Monday, April 12, 2010

ಕುಸುಮ ಕೋಮಲೆ-೫

ಕುಸುಮ ಕೋಮಲೆ- ಸುಕಾಂತ್ಯದೊಂದಿಗೆ

ಸುಮಾರು ವರುಷಗಳೇ ಕಳೆದರೂ ಇಬ್ಬರ ಭೇಟಿ ಆಗಲೇ ಇಲ್ಲ ಇತ್ತ ಕ್ಷಮ ತನ್ನ ಹೆಚ್ಚಿನ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾಳೆ. ಓದುವ ಮನಸಿಗೂ ಹುಚ್ಚು ಹಿಡಿಸೋ ಪ್ರೀತಿ ಆಗಾಗ ಇವಳ ಕಣ್ಣ ಮುಂದೆ ಹಳೆಯ ನೆನಪುಗಳ ಕನ್ನಡಿ ಹಿಡಿದಂತೆ ಬಂದು ಹೋಗುತ್ತಲಿರುತ್ತದೆ..........

ಮನೆಯಲ್ಲಿ ಯಾವ ಭಾವನೆಗಳನ್ನೂ ತೋರ್ಪಡಿಸದೆ ತನ್ನದೇ ಪ್ರಪಂಚದಲ್ಲಿ ಏಕಾಂಗಿ ಒಡನಾಟದಲ್ಲಿ ಬಿದ್ದುಬಿಟ್ಟಿರುತ್ತಾಳೆ. ಮನಸಿನ ಒಲವಿಗೆ ಮುನಿಸಿದೆ ಆದರೆ ಪ್ರೀತಿಯ ಬೇರು ಒಣಗಿಲ್ಲ ಜೊತೆಗೆ ಪ್ರೀತಿ ಮಾಸಿಲ್ಲ ನಲ್ಲನೊಂದಿಗೆ ಕಳೆದ ಸವಿಸಮಯವನ್ನೇ ಮೆಲುಕು ಹಾಕುತ್ತಾ ತನ್ನ ಪ್ರಸ್ತುತ ದಿನಗಳನ್ನು ಭಾರದ ಮನಸಿಂದ ಕಳೆಯುತ್ತಲಿದ್ದಳು........ ತನ್ನ ಮಾಸ್ಟರ್ ಡಿಗ್ರಿ ಮುಗಿಸಿ ಯಾವುದೋ ಕಾಲೇಜಿನಲ್ಲಿ ಅಧ್ಯಾಪಕಳಾಗಿ ಸೇರಿದ್ದೆ ತಡ ಅಪ್ಪ ಅಮ್ಮನಿಂದ ಮದುವೆಯ ಪ್ರಸ್ತಾಪ ಪ್ರಾರಂಭವಾಯಿತು. ಇದು ಮಾತ್ರ ಕ್ಷಮಳಿಗೆ ಕಿರಿಕಿರಿ ಹಾಗೂ ಒಲ್ಲದ ಸಂಗತಿ ಎಂದೇನಿಸಿಬಿಟ್ಟಿತ್ತು. ಅವರ ಬಲವಂತ ಜೊತೆಗೆ ಬೇಡಿಕೆ ಮದುವೆಯಾಗಲೇ ಬೇಕೆಂದು, ಇದಕ್ಕೆ ವಿರುದ್ಧವೆಂಬಂತೆ ನನ್ಗೆ ಮದುವೆ ಇಷ್ಟವಿಲ್ಲ ಎಂಬ ಹಠಕ್ಕೆ ಬಿದ್ದಳು... ಸ್ನೇಹಿತರು, ಅಪ್ಪ ಅಮ್ಮ, ಅಣ್ಣ ಯಾರ ಒತ್ತಾಯಕ್ಕೂ ಮಣಿಯದ ಇವಳು ಒಪ್ಪಲೇ ಇಲ್ಲ ಮನೆಯಲ್ಲಿ ಒಂದು ದೊಡ್ಡ ನಾಟಕವೇ ನೆಡೆದಿತ್ತು ಅಮ್ಮ ಊಟ ಬಿಟ್ಟು, ಜೊತೆಗೆ ಮುನಿಸು, ಮತ್ತಷ್ಟು ಆಕ್ರೋಶ ಎಲ್ಲವನ್ನು ತೋರಿದರೂ ಏನು ಪ್ರಯೋಜನವಾಗಲಿಲ್ಲ.
ತನ್ನ ಹಠದಂತೆ ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರುತ್ತಾಳೆ.

