Tuesday, April 19, 2011

-ಸಾಲುಗಳು-


-
-
ಮಧ್ಯರಾತ್ರಿ ಸಾಕು ನಾಯಿ
ಗೂಳಿಡುತ್ತ ಅಳುತ್ತಿತ್ತು..

ಎಲ್ಲಿಂದಲೋ ಸಾವಿನ ಸೂತಕ ಛಾಯೆ
ಬರುವುದೆಂದು ಮನೆಯೇ ಆತಂಕದಲ್ಲಿತ್ತು....

ಸಾವಿನ ಸೂತಕ ಎಲ್ಲಿಂದಲೋ ಅಲ್ಲ
ಮನೆಯದೇ ಎಂದು ಅರಿವಾದಾಗ
ರಾತ್ರಿ ನೆಡೆದ ಮಗಳ ಪ್ರೇಮ ವಿವಾಹದ
ಘರ್ಷಣೆಗಳು ಎಲ್ಲರ ಕಣ್ಣ ಮುಂದೆ ಬಂದಿತ್ತು......
--------

--
ಅವಳು
ಭೋಳು ಮರ
ಎಂದು
ಬಳಿದರು ಬಿಳಿ ಬಣ್ಣ...

---------

-೩-
ಮಾರ್ಜಾಲ ಹೆದ್ದಾರಿಯಲಿ
ಯಾರ ಭಯವಿಲ್ಲದೆ ಮಲಗಿತ್ತು
ಕಾರಣ
ನಾಲ್ಕು ಚಕ್ರದ ವಾಹನ
ಅವನನ್ನ ಗಾಢನಿದ್ರೆಗೆ ತಳ್ಳಿತ್ತು....
--------

-
-
ಕಡಲಿನಂತಾ
ಆಸೆಗಳು
ಸುನಾಮಿ ಅಲೆಗಳಿಗೆ
ಕಾರಣ
-------
-೫-

ಮೋಸಗೈದ ಹೆಜ್ಜೆಗಳು
ಕಡಲ ಅಬ್ಬರಕೆ ಮಾಸಿದೆ...
ಆದರೆ
ನೆನಪುಗಳು ಮಾತ್ರ ಹಾಗೆ ಉಳಿದಿದೆ...



ಚಿತ್ರ: ಅಂತರ್ಜಾಲ

35 comments:

ದಿನಕರ ಮೊಗೇರ said...

eraDane chuTuku... super...

ishTa aaytu...

ಮನಸು said...

ಧನ್ಯವಾದಗಳು ದಿನಕರ್,
ನಿಜ ಅಲ್ಲವೇ ಜನ ಏನೆಲ್ಲಾ ಬದಲಾವಣೆ ಮಾಡ್ತಾರೆ...

shridhar said...

like it .. nice lines ..

ಮನಸು said...

ಧನ್ಯವಾದಗಳು ಶ್ರೀಧರ್.. ಹೀಗೆ ಬರುತ್ತಲಿರಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಲಿರಿ

ತೇಜಸ್ವಿನಿ ಹೆಗಡೆ said...

ಅವಳು
ಭೋಳು ಮರ
ಎಂದು
ಬಳಿದರು ಬಿಳಿ ಬಣ್ಣ...

--- Liked it very much.. nice lines Madam :)

ತೇಜಸ್ವಿನಿ ಹೆಗಡೆ said...

ಸುಗುಣಕ್ಕ...

ಇದೇ ಸಾಲಿಗೆ ನಂದೂ ಒಂದು ಸಾಲು ಸೇರಿಸ್ತಾ ಇದ್ದೀನಿ...

ಅವಳು
ಭೋಳು ಮರ
ಎಂದು
ಬಳಿದರು ಬಿಳಿ ಬಣ್ಣ...
ಬಿಳಿ ಬಣ್ಣದೊಳಗೇ ಏಳು ಬಣ್ಣಗಳಿವೆ
ಅನ್ನುವುದನ್ನು ಮರೆತರು!

ಮನಸು said...

ತೇಜು
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಮತ್ತೆರಡು ಸಾಲುಗಳು ನಿಜಕ್ಕೊ ಚೆನ್ನಾಗಿದೆ. ಸತ್ಯ ಸಂಗತಿ ಅರಿಯದೇ ಹೋಗಿದ್ದಾರೆ ಜನ... ಹೆಣ್ಣಿಗೆ ಅಲಂಕಾರ ಮದುವೆಗೆ ಮುಂಚಿಂದಲೂ ಬಂದಿದೆ ಆದರೆ ಗಂಡ ಇಲ್ಲವಾದರೆ ಏನೂ ಇಲ್ಲ ಅಲಂಕಾರ ಮಾಡಿಕೊಳ್ಳಬಾರದು ಎಂದು ಗೆರೆ ಎಳೆದುಬಿಡುತ್ತಾರೆ.... ಈಗಲೂ ಎಷ್ಟೋ ಕಡೆ ಬಿಳಿ ಸೀರೆ ತೊಡಿಸುವ ಸಂಪ್ರದಾಯ ನೆಡೆಸುಕೊಂಡೇ ಬಂದಿದ್ದಾರೆ....

