Monday, May 9, 2011

ಆಸರೆ


-1-

ಒಂಟಿ ಚಕ್ರಕೆ
ಊರುಗೋಲು...

ಹಸಿದ ಹೊಟ್ಟೆಗೆ
ಕಡಲ ನೀರು...

ಬೆಂದ ಹೊಟ್ಟೆಗೆ
ಎಳೆ ಬಿಸಿಲು..

ನೊಂದ ಮನಸಿಗೆ
ಸಾಂತ್ವಾನಿಸುವ ತಂಗಾಳಿ....

ಇದೇ ತೃಪ್ತಿಯಲಿ
ನನ್ನ ಬದುಕು.......

----------------------------------------------------

-2-

ಕಾಲು ಇಲ್ಲ ಕವಳವಿಲ್ಲ ನಾನು ಬಡವ
ಅರೆಹೊಟ್ಟೆಯಲ್ಲೇ ಕಳೆಯಬೇಕಿದೆ ದಿನವ
ಒಂಟಿ ಕಾಲಿಗೆ ಊರುಗೋಲು ಆಸರೆ
ಬಡತನಕೆ ನನ್ನ ಜೀವನ ಕೈಸೆರೆ
ಬವಣೆ ಬದುಕಲಿ ಜೀವ ಕುಂದಿದೆ
ಬೊಗಸೆ ನೀರಿನಷ್ಟು ಶಕ್ತಿಯನಾದರೂ ನೀಡಬಾರದೆ ಭಾಸ್ಕರ....

ಕಡಲ ರಥವನೇರಿದ ರವಿತೇಜನೆ
ಹಸುಗೂಸಿಗೂ ನಿನ್ನ ಎಳೆಬಿಸಿಲು
ಹಸಿರ ಪೈರಿಗೂ ನಿನ್ನ ಎಳೆ ತಾಪ
ಎಲ್ಲ ಜೀವರಾಶಿಗೆ ಕಳೆಯ ನೀಡಿ
ಭುವಿಗೆ ಬೆಳಕ ಚೆಲ್ಲುವುದ ತಿಳಿದವ
ಅಂದು ಕುಂತಿಗೆ ಕೂಸ ನೀಡಿದವ
ಎಲ್ಲ ಜೀವಿಗೆ ಬೇಕಾದವ ನೀನಾಗಿರುವಾಗ
ನಿಶಕ್ತಿ ಬಂದೆರಗಿದ ನನ್ನ ಕಾಲಿಗೆ ಪುಷ್ಠಿ ನೀಡಬಾರದೆ ಹೇಳೋ ಭಾಸ್ಕರ...


ಚಿತ್ರ: ದಿಗ್ವಾಸ್


20 comments:

sunaath said...

ಎರಡೂ ಕವನಗಳು ಸೊಗಸಾಗಿವೆ.

Anonymous said...

tumba chenda ide kavanagaLu...good

-kavya
UK

ಸಾಗರದಾಚೆಯ ಇಂಚರ said...

Good one,
keep it up

prabhamani nagaraja said...

ಕವನಗಳು ಚೆನ್ನಾಗಿವೆ, ಅಭಿನಂದನೆಗಳು.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಎರಡೂ ಕವನಗಳು ಸೊಗಸಾಗಿವೆ.
ಅಭಿನಂದನೆಗಳು.

ಮನಸು said...

ಸುನಾಥ್ ಕಾಕ,
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ...
ಕಾವ್ಯ
ಥಾಂಕ್ಸ್ ... ಹೀಗೆ ಬರ್ತಾ ಇರು...

ಮನಸು said...

ಗುರು,
ಧನ್ಯವಾದಗಳು, ಸದಾ ನಿಮ್ಮ ಸವಿ ಆಶಯನಮ್ಮಲ್ಲಿರಲಿ

ಮನಸು said...

ಪ್ರಭ
ಧನ್ಯವಾದಗಳು, ನಿಮ್ಮ ಮೆಚ್ಚುಗೆಗೆ

ವೆಂಕಟ್ ಸರ್,
ಧನ್ಯವಾದಗಳು ಹೀಗೆ ಬರುತ್ತಲಿರಿ.

ಅನಂತ್ ರಾಜ್ said...

ಒ೦ದೆಡೆ ತೃಪ್ತಿ ಇನ್ನೊ೦ದೆಡೆ ನಿರಾಶೆ.. ವೈವಿಧ್ಯವಾದ ಕವನಗಳು. ಅಭಿನ೦ದನೆಗಳು ಮೇಡ೦.

ಅನ೦ತ್

ರಾಜೇಶ್ ನಾಗತಿಹಳ್ಳಿ said...

simply super.....

Pradeep Rao said...

As always.. very very meaningful lines from you!

ಮನಸು said...

ಅನಂತರಾಜ್ ಸರ್,
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ...

ಮನಸು said...

ರಾಜೇಶ್
ಮೊದಲಭೇಟಿ ಎಂದೆನಿಸುತ್ತೆ ಸ್ವಾಗತ ನಿಮಗೆ.. ಧನ್ಯವಾದಗಳು ಕವನ ಮೆಚ್ಚಿದ್ದಕ್ಕೆ

ಮನಸು said...

ಪ್ರದೀಪ್,
ಥ್ಯಾಂಕ್ಯೂ

Unknown said...

liked the second poem than the first one:-)

ಮನದಾಳದಿಂದ............ said...

Akkayya....

manasige hattiravaaguva saalugalu.......

ಮನಸು said...

ಕುಷ್ಣ ಸರ್,
ಧನ್ಯವಾದಗಳು ಎರಡೂ ವಿವಿಧ ರೂಪದ ಸಾಲುಗಳು

ಪ್ರವೀಣ್
ಧನ್ಯವಾದ... ನಿನ್ನ ಮೆಚ್ಚುಗೆಗೆ.. ಹೀಗೆ ಎಷ್ಟೋ ಜನರ ಮನದ ನೋವು ಇದ್ದೇ ಇರುತ್ತೆ ಅಲ್ವಾ

ಜಲನಯನ said...

ಸುಗುಣ...ಎರಡೂ ಕವನ ದಿಗ್ವಾಸ್ ಚಿತ್ರಭಾವಕ್ಕೆ ನಿಮ್ಮ ಕಾವ್ಯಭಾವ ಎನ್ನುವಂತಿವೆ...ಅದರಲ್ಲೂ ಮೊದಲ ಕವನ ಮತ್ತೆ ಮೊದಲೆರಡು ಸಾಲುಗಳು,,,,ಒಂಟಿ ಚಕ್ರಕೆ ಊರುಗೋಲು...!! ಈ ಪ್ರಯೋಗ ತುಂಬಾ ಹಿಡಿಸ್ತು...

ಸುಧೇಶ್ ಶೆಟ್ಟಿ said...

chennagive chithra mattu kavanagaLu yeradoo saha :)

shivu.k said...

ಸುಗುಣಕ್ಕ,
ಚಿತ್ರ ನೋಡಿ ಕವನ ಬರೆಯುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಿದ್ದೀರಿ.
ನಿಮ್ಮೆಲ್ಲರ ಕವನ ನೋಡಿ ನಾನು ಒಂದು ಕವನವನ್ನು ಬ್ಲಾಗಿಗೆ ಹಾಕುವ ಆಸೆಯಾಗುತ್ತಿದೆ..