇಹಿತೆ ಬರುತ್ತಾಳೆನ್ನುತ್ತೀರಾ ಹಹಹ... ಕಾದು ನೋಡುವೆ.

ಮನಸು said...

ಶಿವು ಸರ್ ಓಡಿ ಬರುತ್ತಾಳೆಂದಿದ್ದೀರಿ ನೋಡೋಣಾ ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು

ಜೋಮನ್,
ನೀಮ್ಮ ಆಗಮನ ಬಹಳ ಖುಷಿಕೊಟ್ಟಿದ್ದೆ ಹೀಗೆ ಬರುತ್ತೀರೆಂದು ಭಾವಿಸಿದ್ದೇನೆ.
ಹಾಗೆ ನಿಮ್ಮ ಅನಿಸಿಕೆಗಳಿಗೆ ನನ್ನ ಧನ್ಯವಾದಗಳು

ಮನಸು said...

ಜಿತೇಂದ್ರ ಸರ್,
ನಿಮಗೆ ಸ್ವಾಗತ, ನಿಮ್ಮ ಸ್ನೇಹಿತೆ ಮುನಿಸಿಕೊಳ್ಳಲು ಏಕೆ ಬಿಟ್ಟಿರಿ, ಮುನಿಸು ತರವೇ ಎಂದು ಕೇಳಿ... ನೀವೇ ಮಾತನಾಡಿಸಿ ತಪ್ಪಿದ್ದರೆ ತಿದ್ದಿಕೊಳ್ಳುವೆ ಎಂದೇಳಿ ಸಮಾಧಾನ ಪಡಿಸಿ ಸರಿಹೋಗುವುದು.
ಧನ್ಯವಾದಗಳು ಸದಾ ಬರುತ್ತಲಿರಿ.

SSK
ಧನ್ಯವಾದಗಳು ನಿಮಗೆ.

Ittigecement said...

ಮನಸು....

ತುಂಬಾ ಆಪ್ತವಾಗಿ ಬರೆದಿದ್ದೀರಿ...
ಬಹಳ ಇಷ್ಟವಾಯಿತು...

ನನಗೂ ಇಂಥಹ ಗೆಳೆಯ, ಗೆಳತಿ ಬೇಕು ಎನಿಸುವಷ್ಟು ಸೊಗಸಾಗಿದೆ..

ಇಷ್ಟು ಆಪ್ತವಾಗಿರುವ ಗೆಳತಿಗೆ ನೀವೇ ಈ ಪತ್ರ ತಲುಪಿಸಿ ಬಿಡಿ...

ಇಲ್ಲವೆ....
ನೀವೆ ಅವಳನ್ನು ಅಡ್ಡ ಹಾಕಿ ಕೇಳಿ ಬಿಡಿ...
ಅವಳು ಮತ್ತೆ ನಿಮ್ಮ ಬಳಿ ಓಡಿ ಬರುತ್ತಾಳೆ ನೋಡಿ..

ಚಂದದ ಬರಹಕ್ಕೆ ಅಭಿನಂದನೆಗಳು...

Rajesh Manjunath - ರಾಜೇಶ್ ಮಂಜುನಾಥ್ said...

ಮನಸು ಮೇಡಂ,
ಇನ್ನೂ ನಿಮ್ಮ ಗೆಳತಿ ವಾಪಸ್ ಬರೋದಷ್ಟೇ ಉಳೀತು.... ಚೆನ್ನಾಗಿದೆ ಪತ್ರ.

Unknown said...
This comment has been removed by the author.
ಮನಸು said...

ಪ್ರಕಾಶಣ್ಣ
ಸ್ನೇಹಿತರು ಇರಲೇ ಬೇಕಲ್ಲವೇ ಸ್ನೇಹವಿಲ್ಲದೆ ಜೀವನವಿಲ್ಲ ಎಂದೆನಿಸುತ್ತೆ. ಪತ್ರ ಸ್ನೇಹಿತೆಗೆ ತಲುಪಿರುತ್ತೆಂದು ತಿಳಿಯುತ್ತೇನೆ.

ರಾಜೇಶ್,
ಹಾಗಂತೀರ ಸ್ನೇಹ ವಾಪಸ್ ಬರುತ್ತೆ ಅನ್ನುತ್ತೀರಾ.. ಕಾದು ನೋಡುತ್ತೇನೆ ಮರಳಿಬರಲೆಂಬುದೇ ನನ್ನ ಆಶಯ.
ಧನ್ಯವಾದಗಳು

ಶಿವಪ್ರಕಾಶ್ said...

