ಅಂದು ಶುಕ್ರವಾರ (೧೬-೪-೧೦) ಸುಮಾರು ಸಂಜೆ ೪ ಗಂಟೆ ಇರಬಹುದು, ವೇದಿಕೆ ಪ್ರತಿಭೆಗಳ ಹುಡುಕಾಟಕ್ಕೆ ಸಜ್ಜಾಗಿತ್ತು.... ಅತ್ತಕಡೆಯಿಂದ ಸಾಲು ಸಾಲಾದ ಇರುವೆಗಳಂತೆ ಜನರು ಬರುತ್ತಲಿದ್ದರು.....ಈ ಜನರಾಗಮನ ಕುವೈತ್ ಕನ್ನಡ ಕೂಟದ ಕಾರ್ಯಕಾರಿಸಮಿತಿಯ ಸಹಯೋಗದೊಂದಿಗೆ ಮರಳ ಮಲ್ಲಿಗೆ ಮತ್ತು ವೆಬ್ ಸಮಿತಿಯ ವತಿಯಿಂದ ಪುಟ್ಟ ಸಮಾರಂಭವನ್ನು ಏರ್ಪಡಿಸಿದ್ದರು. ಈ ವೇದಿಕೆ ಕನ್ನಡ ಕೂಟದ ಪ್ರತಿಭೆಗಳ ಹುಡುಕಾಟದಲ್ಲಿ ತೊಡಗಿದ್ದಂತು ಖಂಡಿತಾ ನಿಜ.......
ಕೂಟದ ಸಾಂಸ್ಕೃತಿಕ ಕಾರ್ಯದರ್ಶಿ ಅವರಿಂದ ಸ್ವಾಗತ ಭಾಷಣ ಪ್ರಾರಂಭವಾಗಿ ಕೂಟದ ಗೀತೆಯೊಂದಿಗೆ ಶುಭಕೋರಿ ಅಧ್ಯಕ್ಷದಂಪತಿಗಳೊಂದಿಗೆ ಪ್ರತಿಭಾ ಕಾರಂಜಿಯ ಜ್ಯೋತಿ ಬೆಳಗಿತು. ನಂತರದಿ ಅಧ್ಯಕ್ಷರ ಹಿತನುಡಿಯೊಂದಿಗೆ ಸಾಂಸ್ಕೃತಿಕಕಾರ್ಯದರ್ಶಿಗಳು ಮರಳ ಮಲ್ಲಿಗೆ ಮತ್ತು ವೆಬ್ ಸಮಿತಿಯವರ ಮುಖೇನ ಸಮಾರಂಭದ ಮುಂದಿನ ಕಾರ್ಯಕ್ರಮಗಳಿಗೆ ಚಾಲನೆನೀಡಲು ಅನುವು ಮಾಡಿದರು......
ಕೂಟದ ಸಾಂಸ್ಕೃತಿಕ ಕಾರ್ಯದರ್ಶಿ ಅವರಿಂದ ಸ್ವಾಗತ ಭಾಷಣ ಪ್ರಾರಂಭವಾಗಿ ಕೂಟದ ಗೀತೆಯೊಂದಿಗೆ ಶುಭಕೋರಿ ಅಧ್ಯಕ್ಷದಂಪತಿಗಳೊಂದಿಗೆ ಪ್ರತಿಭಾ ಕಾರಂಜಿಯ ಜ್ಯೋತಿ ಬೆಳಗಿತು. ನಂತರದಿ ಅಧ್ಯಕ್ಷರ ಹಿತನುಡಿಯೊಂದಿಗೆ ಸಾಂಸ್ಕೃತಿಕಕಾರ್ಯದರ್ಶಿಗಳು ಮರಳ ಮಲ್ಲಿಗೆ ಮತ್ತು ವೆಬ್ ಸಮಿತಿಯವರ ಮುಖೇನ ಸಮಾರಂಭದ ಮುಂದಿನ ಕಾರ್ಯಕ್ರಮಗಳಿಗೆ ಚಾಲನೆನೀಡಲು ಅನುವು ಮಾಡಿದರು......
