Monday, January 4, 2010

ಹೊಸ ಪ್ರಯತ್ನ-೨


ಹಮ್ಮು-ಬಿಮ್ಮು

ಕೇಕ್ ಕತ್ತರಿಸಿ ಹುಟ್ಟುಹಬ್ಬ
ಆಚರಣೆ ಬೇಡವೆನಿಸಿತು
ಕಾರಣ
ಅದು ನಮ್ಮ ಸಂಪ್ರದಾಯವಲ್ಲ
ಆದರೂ
ಕೇಕ್ ತಂದು ಕತ್ತರಿಸಿಬಿಟ್ಟೆವು
ಕಾರಣ
ಬೇರೆಯವರು ಆಚರಿಸುತ್ತಾರಲ್ಲ
ನಾನೇನು ಅವರಿಗಿಂತ ಕಮ್ಮಿಯಿಲ್ಲ
ಎಂಬ ಹಮ್ಮು-ಬಿಮ್ಮಿನ ವರಸೆ ತೋರಿಸಿಬಿಡಬೇಕಲ್ಲ.

______ ______

ಮಗು

ಮುದ್ದಾದ ಮಗು
ಬಲು ಚೆಂದ ಅದರ ನಗು
ಮಾತನಾಡಿಸಿಬಿಟ್ಟೆ...
ನಾಲಿಗೆ ತೋರಿತು
ಏನೆಂಬ ಆಶ್ಚರ್ಯ ಮೂಡಿತು
ತಾಯ ನೋಡಿದರೆ
ಅವಳ ಕಣ್ಣಲಿ
ಕಂಬನಿ ತುಂಬಿತ್ತು....
ಕಾರಣ
ಅದು ಮಾತು ಬಾರದ ಮೂಕ ಮಗು....

30 comments:

ಶಿವಪ್ರಕಾಶ್ said...

First one was funny...
Second one was Sad...
Both are good Poems :)

ಮನಸು said...

thank you shivu..

shivu.k said...

ಮೊದಲ ಕವನ ಒಂಥರ ಖುಷಿಯನ್ನು ಮಗುವಿನ ಕವನ ಮನಸ್ಸನ್ನು ಕಲಕಿತು.

Guruprasad said...

ಹೊಸ ಪ್ರಯತ್ನ ತುಂಬ ಚೆನ್ನಾಗಿ ಇದೆ... ಎರಡು ಕವನಗಳು ಇಷ್ಟ ಆಯಿತು,,, ಮುಂದುವರಿಸಿ ನಿಮ್ಮ ಪ್ರಯತ್ನ

sunaath said...

ಮನಸು,
ವಿಭಿನ್ನ ಭಾವನೆಗಳ ಈ ಎರಡೂ ಕವನಗಳು ಸೊಗಸಾಗಿ ಮೂಡಿ ಬಂದಿವೆ.

ದಿನಕರ ಮೊಗೇರ said...

ಮನಸು ಮೇಡಂ,
ಎರಡೂ ವಿಭಿನ್ನ ಕವನಗಳು..... ಎರಡೂ ಚೆನ್ನಾಗಿವೆ.... ಕೊನೆಯದು ಓದಿ ಕಣ್ಣು ತುಂಬಿತು...... ಯಾರ ಫೋಟೋ ಇದು......

ಸಾಗರದಾಚೆಯ ಇಂಚರ said...

ಮನಸು
ತುಂಬಾ ಸುಂದರ ಕವನ
ಎರಡೂ ಹಿಡಿಸಿತು

ಮನಸು said...

ಶಿವು ಸರ್,
ನಿಮ್ಮ ಮೆಚ್ಚುಗೆಗೆ ನಮ್ಮ ಧನ್ಯವಾದಗಳು, ಎರಡುತರನಾದ ಸಂಧರ್ಭಗಳು ನನಗೆ ತಿಳಿಯದಾಗೆ ಹೊಳೆಯಿತು... ಬರೆದುಬಿಟ್ಟೆ.

ಮನಸು said...

ಗುರು,
ನಿಮ್ಮ ಮೆಚ್ಚುಗೆಗೆ ನಮ್ಮ ಧನ್ಯವಾದಗಳು, ನನ್ನ ಹೊಸ ಪ್ರಯತ್ನವನ್ನು ನೀವು ಇಷ್ಟಪಟ್ಟಿದ್ದು ಖುಷಿಯಾಯಿತು... ಖಂಡಿತ ಮುಂದುವರಿಸುವೆ.

ಮನಸು said...

