Thursday, April 14, 2011

What an Idea Madamji..!!!

ಬೆಳ್ಳಿಗ್ಗೆ ಸುಮಾರು ೮ ಗಂಟೆ ಕಟ್ಟಡ ಕೆಲಸಗಾರಿಕೆ ನೆಡೆಯುವ ಸ್ಥಳ ವೀಕ್ಷೆಣೆಗೆ ಹೋಗಿದ್ದ ನಮ್ಮ ಮೇಲಧಿಕಾರಿ(ಬಾಸ್) ಕಾಲು ಎಳೆದುಕೊಂಡು ಬಂದು ನಿಂತರು. ನಾನು ಏನಾದರು ಏಟಾಗಿದೆಯ ಎಂದು ಆಶ್ಚರ್ಯದಿಂದ ನೋಡ್ತಾ ಇದ್ದೆ... ಅಷ್ಟರಲ್ಲಿ ನಮ್ಮ ಬಾಸ್ ನನಗೆ ಈಗ ಮೀಟಿಂಗ್ ಇದೆ.. (ಅದಕ್ಕೆ ನಾನೇನು ಮಾಡಲಿ!! ಎಂದುಕೊಂಡೆ ಮನಸಿನಲ್ಲಿ ಅವರ ಎದುರಲ್ಲ...) ಆದರೆ ನನ್ನ ಶೂ ಕಿತ್ತು ಹೋಯ್ತು, ಈಗ ಸಮಯ ಬೇರೆ ಇಲ್ಲ ಮನೆಗೆ ಹೋಗಿ ಬರಲು... ಜೊತೆಗೆ ಚಪ್ಪಲಿ ಒಲೆಯುವವರೂ ಸಹ ಇಲ್ಲ...(ಕುವೈತಿನಲ್ಲಿ ಹೊಸ ಚಪ್ಪಲಿ ಕೊಳ್ಳಲು ಬೇಜಾನ್ ಅಂಗಡಿಗಳು ಸಿಗುತ್ತವೆಯೋ ಹೊರತು ಚಪ್ಪಲಿ ಹೊಲೆಯುವವರು ಯಾರೂ ಸಿಗೋಲ್ಲ) ಏನು ಮಾಡೋದು ಗೊತ್ತಾಗುತ್ತಿಲ್ಲ..,, ಏನಾದರು ಐಡಿಯಾ!! ಇದೆಯಾ ಎಂದರು...

ಐಡಿಯಾ ಕೇಳಿದ್ದೆ ತಡ..!!! ಅಲ್ಲೇ ಪಕ್ಕದಲ್ಲಿದ್ದ ಹೆವಿ ಡ್ಯೂಟಿ ಸ್ಟೇಪಲ್ ತೆಗೆದುಕೊಟ್ಟೆ... ಏಕೆ ಏನಾಯ್ತು ಇದನ್ನ ಕೊಡ್ತಾ ಇದ್ದೀಯಾ ಅಂದರು... ಸರ್ ಇದನ್ನು ತಗೊಂಡು ಪಿನ್ ಮಾಡಿಕೊಳ್ಳಿ ಸದ್ಯಕ್ಕೆ ಆಮೇಲೆ ಬೇಕಾದರೆ ಹೊಸ ಶೂ ತೆಗೆದುಕೊಳ್ಳುವಿರಂತೆ ಎಂದೆ..!!!