ಕೆಲಸದ ಜೊತೆ ನೆನಪಿನ ಪುಟದಲಿ ಬಾಳನ್ನು ಸಾಗಿಸುತ್ತಿರುತ್ತಾಳೆ. ದಿನವೂ ಕೆಲಸಕ್ಕೆಂದು ಹಾದು ಹೋಗುವ ಹಾದಿಯಲ್ಲೇ ಪ್ರಿಯತಮನ ಕಚೇರಿ ಇದ್ದ ಕಾರಣ ಬಸ್ಸಿನಲ್ಲಿ ಕೂರುವಾಗ ಅವನ ಕಚೇರಿ ಇರುವ ಕಡೆಗಿನ ಕಿಟಕಿಯಲ್ಲಿ ಎಂದೂ ಕೂತು ಪ್ರಯಾಣಿಸುತ್ತಲಿರಲಿಲ್ಲ.....ಅದೊಂದು ದಿನ ಆಕಸ್ಮಿಕವಾಗಿ ಬೇಡವೆನ್ನುವ ಕಿಟಕಿ ಜಾಗವೇ ಸಿಕ್ಕಿ ಬಿಟ್ಟಿತ್ತು. ಆದರೂ ಕಡೆ ತಿರುಗಿ ನೋಡಬಾರದೆಂದು ಭಾವಿಸಿ ಕಟುವಾಗೆ ಮನಸಿಗೆ ಶಪಿಸಿ ಕೂತಳು.....ಇನ್ನೇನು ಅವನ ಕಚೇರಿ ಸಮೀಸಬೇಕು ಇವಳಿಗೇ ಅರಿವಿಲ್ಲದೆ ಅವಳ ಕಣ್ಣು ಕಡೆಯೊಮ್ಮೆ ಕಣ್ಣಾಡಿಸಿಯೇ ಬಿಟ್ಟಿತ್ತು........ ಕಣ್ಣುಗಳು ಇವಳ ಒಳ ಮನಸಿಗೆ ವಿಷಯವನ್ನು ಮುಟ್ಟಿಸಿಯೇ ಬಿಟ್ಟಿತು. ಮನದೊಳಗೆ ಒಮ್ಮೆ ಸಂತಸ, ಬೇಸರ, ಕೋಪ, ತಳಮಳ ಎಲ್ಲವೂ ಒಟ್ಟೊಟ್ಟಿಗೆ ಇವಳ ದೇಹ ಹಾಗೂ ಮನಸ್ಸನ್ನು ತಲ್ಲಣಿಸುವಂತೆ ಎರಡು ಕಣ್ಣುಗಳು ಮಾಡಿಯೇ ಬಿಟ್ಟವು......

