Friday, January 15, 2010

ಬಾನಂಗಳ-ಕಂಕಣ


ಮಕರ ಸಂಕ್ರಮಣ ಮುಗಿಸಿ ತದನಂತರದಿ
ಬಂದಿದೆ ರವಿ-ಚಂದ್ರರ ಸಮಾಗಮ
ರವಿ-ಭುವಿಯ ನಡುವೆ ಶಶಿಯು ಹಾದು
ಮೂಡಿಸುವನು ಸೂರ್ಯಗ್ರಹಣ!!!!

ಸೂರ್ಯಗ್ರಹಣವು ಅಮಾವಾಸ್ಯೆಯಂದು
ಚಂದ್ರಗ್ರಹಣವು ಹುಣ್ಣಿಮೆಯಂದು
ನಿಗದಿತ ಸಮಯಕ್ಕೆ ಸರಿಯಾಗಿ
ಗೋಚರಿಸುವವು ನಿರ್ದಿಷ್ಟ ಸ್ಥಳಗಳಲ್ಲಿ
ಇದು ನಿಸರ್ಗ ಸೃಷ್ಟಿಸುವ ಪ್ರಕ್ರಿಯೆಯೇ ಗ್ರಹಣ !!!

ದಕ್ಷಿಣಆಫ್ರಿಕದಿ ಪ್ರಾರಂಭಿಸಿ
ಹಿಂದೂಮಹಸಾಗರ ದಾಟಿ
ಹಲವಾರು ವರುಷಗಳ ನಂತರದಿ
ದಕ್ಷಿಣ ಭಾರತದ ಆಗಸದಿ ಚಿತ್ತಾರ ಬಿಡಿಸಿ
ರವಿಚಂದ್ರರು ತಣಿಸುವರು ಕಣ್-ಮನ!!!!

ಚಂದಿರನ ಗಾತ್ರವು ನೆಸರನಿಗಿಂತ ಕಿರಿದು
ಗ್ರಹಣದಂದು ರವಿಯ ಮೇಲೆ ಶಶಿಯ ನೆರಳು
ಚಿತ್ರಿಸುವುದು ಬಳೆಯಾಕಾರದ ರಂಗೋಲಿ
ನೋಡಲಾನಂದ ಸುತ್ತಲೂ ಕೆಂಬಣ್ಣದ ಕಂಕಣ!!!

27 comments:

Subrahmanya said...

ಗ್ರಹಣದ ವಿಷಯಕ್ಕೆ ಭಾವ ತುಂಬಿಸಿ ಕವನವನ್ನಾಗಿಸಿದ್ದೀರಿ....ಚೆನ್ನಾಗಿದೆ....

Unknown said...

ಏನೆಂದು ನಾ ಹೇಳಲಿ ??? :-)

ಗ್ರಹಣದ ಬಗ್ಗೆ ಚೆನ್ನಾಗಿ ಬರ್ದಿದ್ದೀರಿ.. ಆದರೆ ಹಿಂದಿನ ಬರಹ-ಕವನಗಳಷ್ಟು ಇದು ಇಷ್ಟವಾಗಲಿಲ್ಲ...

ಚುಕ್ಕಿಚಿತ್ತಾರ said...

nice one...!!

ಸಾಗರದಾಚೆಯ ಇಂಚರ said...

ಮನಸು
ಮತ್ತೊಂದು ಸುಂದರ ಕವನ ಸರಿಯಾದ ಸಮಯಕ್ಕೆ
ಶಬ್ದಗಳ ಜೋಡಣೆ ಸೊಗಸಾಗಿದೆ

ಸೀತಾರಾಮ. ಕೆ. / SITARAM.K said...

ಗ್ರಹಣದ ಮಾಹಿತಿ ಚೆನ್ನಾಗಿದೆ.

Creativity said...

ಅತ್ಹ್ಯುಥಮವಾದ ಕವನ.

ದಿನಕರ ಮೊಗೇರ said...