ತಕ್ಷಣ ಅವಕ್ಕಾದ ಬಾಸ್..!! ನಗುತ್ತಾ ಎಂತಾ ಮಹಾನ್ ತಲೆ ನಿನ್ನದು ಇದು ಎಲ್ಲ ವರ್ಕ್ ಆಗೋಲ್ಲ ಎಂದರು... ಸುಮ್ಮನೆ ಒಮ್ಮೆ ಪ್ರಯತ್ನ ಪಟ್ಟುನೋಡಿ ಆಮೇಲೆ ಮಾತನಾಡಿ ಎಂದೆ... ಸರಿ ಎಂದು ಅವರ ರೂಮಿಗೆ ಸ್ಟೇಪ್ಲರ್ ತೆಗೆದುಕೊಂಡು ಹೋದವರು... ೫ ನಿಮಿಷದಲ್ಲೇ ಜಟ್-ಪಟ್ ಎಂದು ಹೆಜ್ಜೆ ಹಾಕುತ್ತ ಬಂದರು ಮುಖದಲ್ಲಿ ನಗು ಎದ್ದು ಕಾಣುತ್ತಿತ್ತು. ಏನಾಯಿತು ಎಂದು ನೋಡಿದರೆ ತಮ್ಮ ಬೂಟು ಕಾಲಿನ ದರ್ಪದಲ್ಲೇ ಹಾ!! ಈಗ ಶೂ ಸರಿ ಹೋಯ್ತು ಥ್ಯಾಂಕ್ಯು... ಆದರೆ ಈ ಸ್ಟೇಪ್ಲರ್ ಪಿನ್ ಎದ್ದು ಕಾಣುತ್ತಲ್ಲಾ ಅಂದರು...

ಅದಕ್ಕೂ ಐಡಿಯಾ ಇದೆ ಸರ್....

ಏನು

ಶೂ ಪಾಲಿಷ್ ಇದೆಯಲ್ಲ ಅದನ್ನ ಸ್ವಲ್ಪ ಹೆಚ್ಚು ಬಳಿದು ಪಾಲಿಷ್ ಮಾಡಿ... ಆಗ ಕಪ್ಪು ಬಣ್ಣಕ್ಕೆ ತಿರುಗುತ್ತೆ ಎಂದೆ..!!!

ಹೇಗೆ ಹೊಳಿತು ಈ ತರದ ಐಡಿಯಾಗಳು ಎಲ್ಲಾ? ಅಂದರು...

ಅಲ್ಲೇ ಇದ್ದ ಇನ್ನೊಬ್ಬ ಬಾಸ್ ತುಂಬಾ ಐಡಿಯಾ ಇದಾವೆ ಮೊನ್ನೆ ನನ್ನ ಕನ್ನಡಕ ಹೊಡೆದು ಹೋಗಿತ್ತು ಡ್ರೈವ್ ಮಾಡಿಕೊಂಡು ಹೋಗಲು ಕಷ್ಟವಾಗುತ್ತೆ ಏನು ಮಾಡೋದು ಎಂದಾಗ ನನಗೆ ಅಲ್ಲೆ ಇದ್ದ ಸೆಲ್ಲೋ ಟೇಪ್ನಿಂದ ಸರಿಮಾಡಿಕೊಟ್ಟರು ಆದರೆ ಮತ್ತೆ ಅದನ್ನ ರಿಪೇರಿ ಮಾಡಿಸಲು ಹೋಗೇ ಇಲ್ಲ... ಆ ಪುಟ್ಟ ಐಡಿಯದಿಂದ ಇನ್ನೂ ಗಟ್ಟಿಯಾಗಿದೆ ... ಏನು ತೊಂದರೆ ಇಲ್ಲ ........

ಹೌ!!! ಹೌದಾ ಹೇಗೆ ಬಂತು ಈ ತರಹದ ಐಡಿಯಾ ಎಂದರು... ನಮ್ಮ ಊರಲ್ಲಿ ಚಿಕ್ಕ ಮಕ್ಕಳಿಂದಿಡಿದು ಮುದುಕರವರೆಗೂ ಈ ರೀತಿ ಸಮಯಕ್ಕೆ ತಕ್ಕಂತೆ ಐಡಿಯಾ ಮಾಡ್ತನೇ ಇರ್ತಾರೆ ಸರ್ ಎಂದೆ......ಹೌ... ವೆರಿ ಗುಡ್ ಎಂದೇಳಿ ಅದು ಸರಿ!! ಈಗ ನೀ ಕೊಟ್ಟ ಪ್ಲಾನ್ ಹೇಗೆ ??? ಎಂದರು..