ಸುನಾಥ್ ಸರ್,
ನಿಮ್ಮ ಅನಿಸಿಕೆಗೆ ಧನ್ಯವಾದಗಳು ಜೀವನ ಕಷ್ಟಸುಖದ ಮಿಲನ ಅಲ್ಲವೆ ಅಂತೆಯೇ ಈ ಎರಡು ಪುಟ್ಟ ಸಾಲುಗಳು ಹುಟ್ಟಿಕೊಂಡವು.

ಚುಕ್ಕಿಚಿತ್ತಾರ said...

ಎರಡೂ ಕವನಗಳು ಚೆನ್ನಾಗಿವೆ....ಮುಂದುವರಿಸಿ

ಮನಸು said...

ದಿನಕರ್ ಸರ್,
ವಿಭಿನ ಪ್ರಯತ್ನ , ಕೆಲವು ನಮಗೆ ಗೊತ್ತಿಲ್ಲದೇ ಎಷ್ಟೋ ಇರುತ್ತೆ ಎಂಬುದಕ್ಕೆ ಕೊನೆ ಕವನದ ಪ್ರಯತ್ನ ಅಷ್ಟೆ... ಚೆಂದ ಹಾಗು ಸಂತೋಷದಿಂದ ಇರುವವರ ಹಿಂದೆ ದುಃಖದ ಕರಿನೆರಳು ಇರುತ್ತೆಂದು ತಿಳಿಯಲಷ್ಟೆ ಈ ಹೊಸಪ್ರಯತ್ನ, ಈ ಚಿತ್ರಗಳು ಅಂತರ್ಜಾಲದ ಕೃಪೆ ಧನ್ಯವಾದಗಳು.

ಮನಸು said...

ಗುರುಮೂರ್ತಿ,
ನಿಮ್ಮ ಮೆಚ್ಚುಗೆ ಮತ್ತಷ್ಟು ಹೊಸ ಪ್ರಯತ್ನಕ್ಕೆ ಹುರುಪು ನೀಡಿತ್ತೆ ಧನ್ಯವಾದಗಳು.

ಚುಕ್ಕಿ ಚಿತ್ತಾರ,
ನಿಮ್ಮ ಪ್ರೋತ್ಸಾಹ ಸದಾ ನಮ್ಮೊಂದಿಗಿರಲಿ..ಖಂಡಿತ ಮುಂದುವರಿಸುವೆ. ಧನ್ಯವಾದಗಳು

ಆನಂದ said...

ಭಾವನೆಗಳು ಅದ್ಯಾವಾಗ ಬರಹಗಳಾಗ್ತಾವೋ ಗೊತ್ತಾಗುವುದಿಲ್ಲ. ಎರಡು ಬೇರೆ ಬೇರೆ ವಿಷಯಗಳನ್ನು ಕವನವಾಗಿ ತಂದು ಮುಂದಿಟ್ಟಿದ್ದೀರ. ಎರಡೂ ಚೆನ್ನಾಗಿವೆ.

Nisha said...

Good ones.

ಸೀತಾರಾಮ. ಕೆ. / SITARAM.K said...

nice poems

Unknown said...

ಚೆನ್ನಾಗಿವೆ... ಹೌದು ಈ ಕೇಕ್ ಸಂಸ್ಕೃತಿ ಈಗೀಗ ಜಾಸ್ತಿಯಾಗಿದೆ... ನನಗೂ ತುಂಬಾ ಜನ ಕೇಕ್ ಕಟ್ ಮಾಡಲ್ವೇ ಅಂತ ಕೇಳಿದ್ದಕ್ಕೆ "ನಾನು ಏನಿದ್ರೂ ಜೋಡಿಸೋದಷ್ಟೇ ಕಟ್ ಮಾಡಲ್ಲ" ಅಂತ ಹೇಳಿ ನಕ್ಕಿದ್ದೆ... ಕವನ ಚೆನ್ನಾಗಿದ್ದವು...

Shashi jois said...

ನಿಮ್ಮ ಬ್ಲಾಗಿಗೆ ಇಂದೇ ನನ್ನ ಮೊದಲ ಭೇಟಿ .
ಹೊಸವರ್ಷದ ಹೊಸ ಪ್ರಯತ್ನ ಚೆನ್ನಾಗಿತ್ತು.
ಹಮ್ಮು-ಬಿಮ್ಮಿನ ವರಸೆ ಏನು ಕಮ್ಮಿ ಇರಲಿಲ್ಲ.ಆದರೆ
ಮಗುವಿನ ತಾಯಿ ಕಂಬನಿಗೆ ಮೂಕಳಾದೆ

ಮನಸು said...

ಆನಂದ್,
ನಿಜ ನೀವು ಹೇಳೋದು ಮನದ ಭಾವನೆಯ ಮತ್ತೊಂದು ರೂಪ ಕವನಗಳ ಸಾಲು... ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.

