Saturday, February 27, 2010

ದಾಸೋತ್ಸವದ ದೇಗುಲ

೨೬/೨೬/೨/೨೦೧೦ ರ ಶುಕ್ರವಾರದ ಮುಂಜಾನೆ ೭.೩೦ರ ಸಮಯ ಕುವೈತಿನ ಕಾರ್ಮಲ್ ಸ್ಕೂಲಿನ ಆಡಿಟೋರಿಯಂ ಆವರಣವನ್ನು ಪ್ರವೇಶಿಸುತ್ತಲಿದ್ದಂತೆ ಎಲ್ಲರ ಮನ ಸೆಳೆದದ್ದು ಸುಂದರವಾದ ದೇಗುಲ ದರ್ಶನ. ಅಲ್ಲೇ ಪಕ್ಕದಲ್ಲಿ ವಿಷ್ಣು ಸಹಸ್ರನಾಮ, ಲಲಿತ ಸಹಸ್ರನಾಮ ಪಠಿಸುತ್ತಲಿದ್ದ ಕನ್ನಡ ಕೂಟದ ಸದಸ್ಯರು ಎಲ್ಲರ ಮನಸಿಗೆ ಅಹ್ಲಾದವನ್ನು ನೀಡುತ್ತಲಿತ್ತು. ಸಹಸ್ರನಾಮ ಮುಗಿದ ಕೂಡಲೇ ಎಲ್ಲರೂ ತಮ್ಮ ಉಪಹಾರ ಮುಗಿಸಿ ಕೂಟದ ಮುಂದಿನ ಕಾರ್ಯಕ್ರಮಗಳತ್ತ ಮುಂದಾದರು. ಪ್ರಾರ್ಥನಾ ಗೀತೆಯ ನಂತರ ಅಧ್ಯಕ್ಷರಾದ ಶ್ರೀ ಹರ್ಷರಾವ್ ಹಾಗೂ ಪತ್ನಿ ಶ್ರೀಮತಿ ಕವನರಾವ್ ಅವರ ಅಮೃತ ಹಸ್ತದಿಂದ ಜ್ಯೋತಿ ಬೆಳಗಿಸುವ ಮುಖೇನ ಕಾರ್ಯಕ್ರಮಗಳಿಗೆ ಜಾಲನೆ ನೀಡಿದರು. ಮೊದಲು ವಯೋಮಿತಿ ವಿಭಾಗಗಳಂತೆ ಪುಟ್ಟ ಮಕ್ಕಳ ವೇಷಭೂಷಣ ಸ್ಪರ್ಧೆ ನೆಡೆಯಿತು. ಆನಂತರ ಭಗವದ್ಗೀತೆಯಲ್ಲಿ ಕೃಷ್ಣಾರ್ಜುನರ ಆಯ್ದ ಸಂಭಾಷಣೆಯನ್ನು ಕಣ್ಣ ಮುಂದೆ ಚಿತ್ರಿಸಿದ್ದರು. ಮತ್ತಷ್ಟು ಮಕ್ಕಳು ನಗರ ಸಂಕೀರ್ತನೆಯಂತೆ ದಾಸರ ಹಾಡುಗಳನ್ನು ಹಾಡಿ ನೆರೆದಿದ್ದವರಿಗೆ ಸಂತಸಗೊಳಿಸಿದರು. ಇವೆಲ್ಲದರ ಮಧ್ಯೆ ಕಳೆದ ಸಾಲಿನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಅಭಿನಂದಿಸಿ ಗೌರವಿಸಲಾಯಿತು. ನಂತರದಿ ಸಂಗೀತ ಬಗೆಗಿನ ಪುಟ್ಟ ನಿರೂಪಣೆಯಿಂದ ಶ್ರೀಮತಿ ರಂಗಶ್ರೀ ಅವರು ಎಲ್ಲರಿಗು ಸಂಗೀತದ ಬಗ್ಗೆ ಉತ್ತಮ ಮಾಹಿತಿ ನೀಡಿದರು. ಇವೆಲ್ಲದರೊಟ್ಟಿಗೆ ಹರಿಕಥಾ ಸ್ಪರ್ಧೆಯಲ್ಲಿ ದೊಡ್ಡವರೆಲ್ಲರು ಭಾಗವಹಿಸಿ ವಿಶಿಷ್ಟ ರೀತಿಯಲ್ಲಿ ಎಲ್ಲರ ಗಮನ ಸೆಳೆದರು.