ಕಣ್ಣುಗಳು ಅವನ ಕಚೇರಿ ಇದ್ದ ಸ್ಥಳವನ್ನೊಂದೇ ತೋರಿಸಲಿಲ್ಲ ಪ್ರಿಯಕರನನ್ನೂ ತೋರಿಸಿಬಿಟ್ಟಿತು..... ಎಲ್ಲೋ ಹುದುಗಿದ್ದ ಪ್ರೇಮ ಒಮ್ಮೆಲೇ ಚಿಗುರೊಡೆಯಲು ಪ್ರಾರಂಭಿಸಿತು.....ಅಂದಿನಿಂದ ದಿನವೆಲ್ಲಾ ಕಿಟಿಯಲಿ ಇಣುಕಿ ನೋಡುವಾಟ ನೆಡೆದಿತ್ತು... ಇದು ಸುಮಾರು ದಿನಗಳೇ ಸಾಗಿದವು ಕೊನೆಗೊಮ್ಮೆ ಸಂಕೇತನ ಕಣ್ಣ ಮರೆಸಿ ನೋಡುವಂತಾಗಲಿಲ್ಲ... ಅವನೂ ಸಹ ಒಮ್ಮೆ ಇವಳ ನೋಡಿದ್ದೇ ಅದೇನೋ ಬಾವ, ಹಳೆ ಪುಟಗಳ ತಿರುವಿ ನೋಡುವ ಸಮಯ ಸಂಯಮ ಪ್ರಾರಂಭವಾಯಿತು, ಕ್ಷಮಾಳಲ್ಲಿ ಕ್ಷಮೆಯಾಚಿಸಲು ಮುಂದಾದನು. ಒಮ್ಮೆ ಮುಖಾಮುಖಿ ಭೇಟಿ.... ಎದುರೆದುರು ಬಂದಾಗ ಹೆದರೆದರಿ ನಿಂದಾಗ ಅಲ್ಲೇ ಆರಂಭ ಹಳೆಯ ಪ್ರೇಮ.... ಇತ್ತ ಮದುವೆಯಾದವನೆಂಬ ಪರಿವೇ ಇಲ್ಲದೆ ಕ್ಷಮಾಳ ಒಲುಮೆಯಲಿ ಮುದುಡಿ ಹೋದನು........ಕ್ಷಮಾ ಹೆಸರಿಗೆ ತಕ್ಕಂತೆ ಕ್ಷಮಯಾಧರಿತ್ರಿಯಾದಳು ಪ್ರೀತಿಯಿದ್ದೆಡೆ ಕೋಪ, ಕ್ರೋದ ಅನ್ನುವುದು ಬಾರದೇ ಹೋಗುತ್ತೇ ನೋಡಿ.......ಮರಳಿದ ಪ್ರಿಯತಮೆ.....ಪ್ರೀತಿಯ ಧಾರೆಯೆರೆಯುತ್ತಾಳೆ ಮನೆ, ಜನ, ಅವನ ಹೆಂಡತಿ ಯಾವುದೇ ಪರಿವಿಲ್ಲದೆ ಲೀಲಾಜಾಲವಾಗಿ ಪ್ರೇಮದಲ್ಲಿ ವಿಸ್ಮಿತರಾಗಿಬಿಡುತ್ತಾರೆ........

ಇವರಿಬ್ಬರ ಭೇಟಿ ಮತ್ತೆ ಚಿಗುರಿದ ಪ್ರೇಮ ಎಲ್ಲವೂ ಮನೆಯವರಿಗೆ ತಿಳಿದು, ಮತ್ತೊಂದು ಫಿಲ್ಮಿ ಸ್ಟೈಲಿನಲ್ಲಿ ಅಣ್ಣ ಒಬ್ಬ ದೊಡ್ಡ ವಿಲನ್ ವೇಷಧರಿಸಿಬಿಟ್ಟಿದ್ದ. ಅಣ್ಣನಿಗೆ ಇವಳ ವರ್ತನೆ ಸಹಿಸಲಾಗದೆ ಮೈ, ಕೈಗೆ ಬಿಸಿ ಬಾಸುಂಡೆಗಳ ವರಸೆ ತೋರಿಸಿಯೇ ಬಿಟ್ಟ...........

