Saturday, April 30, 2011

ಇರುಳ ಕನ್ನಿಕೆ


ಭಾವನೆಗಳ ಬಟ್ಟಲಿನಲಿ ಕನಸ ಕನ್ನಿಕೆ
ಮೌನದೊಡವೆಯ ಕಾವ್ಯದ ಒಡತಿ
ಮಬ್ಬು ಬೆಳಕಲಿ ಕುಳಿತೆ ಏತಕೆ
ಸಂಭ್ರಮಿಸಲು ಬಾ ನಿನ್ನ ಇನಿಯ ತೋಟಕೆ.........

ಇರುಳ ಕಣ್ಣಿಗೆ ಕಾಣದ ಸೌಂದರ್ಯ ಮರೆಸಿ
ಏಕಾಂತ ತೋರುವ ನಿನ್ನ ಧೈರ್ಯ ಸರಿಸಿ
ಕಾಡುವ ಕಡೆತಗಳ ಮುಚ್ಚಿಟ್ಟು ಬೆಳಕಿಗೆ
ಮುಖ ಮಾಡಿ ಸೇರಿಬಿಡು ನಿನ್ನಿಯನ ಮಡಿಲಿಗೆ...

ಹೆಜ್ಜೆಗಳು ನಮ್ಮ ನೆಡೆಗೆ ದಾರಿಯಾಗಿವೆ
ಕಣ್ಣು ಆಸೆ ಬಿಂಬಿಸುವ ಪ್ರತಿಯಾಗಿಹುದು
ಹೀಗೆಲ್ಲಾ ಬೀರುವ ಅಂಗಗಳು ನಮ್ಮಲಿರುವಾಗ
ನೀನೇಕೆ ಬೆರೆತೆ ಈ ಕತ್ತಲ ಜೊತೆಗೆ...

ದಿನ-ರಾತ್ರಿ ಬಂದು ಹೋಗುವವು
ನೆಡೆದ ಘಟನೆಗಳು ಹಾದುಹೋಗುವವು
ಯಾವ ನೆನಪನು ಬಚ್ಚಿಡದೆ ಇನಿಯನೆಡೆ ಬಿಚ್ಚಿಡು
ತನಗೆ ತಾನಾಗೆ ಕವಿದ ಇರುಳು ಬೆಳಕ ಚೆಲ್ಲುವುದು....


ಚಿತ್ರ: ಪ್ರಕಾಶಣ್ಣ

18 comments:

Ittigecement said...

ಮನಸು...

ತುಂಬಾ ಸೊಗಸಾದ ಕವನ..
ಅದೆಷ್ಟು ಬೇಗ ಬರೆದು ಬಿಟ್ಟಿದ್ದೀರಿ...
ವಾಹ್ !!

ಇದೋ ನನ್ನಿಂದಲೂ ಒಂದೆರಡು ಸಾಲುಗಳು...

ಕವಿದ
ಕರಿ
ಕತ್ತಲೆಯಲಿ
ಕಾಡುವ
ದ್ವಂದ್ವ..
ಗೊಂದಲಗಳಲಿ..

ಗೆಳೆಯಾ..

ನೀ..
ನನ್ನೊಳಗಿನ
ಏಕಾಂತದ..
ನನ್ನಿಷ್ಟದ.."ಮೌನ" ನೀನು...

ಮನಸು said...

ವಾಹ್..!! ಕ್ಯಾ ಬಾತ್ ಹೇ ನೀವು ಬರೆದಿರೋ ಎಂತಾ ಸಾಲುಗಳು... ಸೂಪರ್...

ಕವಿದ
ಕರಿ
ಮೋಡದಲಿ
ಗುಡುಗು-ಸಿಡಿಲಿನ
ಮಳೆಯಲಿ

ಗೆಳೆಯಾ
ನೀ...
ಮೊಡದೊಳಗಿನ
ಆಸೆ ಬಿಂಬಿಸುವ
ಶಬ್ಧದೋಕುಳಿಯ
ಮಿಂಚು ನೀನು....

ಸುಧೇಶ್ ಶೆಟ್ಟಿ said...

super photo mattu super kavana :)

nanagoo photo noduttiddare kavana bareyabeku antha anisuttide :)

ಮನಸು said...

ಥ್ಯಾಂಕ್ಯೂ ಸುಧೇಶ್, ಬರಿರಿ... ಪ್ರಯತ್ನಿಸಿ ನಿಮ್ಮ ಭಾವನೆಗಳನ್ನ ಬಿಚ್ಚಿಡಿ...

ದಿನಕರ ಮೊಗೇರ said...

aahaa... pratI anisikeyU kabana....

sogasaada kavana...

shivu.k said...