ನಂತರದಿ ಸಮಿತಿಯ ಸಂಚಾಲಕರಿಂದ ಕಾರ್ಯಕ್ರಮಗಳ ವಿವರದೊಂದಿಗೆ ಪ್ರಾರಂಭಿಸಿ, ಮರಳ ಮಲ್ಲಿಗೆ ಸಮಿತಿ ಬಳಗದಸದಸ್ಯೆಯಿಂದ ಮುದ್ದು ಕೆ.ಕೆ.ಕೆ ನಿರ್ವಹಣೆಯತ್ತ ಮುನ್ನುಗಿತು.... ಆ ಪುಟ್ಟ ಕಂದಮ್ಮಗಳು ಪುಟಾಣಿ ಹೆಜ್ಜೆಯನಿಡುತ್ತಾ ಎಲ್ಲರತ್ತ ಗಮನಸೆಳೆಯುತ್ತ ಅಲ್ಲೇ ಇದ್ದ ಆಟಿಕೆಗಳಲ್ಲಿ ಕುಣಿಯುತ್ತ ವೇದಿಕೆಯನ್ನು ತುಂಬಿ ಬಿಟ್ಟಿದ್ದರು... ಇದನ್ನೆಲ್ಲಾ ವೀಕ್ಷಿಸಿದ ತೀರ್ಪುಗಾರರಂತುತೀರ್ಪುನೀಡಲು ಸ್ವಲ್ಪ ಸಮಯ ಯೋಚಿಸುವಂತಾಯಿತು....ಪುಟ್ಟ ಹೆಜ್ಜೆ ಕಂಡು ಮುಂದೆ ಸಾಗುತ್ತಲಿದ್ದಂತೆ ಕಂಡಿದ್ದು ದಂಪತಿಗಳುಅವರವರ ಗಂಡ ಹೆಂಡತಿಯರ ಹುಡುಕಾಟ ಯಾಕೆ ಜೊತೆನಲ್ಲಿ ಬಂದಿರಲಿಲ್ಲವಾ ಅಂತೀರಾ ಹಾಗಲ್ಲ ಜೊತೆಯಲ್ಲಿ ಬಂದವರು ಅವರಸ್ನೇಹಿತರೊಟ್ಟಿಗೆ ಕೂತುಬಿಟ್ಟಿದ್ದರು....ದಂಪತಿಗಳಿಗೆ ಪರೀಕ್ಷೆ ಇತ್ತು ನೋಡಿ ಕನ್ನಡದಲ್ಲಿ ಬರಿಬೇಕು ಕೆಲವು ಪ್ರಶ್ನೆ ಹೆಂಡತಿಗೆ ಗೊತ್ತಿಲ್ಲ, ಕೆಲವು ಗಂಡಂದಿರಿಗೆ ಗೊತ್ತಿಲ್ಲ ಒಬ್ಬರಿಗೊಬ್ಬರು ಯೋಚಿಸಿ ಬರೆಯಲು ಅಷ್ಟೆ ಪೆನ್ನು ಪೇಪರ್ ತಗೊಂಡು ಸುಮಾರು ೮೨ದಂಪತಿಗಳು ಉತ್ತರಿಸಿದರು........ಎಲ್ಲರಿಗೂ ಸಂತಸ ಕೂಡ...... ಇವೆಲ್ಲ ಮುಗಿದ ನಂತರ ನೋಡಿ ಮಿಕ್ಕುಳಿದ ಆಯಾವಯೋಮಿತಿಗೆ ತಕ್ಕಂತೆ ಕೆಲವು ಮಕ್ಕಳು ಅಪ್ಪ ಅಮ್ಮನೇನಾ ಕನ್ನಡ ಬರೆಯೋದು ನಾವು ಕನ್ನಡ ಪದಜೋಡಿಸ್ತೀನಿ ಅಂತಹೋದರು, ಇನ್ನು ಕೆಲವು ಮಕ್ಕಳು ನಮ್ಮದೇ ಶೈಲಿಯಲ್ಲಿ ಗ್ರೀಟಿಂಗ್ ಕಾರ್ಡ್ ಮಾಡಿ ತೋರುಸ್ತೀವಿ ನೋಡಿ ಅಂತ ಹೊರಟರು.... ಇನ್ನು ಸ್ವಲ್ಪ ದೊಡ್ಡ ಮಕ್ಕಳು ಇದಾರಲ್ಲಾ ಅವರು ಅಯ್ಯೋ ಇವರೆಲ್ಲ ಸುಮಾರಾದ ಸ್ಪರ್ಧೆಯಲ್ಲಿದ್ದಾರೆ ನಾವು ರಸವತ್ತಾಗಿರೋರಸಪ್ರಶ್ನೆಗೆ ಉತ್ತರ ಬರೆದುಕೊಂಡು ಫೈನಲ್ಸ್ ಗೆ ಬರ್ತೀವಿ ಕಾದು ನೋಡಿ ಅಂತ ಆಯಾ ಸ್ಪರ್ಧಾ ಸ್ಥಳಕ್ಕೆ ಹೊರಟೇ ಬಿಟ್ಟರು. ಇನ್ನುಅಮ್ಮಂದಿರು ಮಕ್ಕಳು ಹೊರಗಡೆ ಹೊರಟರೆ ನಾವು ಏನು ಕಡಿಮೆ ಇಲ್ಲ ಅಂತ ರಂಗೋಲಿ ಹಾಕಲಿಕ್ಕೆ ಹೊರಟರು ಅಲ್ಲಿ ಹೋದರೆ ನೀರೆಯರಿಗೆ ಕಾಂಪಿಟ್ ಮಾಡೋಕೆ ರಂಗೋಲಿ ಹಿಡಿದು ಧೀರರೂ ಸಹ ನಿಂತಿದ್ದರು.........
ಅಲ್ಲಿ ಅಪ್ಪ ಅಮ್ಮ ಅಣ್ಣ, ಅಕ್ಕಂದಿರು ಪರೀಕ್ಷೆಗಳಿಗೆ ಹೊರಟರೆ ಇತ್ತ ಗರಿಗೆದರಿ ಹಕ್ಕಿಗಳಂತೆ ಹಾರಾಡುವ ಆ ಪುಟ್ಟ ಪುಟಾಣಿಗಳ ತೊದಲು ನುಡಿಯಲ್ಲಿ ಕನ್ನಡದ ಹಾಡುಗಳು ಸರಾಗವಾಗಿ ಹಾಡಿ ಎಲ್ಲರೆದು ನಾಯಿಮರಿ, ಆನೆ, ಚಂದಮಾಮ, ರೊಟ್ಟಿಯ ಕಿಟ್ಟ, ಒಂದು ಎರಡು, ಬಾಳೆ ಎಲೆ ಎಲ್ಲವನ್ನು ಆ ವೇದಿಕೆಗೆ ತಂದೇ ಬಿಟ್ಟಿದ್ದರು ನೋಡಿ ನಮ್ಮೆಲ್ಲರಿಗೂ ಕಷ್ಟವಾಗಿತ್ತು ಕೂಡ ಹೇಗೆ ಇವರನ್ನೇಲ್ಲ ಆ ಪುಟ್ಟವೇದಿಕೆಯಲ್ಲಿ ಕೂರಿಸೋದಾ ಹೇಳಿ..... ನಮಗೆ ಸ್ವಲ್ಪ ಭಯ ಆಯ್ತು ಏನಪ್ಪಾ ಅಷ್ಟು ದೊಡ್ಡ ಆನೆ ಬಂದರೇಗೆ ಅಂತಾ..........ಬಂದಿದ್ದ ಕಾಡು, ಊರಿನ ಪ್ರಾಣಿ, ಪಕ್ಷಿ ಎಲ್ಲವನ್ನು ಕಳಿಸೋಸ್ಟರಲ್ಲಿ ಹಲವು ಸ್ಪರ್ಧೆ ಮುಗಿಸಿ ಎಲ್ಲರೂ ವೇದಿಕೆ ಸೇರಿದರು.
