Thursday, June 3, 2010

ಕುಡಿತ - ಕಾಂತಿಹೀನ

ಕುಡಿತ

ಸುಂದರ ಬದುಕಿದೆ
ನನ್ನವರೆಲ್ಲರೂ ಇದ್ದಾರೆ
ಯಾವ ಕೊರೆತೆಯೂ ಇಲ್ಲ
ಬಾಳುವಾಸೆ ಅತಿಯಾಗಿದೆ
ಆದರೆ........
ನನ್ನ ಜೀವ ದಿನ ಎಣಿಸುತಿದೆ
ಕಾರಣ.......
ವಯಸ್ಸಲ್ಲಿ ಕುಡಿದು ತೇಗಿದ್ದು....
ಇಂದು ಮರಣಕ್ಕೆ ಹತ್ತಿರವಾದೆ
ಇನ್ನೆಲ್ಲಿ ......
ಬಾಳುವಾಸೆ ನನ್ನವರೊಟ್ಟಿಗೆ.
ಚಟ್ಟವನ್ನೇ ......
ಬಯಸಬೇಕಿದೆ ಈ ಮಧ್ಯವಯಸ್ಸಿಗೆ..?!!!

________________


ಕಾಂತಿಹೀನತೆ


ಬಾಗಿಲಲಿ ಪೂಜೆಗೈದಿದೆ
ತೋರಣ ಹಚ್ಚಹಸಿರಾಗಿದೆ
ಮನೆಯೊಳಗಣ ದೀಪದ ಬೆಳಕಿದೆ
ಒಳಗೋಗುವಾಸೆ
ಹೋದರೆ.......
ಆ ದೀಪದ ಕಾಂತಿಗೆ
ಪ್ರಜ್ವಲತೆಯ ಮಿಂಚಿನ ಶಕ್ತಿಯೇ ಇಲ್ಲ
ಕಾರಣ..........
ಮನೆಯ ನಂದಾದೀಪದ ಕಾಂತಿ
ಕಳೆಗುಂದಿದೆ........

29 comments:

kusu Muliyala said...

ಕುಡಿತ ಜೀವನವನ್ನು ಕಡಿತಗೊಳಿಸುತ್ತದೆ ಎ೦ಬುದನ್ನು ಸೊಗಸಾಗಿ ಬರೆದಿದ್ದೀರಿ.
ಚೆನ್ನಾಗಿ ಮೂಡಿ ಬ೦ದಿದೆ ಎರಡೂ ಚುಟುಕುಗಳು.

ತೇಜಸ್ವಿನಿ ಹೆಗಡೆ said...

ಕುಡಿತದ ಕವನ ಹೆಚ್ಚು ಇಷ್ಟವಾಯಿತು. ಎರಡೂ ಚುಟುಕುಗಳೂ ಚೆನ್ನಾಗಿವೆ.

ಮನಸು said...

kusu Muliyala,

ನಿಮಗೆ ಸ್ವಾಗತ, ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ, ನಿಜ ಕುಡಿತ ಎನೆಲ್ಲಾ ಕೆಡಿಸುತ್ತೆ, ಜೀವನವನ್ನೂ ಬೇಕು ಎಂದಾಗಲೂ ಅದು ಬಿಡುವುದಿಲ್ಲ...ಅಲ್ಲವೆ..

ಮನಸು said...

ತೇಜಸ್ವಿನಿಯವರೆ,
ಧನ್ಯವಾದಗಳು, ನಿಮ್ಮ ಅನಿಸಿಕೆಗಳು ಸದ ನಮಗೆ ಸ್ಪೂರ್ತಿದಾಯಕ.
ವಂದನೆಗಳು

Shashi jois said...

ಎರಡು ಮಿನಿ ಕವನಗಳು ಚೆನ್ನಾಗಿದೆ .ಕುಡಿತ ಹೆಚ್ಚು ಇಷ್ಟವಾಯಿತು..

ಚುಕ್ಕಿಚಿತ್ತಾರ said...

nice ....!!

ಸುಮ said...

ಎರಡೂ ಚುಟುಕಗಳು ಚೆನ್ನಾಗಿವೆ.

Ranjita said...

tumba chennagive hanigalu madam :)

ಮನದಾಳದಿಂದ............ said...

ಕುಡಿತದ ಪರಿಣಾಮ ಎಷ್ಟು ಭಯಂಕರ ಅಲ್ವಾ...........
ಎರೆಡೂ ಚುಟುಕು ಕವನಗಳೂ ಚೆನ್ನಾಗಿವೆ.......

ರವಿಕಾಂತ ಗೋರೆ said...

Nimma kavanada kikku bhayankaravaagide!!!

Subrahmanya said...

