ಮೊನ್ನೆ ಕಚೇರಿಗೆ ತಡವಾಗಿತ್ತು. ರಕ್ತ ಪರೀಕ್ಷೆಗೆ ಹೋಗಿದ್ದೆ ಅದಕ್ಕೆ ತಡವಾಯ್ತು ಎಂದು ನನ್ನ ಮೇಲಧಿಕಾರಿಗಳಿಗೆ ಕಾರಣ ಹೇಳುತ್ತಿದ್ದಂತೆ... ಏನು ಈಗ ರಕ್ತ ಪರೀಕ್ಷೆ ಎಂದರು, ಸಕ್ಕರೆ ಖಾಯಿಲೆಯಿದೆಯೇ ಇಲ್ಲವೇ ಎಂದು ಪರೀಕ್ಷಿಸಲು ಹೋಗಿದ್ದೆ ಎಂದೇಳುತ್ತಲಿದ್ದಂತೆ ... ರಿಪೋರ್ಟ್ ಬಂತಾ..!!? ಹಾ ಬಂದಿದೆ ಏನು ಹಾಗಿದ್ದರೆ ಸಕ್ಕರೆಯೋ, ಉಪ್ಪೋ (sugar or salt) ಎಂದು ಗೇಲಿ ಮಾಡಿದ್ದಕ್ಕೆ ಎರಡೂ ಇಲ್ಲ ಸರ್... ಎಂದೇಳಿದೆ... ಡಾಕ್ಟರ್ ಹತ್ತಿರ ಗಲಾಟೆ ಮಾಡಿಲ್ಲ ತಾನೇ ಎಂದರು..!!?? ನಾನು ಏಕೆ ಗಲಾಟೆ ಮಾಡಲಿ ಸದ್ಯ ಯಾವ ರೋಗವಿಲ್ಲದೆ ಆರಾಮಾಗಿ ಇದ್ದೀನಲ್ಲ ಎಂದು ಖುಷಿ ಪಡಬೇಕು ಸದ್ಯಕ್ಕೆ ಅವರ ಮೇಲೆ ಏಕೆ ಗಲಾಟೆ ಮಾಡಬೇಕು ಎಂದುಕೊಳ್ಳುತ್ತಲಿದ್ದೆ....
ನಂತರ ನನ್ನ ಬಾಸ್ ಒಂದು ಪ್ರಸಂಗವನ್ನು ನನಗೆ ಹೇಳಿದರು ಪ್ರತಿಷ್ಠಿತ (ದುಬಾರಿ) ಆಸ್ಪತ್ರೆಗೆ ಒಬ್ಬ ತನ್ನ ಖಾಯಿಲೆ ಪರೀಕ್ಷೆ ಮಾಡಿಸಲು ಹೋಗಿದ್ದನಂತೆ, ಡಾಕ್ಟರ್... ನಿನಗೆ ರಕ್ತ ಪರೀಕ್ಷೆಗಳಲ್ಲಿ ಹಲವು ವಿಧಗಳಿವೆ ಅವೆಲ್ಲವನ್ನು ಒಮ್ಮೆ ಮಾಡಿಸಿ. ನಂತರ ಏನು ತೊಂದರೆ ಇದೆ ಎಂದು ತಿಳಿದು ಅದಕ್ಕೆ ತಕ್ಕಂತೆ ಔಷಧೋಪಚಾರ ಮಾಡೋಣ ಎಂದಿದ್ದಾರೆ. ಸರಿ ಎಂದು ಅಂದು ಲ್ಯಾಬ್ ನಲ್ಲಿ ರಕ್ತವನ್ನು ಕೊಟ್ಟು ಹೋಗಿದ್ದಾನೆ.