ಸರ್.. ನಿಮಗಾದ ಈ ತೊಂದರೆ ನನಗೂ ಆಗಿತ್ತು....ಆಗ ನನ್ನ ಚಪ್ಪಲಿಗೂ ಈ ಸ್ಟೇಪ್ಲರ್ ಪಿನ್ ತೋರಿಸಿದ್ದೆ !!! ಎಂದಿದ್ದೇ ಎಲ್ಲರು ಜೋರು ನಕ್ಕುಬಿಟ್ಟರು ಜೊತೆಗೆ ಥ್ಯಾಂಕ್ಸ್ ಕೂಡ ಸಿಕ್ಕಿತು.....

What an Idea Madamji..!!! ಎಂದರು...

37 comments:

Anonymous said...

ಸುಗು, ಬೆಂಗಳೂರಲ್ಲಿ ಹೀಗೆ ಐಡಿಯಾ ಕೊಟ್ಟು ಕೊಟ್ಟು ಫೇಮಸ್ ಆಗೋಗಿದ್ದೆ.... ಈಗಲೂ ನಾ ನೆನಪು ಮಾಡ್ಕೊತಾ ಇರ್ತೀನಿ... ಈಗ ಅಲ್ಲೂ ಖಾತೆ ಸ್ಟಾರ್ಟ್ ಮಾಡಿದ್ದೀಯಾ.. ಹಹಹ ಚೆನ್ನಾಗಿದೆ ಐಡಿಯಾ ಹೇಗೋ ಸಮಯಕ್ಕೆ ಸರಿಯಾಗಿ ಉಪಯೋಗ ಆಯ್ತಲ್ಲ ಬಿಡು...

ಜಲನಯನ said...

ನಗು, ಕುವೈತಲ್ಲಿ ನಮ್ಮ ಮಕ್ಕಳಾಟದ ಮಾಮೂಲಿಗಳು ಐಡಿಯಾ ಅನ್ಸುತ್ತೆ ಅಂತ ನಿಮ್ಮ ಮಾತು ಕೇಳಿ...ಹಹಹಹ್..ನಿಮ್ಮ ಬಾಸು..ಸೂಪರ್ರು..ಅಂತೂ...ಒಂದು ಕನ್ಸಲ್ಟೆನ್ಸಿ ಶುರುಮಾಡೋಕೆ ಪೀಠಿಕೆ,,,..ಮಾಡಿ ಮಾಡಿ...ದೇವರೌ ಒಳ್ಳೆದು ಮಾಡಲಿ.

ಮನಸು said...

ಹಹಹ... ಅಯ್ಯೋ ಏನೋ ಒಳಿತು ಐಡಿಯಾ ಕೊಟ್ಟೆ ಪುಷ್ಪ... ಬರಿ ಅದೇ ಕೆಲಸ ಅಲ್ಲ ಬಿಡು ಹಹಹ..ಹೇಗೋ ಉಪಯೋಗ ಆಯ್ತಲ್ಲ ಅದು ಮುಖ್ಯ ಅಲ್ವಾ..!!

ತೇಜಸ್ವಿನಿ ಹೆಗಡೆ said...

:D really a very nice Idea madamji..:)

ಒಲೆಯುವವರು annOvalli svalpa typing error aagide..

ಮನಸು said...