ಸುಗುಣಕ್ಕ,

ಚಿತ್ರವನ್ನು ನೋಡಿ ಚಂದದ ಕವನವನ್ನು ಬರೆದಿದ್ದೀರಿ..ಇಷ್ಟವಾಯ್ತು..

V.R.BHAT said...

ಚಿತ್ರಕ್ಕೊಂದು ಕವನ,ಪೂರಕವಾಗಿದೆ,ಚೆನ್ನಾಗಿದೆ

sunaath said...

ಮನಸು,
ತುಂಬ ಸೊಗಸಾದ ಪ್ರೇಮಕವನ.

Kirti said...

ತುಂಬಾ ಸೊಗಸಾದ ಕವನ..
ಅಭಿನಂದನೆಗಳು..

ಮನಸು said...

ದಿನಕರ್ ಸರ್,
ಧನ್ಯವಾದಗಳು ಪ್ರಕಾಶಣ್ನ ಹೀಗೆ ಫೋಟೋ ತೆಗಿತಾ ಇದ್ದರೆ ನಮ್ಮಂತವರಿಗೆ ಸ್ಪೂರ್ತಿ ಅಲ್ಲವೇ???

ಮನಸು said...

ಶಿವು,
ನಿಮ್ಮಂದ ಕಲಾತಪಸ್ವಿಗಳು ಇರುವಾಗ ನಮಗೆಲ್ಲ ಒಂದು ಹೊಸ ಹುರುಪು ಹುಟ್ಟುತ್ತದೆ. ಧನ್ಯವಾದಗಳು

ಭಟ್ ಸರ್,
ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು ಸರ್,

ಮನಸು said...

ಸುನಾಥ್ ಕಾಕ
ಪ್ರಕಾಶಣ್ಣ ತೆಗೆದ ಪೋಟೋ ನೋಡಿ ಏನೆಲ್ಲ ಕೆಲಸ ಮಾಡಿಸುತ್ತೆ.... ಧನ್ಯವಾದಗಳು

ಕೀರ್ತಿ
ಧನ್ಯವಾದಗಳು ಕೀರ್ತಿ

Pradeep Rao said...

ಚೆಂದದ ಸಾಲುಗಳು.. ಕೊನೆಯ ಸಾಲುಗಳು ಬಹಳ ಹಿಡಿಸಿತು..

ಅಭಿಮಾನಿ said...

ಬಂದಿನಿ ಚಿತ್ರದ ಸುಂದರ ಸಾಲುಗಳನ್ನು ನೆನೆಪಿಸಿದ್ದಕ್ಕೆ ಧನ್ಯವಾದಗಳು

ಕುಛ್ ಖೋದಿಯಾ ಹೈ ಪಾಯ್ಕೆ
ಕುಛ್ ಪಾಲಿಯಾ ಗವಾಯ್ಕೆ
ಕಹಾಂ ಲೆ ಚಲಾ ಹೈ ಮನವಾ
ಮೋಹೆ ಬಾಂವರಿ ಬನಾಯ್ಕೆ

ಹೋ..ಓ

ಮೋರಾ ಗೋರಾ ಅಂಗ್ ಲೈಲೆ
ಮೋಹೆ ಶಾಮ್ ರಂಗ್ ದೈದೆ
ಛುಪ್ ಜಾವುಂಗಿ ರಾತ್ ಹೀ ಮೆ
ಮೋಹೆ ಪೀ ಕಾ ಸಂಗ ದೈದೆ

ಮನಸು said...

ಪ್ರದೀಪ್...
ತುಂಬಾ ಧನ್ಯವಾದಗಳು...ನಿಮ್ಮ ಅನಿಸಿಕೆಗಳು ಸದಾ ನಮಗೆ ಪ್ರೇರಣೆ...

ಮನಸು said...

ಅಭಿಮಾನಿ...
ಚೆಂದದ ಸಾಲುಗಳು ಈ ಹಾಡು ತುಂಬಾ ಚೆನ್ನಾಗಿದೆ... ಈ ಸಾಲುಗಳನ್ನು ನೆನಪಿಸಿಕೊಂಡದ್ದಕ್ಕೆ ಧನ್ಯವಾದಗಳು... ನಿಮ್ಮ ಅಭಿಮಾನ ಸದಾ ನಮ್ಮೊಂದಿಗಿರಲಿ..

ಸಾಗರದಾಚೆಯ ಇಂಚರ said...

tumbaa sundara saalugalu

tadavaagi bandiddakke kshamisi

ಮನಸು said...

ಧನ್ಯವಾದಗಳು ಗುರು... ತೊಂದರೆಯಿಲ್ಲ ತಡವಾಗಿಯಾದರೂ ಈ ಕವನ ನೀಮ್ಮೂರಿಗೆ ಬಂದಿದೆ ಹಹಹ