ಲ್ಯಾಬ್ ನವರು ಮರುದಿನ ಬರಲು ಹೇಳಿದ್ದರಿಂದ ಮಾರನೇ ದಿನ ಬಂದು ಕೌಂಟರ್ ನಲ್ಲಿ ತನ್ನ ಲ್ಯಾಬ್ ರಿಪೋರ್ಟ್ ತೆಗೆದುಕೊಂಡು ಅಲ್ಲೇ ಇದ್ದ ಒಬ್ಬರನ್ನು ವಿಚಾರಿಸಿ ಸರ್, ನನ್ನ ರಕ್ತ ಪರೀಕ್ಷೆ ಮಾಡಿದ್ದೀರಲ್ಲ ಏನಾದರು ತೊಂದರೆ ಇದೆಯೇ ನನಗೆ, ಯಾವುದಾದ್ರು ಖಾಯಿಲೆಗಳ ಸೂಚನೆ ಇದೆಯೆ ಎಂದು ಕೇಳಿದ್ದಾನೆ....
ರಿಪೋರ್ಟ್ ನೋಡುತ್ತ ಲ್ಯಾಬ್ನವರು ಸರ್ ನಿಮಗೆ ಯಾವುದೇ ತೊಂದರೆ ಇಲ್ಲ... ಎಲ್ಲಾ ನಾರ್ಮಲ್ ಆಗಿದೆ ಹೋಗಿ ಡಾಕ್ಟರಿಗೆ ಒಮ್ಮೆ ತೋರಿಸಿ ಎಂದೇಳುತ್ತಿದ್ದಂತೆ... ರಪ್ಪನೆ ರಿಪೋರ್ಟ್ ನೋಡುತ್ತಿದ್ದವನ ಕೈಯಿಂದ ಪೇಪರ್ ಗಳನ್ನೆಲ್ಲ ಕಿತ್ತುಕೊಂಡು ರಪರಪ ಎಂದು ಅತಿ ವೇಗವಾಗಿ ಓಡುತ್ತಲಿದ್ದವನನ್ನು ಕಂಡ ಲ್ಯಾಬ್ ನವರು ಓಹೋ ಬಹಳ ಖುಷಿಯಾಗಿರಬೇಕು ಎಂದು ಮಾತನಾಡಿಕೊಳ್ಳುತ್ತಲಿದ್ದರಂತೆ.... ಆದರೆ ಕೋಪದಲ್ಲಿ ಹೋಗುತ್ತಲಿದ್ದವನ ಮುಖಭಾವ ಅವರ್ಯಾರಿಗೂ ಕಂಡಿರಲಿಲ್ಲ.
ಕೋಪದಲ್ಲಿ ಹೋಗುತ್ತಲಿದ್ದವ ೫ನೇ ಮಹಡಿಯಲ್ಲಿದ್ದ ಡಾಕ್ಟರ್ ನ್ನು ನೋಡಲು ಲಿಫ್ಟ್ ಬಳಸದೆ ಮೆಟ್ಟಲುಗಳನ್ನೇ ಹತ್ತಿ ಹೋದ...... ಅಲ್ಲಿ ಡಾಕ್ಟರ್ ತಮ್ಮ ರೂಮಿನಲ್ಲಿ ರೋಗಿಗಳ ಪರೀಕ್ಷೆ ನೆಡೆಸುತ್ತಲಿದ್ದರು, ಆದರು ಈತ ರಭಸದಿ ಒಳಹೊಕ್ಕು ..... ಡಾಕ್ಟರ್...!!(ಚೀರುತ್ತಾ) ನಿಮಗೆ ಗೊತ್ತ "ನಾನು ರಕ್ತ ಪರೀಕ್ಷೆಗೆ ೧೦೦ ಕೆ.ಡಿ (ಸುಮಾರು ೧೫,೦೦೦ ರೂ) ಖರ್ಚು ಮಾಡಿದ್ದೀನಿ ಆದರೆ ನನಗೆ ಏನೂ ಖಾಯಿಲೆಯೇ ಇಲ್ಲ..!!!"