ಮೃದು ಅವರೇ,
ತಪ್ಪದೆ ಮನಸು ಅವರು Reply ಮಾಡುತ್ತಾರೆ... ನಿಮ್ಮ ಸುಂದರವಾದ ಪತ್ರ ನೋಡಿದ ಮೇಲೆ, ಮರುಪತ್ರ ಬರೆಯದೇ ಇರುತ್ತಾರ..?
ನನಗೆ ನಂಬಿಕೆಯಿದೆ, ತಪ್ಪದೆ ಉತ್ತರ ಬರೆಯುತ್ತಾರೆ. :)

ಸುಧೇಶ್ ಶೆಟ್ಟಿ said...

ಸ್ನೇಹ ಎ೦ದರೆ ಹೀಗಿರಬೇಕಪ್ಪ.... ನಿಮ್ಮ ಗೆಳತಿ ಅದೃಷ್ಟ ಮಾಡಿದ್ದಾರೆ....

ನಿಮ್ಮ ಗೆಳತಿ ನಿಮಗೆ ಉತ್ತರ ಬರೆದರೋ ಇಲ್ಲವೋ ಅ೦ತ ತಿಳಿಸಿ....

Anonymous said...

Dear Mrudumanasu

How lucky your friend is to have a freindship like yours!!!!

:-)

malathi S

ಮನಸು said...

ಶಿವಪ್ರಕಾಶ್,
ಧನ್ಯವಾದಗಳು... ಮನಸು ಪತ್ರ ಬರೆಯುತ್ತಾರೆಂದು ಭಾವಿಸಿದ್ದೇನೆ. ನಿಮ್ಮ ನಂಬಿಕೆ ಹುಸಿಯಾಗದಿರಲೆಂದು.

ಮನಸು said...

ಸುಧೇಶ್,
ನನಗೆ ಸ್ನೇಹ ಎಂದರೇ ನನ್ನದೇ ಆದ ಆಸೆ ಆಕಾಂಕ್ಷೆಯ ನಿಟ್ಟಿನಲ್ಲಿದೆ ನಾನು ಅತಿ ಯಾರನ್ನು ಆತ್ಮೀಯ ಸ್ನೇಹಿತರೆಂದು ತಿಳಿಯುವುದಿಲ್ಲ ಹಾಗು ಆತ್ಮೀಯರಾದರೇ ನಾ ಎಂದು ಬಿಡುವುದಿಲ್ಲ ಸ್ನೇಹದಲ್ಲೇ ಪ್ರೀತಿಸಿಬಿಡುವೇ.

ನೀವೇನೋ ಹೇಳುತ್ತೀರಿ ಅದೃಷ್ಟವಂತರೆಂದು ಅವರು ಅವಳು ಏನು ತಿಳಿದಿರುತ್ತಾಳೋ ಕಾಣೆ..
ಅವರ ಉತ್ತರಕ್ಕಾಗಿ ಕಾದಿರುವೆ, ಬಂದ ಕೂಡಲೇ ತಿಳಿಸುವೆ..

ಧನ್ಯವಾದಗಳು

ಮನಸು said...

Dear Malathi,

hope she is lucky. hahaha

thnx for your comments.

Unknown said...

patra chennagittu..

ಮನಸು said...

ರವಿ,
ಪತ್ರವನ್ನು ಓದಿ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು, ಇತ್ತೀಚೆಗೆ ನಿಮ್ಮ ಬ್ಲಾಗಿನಲ್ಲಿ ಯಾವ ಲೇಖನಗಳು ಬರುತ್ತಿಲ್ಲ ಏಕೆ..?

ದೀಪಸ್ಮಿತಾ said...

ಸ್ನೇಹವೆಂದರೆ ಇದೇ ಅಲ್ಲವೇ, ಜಗಳ ಆಡುವುದು, ದೂರ ಹೋಗುವುದು, ಮತ್ತೆ ಒಂದಾಗುವುದು... ಅದೇ ಒಂಥರಾ ಖುಶಿ ಕೊಡುತ್ತದೆ

ಮನಸು said...

ಧನ್ಯವಾದಗಳು ದೀಪಸ್ಮಿತರವರೆ..
ಸ್ನೇಹದಲ್ಲಿ ಎಲ್ಲವೊ ಇರುತ್ತೆ ಅಲ್ಲವೆ... ಹೊಂದಾಣಿಕೆ ಮುಖ್ಯ ಅಲ್ಲವೆ..?
ಹೀಗೆ ಬರುತ್ತಲಿರಿ...

ಗೌತಮ್ ಹೆಗಡೆ said...

patrada bagge doosra maate illa. patra so nice:)

ಮನಸು said...

ಗೌತಮ್,
ಧನ್ಯವಾದಗಳು ನಿಮ್ಮ ಅನಿಸಿಕೆಗಳು ಹೀಗೇ ಬರುತ್ತಲಿರಲಿ.
ವಂದನೆಗಳು