ಅಜಾದ್ ಸರ್,
ಇವೆಲ್ಲ ಚಿಕ್ಕ ಮಕ್ಕಳ ಐಡಿಯಾ ಅಂತಾ ಅನ್ನಿಸುತ್ತೆ ನಿಜ ಹಹಹ, ನಮ್ಮ ಬಾಸ್ ಫುಲ್ ದಿಲ್ ಖುಷ್ ಸರ್.... ೫ ನಿಮಿಷ ಮೀಟಿಂಗ್ ಗೆ ಸಮಯ ಇದ್ದಿದ್ದು ಏನು ಮಾಡ್ತಾರೆ ಪಾಪ.. ನಾನೋ ಏನೋ ನನ್ನ ಐಡಿಯಾ ಕೊಟ್ಟಿ ಒಟ್ಟಲ್ಲಿ ವರ್ಕ್ ಔಟ್ ಆಯ್ತು ಹಹ... ಕನ್ಸ್ ಲ್ಟೇಷನ್ ಶುರು ಮಾಡುವ ಸರ್ ಅಲ್ಲೇ ಸಾಲ್ಮಿಯಾದಲ್ಲಿ ಒಂದು ಆಫೀಸ್ ನೋಡಿ... ಹಹ್ಹ

ಶಿವಪ್ರಕಾಶ್ said...

What an Idea Madam Ji :)

inmele jeballi stapler itkondu tirgteeni akka :D

ಮನಸು said...

ಹಹ ತೇಜು... ಐಡಿಯಾ ಚೆನ್ನಾಗಿದೆ ಅಲ್ವಾ ಒಪ್ಪಿದ್ದೀರಾ ನೀವು.... ಥ್ಯಾಂಕ್ಯೂ ತಪ್ಪು ತಿದ್ದಿದ್ದಕ್ಕೆ...

ಮನಸು said...

ಶಿವು...
ನೀನು ಜೇಬಿನಲ್ಲಿಡೋ ಸ್ಟೆಪ್ಲರ್ ವರ್ಕ್ಔಟ್ ಆಗಲ್ಲಪ್ಪ... ಒಂದು ಚೀಲದಲ್ಲಿ ಇಟ್ಟುಕೊಳ್ಳುವಂತ ಸ್ಟೇಪ್ಲರ್ ಆದ್ರೆ ಉಪಯೋಗ ಆಗುತ್ತೆ.. ಹಹಹ

Ashok.V.Shetty, Kodlady said...

Ha ha ha...What an idea madam ji....... adke 3G stepler bekaagutteno alva???

B.B said...

ಇನ್ನು ಮುಂದೆ ಚಪ್ಪಲಿ ಒಲಿಯುವವನು ಸ್ಟೇಪ್ಲರ್ ಪಿನ್ ಇಟ್ಕೋ ಬೇಕಾಗುತ್ತೆ ಅನ್ನಿ

ಮನಸು said...

ಅಶೋಕ್,
ಯಾವ ಸ್ಟೇಪ್ಲರ್ ಆದ್ರೂ ಇಟ್ಟಿರಲಿ ಆದರೆ ಸಮಯಕ್ಕೆ ಉಪಯೋಗ ಆದ್ರೆ ಸಾಕು ಅಲ್ವಾ..!!

ಮನಸು said...
This comment has been removed by the author.
ಮನಸು said...

ಒಂಟಿ ಪ್ರೇಮಿ...
ಚಪ್ಪಲಿ ಅಂಗಡಿಯವ ಸ್ಟೇಪ್ಲರ್ ಇಟ್ಟರೆ ಖಂಡಿತಾ ಬೇಗ ಕೆಲಸ ಮುಗಿಸಿ ಕಳಿಸಬಹುದು ಹಹಹ

Pradeep Rao said...

ಒಳ್ಳೇ ಐಡಿಯಾಗಳಿದ್ದಂತಿದೆ ನಿಮ್ಮ ಹತ್ತಿರ.. ನನಗೆ ಏನಾದರೂ ಐಡಿಯಾ ಬೇಕಾದಾಗ ನಿಮ್ಮ ಬಳಿಯೇ ಸಲಹೆ ಕೇಳುವೆ...

Kirti said...

woh !!
manasu avare inna munde enaadru cuttadre athava repairige bandidre naanu ellu hogalla nimage mail kalistini k idea koduvirante.. nann hubby khushi padabahudu kaaran han uliyattalla adakke.. madam also good like idea so all izz well..