ನಂತರ ಮರಳ ಮಲ್ಲಿಗೆಯ ಸಂಚಿಕೆ ಬಿಡುಗಡೆಯನ್ನು ನೆರೆವೇರಿಸಲಾಯಿತು. ಎಲ್ಲಾ ಕಾರ್ಯಕ್ರಮಗಳು ಮುಗಿದ ನಂತರದಿ ಹೆಂಗಳೆಯರು ಹಾಗೂ ಗಂಡಸರ ಭಜನಾವಳಿ ನಡೆಯುತ್ತಲೆ ದೇವಸ್ಥಾನದಲ್ಲಿ ಶಂಖನಾದ ಮೊಳಗಿತು. ನೆರೆದಿದ್ದ ಸದಸ್ಯರೆಲ್ಲ ಭಕ್ತಿಪರವಷರಾಗಿ ಘಂಟಾನಾದ ಮೊಳಗುತ್ತಿದ್ದೆಡೆಗೆ ಕರ ಮುಗಿದು ದೇವರನ್ನು ಧ್ಯಾನಿಸುತ್ತಲಿದ್ದರು. ಭಕ್ತಿ ಮಂಟಪವನ್ನು ತೊರೆಯಲು ಅಲ್ಲಿದ್ದ ಸದಸ್ಯರಾರಿಗೂ ಮನವಿಲ್ಲದಿದ್ದರೂ ಅಲ್ಲೇ ಇದ್ದ ಮೃಷ್ಟಾನ್ನಭೋಜನದ ಸವಿ ಸವಿಯಾದ ಊಟ ಎಲ್ಲರನ್ನತ್ತ ಸೆಳೆಯಿತು. ಹೋಳಿಗೆ ಊಟ ಸವಿದವರೆಲ್ಲ ಬೀಡವನ್ನು ಸವಿದು ಮನೆಗಳತ್ತ ಮುಖಮಾಡಿದರು.


ಪ್ರಶಾಂತ ದೇಗುಲವನ್ನು ಸೃಷ್ಟಿಸಿ ಭಕ್ತಿ ಮಂಟಪಕ್ಕೊಯ್ದ ಸಾಂಸ್ಕೃತಿಕ ಸಮಿತಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಹಾಗೂ ಈ ಸುಂದರ ಭಕ್ತಿ ಪರಿಸರ ಸೃಷ್ಟಿಸಲು ಸಹಕರಿಸಿದ ಹಲವು ಕಾಣದ ಹಸ್ತಗಳಿಗೂ ನಮ್ಮ ಧನ್ಯವಾದಗಳು.
ಚಿತ್ರಗಳ ಕೃಪೆ: ಯೋಗೀಶ್
ಮತ್ತಷ್ಟು ಫೋಟೋಗಳಿಗೆ ಈ ಲಿಂಕಿಗೆ ಭೇಟಿ ನೀಡಿ.
http://picasaweb.google.com/yogee.tumkur/DAASOTSAVA?feat=directlink

22 comments:

ಚುಕ್ಕಿಚಿತ್ತಾರ said...

ಚ೦ದದ ಬರಹ.. ಫೊಟೋಗಳೂ ಚೆನ್ನಾಗಿ ಬ೦ದಿವೆ.

shivu.k said...

