ಬೆಂಗಳೂರಿನ ಒಂದು ಪುಟ್ಟ ಕುಟುಂಬ ಇವರು ಉತ್ತರ ಭಾರತದ ಮೂಲೆಯಿಂದ ಬಂದು ನೆಲೆಸಿ ಬೆಂಗಳೂರಿನವರೇ ಆಗಿಬಿಡುತ್ತಾರೆ. ತಂದೆ ತಾಯಿ ಇಬ್ಬರು ಮಕ್ಕಳು ಪುಟ್ಟ ಸಂಸಾರ. ಸುಂದರ ಸಂಸಾರವೂ ಹೌದು... ಬೆಂಗಳೂರಿಗೆ ಬಂದ ಕೂಡಲೆ ಇಲ್ಲಿ ಅಕ್ಕಪಕ್ಕದವರಿದ್ದವರೆಲ್ಲ ಹಿಂದೂ ಧರ್ಮದವರೇ ಆದ್ದರಿಂದ ಅವರುಗಳು ಅವರಂತೆ ಹಬ್ಬ ಹರಿದಿನ ಆಚರಿಸುವುದರ ಜೊತೆಗೆ, ತಮ್ಮ ಕ್ರೈಸ್ತಧರ್ಮದ ಹೆಸರನ್ನು ಹಿಂದೂ ಧರ್ಮಕ್ಕೆ ತಕ್ಕಂತೆ ಬದಲಿಸಿಕೊಂಡು ಬಿಡುತ್ತಾರೆ. ಅಂದರೆ ಆ ಕುಟುಂಬ ಅಷ್ಟರ ಮಟ್ಟಿಗೆ ಮಾರು ಹೋಗಿರುತ್ತಾರೆ. ಸುತ್ತಮುತ್ತಲ ಜನರ ಪೂಜೆ ಪುನಸ್ಕಾರ ಹಾಗು ಅವರ ಸಂಸಾರದ ಶಾಂತಿ ಎಲ್ಲವೂ ಪೂರಕವಾಗಿತ್ತು ಇವರ ಹೆಸರು ಬದಲಾವಣೆಗೆ.
ತಂದೆ ಮಹದೇವ್, ತಾಯಿ ಮಮತ, ಗಂಡುಮಗ ರಾಜೀವ್, ಮಗಳು ಕ್ಷಮ. ಮಹದೇವ್ ಒಂದು ಸಣ್ಣ ಕಂಪನಿಯಲ್ಲಿ ಕೆಲಸ ಮಾಡುತ್ತಲಿರುತ್ತಾರೆ. ಅವರಿಗೆ ಹುದ್ದೆಯಲ್ಲಿ ಉನ್ನತ ಸ್ಥಾನ ಹಾಗು ತಮ್ಮ ಕೈಕೆಳಗೆ ಕೆಲಸ ಮಾಡುವವರಲ್ಲಿ ಒಳ್ಳೆಯ ಭಾಂದವ್ಯವು ಸಹ ಏನೇ ಕೆಲಸ ಕಾರ್ಯಗಳು ನೆಡೆಯುವಾಗ ಮಹದೇವರ ಹಸ್ತ ಯಾವಾಗಲೂ ಮೀಸಲು. ಮಮತ ಕೂಡ ಅತ್ಯುತ್ತಮ ಗೃಹಿಣಿ ಈಕೆ ತನ್ನ ಗಂಡನ ಪ್ರತಿ ಹೆಜ್ಜೆಗೂ ಮತ್ತೊಂದು ಹೆಜ್ಜೆಯನ್ನಿಟ್ಟು ಅವರಿಗೆ ಸಾತ್ ನೀಡುವಂತಹ ಗುಣ. ಗಂಡನ ಕೆಲಸಗಾರರಿಗೆ ಪ್ರತಿ ವಾರಕೊಮ್ಮೆ ಊಟ ಉಪಚಾರ, ತೀರ ಬಡವರಾದ ಮಕ್ಕಳಿಗೆ ವಿದ್ಯಾಭ್ಯಾಸ ಎಲ್ಲವನ್ನು ಮಾಡುತ್ತಲಿದ್ದರು.