ಸೀತಾರಾಮ. ಕೆ. / SITARAM.K said...

Great Idea factory -Suguna!!!!! inspired by Mahesh

HegdeG said...

What an idea MemSaab !!!
Reply kood adbhuta :)

ವಾಣಿಶ್ರೀ ಭಟ್ said...

nice idea... namagoo upayogakke baratte...:)

Manju M Doddamani said...

ಹ್ಹ ಹ್ಹ ಹ್ಹ ಐಡಿಯಾ ಸೂಪರ್ ಎಷ್ಟೇ ಆಗ್ಲಿ ನೀವು ಮೇಡ್ ಇನ್ ಕರುನಾಡು ಅಲ್ವ...!

V.R.BHAT said...

Nice !

sunaath said...

Great ideas come from Great persons.
ತಾವು ಈ ಐಡಿಯಾಗಳನ್ನು ಹೇಳಿದ್ದರಲ್ಲಿ ಏನೂ ಆಶ್ಚರ್ಯವಿಲ್ಲ!

ಮನಸು said...

ಪ್ರದೀಪ್ ಖಂಡಿತಾ ಸಂಪರ್ಕಿಸಿ.... ಹಹಹ... ಸಮಯಕ್ಕೆ ಉಪಯೋಗವಾಗುವಂತಹದಾದರೆ ಒಳ್ಳೆದು ಅಲ್ವಾ

ಕೀರ್ತಿ ಧನ್ಯವಾದಗಳು,
ಖಂಡಿತಾ ಮೈಲ್ ಕಳಿಸಿ.. ನಿಮ್ಮ ಸಮಸ್ಯೆಗೆ ತಕ್ಕಂತೆ ಐಡಿಯಾ ಕೊಡೋಣ

ಮನಸು said...

ಸೀತಾರಮ್ ಸರ್,
ಮಹೇಶ್ ಸ್ಪೂರ್ತಿ ಅಂತ ಸೇರಿಸಿಬಿಟ್ರಾ ಹಹಹ ಹಾಗೇ ಆಗಲಿ ಅವರ ಸ್ಪೂರ್ತಿಯಿಂದ ನನಗೆ ಈ ಐಡಿಯಾ ಒಳಿತು ಹಹಹ

ಹೆಗಡೆ,
ಐಡಿಯಾ ಒಳಿತಾ ಇರಬೇಕು ಆಗಾಗ ತಲೆ ಓಡಿಸ್ತಾ ಇದ್ದರೆ... ಸ್ವಲ್ಪ ಬುದ್ಧಿ ಚುರುಕಾಗುತ್ತೆ ಅಲ್ವಾ ಹಹ

ಮನಸು said...

ವಾಣಿಶ್ರೀ...
ಉಪಯೋಗ ಆದರೆ ಖಂಡಿತಾ ಬಳಸಿ ಕಾಫಿರೈಟ್ ಕೇಳೋಲ್ಲ ಹಹಹ......ಧನ್ಯವಾದಗಳು ಮೆಚ್ಚಿದ್ದಕ್ಕೆ

ಮಂಜು,
ಹೌದು ಕರುನಾಡಿನ ತಲೆ ನೋಡಿ ಐಡಿಯ ಕೊಟ್ಟಿದೆ ಹಹಹ... ಥ್ಯಾಂಕ್ಯೂ

ಮನಸು said...

ಭಟ್ ಸರ್,
ಧನ್ಯವಾದಗಳು...

ಸುನಾಥ್ ಕಾಕ,
ನಿಜ ಕಾಕ ಕೆಲವು ನಮಗೆ ತಿಳಿಯದೆಯೇ ನಮ್ಮಿಂದಲೇ ಐಡಿಯಾಗಳು ಬಂದು ಬಿಡುತ್ತವೆ... ಧನ್ಯವಾದಗಳು

Dr.D.T.Krishna Murthy. said...