ಮನಸು ಮೇಡಮ್,

ನಿಮ್ಮ ಕಾರ್ಯಕ್ರಮದ ಫೋಟೊಗಳನ್ನು ಸೂಪರ್ ಅನ್ನಿಸಿತು. ದೂರದಲ್ಲಿದ್ದು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ನಿಮ್ಮ ಕನ್ನಡ ಕೂಟಕ್ಕೆ ಅಭಿನಂದನೆಗಳು.

ದಿನಕರ ಮೊಗೇರ said...

ಮನಸು ಮೇಡಂ,
ತುಂಬಾ ಲಕ್ಕಿ ನೀವು... ಯಾಕಂದ್ರೆ ಭಾರತದಲ್ಲಿ ನಶಿಸುತ್ತಿರುವ ಈ ಥರದ ಪುಣ್ಯ ಕಾರ್ಯಗಳನ್ನು ನೀವು ನಡೆಸಿ, ಭಾಗವಹಿಸುತ್ತಿದ್ದೀರಾ..... ಧನ್ಯವಾದ... ಫೋಟೋ ಹಾಕಿ ನಮ್ಮನ್ನೂ ನಿಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಾಗೆಮಾಡಿದ್ದಕ್ಕೆ....

Subrahmanya said...

ಚೆನ್ನಾಗಿದೆ. ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಚಿತ್ರಗಳು.

sunaath said...

ದೂರದ ಕುವೈತಿನಲ್ಲಿ ನಡೆದ ಕನ್ನಡ ಕಾರ್ಯಕ್ರಮಗಳ ಬಗೆಗೆ ಓದಿ ಹರುಷವಾಯಿತು. ‘ಎಲ್ಲಾದರು ಇರು, ಎಂತಾದರು ಇರು, ನೀ ಕನ್ನಡವಾಗಿರು’ ಎನ್ನುವ ಕವಿನುಡಿ ನೆನಪಾಯಿತು.

Guruprasad said...

ಮನಸು,
ದೂರದ ಊರಿನಲ್ಲಿ ಇದ್ದರು ತಮ್ಮ ಆಚಾರ ವಿಚಾರ,,ಗಳನ್ನು ಬಿಡದೆ, ನಡೆಸಿಕೊಂಡು ಬರುವ ಪರಿ ತುಂಬ ಚೆನ್ನಾಗಿ ಇದೆ....
ಒಳ್ಳೆ ಫೋಟೋಗಳು ಹಾಗು ಅದಕ್ಕೆ ತಕ್ಕುದಾದ ಅಚ್ಚುಕಟ್ಟಾದ ಲೇಖನ......
ಧನ್ಯವಾದಗಳು,,,,

ಮನಸು said...

ಚುಕ್ಕಿ ಚಿತ್ತಾರ,
ಧನ್ಯವಾದಗಳು, ನಿಮ್ಮ ಅಭಿಪ್ರಾಯದ ಹುರುಪು ಖುಷಿನೀಡಿದೆ.

ಶಿವು ಸರ್,
ನಾವು ಎಲ್ಲೇ ಇದ್ದರೂ ಕನ್ನಡ ನಾಡಿನ ಉಸಿರು ಹಸಿರಾಗಿಸಬೇಕಲ್ಲವೇ ಅದು ನಮ್ಮ ಆದ್ಯ ಕರ್ತವ್ಯ. ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ.

ಮನಸು said...

ದಿನಕರ್ ಸರ್,
ಹೌದು ನಾವು ಇಂತಹ ಕನ್ನಡ ಕೂಟದ ಸದಸ್ಯರೆಂಬುದು ಹೆಮ್ಮೆಯ ಹಾಗೂ ಅದೃಷ್ಟದ ಸಂಗತಿ, ಧನ್ಯವಾದಗಳು.
ಸುಬ್ರಹ್ಮಣ್ಯ ಭಟ್,
ಕನ್ನಡಿಗರ ಅಭಿರುಚಿಗೆ ಕುವೈಟ್ ಕನ್ನಡ ಕೂಟ ಒಂದು ವೇದಿಕೆಯಾಗಿದೆ ಎಂದು ಹೇಳಲು ಸಂತಸವಾಗುತ್ತದೆ.

