ಎತ್ತ ನೋಡು ಗಿಜಿಗುಡುವ ಜನಜಂಗುಳಿ
ಮುಕ್ತ ಮಾತುಕತೆಗೆಲ್ಲಿ ನಿಶಬ್ಧದೋಕುಳಿ
ಅದಕೆ ಹುಡುಕಿ ಕರದೆ ಪ್ರೇಮ ಸೌಧಕೆ
ಮೌನ ಮುರಿದು ಮಾತಿಗಿಳಿ ನನ್ನ ಕನ್ನಿಕೆ......
ಸ್ವರ್ಗ ದೇಗುಲ ಇರುವುದು ನಾವಿರುವಲ್ಲೆ
ಇದ್ದ ಸ್ಥಳಕೆ ಪುಷ್ಠಿ ನೀಡಿ ಸಹಕರಿಸು ನಲ್ಲೆ
ಯಾವ ಗಾಜುಗೋಜಿಲ್ಲ ಯಾರ ಭಯವಿಲ್ಲ
ಸುರಿಸುಬಿಡು ಮನದಲಿದ್ದ ಬಿಗುಡವೆಲ್ಲ ........
ಜನನಿಬಿಡ ಸ್ಥಳಕೆ ಇಟ್ಟ ಹೆಜ್ಜೆ
ಮೌನವಿಸಿದ ನಿನ್ನ ಮನದ ಗೆಜ್ಜೆ
ಎಲ್ಲ ವಿರುದ್ಧ ಪಥದಲಿ ಸಾಗಿದೆ
ದಿಕ್ಕು ಬದಲಿಸಿ ಚರ್ಚಿಸು ಇಂದೇ..!!!
ಮುಳುಗೋ ಸೂರ್ಯ ತಿರುಗಿದ ಕೆಂಪಿಗೆ
ಮುನಿಸು ನಿಂತು ದೂರವಾಗಲಿ ಇಂದಿಗೆ
ಕದನವಿಲ್ಲದ ಜೀವನ ತಿಳಿದಿದೆಯ ನಿನಗೆ
ಎಲ್ಲ ಮರೆತು ನಗುತಲಿರು ಬರುವ ನಾಳೆಗಳಿಗೆ............
ದಿಗ್ವಾಸ್ ಚಿತ್ರಕ್ಕೆ ಕವನ...
17 comments:
chandada salugalu.
Koneya saalugalu super..
ದಿಗ್ವಾಸ್,
ನಿಮ್ಮ ಫೋಟೋಗಳು ನಮಗೆ ಸ್ಪೂರ್ತಿ... ಧನ್ಯವಾದಗಳು ನಿಮಗೆ...
ವಿದ್ಯಾ,
ಧನ್ಯವಾದಗಳು
ವಿಚಲಿತ,
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ
tumba sogasaagive salugalu..
Thumba chennaagidhe kavana :) manadha bigudavella... idara arthavenu?
thank you kirti
manish dhanyavadagaLu... heege baruttaliri
ದಿಗ್ವಾಸ್ರವರ ಅದ್ಭುತ ಚಿತ್ರಕ್ಕೆ.. ನಿಮ್ಮ ಅದ್ಭುತವಾದ ಭಾವನಾತ್ಮಕ ಸಾಲುಗಳು... Super aagide Madam..
nice poetry..
ಮನ ದುಗುಡತುಂಬಿರುವಾಗ ಎಲ್ಲವನೂ ತಿಳಿಗೊಳಿಸೋ ಮೌನ ...ಮತ್ತೆ ದುಗುಡ ದುಮ್ಮಾನಕೆ ದಾರಿಯಾಗಬಾರದು...ಚಿತ್ರಕ್ಕೆ ಇಂಬುಕೊಡೋ ಸಾಲುಗಳು...
ಅದರಲ್ಲೂ ಕಡೆಯ ನಾಲ್ಕು ಪಂಕ್ತಿ ...
ಮುಳುಗೋ ಸೂರ್ಯ ತಿರುಗಿದ ಕೆಂಪಿಗೆ
ಮುನಿಸು ನಿಂತು ದೂರವಾಗಲಿ ಇಂದಿಗೆ
ಕದನವಿಲ್ಲದ ಜೀವನ ತಿಳಿದಿದೆಯ ನಿನಗೆ
ಎಲ್ಲ ಮರೆತು ನಗುತಲಿರು ಬರುವ ನಾಳೆಗಳಿಗೆ............
ಚನ್ನಾಗಿದೆ ಕವನ ಸುಗುಣ.......
ಚೆನ್ನಾಗಿದೆ ಮೇಡಂ :-)
ಸುಗುಣಕ್ಕ,
ನೀವು ಕೂಡ ಚಿತ್ರ ನೋಡಿ ಕವನ ಬರೆಯಲು ಪ್ರಾರಂಭಿಸಿದ್ರಾ...ಸೂಪರ್ ಫೋಟೊಗೆ ಸೂಪರ್ ಕವನ...
ಪ್ರದೀಪ್,
ಧನ್ಯವಾದಗಳು ನಿಜ ದಿಗ್ವಾಸ್ ಅವರು ಅದ್ಭುತ ಚಿತ್ರಗಳನ್ನ ನೀಡುತ್ತಲಿದ್ದಾರೆ... ಆ ಅದ್ಭುತತೆಗೆ ನಮ್ಮ ಪುಟ್ಟ ಸಾಲುಗಳು...
ಚುಕ್ಕಿಚಿತ್ತಾರ,
ಧನ್ಯವಾದಗಳು...
ಜಲನಯನ,
ಧನ್ಯವಾದಗಳು... ಬರುವ ನಾಳೆಗೆ ಎಷ್ಟೋ ಕೆಲಸವಿರುತ್ತೆ ಅಲ್ಲವೇ ಸರ್ ಅದಕ್ಕೆ ನಗುನಗುತ್ತ ಇರೋದನ್ನ ಕಲಿತರೆ ಒಳ್ಳೆದು ಅಲ್ಲವೇ..?
ಸುಬ್ರಮಣ್ಯ ಸರ್,
ಧನ್ಯವಾದಗಳು...
ಶಿವು,
ಹಾ!! ಪುಟ್ಟ ಪ್ರಯತ್ನ ಅಷ್ಟೆ ನೀವುಗಳು ತೆಗೆಯೋ ಚಿತ್ರಕ್ಕೆ ಸಾಟಿ ಎಲ್ಲಿ ಹೇಳಿ... ಧನ್ಯವಾದಗಳು
kavanagaLu baruttive thumba :) chennagive :)
Post a Comment