ಇಂತಹ ಪರೋಪಕಾರಿ ಕುಟುಂಬಕ್ಕೆ ಮುತ್ತಿನಂತ ಮಕ್ಕಳು ಮಹದೇವ್ ಅವರ ಮಗ ರಾಜೀವ್ ಇವನು ಸಹ ಅವರಿಗೆ ಹೇಳಿ ಮಾಡಿಸಿದಂತಾ ಮಗ, ಅವನಿನ್ನು ಹತ್ತನೇ ತರಗತಿ ಮುಗಿಸಿ ೧೧ ನೆ ತರಗತಿಯಲ್ಲಿ ಓದುತ್ತಲಿದ್ದಾನೆ, ತನ್ನ ವಿದ್ಯೆಯಲ್ಲೇನು ಕಡಿಮೆ ಇರದೆ ಅತಿ ಉತ್ಸಾಹದಿಂದ ಸಾಗುತ್ತಲಿದ್ದಾನೆ. ಇನ್ನು ಕ್ಷಮ ಬಹಳ ಚುರುಕು, ರೂಪವಂತೆ ಗುಣವಂತೆ ೮ನೇ ತರಗತಿಯಲ್ಲಿ ಓದುತ್ತಲಿದ್ದಾಳೆ ಕನ್ನಡ ಮೀಡಿಯಮ್ ನಲ್ಲೇ ವಿದ್ಯಾಭ್ಯಾಸ ಸಾಗುತ್ತಲಿದೆ, ಇವಳು ಶಾಲೆಗೆ ಮೊದಲು ಯಾರು ಇವಳನ್ನು ಸೋಲಿಸಲಾಗದು ಅಷ್ಟು ಬುದ್ಧಿವಂತೆ ವಿದ್ಯೆಯಲ್ಲಿ ಗುರುಗಳಿಗೆ ಅಷ್ಟೇ ಪ್ರಿಯಳು.
ಈ ಇಬ್ಬರು ಮಕ್ಕಳೊಟ್ಟಿಗೆ ಮಹದೇವ್ ಅವರ ಅಣ್ಣನ ಮಗಳನ್ನು ಸಹ ಸಾಕಿಕೊಂಡಿರುತ್ತಾರೆ ದೀಕ್ಷ ಪ್ರೀತಿ ಪಾತ್ರಳು ಮನೆಮಂದಿಗೆಲ್ಲ ಅವಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಮೇರಿಕೆಗೆ ಕಳಿಸುತ್ತಾರೆ ಅಂತೆಯೇ ಅವಳು, ಅವಳದೇ ಕ್ಷೇತ್ರವಾದ ಎಲೆಕ್ಟ್ರಾನಿಕ್ಸ್ ನಲ್ಲಿ ಮಾಸ್ಟರ್ಸ್ ಪಡೆದು ಬರುತ್ತಾಳೆ ತಂದೆಯ ಕಂಪನಿಯಲ್ಲಿಯೇ ಒಳ್ಳೆ ಕೆಲಸವನ್ನು ಗಿಟ್ಟಿಸುತ್ತಾಳೆ. ಇಂಜಿನಿಯರ್ ಆದ ಅವಳು ಕಂಪನಿಯ ಏಳಿಗೆಗೆ ತಂದೆಯೊಂದಿಗೆ ಕೈಜೋಡಿಸುತ್ತಾಳೆ.
ತಂದೆ ಮಗಳು ಕಚೇರಿಯಲ್ಲಿ ಒಳ್ಳೆ ಹೆಸರು ಮಾಡುತ್ತಾರೆ. ಕೆಲಸದ ಹೆಸರಲ್ಲಿ ಸಾಕು ಮಗಳ ಮದುವೆ ಮಾಡುವ ಹೊಣೆ ಮರೆಯಲಿಲ್ಲ, ಮಹದೇವ್ ಆ ಮುದ್ದು ಮೊಗಕೆ ಬೆಂಗಳೂರು ಬಿಟ್ಟು ದೂರದ ಊರಲ್ಲಿ ಗಂಡು ಹುಡುಕಿ ಮದುವೆಯನ್ನು ಅದ್ಧೂರಿಯಿಂದ ಮಾಡುತ್ತಾರೆ. ಇತ್ತ ಅತ್ತೆ ಮನೆ ಸೇರಿದ ದೀಕ್ಷ ತನ್ನದೇ ಜವಾಬ್ದಾರಿಯಲ್ಲಿ ಮುಳುಗುತ್ತಾಳೆ.