ಸುನಾಥ್ ಸರ್,
ನಾವೆಲ್ಲೇ ಇದ್ದರೂ ಕನ್ನಡಿಗರೇ ನಮ್ಮ ಉಸಿರು ಸದಾ ಕನ್ನಡತನವನ್ನು ಬೀರುತ್ತದೆ. ಧನ್ಯವಾದಗಳು

ಮನಸು said...

ಗುರು,
ಧನ್ಯವಾದಗಳು, ನಮ್ಮ ಅಭಿರುಚಿಗೆ ನಿಮ್ಮೆಲ್ಲರ ಪ್ರೋತ್ಸಾಹ ನಮಗೆ ಮತ್ತಷ್ಟು ಹುರುಪನ್ನು ನೀಡುತ್ತದೆ.

ಶರಶ್ಚಂದ್ರ ಕಲ್ಮನೆ said...

ದುಬೈ ಅಲ್ಲಿ ಕನ್ನಡ ಕಾರ್ಯಕ್ರಮದ ಬಗ್ಗೆ ಓದಿ ಸಂತೋಷವಾಯಿತು :) ಬಹುಶ ಭಾರತದಲ್ಲೇ ಇದನ್ನೆಲ್ಲಾ ಆಚರಿಸುವುದನ್ನು ನಾವು ಮರೆಯುತ್ತಿದ್ದೇವೆ... ಚಂದದ ಚಿತ್ರ ಹಾಗು ಲೇಖನ

Ranjita said...

baraha matte photos tumba chenngide :)

ಮನಸು said...

ಶರಶ್ಚಂದ್ರರವರೆ,
ಮನಸಿನ ಮನೆಗೆ ಸ್ವಾಗತ, ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಧನ್ಯವಾದಗಳು.

ರಂಜಿತ ಧನ್ಯವಾದಗಳು.

Rajesh Manjunath - ರಾಜೇಶ್ ಮಂಜುನಾಥ್ said...

ಮೇಡಂ,
ಕನ್ನಡ ಮಲ್ಲಿಗೆಯ ಕಂಪು ಎಲ್ಲೆಲ್ಲು ಹಬ್ಬಿದೆ. ಅಕ್ಷರಗಳು ಸಾಲದು ನಿಮ್ಮೆಲ್ಲರ ಶ್ರಮ ಶ್ಲಾಘಿಸಲು. ಪತ್ರಿಕೆ ಕೂಡ ಮುದ್ದಾಗಿದೆ. ಹೀಗೆ ಮುಂದುವರೆಯಲಿ.

ಸೀತಾರಾಮ. ಕೆ. / SITARAM.K said...

ಕುವೈಟ್ನಲ್ಲಿ ವಿಷ್ನು ಸಹಸ್ರನಾಮ, ಲಲಿತನಾಮಾವಳಿ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ಕೇಳಿ ಸ೦ತೋಷವಾಯಿತು. ಕಾರ್ಯಕ್ರಮದ ಬಗ್ಗೆ ಹ೦ಚಿಕೊ೦ಡದ್ದಕ್ಕೆ ಮತ್ತು ಸು೦ದರ ಚಿತ್ರಗಳಿಗೆ ಧನ್ಯವಾದಗಳು.

ತೇಜಸ್ವಿನಿ ಹೆಗಡೆ said...

ಇಂತಹ ಉತ್ತಮ, ಮಾನಸಿಕ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳು ಬಹು ಅತ್ಯವಶ್ಯಕ. ಮಕ್ಕಳನ್ನು ವಿಶೇಷವಾಗಿ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರಿಗೆ ಒಂದು ಮಾದರಿಯನ್ನು ಕಾಣಿಸಿದ ಸದಸ್ಯರೆಲ್ಲಾ ನಿಜಕ್ಕೂ ಪ್ರಶಂಸನೀಯರು.