ನೋವ ಮೇಲೊಂದು ನೋವು ಅದ ಸಹಿಸಲು ಇವಳ ದೇಹವಿದೆಯೆಂದು ನೋಯಿಸುತ್ತಲೇ ಬಂದಳು ಕ್ಷಮ. ಇದು ಸರಿಯಲ್ಲವೆಂದು ತಿಳಿದರೂ ಅವಳು ಅವನ ಪ್ರೇಮಪಾಶದಲ್ಲಿ ಸಿಲುಕಿಬಿಟ್ಟಿದ್ದಳು. ಅದರಿಂದ ಹೊರಬರಲಾಗಲೇ ಇಲ್ಲ.... ಕೊನೆಗೊಂದು ತೀರ್ಮಾನಕ್ಕೆ ಬಂದು ಬಿಟ್ಟಳು. ಇರುವಿಕೆಯ ನೋವಿಗಿಂತ ಸಾವಿನ ಕಹಿಯನ್ನು ಸ್ವೀಕರಿಸುವುದೇ ಮೇಲೆಂದು, ಸಾವಿಗೆ ಸ್ವಾಗತ ನೀಡೇ ಬಿಟ್ಟಳು.... ನಿದ್ರಾ ಮಾತ್ರೆಗೆ ಶರಣಾಗಿ ಗಾಢ ನಿದ್ರೆಯಲಿ ಮಗುವಾದಳು..... ಅಮ್ಮ ಹೇಗೋ ಮಗಳ ಸ್ಥಿತಿ ಅರಿತಿದ್ದೇ, ಅವಳ ಮೇಲಿದ್ದ ಕೋಪ, ತಾಪ ಎಲ್ಲವೂ ಮಾಯವಾಗಿತ್ತು. ಎಷ್ಟೇ ಆಗಲಿ ಹೆತ್ತ ಕರುಳು ಅವಳಿಗಾಗಿ ಮರುಗಿತು ಒಮ್ಮೆಲೆ ಆಸ್ಪತ್ರೆಗೆ ಕರೆದೊಯ್ದು ಉಪಚಾರ ನೀಡಿ ಮಾನಸಿಕವಾಗಿ ಸಮಾಧಾನ ಮಾಡುವತ್ತ ಅಪ್ಪ ಅಮ್ಮ ಮುಂದಾದರು.......ಅಣ್ಣ ಕೂಡ ತಂಗಿಯ ಸ್ಥಿತಿಗೆ ಮರುಗುವಂತಾದನು...ಇತ್ತ ನನ್ನಿಂದಲೇ ಹೀಗಾಗುತ್ತಿದೆ. ಮೊದಲೇ ಅಕ್ಕನನ್ನು ಕಳೆದುಕೊಂಡೆವು ಇನ್ನು ತಂಗಿಯನ್ನು ಕಳೆದುಕೊಳ್ಳುವ ಸ್ಥಿತಿಗೆ ಬಂದು ಬಿಟ್ಟೆವೆಂದು ಕೊನೆಗೊಂದು ತೀರ್ಮಾನಕ್ಕೆ ಬರುತ್ತಾನೆ.

ಆಸ್ಪತ್ರೆಯಿಂದ ನೇರವಾಗಿ ಸಂಕೇತನ ಮನೆಗೆ ತೆರೆಳಿದ ಕ್ಷಮಾಳ ಅಣ್ಣ. ಅಲ್ಲಿ ಸಂಕೇತ್ ಹಾಗೂ ಅವನ ಹೆಂಡತಿ ಇಬ್ಬರೂ ಮನೆಯಲ್ಲಿದ್ದರು, ಇದ್ದ ವಿಷಯವನ್ನೆಲ್ಲಾ ಇಬ್ಬರೆದುರು ಹೇಳಿ ಅವರಿಬ್ಬರ ಕಾಲಿಗೆ ಬಿದ್ದು ನನ್ನ ತಂಗಿ ಉಳಿಸಿಕೊಡಿ. ನಮಗೆ ಅವಳ ಖುಷಿ ಇದ್ದರೆ ಸಾಕು ಮಿಕ್ಕದ್ದು ಏನಾದರಾಗಲೆಂದು ಅಂಗಲಾಚಿ ಬೇಡಿ ನೀವಿಬ್ಬರು ಯಾವುದಾದರೊಂದು ತೀರ್ಮಾನಕ್ಕೆ ಬರಬೇಕೆಂದೇಳಿ ಅಲ್ಲಿಂದ ನೆಡೆದ.

