-1-
ಕಡಲು ತಾ ಮಾಡಿದ ತಪ್ಪಿಗೆ
ತೀರದಲಿ ದಿಟ್ಟಿಸುತ್ತ ನಿಂತ ನನ್ನ
ಪಾದ ಸ್ಪರ್ಶಿಸಿ ಕ್ಷಮಿಸೆನ್ನುತಿದೆ....
ಹೇಗೆ ಮನ್ನಿಸಲಿ
ಎಂದೂ ಮಾಸದ ತಬ್ಬಲಿಯ ಗಾಯ
ನನ್ನ ಜೀವನವನ್ನೇ ಹುಣ್ಣು ಮಾಡಿಸಿದೆ..
-----
-2-
ಹೇ ಕಡಲೇ
ನೀ ಆದೆ ಅಂದು ಹೆಬ್ಬುಲಿ
ನೋಡು
ನಾನಿಂದು ತಬ್ಬಲಿ...
-----
-ಹೂ-
ನಾನು ಪೂಜೆಗೆ ಶ್ರೇಷ್ಠವೆಂದು
ನನ್ನ ಚಿವುಟಿ ಕಿತ್ತರು...
ಆದರೆ
ನಾನೂ ಒಂದು
ಉಸಿರಾಡುವ
ಜೀವವೆಂಬುದ ಮರೆತರು...
-----
-ನಾನು-
ಭುವಿಯ ಮಂಚದಲಿ
ಪ್ರಕೃತಿ ಮಡಿಲಿನಲಿ
ಮಲಗುವೆ....
ಸುತ್ತಮುತ್ತಲ ಜನರ ಹಾರೈಕೆ
ಅಕ್ಕಪಕ್ಕದವರ ಅನ್ನ ಬಟ್ಟೆಯಲಿ
ದಿನವ ಕಳೆವೆ...
ಕಾರಣ
ಗೊತ್ತಿಲ್ಲ ನಾನು ಯಾರು
ಯಾವ ಮನೆಯವ
ಯಾರ ಮಗನೆಂದು....
19 comments:
kavanagalu chennaagive chitrakke takkante
Chennagive..
Modalaneyadanne holuva sandesha sunaami aagiddaaga bandittu..
ಸಿತಾರಾಮ್ ಸರ್,
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ... ಸಾಲುಗಳು ಎಂದೋ ಬರೆದಿದ್ದೆ ಅದಕ್ಕೆ ತಕ್ಕಂತೆ ಇಂದು ಚಿತ್ರಗಳನ್ನ ಹುಡುಕಿದೆ...
ವಿಚಲಿತ
ಧನ್ಯವಾದಗಳು... ಇಂದಿನ ಸಾಲುಗಳು ತುಂಬಾ ಹಿಂದೆ ಬರೆದ ಸಾಲುಗಳು... ನಾನು ಬರೆದ ಮೊದಲ ಸಾಲುಗಳನ್ನು ಹೋಲುವಂತಾ ಸಾಲುಗಳು ಓದಿಲ್ಲ.
ಕಡಲಿನ ಬಗೆಗೆ ಬರೆದ ಸಾಲುಗಳು ಸುನಾಮಿಯ ಸಂದರ್ಭದಲ್ಲಿ ಬರೆದ ಸಾಲುಗಳೆ? ತಬ್ಬಲಿಯ ಅಳಲು ಮನ ತಟ್ಟುವಂತಿದೆ. ಹೂವಿನ ಬಗೆಗೆ ನಿಮಗಿರುವ ಮರುಕ ಮೆಚ್ಚುವಂತಹದು. ನನ್ನದೂ ಸಹ ಇದೇ ಧೋರಣೆ. ‘ಅನಾಥನ ಆತ್ಮಚರಿತ್ರೆ’ಯು
ಕರುಣಾಜನಕವಾಗಿದೆ. ಉತ್ತಮ ಕನಿ(=ಕವನಹನಿ)ಗಳನ್ನು ನೀಡಿದ್ದೀರಿ.