ಸುಂದರ ಚಿತ್ರಗಳನ್ನೊಳಗೊಂಡ ಉತ್ತಮ ಲೇಖನ.

ಮನಸು said...

ರಾಜೇಶ್,
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ, ಸಂಸ್ಕೃತಿಯ ಉಳುವಿಕೆ ಶ್ರಮವಲ್ಲ ಇದು ನಮ್ಮ ಕರ್ತವ್ಯ ಅಸ್ಟೆ. ವಂದನೆಗಳು

ಸೀತಾರಾಮ್ ಸರ್,
ಸಹಸ್ರನಾಮಗಳು ವಾರಕ್ಕೊಮ್ಮೆ ನೆಡೆಯುತ್ತಲೇ ಇರುತ್ತೆ ಸರ್ ಇಲ್ಲಿ ಈ ಭಾರಿ ಕೂಟದ ವತಿಯಿಂದ ನೆರೆವೇರಿಸಿದ್ದರು. ಕಾರ್ಯಕ್ರಮಗಳು ಇಷ್ಟವಾಗುವಂತೆ ಭಕ್ತಿ ಪರಿಸರವಾಗಿಬಿಟ್ಟಿತ್ತು.

ಮನಸು said...

ತೇಜಸ್ವಿನಿಯವರೆ,
ಧನ್ಯವಾದಗಳು, ನಿಮ್ಮ ಅನಿಸಿಕೆ ಅಭಿಪ್ರಾಯ ನಮಗೆ ಸಂತಸ ತಂದಿದೆ ಜೊತೆಗೆ ಸ್ಪೂರ್ತಿಯೂ ನೀಡಿದೆ. ವಂದನೆಗಳು

ಸಾಗರದಾಚೆಯ ಇಂಚರ said...

ಮನಸು
ತುಂಬಾ ಚೆಂದದ ಬರಹ
ಫೋಟೋಗಳೂ ತುಂಬಾ ಚೆನ್ನಾಗಿ ಬಂದಿವೆ
ಅಲ್ಲಿನ ಕನ್ನಡ ಪ್ರೇಮಕ್ಕೆ ಸಲಾಂ

Shashi jois said...

ನಿಮ್ಮ ಅಂದದ ಲೇಖನ ಮತ್ತು ಸುಂದರ ಚಿತ್ರಗಳ ಚಿತ್ರಣ ಮನಮುಟ್ಟುವ ಹಾಗಿತ್ತು.
ಪುಟಾಣಿ ಮಕ್ಕಳ ವೇಷ-ಭೂಷಣ ನೋಡಿ ಆನಂದವಾಯಿತು.
ಭಾಗವಹಿಸಿದವರೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.

Snow White said...

nice pics..namma jothe hanchikondidakke dhanyavadagalu madam .. :)

ಸುಧೇಶ್ ಶೆಟ್ಟಿ said...

ಚೆನ್ನಾಗಿದೆ ಈ ಕಾರ್ಯಕ್ರಮ... ಕುಸುಮ ಕೋಮಲೆ ಯಾವಾಗ ಬರುತ್ತದೆ.. :)

ಜಲನಯನ said...

ಕಾರಣಾಂತರಗಳಿಂದ ನಾನು ಬರದೇ ಹೋದರೂ...ನಿಮ್ಮ ಚಿತ್ರ ಮತ್ತು ವಿವರಣೆ....ನಾನು ಅಲ್ಲಿದ್ದೆನೇನೋ ಎನಿಸುವಂತೆ ಮಾಡಿದೆ...ಧನ್ಯವಾದ ನನ್ನ ಆ ಕೊರತೆ ನೀಗಿಸಿದ್ದಕ್ಕೆ..