ಇತ್ತ ಮದುವೆಯಾಗಿ ಸುಮಾರು ವರ್ಷ ಕಳೆದರೂ ತಮ್ಮ ದಾಂಪತ್ಯ ಜೀವನಕ್ಕೆ ಒಂದು ಕೂಸು ಕೊಡಲು ಸಾಧ್ಯವಾಗದೆ ಮನಸ್ಸಲ್ಲೇ ನರಳುತ್ತಿದ್ದ ಸಂಕೇತನ ಪತ್ನಿಗೆ ಇದು ಒಂದು ಒಳ್ಳೆ ಸುಸಂದರ್ಭವೆಂದು ಭಾವಿಸಿ ಕೊನೆಗೊಂದು ತೀರ್ಮಾನಕ್ಕೆ ಸಜ್ಜಾಗಿ ಗಂಡನತ್ತಿರ ವಿಷಯವನ್ನು ಮರೆಮಾಚದೆ ಹೇಳಿದಳು "ನೋಡಿ ನೀವು ಪ್ರೀತಿಸಿದ್ದು, ಪ್ರೀತಿಸುತ್ತಿರುವುದು ಯಾವುದೂ ತಪ್ಪಿಲ್ಲ ಎಲ್ಲರಲ್ಲೂ ಪ್ರೀತಿ ಇದ್ದೇ ಇರುತ್ತೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿಯಲ್ಲಿ ಬೆಳೆಯುತ್ತ......ಅದಕ್ಕೆ ನಾ ಒಂದು ತೀರ್ಮಾನಕ್ಕೆ ಬಂದಿದ್ದೇನೆ.......... ನೀವು ಕ್ಷಮಳನ್ನು ಮದುವೆಯಾಗಲೇ ಬೇಕು" ತೀರ್ಮಾನದಲ್ಲಿ ಯಾವುದೇ ಒತ್ತಾಯ, ಬೇಸರ, ಕೋಪ, ದ್ವೇಷ ಯಾವುದೂ ಇಲ್ಲ ನನ್ನ ಇಚ್ಚೆಯಂತೆ ನನ್ನ ಒಪ್ಪಿಗೆಯಲ್ಲೇ ನೀವು ಮದುವೆಯಾಗಿ ಎಂದೇಳಿದ ಕೂಡಲೇ ಸಂಕೇತನಿಗೆ ಎಲ್ಲಿಲ್ಲದ ಭಯ, ದುಗುಡ ಬೇಸರ ಎಲ್ಲವೂ ಒಟ್ಟಿಗೆ ಬಂದು ಮನಸ್ಸನ್ನು ಕದಡಿಬಿಟ್ಟಿತು. ಇಂತಾ ಹೆಂಡತಿ ಇದ್ದು ನಾ ಪ್ರೀತಿಯಲ್ಲಿ ಪರವಶನಾದೆನಲ್ಲ ಎಂಬ ಬೇಸರದಿ ಒಪ್ಪಿಗೆ ನೀಡಲೇ ಇಲ್ಲ...........

ಆದರೆ ಸಂಕೇತನ ಹೆಂಡತಿ ಪ್ರಜ್ವಲ ತನ್ನ ನಿಲುವಿನಲ್ಲಿ ಬದಲಾವಣೆ ಮಾಡದೆ ಗಂಡನನ್ನು ಕರೆದುಕೊಂಡು ನೇರವಾಗಿ ಆಸ್ಪತ್ರೆಯತ್ತ ಸಾಗುತ್ತಾ, ಕೈಯಲ್ಲಿ ಎರಡು ಮಲ್ಲಿಗೆ ಹಾರವನ್ನು ಹಿಡಿದು.......ಕ್ಷಮಳತ್ತ ನೆಡೆದರು. ಆಸ್ಪತ್ರೆಯಲ್ಲಿ ಇವರನ್ನು ಕಂಡ ಕ್ಷಮಳಿಗೂ ಅವರ ನಿರ್ಧಾರದಿಂದ ಮನಸ್ಸಲ್ಲಿ ಬೇಸರ ಮೂಡಿತ್ತು. ನನ್ನಿಂದಾಗಿ ಸಂಸಾರಕ್ಕೆ ಕುತ್ತು ತಂದೆನೆಂದು, ಆದರೆ ಕ್ಷಮಳ ಮಾತು ಹೊರ ಬರುವ ಮುನ್ನವೇ ಪ್ರಜ್ವಲ ಎಲ್ಲಕ್ಕೂ ಕಡಿವಾಣವಿಟ್ಟು ಹಾರ ಬದಲಾಯಿಸುವಂತೆ ಬಲವಂತವನ್ನೇರಿದಳು..........

