Monday, July 12, 2010

ಪದ

ಪದಗಳಿಗೆ ಶಕ್ತಿ ಇದೆ
ಅದು ಜೀವನ ಮತ್ತು ಸಾವಿನ
ಸಂಬಂಧ ಸೃಷ್ಟಿಸುವಲ್ಲಿ..........

ಪದಗಳಿಗೆ ಹೊಳಪಿದೆ
ಜೀವನದ ನೆಲೆ
ಕಾಣುವಲ್ಲಿ.....

ಪದ ಬಳಕೆಗೆ ಮಿತಿಯಿದೆ
ಅದು ಎರಡು ಜೀವಗಳ
ಅರ್ಥ ಮಾಡಿಕೊಳ್ಳುವಲ್ಲಿ........

ಪದಗಳಲಿ ಭಯವಿದೆ
ಪದ ಬಳಸುವ
ಏರುಪೇರಿನಲ್ಲಿ........

ಪದಗಳಲಿ ನಗುವಿದೆ
ನಗೆಯ ಪದ
ಬಳಸಿದಲ್ಲಿ......

ಪದಗಳಲಿ ದ್ವೇಷವಿದೆ
ಪದಗಳು
ಇರುಸುಮುರುಸಿನಲ್ಲಿ....

31 comments:

ಸೀತಾರಾಮ. ಕೆ. / SITARAM.K said...

ಪದಗಳಲ್ಲಿನ ಪದರುಗಳನ್ನು ಪರಿ ಪರಿಯಲ್ಲಿ ಹರವಿದ್ದಿರಾ....
ತುಂಬಾ ಚೆಂದದ ಲೇಖನ!

ತೇಜಸ್ವಿನಿ ಹೆಗಡೆ said...

good one.. :)

Dr.D.T.K.Murthy. said...

ಪದದ ಸಂಪದ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

Subrahmanya said...

ಪದಮೋಡಿಯ ಕವನ ಚೆನ್ನಾಗಿದೆ.

shridhar said...

ಪದಗಳಲ್ಲಿ ಮನಸಿದೆ .. ಕನಸಿದೆ . ಮುನಿಸಿದೆ ..
ಹ್ಮ್ ಚೆನ್ನಾಗಿದೆ .. ಪದ ಸಂಕಲನ ಕವಿತೆ ..

sunaath said...

ಪದಬಂಧನ ಸುಂದರವಾಗಿದೆ!

shivu.k said...

ಮನಸು ಮೇಡಮ್,

ಪದಗಳಲ್ಲಿ ದ್ವೇಷವಿದೆ ಪದಗಳು ಇರುಸುಮುರುಸಿನಲ್ಲಿ...ಆಹಾ..ಚಿಕ್ಕದಾದರೂ ಎಷ್ಟು ಸತ್ಯ!
ಸೂಪರ್!

ಸುಧೇಶ್ ಶೆಟ್ಟಿ said...

ಮೃದು ಮನಸು ಅವರೇ...

ಪುಟ್ಟ ಪುಟ್ಟ ಪದಗಳು ಕವನಕ್ಕೆ ದೊಡ್ಡ ಅರ್ಥವನ್ನೇ ನೀಡಿದೆ... ತು೦ಬಾ ಚೆನ್ನಾಗಿದೆ ಕವನ...

ದಿನಕರ ಮೊಗೇರ.. said...

'pada'galannu chennaagi baLasiddeeraa madam.... padagala modi chennaagide........

ಅನಂತರಾಜ್ said...

ಪದಗಳ ಉತ್ತಮ ಬಳಕೆ, ನವೀನ ಪ್ರಯೋಗ..
ಶುಭಾಶಯಗಳು
ಅನ೦ತ್

ಸಾಗರದಾಚೆಯ ಇಂಚರ said...

ಪದಗಳ ಜೋಡಣೆ ಮತ್ತು ಬಳಕೆ ಹಿತ ಮಿತವಾಗಿ ಸೊಗಸಾಗಿದೆ
ಸುಂದರ ಕವನ

ವನಿತಾ / Vanitha said...

wow:))..

Creativity!! said...

ಬಹಳ ಚೆನ್ನಾಗಿದೆ.

Creativity!! said...

ಬಹಳ ಚೆನ್ನಾಗಿದೆ.

ಮನಸು said...

ಅನಿಸಿಕೆ ತಿಳಿಸಿದ ಎಲ್ಲರಿಗೂ ಧನ್ಯವಾದಗಳು, ಈ ಪದಗಳೇ ಹೀಗೆ ಸ್ವಲ್ಪ ಏರುಪೇರಾದರೆ ಒಂದೊಂದು ಅರ್ಥ ಕಲ್ಪಿಸಿಬಿಡುತ್ತೆ ಅಲ್ಲವೆ...?

Dileep Hegde said...

ಪದಗಳ ಬಗ್ಗೆ ಸುಂದರ ಕವನ..

Raghu said...

ಚೆನ್ನಾಗಿದೆ ಪದಗಳ ಮಳೆ....
ನಿಮ್ಮವ,
ರಾಘು.

ಸಿಮೆಂಟು ಮರಳಿನ ಮಧ್ಯೆ said...

ಮನಸು...

ನೀವು ಬಳಸಿದ
ಪದಗಳಲ್ಲಿ..
ಹದವಿದೆ..
ಮುದವಿದೆ..
ಹಿತವಾದ ಭಾವಗಳಿದೆ..

ಅಭಿನಂದನೆಗಳು..

Snow White said...

tumba chennagide madam :)

ರವಿಕಾಂತ ಗೋರೆ said...