ಡಾಕ್ಟರ್ ಅವನನ್ನೇ ನೋಡುತ್ತಾ... ಅವಕ್ಕಾದರು ಅಯ್ಯೊ ಕರ್ಮವೇ ಇದಕ್ಕೆ ಖುಷಿ ಪಡಪ್ಪಾ... ನಿನಗೆ ಏನು ಖಾಯಿಲೆ ಇಲ್ಲವಲ್ಲ ಸದ್ಯ, ಆರೋಗ್ಯವಾಗಿದ್ದೀಯಾ..!!!
ಅದು ಹೇಗೆ ನಾನು ಇಷ್ಟೆಲ್ಲಾ ಖರ್ಚುಮಾಡಿದ್ದೀನಿ...!!???? ಎಂದು ಜೋರು ಗಿರುಚುತ್ತಲಿದ್ದನಂತೆ...
ಪಾಪ ಡಾಕ್ಟರ್ ತಲೆಕೆಡೆಸಿಕೊಂಡಿರ ಬೇಕು...
ಕಾಸು ಕೊಟ್ಟರೆ ಖಾಯಿಲೆ ಇರಲೇಬೇಕು ಎಂದುಕೊಂಡಿರಬೇಕು ಈತ ಹಹಹ...!!!
17 comments:
ಒಳ್ಳೆ ಮನುಷ್ಯ ಕಣ್ರೀ....
ಹ್ಹಾ... ಹ್ಹಾ... ಹ್ಹಾ.. !!
ಹಳ್ಳಿಯಿಂದ ನನ್ನ ಗೆಳೆಯರೊಬ್ಬರು ಬಂದಿದ್ದರು..
ಅವರಿಗೆ ಪಿವಿಆರ್ ಮಾಲ್ ತೋರಿಸೋಣ ಅಂತ ಸಿನೇಮಾಕ್ಕೆ ಹೋಗಿದ್ದೆವು...
ಒಂದುಟಿಕೆಟ್ಟಿನ ಬೆಲೆ ೧೮೦..
ಆತ ಟಿಕೆಟ್ ಕೊಟ್ಟ..
ಅದನ್ನು ನೋಡಿ ನನ್ನ ಗೆಳೆಯ
" ಮಾರಾಯಾ...
ಕೆಳಗಡೆ ಪಾರ್ಕಿಂಗ್ ಹುಡುಗನೇ ವಾಸಿ ಕಣೊ...
ಅಲ್ಲಿ ಇಪ್ಪತ್ತು ರೂಪಾಯಿಗೆ ಗಟ್ಟಿಯಾದ, ಚಂದದ ಕಾಸ್ಟ್ಲೀ ಟಿಕೆಟ್ ಕೊಡ್ತಾನೆ..
ಇಲ್ಲಿ ೧೮೦ ಕೊಟ್ರು ರದ್ದಿ ಪೇಪರ್ ಟಿಕೆಟ್ಟು... ಥೂ..
ಇಷ್ಟು ದೊಡ್ಡ ಜನ
ಇಷ್ಟು ಸಣ್ಣ ಟಿಕೆಟ್ಟು.. ಛೇ..."
ನಾವೆಲ್ಲ ಹೊಟ್ಟೆ ತುಂಬಾ ನಕ್ಕಿದ್ದೋ ನಕ್ಕಿದು..
ಪಾಪ! ಫಾಲತೂ ಖರ್ಚಾಯಿತಲ್ಲ!
che, sumne karchaayitalla ahhahahah
ಯಾವುದಾದರು ಕಾಯಿಲೆ ಇದ್ದಿದ್ದರೂ ಕೂಡ ಆ ಮನುಷ್ಯ ಬೇಸರದಿಂದ ಹೋಗುತ್ತಿದ್ದ
ಹಹ ಪ್ರಕಾಶಣ್ಣ ಚೆನ್ನಗಿದೆ ನಿಮ್ಮ ಗೆಳೆಯನ ಕಥೆ... ಈ ಮನುಷ್ಯ ಪಾಪ ತುಂಬಾ ಖರ್ಚಾಗಿತ್ತಲ್ಲ ಆ ಬೇಸರಕ್ಕೆ ಹೀಗೆ ಮಾತಡಿರಬೇಕು...