ಕೊನೆಗೆ ಎಲ್ಲರ ಒಪ್ಪಿಗೆಯಿಂದ ಕ್ಷಮ ಹಾಗೂ ಸಂಕೇತನ ಮದುವೆ ಆಸ್ಪತ್ರೆಯಲ್ಲೇ ನೆಡೆಯಿತಾದರೂ ಅದ್ಧೂರಿಯಿಂದ ಹಿಂದೂ ಸಂಪ್ರದಾಯದಂತೆ ಸಂಬಂಧಿಕರೆಲ್ಲರ ಸಮ್ಮುಖದಲ್ಲಿ ಮತ್ತೊಮ್ಮೆ ಮದುವೆ ನೆರೆವೇರಿಸಿದರು...............

ಇದು ನನ್ನ ಆತ್ಮೀಯ ಸ್ನೇಹಿಯ ಕಥೆ ಕುಟುಂಬ ಈಗ ಸಂತಸದಿಂದ ಎಲ್ಲರೂ ಒಟ್ಟು ಕುಟುಂಬದಲ್ಲಿದೆ, ಕುಸುಮಕೋಮಲೆ ಕ್ಷಮ ಅವಳಿ-ಜವಳಿ ಕುಸುಮ ದಳಗೊಂದಿಗೆ ಸಂಸಾರ ಸಾಗಿಸುತ್ತಲಿದ್ದಾರೆ......

-ಶುಭಮಸ್ತು-

12 comments:

ಸಾಗರದಾಚೆಯ ಇಂಚರ said...

ಮನಸು
ಸುಂದರ ಕಥೆ, ಸುಂದರ ಅಂತ್ಯ
ಅವರಿಗೆ ಶುಭವಾಗಲಿ
ಒಳ್ಳೆಯ ಕಥೆಯನ್ನು ನೀಡಿದ ನಿಮಗೆ ಅಭಿನಂದನೆಗಳು
ಇನ್ನಷ್ಟು ಕಥೆಗಳು ಬರಲಿ

ರವಿಕಾಂತ ಗೋರೆ said...

Nice story...

sunaath said...

ಮನಸು,
ಕತೆಯನ್ನು ಸುಖಾಂತವಾಗಿ ಮಾಡಿದ್ದಕ್ಕೆ ಧನ್ಯವಾದಗಳು.

Subrahmanya said...

ಕತೆ ಹೇಳಿದ ರೀತಿ ಮತ್ತು ಕತೆ ಎರಡೂ ಇಷ್ಟವಾಯ್ತು. ಇನ್ನಷ್ಟು ಬರೆಯಿರಿ.

ತೇಜಸ್ವಿನಿ ಹೆಗಡೆ said...

ಸಂಕೇತ್‍ನ ಮೊದಲ ಪತ್ನಿಯ ಉದಾರ ಮನಸ್ಸು ನಿಜಕ್ಕೂ ಶ್ಲಾಘನೀಯ. ಇದು ನಿಜ ಕಥೆ ಎಂದಿರುವಿರಿ. ನಿಜಕ್ಕೂ ಮೊದಲ ಪತ್ನಿಯ ತ್ಯಾಗ ವಿಶಾಲತೆ ಮನಸೂರೆಗೊಂಡಿತು.

ದಿನಕರ ಮೊಗೇರ.. said...

katheya sukaantya odi khushiyaaytu....... modalinindaloo nanage idu nija katheye anisuttittu.... dhanyavaada sudheerga kathe bareyuva manassu maadiddakke.... yashasviyaagiggeeri.......