ಕವನಗಳು ಚಿತ್ರಕ್ಕೆ ತಕ್ಕ೦ತೆ ಇವೆ, ಸೂಪರ್
ಸಾಲುಗಳು ಚೆನ್ನಾಗಿ ಮೂಡಿವೆ.. ಸುನಾಮಿ ಬಗೆಗಿನದು ಬಹಳ ಹಿಡಿಸಿತು..
ಸುನಾಥ್ ಕಾಕ..
ಮುಂಚೆ ಎಂದೋ ಬರೆದು ನನ್ನ ಕಣ್ ತಪ್ಪಿಸಿದ್ದು ಇಂದು ಸಿಕ್ಕಿತು.... ಹೌದು ಹೂ,ಎಲೆ,ಕಾಯಿ,ಹಣ್ಣು ಇವೆಲ್ಲದರ ಬಗ್ಗೆ ನನ್ನದೇ ಆದಂತ ಮರುಕವಿದೆ ಆದರೆ ವಿಧಿಲ್ಲದೆ ನಾವು ಅವುಗಳನ್ನ ತಿಂದು ತೇಗುತ್ತೇವೆ... ಅನಾಥ ಮಗುವಿಗೆ ಊರೆಲ್ಲ ನೆಂಟರು ಪ್ರಪಂಚಮೇ ಮನೆ ಅಲ್ಲವೆ..?.. ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.
ಪರಾಂಜಪೆ ಸರ್,
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ....
ಪ್ರದೀಪ್...
ಧನ್ಯವಾದಗಳು, ಸುನಾಮಿಯ ಅಲೆಯೇ ಅಷ್ಟು ಜೋರಾಗಿರುತ್ತೆ... ಎಷ್ಟೋ ಜೀವಿಗಳನ್ನ ದೂರ ಮಾಡಿಬಿಟ್ಟಿರುತ್ತೆ ಅಲ್ಲವೇ???
ಸುನಾಮಿ,ಕಡಲು..ಹೂವು ಚಿವುಟು, ಮಗು ಅಳಲು...ಎಲ್ಲಾ ಚನ್ನಾಗಿ ಪುಟ್ಟ ರೂಪದಲ್ಲೂ ಅಗಾಧವಾಗುತ್ತವೆ ಭಾವನೆಗಳಲ್ಲಿ...
sundaravaada saalugaLu maDam....
ಸುಗುಣಕ್ಕ,
ಕಡಲು ತಪ್ಪು ಮಾಡಲು ಸಾಧ್ಯವೇ? ಸಹಜವಾಗಿ ನಾವೇ ತಾನೆ ತಪ್ಪುಮಾಡುವುದು...[ತಮಾಷೆಗೆ ಕೇಳಿದೆ]
ಮತ್ತೆ ಮಗುವಿನ ಆಳಲು ಮತ್ತು ಹೂವಿನ ಬಗೆಗಿನ ಅಭಿಪ್ರಾಯ ನನ್ನದೂ ಕೂಡ. ಅದಕ್ಕೆ ನಾನು ಅದನ್ನು ಕೀಳಲು ಹಿಂಜರಿಯುತ್ತೇನೆ...
ಚೆಂದದ ಕವನಗಳು.
ಚಂದದ ಸಾಲುಗಳು ಕವಿತೆಗಳು ಇಷ್ಟವಾಯಿತು ಅದರಲ್ಲೂ ಹೂ ಬಗ್ಗೆ ಬರೆದ ಕವಿತೆ ಸೂಪರ್ ಮೇಡಂ
eradanedu, chikka haagoo chokka. ishta aaytu
ಚೆನ್ನಾಗಿವೆ ಕವಿತೆಗಳು.
All the Best.
heart touchn....
ಮಂಜು,
ಧನ್ಯವಾದಗಳು ಕವನ ಮೆಚ್ಚಿದ್ದಕ್ಕೆ...
ಕೃಷ್ಣ ಭಟ್,
ಧನ್ಯವಾದಗಳು ಸರ್.. ಸ್ವಾಗತ ಮೊದಲ ಭೇಟಿಗೆ
ರಾಘವೇಂದ್ರ ಜೋಶಿ
ಸ್ವಾಗತ ಮೊದಲ ಭೇಟಿಗೆ... ಧನ್ಯವಾದಗಳು
ಮೌನರಾಗ,
ಧನ್ಯವಾದಗಳು
Post a Comment