ನಿಶ,
ಧನ್ಯವಾದಗಳು ನಿಮ್ಮ ಮೆಚ್ಚುಗೆಯ ಅನಿಸಿಕೆಗೆ

ಮನಸು said...

ಸೀತಾರಮ್ ಸರ್,
ಧನ್ಯವಾದಗಳು

ರವಿಕಾಂತ್,
ನಿಮ್ಮ ಕೇಕ್ ಜೋಡಿಸೋ ಮಾತು ಕೇಳಿ ನಗು ಬಂತು... ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಹೆಚ್ಚಾಗಿದೆ ಜೊತೆಗೆ ಇತ್ತೀಚೆಗೆ ಕೇಕ್ ಕತ್ತರಿಸುವುದು ಬಹಳಷ್ಟು ಸಮಾರಂಭಗಳಿಗು ಬಂದುಬಿಟ್ಟಿದೆ ಅಲ್ಲವೆ..ಧನ್ಯವಾದಗಳು ನಿಮ್ಮ ಅನಿಸಿಕೆಗೆ.

ಮನಸು said...

ಶಶಿ,
ನಿಮಗೆ ಸ್ವಾಗತ ನಮ್ಮ ಬ್ಲಾಗ್ ಮನೆ ಹಾಗು ಮನಸಿಗೆ... ನಿಮ್ಮ ಬಗ್ಗೆ ಕೇಳಿದ್ದೆ ನನ್ನವರು ಹೇಳುತ್ತಲಿದ್ದರು. ಹಮ್ಮು-ಬಿಮ್ಮು ಕೆಲವೊಮ್ಮೆ ಬೇರೆಬೇರೆ ವರಸೆಗಳಲ್ಲಿ ತೋರಿಸುತ್ತಾರೆ ಅಲ್ಲವೆ...ಇನ್ನು ಆ ಮೂಕಮಗುವಿನ ಬಗ್ಗೆ ಏನು ಹೇಳಲಾಗದು ಈ ಎರಡು ಕವನಗಳು ನಾನೇ ಸೃಷ್ಟಿಸಿ, ಕಲ್ಪಿಸಿಕೊಂಡು ಬರೆದಿದ್ದು...ಅಷ್ಟೆ. ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ ಹೀಗೆ ಬರುತ್ತಲಿರಿ.

Subrahmanya said...

ಅತ್ಯಂತ ಕಡಿಮೆ ಸಾಲುಗಳಲ್ಲಿ ಭಾವನೆಗಳ ಹೊಳೆಯನ್ನೇ ಹರಿಸಿದ್ದೀರಿ...ತುಂಬಾ ಚೆನ್ನಾಗಿದೆ. ಮುಂದುವರಿಸಿ...ವಂದನೆಗಳು

ಮನಸು said...

ಭಾವನೆ ಎಲ್ಲಿ ಹುಟ್ಟೋಲ್ಲ ಹೇಳಿ ಕೆಲವೊಮ್ಮೆ ಒಂದೇ ಸಾಲಿನಲಿ ಹಲವು ಭಾವಗಳು ಮೂಡುತ್ತವೆ ಅಲ್ಲವೆ. ಧನ್ಯವಾದಗಳು

Snow White said...

ಎರಡು ಕವನಗಳು ಇಷ್ಟವಾಯಿತು :) ಹೀಗೆ ಬರೆಯುತ್ತಿರಿ ಮೇಡಂ :)

ಮನಸು said...

thnq snow white..

Ranjita said...

ತುಂಬಾ ಚೆನ್ನಾಗಿದೆ ಮೇಡಂ ..
ಹೊಸತನ್ನ ಕೊಡೋದ್ರಲ್ಲಿ ನೀವು ಎತ್ತಿದ ಕೈ ಅದರಲ್ಲಿ ಮಾತೇ ಇಲ್ಲಾ ..
ಫೋಟೋ ಕೂಡ ಚೆನ್ನಾಗಿದೆ :)

ಮನಸು said...

dhanyavaadagaLu ranjita.

Unknown said...

ಒಳ್ಳೆಯ ಚುಟುಕ ಮಾನವನು ನಾಕೆ ಪದಗಳು ಕಳಕಿದವು...ಧನ್ಯವಾದ ಮನಸು...

ಸುಧೇಶ್ ಶೆಟ್ಟಿ said...

ಹೊಸ ಪ್ರಯತ್ನ ಚೆನ್ನಾಗಿದೆ.... :)

Kirti said...

2nd poem is very touchable to heart.. n main thing i liked ur picture collection.

nimma salahe ishTavaayitu nanna jeevakke hechchu preeti tumbi bhettiyaagtaayiri. nimm blog heasru nanage bahal ishta kanri...