@ಚಿತ್ರ ಪ್ರಕಾಶಣ್ಣ
-೧-
ನನ್ನ ದಾಹ
ತೀರಿಸಿ
ದಣಿವಾರಿಸುವ
ಹನಿ ಹನಿಯ ಮುತ್ತು ನೀನು. .
---
ಬಿಸಿಲ ತಾಪ
ಸರಿಸಿ
ಬಾಯಾರಿಕೆಯ
ಮರೆಸಿ
ನಗುವ ತರಿಸಿದ
ಪ್ರಾಣ ನೀನು. .
--------
ದಣಿದ ದೇಹಕೆ
ಬಾಡಿದ ಮೊಗಕೆ
ಒಣಗಿದ ಗಂಟಲಿಗೆ
ತೃಪ್ತಿ ತರಿಸಿದ
ತಂಪು ನೀನು. .
-----------------
-೨-
ಕೊಳವು ನಾನು
ಮಲೀನ ನೀನು
ಸ್ತಬ್ಧ ಸ್ಥಿತಿಗೆ
ಅಲೆಯ ಎಳೆ
ತಂದವಳು ನೀನು. .
-----
ಪ್ರಶಾಂತ ಕೊಳದಿ
ಗುಟುಕೇರಿಸುವುದೇನೋ ಸರಿ. .
ಆದರೆ
ನನ್ನ ಒಡಲಲಿರುವ
ಮೀನುಗಳ
ನುಂಗದಿದ್ದರೆ ಸಾಕು. .
--------
ದಣಿದು ಬಂದವಗೆ
ನೀರನುಣಿಸಿ
ಆತಿಥ್ಯ ನೀಡೋ
ಒಡಲು ನಾನು. .
19 comments:
ಮನಸು,
ಸರಾಗ ಶೈಲಿಯ ಕವನ ತುಂಬ ಇಷ್ಟವಾಯಿತು.
ಕಾಕ,
ಪ್ರಕಾಶಣ್ಣ ಈಗಷ್ಟೆ ಬ್ಲಾಗ್ ನಲ್ಲಿ ಈ ಪೋಟೋ ಪೋಸ್ಟ್ ಮಾಡಿದ್ದ್ರು ನನಗೆ ಅನ್ನಿಸಿದ್ದನ್ನು ಎರಡು ಸಾಲು ಗೀಚಿದೆ... ಧನ್ಯವಾದಗಳು ಕಾಕ ನಿಮ್ಮ ಮೆಚ್ಚುಗೆಗೆ
ಸುಗುಣ ಮೇಡಂ ತುಂಬಾ ಖುಷಿಯಾಯ್ತು. ನಿಮಗೆ ಥ್ಯಾಂಕ್ಸ್.
--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
ಮನಮೋಹಕ ಚಿತ್ರ.. ಚೆಂದದ ಸಾಲುಗಳು..
ಬಾಲು ಸರ್ ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ...
ಥ್ಯಾಂಕ್ಯೂ...
chennaagide
nice
Putta putta saalugaLu kavanavannu saraagavaagi odisikondu hoyitu... chandhadha kavana ;)
ಚಿತ್ರಕ್ಕೆ ಸೂಕ್ತ ಚಿತ್ರಣ. ಅಭಿನ೦ದನೆಗಳು.
ಅನ೦ತ್
ಧನ್ಯವಾದಗಳು ವೆಂಕಟ್....
ಸೀತಾರಾಮ್ ಸರ್,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು....
ಸುಧೇಶ್,
ಥಾಂಕ್ಯೂ
ಅನಂತರಾಜ್ ಸರ್,
ಧನ್ಯವಾದಗಳು...
ಸುಗುಣಕ್ಕ,
ಒಂದೊಂದೇ ಪದದ ಕವನ ಚಿತ್ರಕ್ಕೆ ಹೆಚ್ಚು ಅರ್ಥವನ್ನು ಕೊಟ್ಟಿದೆ.
ಧನ್ಯವಾದಗಳು ಶಿವು ನೀವು ಅಷ್ಟು ಕೆಲಸದ ಒತ್ತಡದಲ್ಲಿದ್ದರೂ ನನ್ನ ಈ ಪುಟ್ಟ ಸಾಲುಗಳನ್ನು ಓದಿ ಮೆಚ್ಚಿದ್ದೀರಿ
kavan chennagide ishtavayitu..
ಕವನ ಸರಾಗವಾಗಿ, ಸರಳವಾಗಿ, ಸು೦ದರವಾಗಿದೆ ಸುಗುಣರವರೆ, ಅಭಿನ೦ದನೆಗಳು.
Post a Comment