ಬಿಳಿ ಬಣ್ಣದೊಳಗೆ ಏಳು ಬಣ್ಣ ಇದೆ
ಎನ್ನುವುದು ಮರೆತರೋ ಅಥವಾ ಮರೆತಂತೆ
ನಾಟಕವಾಡುತ್ತಾರೋ ತಿಳಿಯದು ಅಲ್ಲವೇ..???

sunaath said...

ಮನಸು,
ತುಂಬ ಅರ್ಥಪೂರ್ಣ ಚುಟುಕುಗಳನ್ನು ಬರೆದಿರುವಿರಿ. ಅಭಿನಂದನೆಗಳು.

ವಾಣಿಶ್ರೀ ಭಟ್ said...

artha poorna saalugalu...tumbane chennagide

ಚುಕ್ಕಿಚಿತ್ತಾರ said...

manamuttuva saalugalu..

ಜಲನಯನ said...
This comment has been removed by the author.
ಜಲನಯನ said...

ಸುಗುಣ ...ಏನು !! ?? ಏನೇನೂ....???
ಜಾಲದಿಂದ ಮಾರ್ಜಾಲದವರೆಗೆ...
ಬೋಳುಬರದಿಂದ
ಕಾಮನಬಿಲ್ಲಿನ ಬಣ್ಣದೆಡೆಗೆ
ಚುಟುಕು ಚುಟುಕೇ ಗುಟುಕು
ಸುಂದರ ಆದರೂ ಸಾಲು ಮೊಟಕು...ಹಹಹಹಹ ಚನ್ನಾಗಿವೆ..ಇಲ್ಲಿ ನನ್ನದೂ ಒಂದು ..ನಿಮ್ಮ ಚುಟುಕಿನ ಸಂಗದಲಿ.....

ಮೋಸಗೈದ ಕಡಲಬ್ಬರದಲೆಗಳು
ಮಾಸಿವೆ ಆದರೆ
ಹೆಜ್ಜೆ ನೆನಪುಗಳು ಮಾತ್ರ
ಹಾಗೇ ಉಳಿದಿವೆ...

ಮನಸು said...

ಸುನಾಥ್ ಕಾಕ,
ತುಂಬಾ ಧನ್ಯವಾದಗಳು. ನಿಮ್ಮ ಮೆಚ್ಚುಗೆ ಮತ್ತಷ್ಟು ಹುಮ್ಮಸ್ಸು ನೀಡುತ್ತದೆ... ಮತ್ತಷ್ಟು ಬರೆಯಲು ಪ್ರೋತ್ಸಾಹಿಸುತ್ತದೆ.

ವಾಣಿಶ್ರೀ
ಥ್ಯಾಂಕ್ಯೂ ನಿಮ್ಮ ಮೆಚ್ಚುಗೆಗೆ ಸದಾ ಅಭಾರಿ...

ಮನಸು said...

ಚುಕ್ಕಿಚಿತ್ತಾರ
ಧನ್ಯವಾದಗಳು ...

ಅಜಾದ್ ಸರ್,
ನೀವು ಬರೆದ ಸಾಲುಗಳು ಸುಂದರವಾಗಿವೆ... ಧನ್ಯವಾದಗಳು ನಿಮ್ಮ ಪ್ರೋತ್ಸಾಹದ ನುಡಿಗಳಿಗೆ

ಮನಸಿನಮನೆಯವನು said...

Avakaashavittare bolumara chigurabahudallave..

Illi mara taanage bolaaguva munna samaajave bolaagiside allave...

ಮನಸಿನಮನೆಯವನು said...

Avakaashavittare bolumara chigurabahudallave..

Illi mara taanage bolaaguva munna samaajave bolaagiside allave...

Kirti said...

chutuku chutukinallu
bantu saduu gutuku gutuku
chikka chitukinalu
artha thalaku balaku..

Digwas Bellemane said...

liked

shivu.k said...

ಸುಗುಣಕ್ಕ,
ನಿಜಕ್ಕೂ ತುಂಬಾ ಅರ್ಥಗರ್ಭಿತ ಸಾಲುಗಳು. ಎಲ್ಲಾ ಪದ್ಯಗಳು ತುಂಬಾ ಚೆನ್ನಾಗಿದ್ದು ಮನಸ್ಸಿನಲ್ಲಿ ಉಳಿಯುತ್ತವೆ..

ಮನಸು said...