ಕುಡಿತದ ಪ್ರಭಾವವನ್ನು ಕವನದಲ್ಲಿ ಚೆನ್ನಾಗಿ ಹೇಳಿದ್ದೀರಿ.

shivu.k said...

ಎರಡು ಕವನಗಳಲ್ಲಿ ಕುಡಿತದ ಕವನ ತುಂಬಾ ಇಷ್ಟವಾಯಿತು...

Guru's world said...

ಕುಡಿತದ ಕವನ ತುಂಬಾ ಚೆನ್ನಾಗಿ ಮೂಡಿ ಬಂದಿದೆ....

Raghu said...

ಚುಟುಕಗಳು ತುಂಬಾ ಚೆನ್ನಾಗಿದೆ.
ನಿಮ್ಮವ,
ರಾಘು.

ಸೀತಾರಾಮ. ಕೆ. / SITARAM.K said...

ಎರಡು ಕವನಗಳು ಚೆನ್ನಾಗಿವೆ. ಧನ್ಯವಾದಗಳು.

ಜಲನಯನ said...

ಮನಸು ಮೇಡಂ... ಚಟ ಯಾವುದೇ ಆದ್ರೂ ವಿನಾಶಕ್ಕೆ ದಾರಿ ಯಾಕಂದ್ರೆ ಚಟದ ಮಾತು ನಾವು ಕೇಳಿದರೆ ಅದು ನಮ್ಮ ಮಾತು ಕೇಳಬೇಕೆಂದೇನಿಲ್ಲ.....ಅದಕ್ಕೆ ಸದಾ ಅಡಿಯಾಳಾಗಿರಬೇಕಾಗುತ್ತೆ... ಎರಡೂ ಮಿಡಿಗವನಗಳೂ ಚನ್ನಾಗಿ ಮೂಡಿವೆ...

ಮನಸು said...

ಶಶಿ ಅಕ್ಕ,
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ, ಕುಡಿಯೋದರಿಂದ ಎಷ್ಟೋ ಜನ ತಮ್ಮ ಜೀವನ ಹಾಳು ಮಾಡಿಕೊಂಡಿದ್ದಾರೆ, ಚೆನ್ನಾಗಿರುವಾಗ ಯಾರ ಮಾತು ಕೇಳೋಲ್ಲ ತೊಂದರೆಯಾದಾಗ ಅನುಭವಿಸಬೇಕಾಗುತ್ತದೆ...

ಚುಕ್ಕಿ ಚಿತ್ತಾರ,
ನಿಮಗೆ ಧನ್ಯವಾದಗಳು ಅನಿಸಿಕೆಗಳಿಗೆ

ಮನಸು said...

ಸುಮ
ಬಹಳ ಧನ್ಯವಾದಗಳು...

ರಂಜಿತಾ,
ನನ್ನ ಹನಿಗಳ ಮೆಚ್ಚಿದ್ದಕ್ಕೆ ಧನ್ಯವಾದಗಳು

ಮನದಾಳದಿಂದ...
ಮೂದಲ ಬೇಟಿಗೆ ಸ್ವಾಗತ ... ಹೌದು ಕುಡಿತ ಗೀಳು ಭಯಾನಕ ಸ್ಥಿತಿಗೆ ತಂದು ಬಿಡುತ್ತದೆ.... ಅದನ್ನು ಅರಿತು ಬಾಳಿದರೆ ಒಳ್ಳೆಯದು ಅಲ್ಲವೆ

ಮನಸು said...

ರವಿರವರೆ,
ಭಯಂಕರವನ್ನು ಸ್ವೀಕರಿಸೋ ನಮ್ಮ ಜನ ಸ್ವಲ್ಪ ಅರಿತುಕೊಂಡರೆ ಚೆನ್ನ ಅಲ್ಲವೆ..? ಧನ್ಯವಾದಗಳು

ಸುಬ್ರಮಣ್ಯರವರೆ,
ಕುಡಿತದ ಪ್ರಭಾವ ಹೆಚ್ಚು ಅದಕ್ಕೆ ಕವನ ಪ್ರಭಾವವೆನಿಸಿದೆ......

ಶಿವು ಸರ್,
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ

ಮನಸು said...

ಗುರು,
ಬಹಳ ದಿನಗಳ ನಂತರ ಇತ್ತ ಆಗಮ ಧನ್ಯವಾದಗಳು

ರಾಘು,
ಧನ್ಯವಾದಗಳು ನೀವು ಇತ್ತೀಚೆಗೆ ಹೆಚ್ಚು ಬರೆಯುತ್ತಲೇ ಇಲ್ಲ ಕಾರಣ ತಿಳಿಯದು....