ಆಮೇಲೆ ಬಂದರು ನೋಡಿ ಒಂದು ಪುಟಾಣಿ ಕೃಷ್ಣ ಯಶೋದೆ ಇಬ್ಬರ ಪಾತ್ರ ನಾನೇ ಮಾಡ್ತೀನಿ ಅಂತ, ಮತ್ತೊಂದು ಬಬ್ರುವಾಹನ ಅರ್ಜುನರ ಸಂಭಾಷಣೆ, ಕಿತ್ತೂರು ರಾಣಿ ಇಂಗ್ಲೀಷರ ಜೊತೆ ಮಾತುಕತೆ.... ಅಮ್ಮ ಮಗಳ ನಡುವೆ ಸಂಭಾಷಣೆ........ಟಿವಿ ಧಾರಾವಹಿಯ ಪಾರ್ವತಿ, ಸುಬ್ಬು, ರೇಡಿಯೋ ನಾದದ ವೇದ, ಅಪ್ಪ ಮೊಮ್ಮಗನ ಪಾತ್ರ, ಅಜ್ಜ ತಾತನ ಇಂಗ್ಲೀಷ್ ಮಾತು.....ಹೀಗೆ ಎಷ್ಟೊಂದು ಅಂತೀರಾ (ಕೆಲವು ಮರೆತೆ ಬಿಟ್ಟಿರುವೆ ನೋಡಿ) ಏಕಪಾತ್ರಾಭಿನಯ ಮಾಡಿ ತೋರಿಸಿದ್ರು ಗೊತ್ತಾ........
ಪಾತ್ರಗಳನ್ನ ನೋಡಿದ್ವಾ ಆಮೇಲೆ ಅದೆಲ್ಲಿತ್ತೋ ಗುಂಪುಗಳು ಬಂದರು ನೋಡಿ ಮಾತಿನಚಕಮಕಿಗೆ ಎಲ್ಲಾ ಹೆಣ್ಣು ಕೆಲಸಕ್ಕೆ ಹೋಗಬೇಕು ಗಂಡು ಮನೆನಲ್ಲಿರಬೇಕು ಅಂತ ಕೆಲವರು ಅದಕ್ಕೆ ವಿರುದ್ಧ ಹೀಗೆ ಜಟಾಪಟಿ ನೆಡಿದು ಕೊನೆಗೆ ನೋಡಿ ಸ್ವಾಮಿ ನಾವಿರೋದೆ ಹೀಗೆ ಅಂತ ಹೇಳಿದ್ರು........
ಇವರನ್ನೆಲ್ಲ ನೋಡಿದಮೇಲೆ ಅದೆಲ್ಲಿದ್ದರೋ ಕವಿಗಳು ಸಾಲುಸಾಲಾಗಿ ವೇದಿಕೆಯನ್ನು ಅಲಂಕರಿಸಿಬಿಟ್ಟರು.... ಪುಟ್ಟ ಮಕ್ಕಳಿಂದಿಡಿದುದೊಡ್ಡವರೆಲ್ಲ ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ತಮ್ಮ ಕವನವಾಚನ ನೀಡಿ ನೆರೆದಿದ್ದವರೆಲ್ಲರಿಗೂ ಖುಷಿ ನೀಡಿದರು.