ನನಗೆ ಹೊಳೆಯದ ಇಂತಹ ಎಷ್ಟೋ ಐದಿಯಾಗಳು ನನ್ನ ಹೆಂಡತಿಗೂ,ನನ್ನಮ್ಮನಿಗೂ ಹೊಳೆಯುತ್ತವೆ.ಮೇಡಂ ಗಳ ತಲೆಗಳಲ್ಲಿ ಐದಿಯಾಗಳು ಜಾಸ್ತಿ ಎಂದು ಕಾಣುತ್ತದೆ.what an idea madame!

ಸಾಗರದಾಚೆಯ ಇಂಚರ said...

What an Idea madam ji

olle idea

ಮನಸಿನಮನೆಯವನು said...

Nanu kelavu sala ee idea use madidini..
Nam kade hakollo chaplige 'ekkadada mole' anta mole sigtave avne use madtare..
Fevistick kooda ondond sala use agutte..

ದಿನಕರ ಮೊಗೇರ said...

hha hha ...

really what an idea madamji...

samayakke takka idea....

shivu.k said...

ಸುಗುಣಕ್ಕ,

ನಿಮ್ಮ ಐಡಿಯಗಳು ಚಿಕ್ಕವಾದರೂ ಅ ಸಮಯದಲ್ಲಿ ತುಂಬಾ ಉಪಯುಕ್ತವಾಗಿರುವಂತವು ಅನ್ನಿಸಿತು ನನಗೆ. ಕೆಲವೊಮ್ಮೆ ಇಂಥ ಪುಟ್ಟ ಕೆಲಸಗಳು ದೊಡ್ಡ ಮರ್ಯಾದೆ ಉಳಿಸಿಬಿಡುತ್ತವೆ ಅಲ್ವಾ...ಅನುಭವವನ್ನು ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್.

ಮನಸು said...

ಗುರು...
ಐಡಿಯಾ ಮೆಚ್ಚಿದ್ದಕ್ಕೆ ಧನ್ಯವಾದಗಳು

ವಿಚಲಿತ..
ಹೌದು ಊರಲ್ಲಿ ಎಷ್ಟೋ ಜನರು ಇದೇ ರೀತಿ ಯೋಚಿಸುತ್ತೇವೆ ಅಲ್ಲವೆ...

ದಿನಕರ್ ಸರ್,
ನೋಡಿ ಈ ಐಡಿಯಾ ನಿಮಗೂ ಉಪಯೋಗಕ್ಕೆ ಬರಬಹುದು... ಸೈಟ್ ನಲ್ಲಿ ಕಲ್ಲುಮುಳ್ಳು ಅಂತೆಲ್ಲಾ ಓಡಾಡುತ್ತೀರಿ...

ಶಿವು,
ಸಮಯಕ್ಕೆ ಉಪಯೋಗ ಆದರೆ ಸಾಕು... ಪಾಪ ಅವತ್ತು ನಮ್ಮ ಬಾಸ್ ಮೀಟಿಂಗ್ ಇತ್ತು ಅದು ಆಗಲೇ ಜನ ಮೀಟಿಂಗಾಗಿ ಕಾಯ್ತಾ ಇದ್ರು ಹೊರಗಡೆ ಇಂದ ಬಂದಂತವರು ಎಷ್ಟುಹೊತ್ತು ಕಾಯುತ್ತಾರೆ ಅದಕ್ಕೆ ಈ ಉಪಯಾ ಪ್ರಯೋಜನವಾಯ್ತು

ಗಿರೀಶ್.ಎಸ್ said...

ವಾಹ್

Anonymous said...

ha ha ha...nice article suguna.

Chetana said...

ha hah..nice article suguna...:)

ವನಿತಾ / Vanitha said...

;D, What an Idea Madam Ji :)

ಸುಧೇಶ್ ಶೆಟ್ಟಿ said...

Thinking out of the box!

E tips yaavaagalaadaru bekaagabahudu :)

ಮನಸು said...

girish,chetu, vanita,sudhesh thanks a lot