ಸೀತಾರಾಮ್ ಸರ್,
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ

ಮನಸು said...

ಜಲನಯನ,
ಹೌದು ಸರ್, ಚಟ ವಿನಾಶಕ್ಕೆ ಕಾರಣ, ಚಟಕ್ಕೆ ಬಿದ್ದರೆ ಯಾರ ಮಾತು ಕೇಳೋಲ್ಲ..... ಧನ್ಯವಾದಗಳು

prabhamani nagaraja said...

ಚಟ & ಚಟ್ಟಕ್ಕೆ 'ಟ' ಇದರ ಒತ್ತಕ್ಷರದ ವ್ಯತ್ಯಾಸ! ಮೊದಲನೆಯದಕ್ಕೆ 'ಟಾ ಟಾ...' ಹೇಳಿಬಿಟ್ಟರೆ ಎರಡನೆಯದರ ಭಯವೇ ಇಲ್ಲ! ಹನಿಗವನಗಳು ಚೆನ್ನಾಗಿವೆ. ನನ್ನ ಬ್ಲಾಗ್ ಗೊಮ್ಮೆ ಭೇಟಿ ನೀಡಿ.

ಸುಧೇಶ್ ಶೆಟ್ಟಿ said...

chennagide manasu avare yeradoo kavanagaLu... artha garbhithavaagive...

ಡಾ.ಕೃಷ್ಣಮೂರ್ತಿ.ಡಿ.ಟಿ. said...

ಎರಡೂ ಕವನಗಳು ಚೆನ್ನಾಗಿವೆ.ಈ ಕುಡಿತ ಅನ್ನೋ ಭೂತ
ಕರುನಾಡನ್ನು ಹೋಗಲಿ ಮರುನಾಡನ್ನೂ ಬಿಟ್ಟಿಲ್ಲ!ನನ್ನ ಬ್ಲಾಗಿಗೊಮ್ಮೆ ಭೇಟಿ ಕೊಡಿ.

ಮನಸು said...

ಧನ್ಯವಾದಗಳು,
ಪ್ರಭಾ ನಿಮಗೆ ಸ್ವಾಗತ ಸದಾ ನಮ್ಮೊಂದಿಗಿರಿ.

ಸುಧೇಶ್,
ಏನು ಪತ್ತೆಯೇ ಇಲ್ಲದಾಗಿದ್ದೀರಿ...ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ

ಮನಸು said...

ಡಾ. ಕೃಷ್ಣ ಮೂರ್ತಿ ಸರ್,
ನಿಮ್ಮ ಬ್ಲಾಗಿಗಾಗಲೇ ಭೇಟಿ ಇತ್ತಿರುವೆ ನಿಮ್ಮ ಲೇಖನದ ಕಿವಿಮಾತು ಇಷ್ಟವಾಯಿತು.... ಎಲ್ಲೇ ಇದ್ದರೂ ಕುಡಿತದ ಚಟ ಅನ್ನೋದು ಇರುತ್ತೇ ಅಲ್ಲವೆ...ಚಟಕ್ಕೆ ಬೀಳೋರು ಸ್ವಲ್ಪ ಅರ್ಥಮಾಡಿಕೊಂಡು ನೆಡೆದರೆ ಸಾಕು.... ಆದರೆ ಇಲ್ಲಿ ಕುವೈತ್ನಲ್ಲಿ ಕುಡಿತದ ಚಟಕ್ಕೆ ಬೀಳೋಕೆ ಕಷ್ಟ...ಇಲ್ಲಿ ಊರಿನ ತರ ಬಾರ್ ಗಳ ಕಾರುಬಾರಿಲ್ಲ
ವಂದನೆಗಳು

ಶಿವಪ್ರಕಾಶ್ said...

akkayya, eredu kavana super :)

SSK said...

ಮನಸು ಅವರೇ,
ಕವನಗಳು ಅರ್ಥಪೂರ್ಣವಾಗಿ, ಕುಡಿದು ಜೀವನ ಹಾಳು ಮಾಡಿಕೊಳ್ಳುವವರ ಬದುಕಿಗೆ ಕನ್ನಡಿ ಹಿಡಿದಂತಿದೆ!

ಮನಸು said...

ತಮ್ಮಯ್ಯ ಧನ್ಯವಾದಗಳು....

ಎಸ್ ಎಸ್ ಕೆಯವರೆ ಎಲ್ಲಿದ್ದೀರಿ ಇಷ್ಟು ದಿನ ಪತ್ತೆಯೇ ಇರಲಿಲ್ಲ.......ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು, ಕುಡಿತ ಜೀವನವನ್ನೇ ಬಾದಿಸುತ್ತೆ ಅಲ್ಲವೆ....