ವಿಚಲಿತ,
ನೀವು ಹೇಳಿರುವ ಮಾತು ನಿಜ... ಅವಕಾಶ ಕೊಡುವುದೇ ಇಲ್ಲ ನಮ್ಮ ಜನ... ಸಮಾಜದ ಜನರು ಪಾತ್ರಧಾರಿಗಳು ಮರ ಭೋಳಾಗಲು... ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ

ಮನಸು said...

ಕೀರ್ತಿ,
ಧನ್ಯವಾದಗಳು ಚುಟುಕಿನ ಮೂಲಕವೇ ನಿಮ್ಮ ಅನಿಸಿಕೆ ತಿಳಿಸಿದ್ದೀರಿ...

ದಿಗ್ವಾಸ್,
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ

ಮನಸು said...

ಶಿವು,
ಒಳಾರ್ಥವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು

ಮೌನರಾಗ said...

ಎಲ್ಲವೂ ಅರ್ಥಪೂರ್ಣವಾಗಿದೆ..ಅಭಿನಂದನೆಗಳು..

ಗಿರೀಶ್.ಎಸ್ said...

ನೆನಪುಗಳು ಮಾತ್ರ ಹಾಗೆ ಮನದಾಳದಲ್ಲಿ ಉಳಿದಿದೆ...
ಕಣ್ಣಂಚಲ್ಲಿ ಹೆಜ್ಜೆ ಗುರುತು ಸದಾ ಕಾಣುತ್ತಿದೆ.

ವನಿತಾ / Vanitha said...

Sooper saalugalu.2nd photo n its lines..still haunting!!

Pradeep Rao said...

ಚೆಂದದ ಕವನಗಳು... ತುಂಬಾ ಚೆನ್ನಾಗಿದೆ ಮನಸ್ಸುರವರೇ..

ಮನಸು said...

ಮೌನರಾಗ,
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ...

ಗಿರೀಶ್,
ನೆನಪು ಅನ್ನೋದೆ ಹಾಗೆ ಎಲ್ಲೂ ಇರದೇ ಕಾಡುತ್ತೆ...

ಮನಸು said...

ವನಿತ
ಥಾಂಕ್ಯೂ... ಹಾಗೆ ಮನಸಲ್ಲಿ ಉಳಿಯುತ್ತೆ ಬಿಳಿ ಬಣ್ಣ ಬಳಿಸಿಕೊಂಡವರಿಗೂ ಅಲ್ಲವೇ

ಪ್ರದೀಪ್
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ

prabhamani nagaraja said...

ಸುಗುಣ ಮೇಡ೦,
'ಸಾಲುಗಳು' ಬಹಳ ಉತ್ತಮವಾಗಿವೆ. ಅಭಿನ೦ದನೆಗಳು. ಮಾರ್ಜಾಲದ ಸ್ಥಿತಿ ನೋಡಿ ಬೇಸರವಾಯಿತು.

ಸುಧೇಶ್ ಶೆಟ್ಟಿ said...

Different aagi baredideera.. ishta aayitu :)

blog looks change maadideera.. ondu sala nimma blog haudo allavo antha doubt aaytu :)

ಮನಸು said...

ಪ್ರಭಾಮಣಿ,
ಧನ್ಯವಾದಗಳು... ಮಾರ್ಜಾಲ ಎಷ್ಟೋಂದು ರಸ್ತೆಯಲ್ಲಿ ಹೀಗೆ ಹಾಗಿರುತ್ತೆ ಅದನ್ನು ಕಂಡಾಗ ನಿಜ ಬೇಸರವಾಗಿತ್ತು....

ಸುಧೇಶ್,
ಹಹಹ ಯಾರೋ ಹೊಸ ಬ್ಲಾಗಿ ಎಂದಿಕೊಂಡಿರಾ.... ಯಾವಾಗಲೂ ಅದೇ ಬ್ಲಾಗ್ ಅದೇ ಟೆಂಪ್ಲೆಟ್ ನೋಡಿ ನೋಡಿ ಬೇಜಾರಾಗಿರುತ್ತೆ ಅಂತ ಬದಲಿಸಿದೆ. ಅಲ್ಲದೆ ಜನ ಚೇಂಛ್ ಕೇಳ್ತರೇ ಅಲ್ವಾ ಹಹಹ...
ಧನ್ಯಾವಾದಗಳು ಸುಧೇಶ್ ವಿಭಿನ್ನ ಶೈಲಿಯಲ್ಲಿ ಪ್ರಯತ್ನ ಮಾಡುವ ಎಂದು ಪ್ರಯತ್ನಿಸಿದೆ ಇಂತಹ ಸಾಲುಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಯೂ

ಸೀತಾರಾಮ. ಕೆ. / SITARAM.K said...

blog beauty parlour ge hogi banda haagide.

ಮನಸು said...

hahaha sir.... parlour ge hogi bandaddu gottagoyta hahaha

Anonymous said...

sakhattaagide saalugalu.. naija jeevanada pratibimbagalu!!

ಮನಸು said...

thank you sumana