ಮುಂದುವರಿಯುವುದು.....
ಚಿತ್ರ (ಅಂತರ್ಜಾಲ)

23 comments:
munde bareeri.. poorti oadi nanna abhipraaya helteeni:)
munduvaresi .... manasu ...
manasittu...
ನಾನು ಅಷ್ಟೆ.... ಪೂರ್ತಿ ಓದಿಯೇ ಅಭಿಪ್ರಾಯ ತಿಳಿಸಿವುದು....ಈ ಭಾಗದಲ್ಲಿ ಎಲ್ಲಾ ಪಾತ್ರಗಳ ಪರಿಚಯ ಮಾಡಿದ್ದೀರಿ.. ಮು೦ದಿನ ಭಾಗದಲ್ಲಿ ಈ ಪಾತ್ರಗಳು ಏನೆಲ್ಲಾ ಮಾಡುತ್ತವೆ ನೋಡೋಣ... :)
ಅಲ್ಲಲ್ಲಿ ಫುಲ್ ಸ್ಟಾಪ್ ಮರೆತುಬಿಟ್ಟಿದ್ದೀರಿ :)
ಆಹಾ !! ಕವನ ಹೋಗಿ ಕತೆ ಬಂತು..... ಚೆನ್ನಾಗಿ ಇದೆ... ಸಿಂಪಲ್ ಆಗಿ ಪಾತ್ರಗಳನ್ನು ಹೇಳಿದ್ದಿರಿ....ಮುಂದುವರಿಸಿ....ಏನಾಗುತ್ತದೋ....
ಕಥೆಯನ್ನು ಪೂರ ಮಾಡಿರಿ....ನಂತರ ನನ್ನ ಅಭಿಪ್ರಾಯ ತಿಳಿಸುವೆ. ಆದಷ್ಟು ಬೇಗ ಪುರೈಸಿರಿ :) :)
ಪುಟ್ಟ ಕತೆಯನ್ನೇ ನೀವು ಅರ್ಧ ಮಾಡಿದರೆ ಹೇಗೆ?
ಮುಂದಿನ ಭಾಗ ಬೇಗನೇ ಬರಲಿ.
ಮನಸಿಗೆ ಬಂತು ಮನಸು
ಬಿತ್ತು ಕಥೆ ಬರೆಯುವ ಕನಸು
ಕನಸ ನನಸ ಮಾಡುವ ನಿಮ್ಮ ಪ್ರಯತ್ನ ಸಫಲವಾಗಲಿ...ಮುಂದುವರೆಸಿ ಕಥೇನ....
ಸಾಗಲಿ ಮುಂದೆ ನಿಮ್ಮ ಕಥಾ ಪಯಣ...:)
ಮನಸು ಬೆಹೆನ್....
ಶುರುವಾದ್ ಬಹುತ್ ಅಛ್ಛಾ ಹೈ...!
ಆಗೆ ಲಿಖಿಯೆ...
ಹಬ್ಬ ಅರಿದಿನ ಅಲ್ಲ ....ಹಬ್ಬ ಹರಿದಿನ
Good Akkayya... Keep Going :)
ಮನಸು ಮೇಡಂ,
ತುಂಬಾ ಫಾಸ್ಟ್ ಆಗಿ ಹೇಳ್ತಾ ಇದೀರಾ ಅನಿಸಿತು...... ನಿರೂಪಣೆ ಚೆನ್ನಾಗಿದೆ..... ಮುಂದುವರಿಸಿ.......
ಮೇಡಂ,
ಕಥೆ ಆರಂಭ ಚೆನ್ನಾಗಿದೆ, ಹೀಗೆ ಧೀಡೀರ್ ಅಂತ ಸಶೇಷದ ಬಾವುಟ ಹಾರಿಸಿದರೆ ಹೇಗೆ?. ಊಟದ ಮೊದಲ ತುತ್ತು ಬಾಯಿಗೆ ಇಡುತ್ತಿದ್ದಂತೆ ತಟ್ಟೆ ಕಸಿದು ಕೊಂಡಂತಾಯ್ತು. ಕಾಯುತ್ತಿರುತ್ತೇವೆ, ಮುಂದುವರೆಸಿ.