ಕವಿಗಳನ್ನು ಕಳಿಸಿ ನಂತರ ಬಂದವರೇ ರಸಪ್ರಶ್ನೆಗೆ ಉತ್ತರಿಸುವ ಚಿಣ್ಣರು ವೇದಿಕೆಯಲ್ಲಿ ನೀರವ ಮೌನ ಎಲ್ಲರೂ ಪ್ರಶ್ನೆಗಳತ್ತ ಗಮನಕೆಲವರಿಗೆ ಪ್ರಶ್ನೆಗಳಿಗೆ ಉತ್ತರ ತಿಳಿದಿರಲಿಲ್ಲ ಕೆಲವರಿಗೆ ತಿಳಿದಿತ್ತು ..........ತಿಳಿದಿಲ್ಲದವರಿಗೆ ಯೋಚಿಸಲೂ ಬಿಡದೆ ನೆರೆದಿದ್ದ ಜನಗಳಲ್ಲಿಯಾರಾದರೊಬ್ಬರು ತಟ್ ಅಂತ ಉತ್ತರ ಹೇಳೋರು ನೋಡಿ.......ಅವರಿಗೂ ಖುಷಿ ಅಲ್ವಾ ನಮ್ಗೆ ಉತ್ತರಗೊತ್ತಿದೆ ಅಂತ ಹೇಳೇಬಿಡೋರು.
ಸೀರಿಯಸ್ ಕ್ವಿಜ್ ಮುಗಿಸಿ ಸತಿ-ಪತಿಗಳು ಮೊದಲೇ ಪರೀಕ್ಷೆ ಬರೆದಿದ್ದರಲ್ಲ ಅವರಲ್ಲಿ ಡಿಸ್ಟಿಂಗ್ಷನ್ ತಗೊಂಡು ಬಂದ ೫ ಜೋಡಿಗಳುವೇದಿಕೆಯನ್ನೇರಿದರು. ಈ ಸಪ್ತಪದಿ ತುಳಿದ ಜೋಡಿಗಳು ಉತ್ತರಿಸಿ, ಅದೇನೆನೋ ಹಾವಭಾವ ಮಾಡಿ ಗಂಡ ಹೆಂಡತಿಗೆ, ಹೆಂಡತಿಗಂಡನಿಗೆ ಸನ್ನೆಗಳನ್ನು ಮಾಡಿ ಗಾದೆ ಹೇಳಿಸಿ.... ಉತ್ತರಿಸದ ಗಂಡನ ಮೇಲೆ ಸಿಡುಕಿ ಸೆಟೆದು ಹೋಗಿ ಕುಳಿತರು........ಆನಂತರ ಹೆಂಡತಿ ಸಮಾಧಾನ ಮಾಡೋಕ್ಕೆಂತಾ ಒಂದು ಡಾನ್ಸ್ ನ ಝಲಕ್ ಇತ್ತು ನೋಡಿ ಎಂತಾ ಸ್ಟೆಪ್ ಅಂತೀರ ಕೆಲವರನ್ನುಬಾಲಿವುಡ್, ಹಾಲಿವುಡ್ ಸಿನಿಮಾಗಳಲ್ಲಿ ನೃತ್ಯ ನಿರ್ದೇಶನಕ್ಕೂ ಕರೆದರು.... ಇನ್ನು ಕೆಲವರು ಅಪ್ಪಾಳೆ ತಿಪ್ಪಾಳೆ ಅಂತಾ ನಾವು ಊರಲ್ಲಿ ಆಡ್ತಾ ಇದ್ದವಲ್ಲಾ ಹಾಗೆ ಕುಣಿದರು ಗೊತ್ತಾ........ಎಲ್ಲರು ನಕ್ಕು ನಕ್ಕು ಹೊಟ್ಟೆ ಹುಣ್ಣು ಮಾಡಿಕೊಂಡರು........ಗೆದ್ದವರುನಾವೇ ಅಪರೂಪದ ಜೋಡಿಗಳು ಎಂದು ಬೀಗಿದರು.......