ಮನಸು ಮೇಡಂ,
ಸಮಯೋಚಿತ ಕವನ..... ಧನ್ಯವಾದಗಳು...

ಮನಸು said...

ಸುಭ್ರಮಣ್ಯ ಭಟ್ ಅವರೆ
ಗ್ರಹಣವೆಂದು ನೀವೆಲ್ಲ ಊಟವೆಲ್ಲ ಬಿತ್ತು ಕೂಳಿತಿದ್ದಿದಿರಿ ಎನ್ನಿಸುತ್ತೆ. ಹೇಗಿತ್ತು ಅಲ್ಲಿನ ಅನುಭವ. ನಮಗೇನು ಇಲ್ಲಿ ಗೊತ್ತಾಗಲೇ ಇಲ್ಲ.

ಮನಸು said...

ರವಿಕಾಂತ್,
ಯಾಕೆ ಊಟ ಏನು ಮಾಡಿಲ್ಲವಾ..? ಏನೆಂದು ಹೇಳಲಿ ಅಂತೀರ...ಈ ಕವನದಲ್ಲಿ ಅಂತ ಭಾವನೆಯೇನಿಲ್ಲ ಅದಕ್ಕೆ ಇಷ್ಟವಾಗಿಲ್ಲವೆನಿಸುತ್ತೆ. ನಿಜ ನಾನು ಒಪ್ಪುತ್ತೆನೆ. ಹಹಹ...
ಧನ್ಯವಾದಗಳು

ಮನಸು said...

ಚುಕ್ಕಿಚಿತ್ತಾರ,
ಧನ್ಯವಾದಗಳು, ನೀವು ಕಂಡ ಗ್ರಹಣವೇಗಿತ್ತು..

ಮನಸು said...

ಗುರು,
ಧನ್ಯವಾದಗಳು, ಗ್ರಹಣ ನಿಮ್ಮ ದೇಶದಲ್ಲೂ ಇತ್ತಾ. ಸೂರ್ಯಚಂದ್ರರ ಚಿತ್ತಾರ ವೀಕ್ಷಣೆಗೆ ಭಾರತದ ಜನರಿಗೆ ಒಳ್ಳೆಯ ಸಮಯ ಸಿಕ್ಕಿದೆ.

ಮನಸು said...

ಸೀತಾರಮ್ ಸರ್, ಕ್ರಿಯೇಟಿವಿಟಿ, ದಿನಕರ್ ಸರ್,
ಎಲ್ಲರಿಗೂ ನನ್ನ ಧನ್ಯವಾದಗಳು. ನಿಮ್ಮೆಲ್ಲರ ಗ್ರಹಣದ ಅನುಭವಗಳನ್ನು ಹಂಚಿಕೊಳ್ಳಿ.

ಮೂರ್ತಿ ಹೊಸಬಾಳೆ. said...

ವಾವ್ ಮಸ್ತಾಗಿದೆ ಕವನ

jithendra hindumane said...

ಸಮಯೋಚಿತ...!

Shashi jois said...

ಗ್ರಹಣದ ಬಗ್ಗೆ ನಿಮ್ಮ ಕವನ ಚೆನ್ನಾಗಿತ್ತು ಮನಸು ಮೇಡಂ.ಇದನ್ನು ನನ್ನ ಮಗಳಿಗೆ ತೋರಿಸಿದೆ ಅವಳಿಗೂ ಇಷ್ಟ ವಾಯ್ತು ರೀ.ನಿಮ್ಮಲ್ಲಿ ಗ್ರಹಣ ಗೋಚರಿಸಿತೆ.?10 ಘಂಟೆಗೆ ಹೊರಟೆ .ಬೈ

shivu.k said...