ಸುನಾಥ್ ಕಾಕ
ರೋಗ ಇಲ್ಲದ ಮೇಲೆ ಯಾಕೆ ಸುಮ್ಮನೆ ಖರ್ಚು ಮಾಡಿದೆ ಅಂತ ಬೇಜಾರಗಿರ್ಬೇಕು ಆತ ರಾತ್ರಿ ಎಲ್ಲ ನಿದ್ರೆ ಮಾಡಿದನೋ ಇಲ್ಲವೋ ಗೊತ್ತಿಲ್ಲ ಹಹ..
ಗುರು,
ಹೌದು, ಕಾಯಿಲೆ ಇದ್ದು ಖರ್ಚು ಮಾಡಿದ್ದರೆ. ಸದ್ಯ ಈ ರೀತಿ ಪರೀಕ್ಷೆ ಮಾಡಿದ್ದಕ್ಕಾದರೂ ಕಾಯಿಲೆ ಗೊತ್ತಾಯಿತು ಇನ್ನೂ ಮೇಲಾದರೂ ಎಚ್ಚರವಾಗಿರಬಹುದು ಎಂದುಕೊಳ್ಳುತ್ತಿದ್ದ ಈಗ ಯಾವುದೂ ಇಲ್ಲ ಅವನಿಗೆ ಬೇಜಾರಾಗಿ ಡಾಕ್ಟರ್ ಹತ್ತಿರ ಚೀರಾಡಿದ್ದಾನೆ ಹಹ
ಗಿರೀಶ್,
ನಿಜ ಕಾಯಿಲೆ ಇದ್ದಿದ್ದರೆ ಖಂಡಿತಾ ಚೀರುತ್ತಿರಲಿಲ್ಲ ಆ ಕಾಯಿಲೆಗೆ ಪರಿಹಾರ ಕೇಳುತ್ತಲಿದ್ದ ಅಷ್ಟೆ
ವಿಚಿತ್ರ ಸ್ವಭಾವದ ಮನುಷ್ಯರು ಇದ್ದಾರೆ..!
ಅನ೦ತ್
ಸುಗುಣಕ್ಕ,
ಸುಮ್ಮನೇ ಹಣ ಖರ್ಚಾಯಿತಲ್ಲ ಎನ್ನುವ ಚಿಂತೆ ಆವನಿಗೆ. ಹಣ ಖರ್ಚಾದ ಮೇಲೆ ಅವನ ಚಿಂತೆ ಜಾಸ್ತಿಯಾಗಿ ಮತ್ತೆ ಬಿ.ಪಿ ಬಂದಿರಬಹುದೇ?
ಅನಂತರಾಜ್ ಸರ್,
ಇರುತ್ತಾರೆ ಇದಕ್ಕಿಂತಲೂ ವಿಚಿತ್ರವಾಗಿರುತ್ತಾರೆ.
ಶಿವು,
ಖಂಡಿತಾ ಚಿಂತೆ ಇದ್ದೇ ಇರುತ್ತೆ ಖಾಯಿಲೆ ಏನೂ ಇಲ್ಲ ಇಲ್ಲ.... ಎಂದೇ ಖಾಯಿಲೆ ತರಿಸಿಕೊಂಡಿರುತ್ತಾನೆ ಹಹಹ
:D :D oLLe kate aa manushyandu!
ಹಹಹ ನೋಡಿ.. ಹೇಗೆ ಅಂತಾ.. ಜನ ಸಂತೋಷ ಪಡೋ ವಿಷಯಕ್ಕೆ ಸಂಕಟ ಪಡ್ತಾರೆ.
ha ha ha...chennagide........
jokes hididubittiddiraa...
ಇಂಥವರೂ ಇರ್ತಾರಾ!!
Post a Comment