ಚೆನ್ನಾಗಿದೆ ನಿಮ್ಮ ಮನ-ಪದ..

M@ђ€$ђ..!! said...

Nija padagali jeevavide,,adke alve namma bhavanegalanna padagalalli vyakta padsodu


********************************
http://bhuminavilu.blogspot.com/
*********************************

ಜಲನಯನ said...

ಪದಗಳಿಗೆ ಪಾದವಿದೆ
ನಡೆದಾಡಿ ಓಡಲು ..
ಪದಗಳಿಗೆ ವಾದವಿದೆ
ಎದುರಾಳಿಯನ್ನು ಕೆಡುಹಲು
ಪದಗಳಿಗೆ ನಾದವಿದೆ
ಹಾಡೊಂದ ಹಾಡಲು.......
ಎಲ್ಲದಕ್ಕೂ ಮನಸಿದೆ...ಸುಂದರ ಮನಸಿಗೆ.

SOOOOOOOPEROOOOOO ..SOOOPERRU

ಶಿವಪ್ರಕಾಶ್ said...

akkayya... chooper research... :)

ವಿ.ಆರ್.ಭಟ್ said...

ಪದಗಳಲ್ಲಿ ಏನಿಲ್ಲ ? ಎಲ್ಲವೂ ಪದಗಳಿಂದಲೇ ಅಲ್ಲವೇ? ಪದಗಳಿಲ್ಲದ ಭಾಷೆಯಿಲ್ಲ, ಪದಗಳಿಲ್ಲದೆ ವ್ಯವಹಾರ ನಡೆಯುವುದಿಲ್ಲ[ಏನೋ ಅಲ್ಪ ಸ್ವಲ್ಪ ಬಾಡೀ -ಲ್ಯಾಂಗ್ವೇಜ್ ನಲ್ಲಿ ನಡೆಯಬಹುದು] ಪದಗಳನ್ನು ವತ್ಯಸ್ತವಾಗಿ ಬಳಸಿದರೆ ಜಗಳ-ವಿನಾಶ , ಪೂರಕವಾಗಿ ಬಳಸಿದರೆ ಬದುಕು-ಜೀವನ , ವಿಸ್ತ್ರತವಾಗಿ-ವಿಶೇಷವಾಗಿ-ವ್ಯಾಕರಣ ಶುದ್ಧವಾಗಿ ಬಳಸಿದರೆ ಕಾವ್ಯ-ಸಾಹಿತ್ಯ ! ನೋಡಿ ಈ ಪದಗಳ ಮಹಿಮೆ! ಇದು ನಿಮ್ಮ ಹಾಡಿನ ಗರಿಮೆ, ನಮಸ್ಕಾರ

ಮನಮುಕ್ತಾ said...

ಪದಗಳಲಿ ಶಕ್ತಿಯಿದೆ..
ಎರಡು ಮನಸುಗಳ
ಸ್ನೇಹ ಬೆಳೆಸುವಲ್ಲಿ..
ಪದಗಳ ಬಗ್ಗೆ ನಿಮ್ಮ ಕವನ ತು೦ಬಾ ಚೆನ್ನಾಗಿದೆ..ಹಿಡಿಸಿತು.

SATISH N GOWDA said...

ಸೀತಾರಾಂ ಸರ್ ನಾನು ನಿಮ್ಮ ಬ್ಲಾಗಿಗೆ ಇದೆ ಮೊದಲ ಬೇಟಿ ನೀಡಿದ್ದೇನೆ . ತುಂಬಾ ಚನ್ನಾಗಿ ಮೂಡಿಬಂದಿವೆ ನಿಮ್ಮ ಎಲ್ಲಾ article ಗಳು . ಎಲ್ಲವನ್ನು ಓದಲು ಸಮಯದ ಕೊರತೆ ಇದೆ . ಬಿಡುವು ಮಾಡಿಕೊಂಡು ಖಂಡಿತ ಓದಲು ಪ್ರಯತ್ನ ಪಡುತ್ತೇನೆ .ಬಿಡುವು ಮಾಡಿಕೊಂಡು ನೀವೂ ಒಮ್ಮೆ ನನ್ನವಳಲೋಕಕ್ಕೆ ಬನ್ನಿ ನಾನು ನಿಮ್ಮನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ
ನನ್ನ ಬ್ಲಾಗ್
www.nannavalaloka.blogspot.com
ನನ್ನ ಜಮೇಲ್
satishgowdagowda@gmail.com

© ಹರೀಶ್ said...

ಪದಗಳ ಜೋಡಣೆಯೆ ಅದರ ಅರ್ಥ ತಿಳಿಸುವಂತದ್ದು,
ಚನ್ನಾಗಿದೆ ನಿಮ್ಮ ಕವನ

prabhamani nagaraja said...

ಕವನದ ಮೂಲಕ 'ಪದ' ಸ೦ಪತ್ತನ್ನೇ ನಮ್ಮೆದುರು ತೆರೆದಿಟ್ಟಿದ್ದೀರಿ. ಧನ್ಯವಾದಗಳು. ನೀವು ನನ್ನ ಬ್ಲಾಗ್ ಗೆ ಬ೦ದು ಬಹಳ ದಿನಗಳಾದವು. ಒಮ್ಮೆ ಭೇಟಿ ನೀಡಿ.

Kirti said...

padagalu tumba chennagive manassinalli padagala sanchan madhuravaagiye ishtavaayitu manassin padagal kavan ...

ಮನಸು said...

ellarigu dhanyavadagaLu........

Kirti said...

manasu nimm email addres send maadi