ಮನಸು ಮೇಡಮ್,
ಗ್ರಹಣವನ್ನು ನಾನು ನೋಡಬಾರದೆಂದು ಹೇಮಾಶ್ರಿ ಮನೆಯಲ್ಲಿ ಕಟ್ಟಿಹಾಕಿದ್ದಳು. ನನ್ನ ರಾಶಿಗೆ ತುಂಬಾ ತೊಂದರೆಯಂತೆ. ಅದು ಅವಳ ನಂಬಿಕೆ. ಟಿವಿಯಲ್ಲಿ ನೋಡಬಹುದಂತೆ. ಅದಕ್ಕೆ ನೋಡಿದೆ. ’
ನೀವು ಅದಕ್ಕೆ ತಕ್ಕಂತೆ ಉತ್ತಮ ಕವನವನ್ನೇ ಬರೆದಿದ್ದೀರಿ..

ತೇಜಸ್ವಿನಿ ಹೆಗಡೆ said...

good one. ಮೊದಲ ನಾಲ್ಕು ಸಾಲುಗಳು ಇಷ್ಟವಾದವು.

Guruprasad said...

ಗ್ರಹಣ ದ ಬಗ್ಗೆ ಕವನನೆ ಬರೆದು ಬಿಟ್ಟ ಇದ್ದಿರಲ್ಲ .....ಚೆನ್ನಾಗಿ ಇದೆ... ಮನಸು...

Raghu said...

ಮನಸು ಅವರೇ ಕವನ ಚೆನ್ನಾಗಿದೆ.. ಸಮಯಕ್ಕೆ ಸರಿಯಾದ ಐಡಿಯಾ....
ನಿಮ್ಮವ,
ರಾಘು.

ಶಿವಪ್ರಕಾಶ್ said...

Nice one akkayya :)

Snow White said...

chennagide madam :)

ಜಲನಯನ said...

ಮನಸು ಮೇಡಂ, ತಡವಾಗಿ ಬಂದೆ...ಕ್ಷಮಿಸಿ...ಇದು ನಿಸರ್ಗದ ನಿಯಮ ಆದರೂ ಪ್ರತಿ ಗ್ರಹಣ ವಿಶೇಷ...ಗ್ರಹಣದ ಪರಿಚಯ ಕವನ ರೂಪದಲ್ಲಿ ಚನ್ನಾಗಿ ಮೂಡಿಬಂದಿದೆ.

ಸುಧೇಶ್ ಶೆಟ್ಟಿ said...

ಛೇ... ನನಗೆ ಗ್ರಹಣ ನೋಡಲು ಆಗಲೇ ಇಲ್ಲ :(

ಚಿತ್ರ ತು೦ಬಾ ಚೆನ್ನಾಗಿದೆ...:)

Kirti said...

nice thinkings and feelings...
main thing i like manasu word more so i visited ur blog.visit once my new blog..

ಮನಸಿನಮನೆಯವನು said...

ನಮಸ್ತೆ.,

ನಾನು ತುಂಬಾನೇ ತಡವಾಗಿ ಬಂದಿದ್ದಕ್ಕೆ ಕ್ಷಮಿಸಿ ..

ಛಾಯಾಪುತ್ರ, ತನ್ನ ತಂದೆಯನ್ನೇ ಹಿಡಿದಿಡುವ ಕ್ರಿಯೆಯನ್ನು ವೈಜ್ಞಾನಿಕವಾಗಿ ಕವನದ ರೀತಿಯಲ್ಲಿ ಚೆನ್ನಾಗಿಯೇ ಹೇಳಿದ್ದೀರಿ..

ನನ್ನ ಮನಸಿನಮನೆಗೊಮ್ಮೆ ಬನ್ನಿ:http://manasinamane.blogspot.com/

ಚಂದಿನ | Chandrashekar said...

ಸುಂದರವಾಗಿದೆ...ಮೇಡಮ್

Parisarapremi said...

ವಿಜ್ಞಾನ ಪಾಠವನ್ನು ಕವಿತೆಯ ಮುಖಾಂತರ ಚೆನ್ನಾಗಿ ಹೇಳಿದ್ದೀರಿ.. :-)