ವೇದಿಕೆ ಖಾಲಿ ಮಾಡಿಸೋಕೆ ಕಷ್ಟ ಆಯ್ತು ನೋಡಿ ಯಾಕೆ ಅಂತೀರಾ ಮತ್ತೆ ಆ ಸಪ್ತಪದಿ ಜೋಡಿಗಳು ಕುಣಿತ ಬಿಟ್ಟು ಬರೋಲ್ಲಾಅಂತಾರೆ ಆದರೆ ಏನು ಮಾಡೋದು ಗಂಟೆಗಳ ಮುಳ್ಳು ಮುಂದೆ ಹೋಗ್ತಾನೆ ಇತ್ತು ಅದಕ್ಕೆ ಅವರನ್ನ ವೇದಿಕೆಯಿಂದಕೆಳಗಿಳಿಸಿದೆವು........ಆನಂತರ ಕೂಟದ ಹಿರಿಯರಿಂದ ವೈಶಾಖ ಮಾಸದ ಸಂಚಿಕೆ ಬಿಡುಗಡೆ, ಮಾಜಿ ಅಧ್ಯಕ್ಷರ ಹಿತನುಡಿ, ನಂತರಅದೇನೋ ಬಾಗಿಲ ಬಹುಮಾನವನ್ನ ವೇದಿಕೆ ಮೇಲೆ ಕೊಟ್ಟರಪ್ಪಾ........ಹಹಹ.....ತದನಂತ ಸ್ಪರ್ಧಾ ವಿಜೇತರಿಗೆಬಹುಮಾನ......ಇದಿಷ್ಟು ನೆಡೆಯುತ್ತಲಿದ್ದಂತೆ ಖಜಾಂಜಿ ಯವರಿಂದ ವಂದನಾರ್ಪಣೆ ಕೇಳೋಕ್ಕೂ ಆಗದೆ ಸುಸ್ತಾಗಿದ್ದ ಜನಹೊಟ್ಟೆಯತ್ತ ಗಮನವರಿಸಿ ಊಟದತ್ತ ನಡೆದರು............
ಇವಿಷ್ಟು ಕಾರ್ಯಕ್ರಮ ಕಂಡ ಕಂಗಳು ಖುಷಿಯಾದವು.........ಈ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದ ಎಲ್ಲಾ ಕಾರ್ಯಕಾರಿ ಸಮಿತಿ, ಉಪ ಸಮಿತಿಗಳು, ಮೇಲ್ವಿಚಾರಕರು, ಮಕ್ಕಳು, ಹಿರಿಯರು, ಅತಿಥಿಗಳು, ತೀರ್ಪುಗಾರರು, ಹಲವು ಕಾಣದ ಹಸ್ತಗಳು, ಧ್ವನಿವರ್ಧಕಕ್ಕೆ ಸಹಕಾರಿಸಿದವರು, ಕ್ಯಾಮರಾ ಕಣ್ಣಿಗೂ ಹಾಗೂ ಕ್ಯಾಮಾರಾ ಕ್ಲಿಕ್ಕಿಸಿದವರಿಗೂ, ಸವಿ ಊಟ ನೀಡಿದವರಿಗೂಎಲ್ಲರಿಗೂ ಹಾಗೂ ಮರಳ ಮಲ್ಲಿಗೆ ಮತ್ತು ವೆಬ್ ಸಮಿತಿ ಬಳಗದ ಸದಸ್ಯರೆಲ್ಲರಿಗೂ ಪ್ರೀತಿಪೂರ್ವಕ ಧನ್ಯವಾದಗಳು.
ಪೋಟೋಗಳಿಗೆ ಇಲ್ಲಿ ಕ್ಲಿಕ್ಕಿಸಿ : http://picasaweb.google.com/yogee.tumkur/PrathibaKaranji?feat=directlink#
ನಮ್ಮ ವೆಬ್ ಸೈಟಿಗೆ ಭೇಟಿ ನೀಡಿ ಅಂತೆಯೇ ಮರಳ ಮಲ್ಲಿಗೆ ಮಾಸ ಪತ್ರಿಕೆಗಳನ್ನು ಓದಿ ನಿಮ್ಮ ಅನಿಸಿಕೆ ತಿಳಿಸಿ.
http://www.kuwaitkannadakoota.org/
ವಂದನೆಗಳು
ಮನಸು