ಮನಸು ಅವರೆ,
ಉತ್ತಮ ಪ್ರಯತ್ನ. ಹೀಗೇ ಮುಂದುವರಿಯಲಿ. ಬರೆದಷ್ಟೂ ಅನುಭವ ಹೆಚ್ಚು ಸಿಗುವುದು. ಹೆಚ್ಚು ಹೆಚ್ಚು ಶಬ್ಬಗಳ ಬಳಕೆಗೆ ಹೆಚ್ಚು ಹೆಚ್ಚು ಓದುವ್ಕೆಯೂ ಸಹಾಯಕವಾಗುವುದು. ಚೆನ್ನಾಗಿದೆ ಪ್ರಾರಂಭ.
ಸಣ್ಣ ಸಲಹೆ : ಅಲ್ಲಲ್ಲಿ ಅಲ್ಪವಿರಾಮ, ಪೂರ್ಣವಿರಾಮಗಳಿದ್ದರೆ ಚೆನ್ನ ಎನಿಸಿತು. ಕೈತಪ್ಪಿಹೋದ ಈ ಅಲ್ಪ ತಪ್ಪುಗಳನ್ನು ಮುಂದೆ ಸರಿಪಡಿಸಿಕೊಂಡರೆ ಮತ್ತೂ ಸುಂದರವಾಗುವುದು. ಇನ್ನು ಧೀಕ್ಷ ಹೆಸರು "ದೀಕ್ಷ" ಎಂದಾಗಬೇಕಿತ್ತೇನೋ ಎಂದೆನಿಸಿತು.
ಪ್ರಯತ್ನ ಖುಶಿಕೊಟ್ಟಿತು. ಮುಂದಿನ ಭಾಗಕ್ಕಾಗಿ ಕಾಯುವೆ.
ಸರಳ ನಿರೂಪಣೆ ಹಿಡಿಸಿತು. ಬೇಗ ಮು೦ದಿನ ಭಾಗ ಬರಲಿ.
ಯಿಪ್ಪಿ.. ಏನಿದು?? ಕಥೆನೇ ಬರ್ದಿಲ್ಲ , ಆಗ್ಲೇ ಮುಂದುವರೆಯುವುದು ಅಂತ ಹಾಕ್ಬಿಟ್ರಲ್ಲ?? ನಿಮ್ಮ ಮೃದು ಮನಸು, ನಮಗೆ ಅರ್ಧ ಕಥೆ ನೀಡುವಷ್ಟು ಕಟ್ಹೊರ ವಾಯಿತೇ?? (ಹಿಹಿಹಿ ಸುಮ್ನೆ ತಮಾಷೆಗೆ) .. ಬೇಗ ಬೇಗ ಬರೀರಿ..
ಮೇಡಮ್,
ಪೀಠಿಕೆಗೆ....ಮುಂದುವರಿಯುವುದು ಅಂದುಬಿಟ್ರಲ್ಲ...ಬೇಗ ಹಾಕಿ..ಕುತೂಹಲವೆನಿಸಿದೆ..
mundina baagakke kayta iddini madam...bega haaki pls :)
ಮನಸು
ಕಥೆ ಚೆನ್ನಾಗಿದೆ
ಮುಂದಿನ ಭಾಗಕ್ಕೆ ಕಾಯುತ್ತ ಇದ್ದೇವೆ
ಮುಂದಿನ ಭಾಗ ಬೇಗ ಬರಲಿ...
ಮುಂದುವರೆಸಿ. :)
'ಮೃದುಮನಸು ' ಅವರೇ..,
ಪೂರ್ಣ ತಿಳಿದು ಅಭಿಪ್ರಾಯ ತಿಳಿಸುವ ತವಕದಲ್ಲಿದ್ದೇನೆ..
ಕೊನೆಯಲ್ಲಿ ವಿಸೊ ಬದಲಾಗಿ ವಿಸೂ: ಇರಲಿ..
ನನ್ನ 'ಮನಸಿನಮನೆ'ಗೆ...:http//manasinamane.blogspot.com
Post a Comment