Snow White said...

tumba olleya kathe madam..nija kate endu nanage tilidirallilla...sukaantya nodi tumba khushiyaayitu :) :)

Manasa said...

Bari kathe kavangaLalli odidde.. nijavaagiyu intaha daya mayi jeevigaLu iddarendare hats off to them :) ... good one :)

shivu.k said...

ಮೇಡಮ್,

ಕತೆಯನ್ನು ಎಷ್ಟು ಚೆನ್ನಾಗಿ ಕೊಟ್ಟಿದ್ದೀರೆಂದರೆ ಅದು ಸತ್ಯಕತೆಯೆನ್ನುವುದು ಕೊನೆಯಲ್ಲಿ ನೀವು ಹೇಳುವವರೆಗೂ ಗೊತ್ತಾಗಲಿಲ್ಲ. ಸಂಕೇತ್ ಪತ್ನಿಯ ಹೃದಯ ವೈಶಾಲ್ಯತೆ ಮೆಚ್ಚುವಂತದ್ದು...

ಉತ್ತಮ ಕತೆಗೆ ಧನ್ಯವಾದಗಳು.

ಸುಧೇಶ್ ಶೆಟ್ಟಿ said...

sathyakatheyendu nambalu aagalilla... modhala pathniya manassina bagge aascharya aayithu. Thanna pathiyannu innobbarannu hanchikoLLuva nirdhaara avaru maadiddaare andare avru nijavaagiyoo gatti manasinavarE irabeku....

kathegaLu heege baruttirali :)

ಸೀತಾರಾಮ. ಕೆ. said...

nice story.
Happy ending!!
Enjoyed .
But your posting gaps are so wide that we read every time previous one :-((

ಜಲನಯನ said...

ಮೇಡಮ್ನೋರೇ...ನಿಮ್ಗೊತ್ತು ಎಷ್ಟು ವ್ಯಸ್ತನಾಗಿದ್ದೆ ಈ ಮಧ್ಯೆ ಅಂತ...!! ಅದಕ್ಕೇ ನಿಮ್ಮ ಕಥೆಯ ಮುಂದಿನ ಕಂತುಗಳನ್ನು ನೋಡಲಾಗಿಲ್ಲ...ಈಗ ಒಟ್ಟಿಗೇ ಎಲ್ಲದರ ಸಾರ ಪ್ರತಿಕ್ರಿಯೆಗಳ ಧೋ- ಸುರಿಸಿಬಿಡುತ್ತೇನೆ...ಹಹಹ...
ಒಂದಂತೂ ನಿಜ,,,ನೀವು ಒಳ್ಳೆಯ ಕಥೆಗಾರ್ತಿಯಾಗೋ ಎಲ್ಲ ಲಕ್ಷಣಗಳೂ ಇವೆ...ನಿಮ್ಮ ಕವನಪ್ರತಿಭೆಗೆ ಇದು ಕಿರೀಟಪ್ರಾಯ...ಮುಂದುವರೆಯಲಿ..ಕೃಷಿ...
ಹೆಣ್ಣು ಸಮಾನ್ಯವಾಗಿ ತನ್ನ ಪ್ರೀತಿಯ (ಅದರಲ್ಲೂ ಗಂಡ ಅಥವಾ ಪ್ರಿಯತಮ) ವಿಷಯದಲ್ಲಿ ಬಹಳ ಸಂಕೀರ್ಣಳು ಎನ್ನುವ ಮಾತಿದೆ ಆದ್ರೆ ನಿಮ್ಮ ಕಥಾ ನಾಯಕಿಯ (ಸಂಕೇತನ ಮೊದಲ ಪತ್ನಿಯ) ಉದಾರತೆ ಮತ್ತು ತ್ಯಾಗ ಅತಿಮಾನವೀಯ ಈನುವುದಕ್ಕಿಂತಾ ಅತಿಪತ್ನೀಯ ಎನ್ನಲೇ...ಚನ್ನಾಗಿವೆ ಕಂತುಗಳು...