Tuesday, July 12, 2011

-ಉಸಿರು ಉಳಿಸಿ-

@ಚಿತ್ರ ದಿಗ್ವಾಸ್
--------

ಎಲ್ಲ ನವೀಕರಣದ ಹೆಸರು
ಆಡಂಬರದ ಡಾಂಬರೀಕರಣ
ಬೆಳೆವ ಜೀವಿಗಳು ಉಸಿರು
ಬಿಡಲಾಗದಂತ ಶಿಕ್ಷಾಭರಣ...!!!

ಭುವಿಯ ಗರ್ಭದಿಂದ
ಆಗಸನ ನೋಡಲಾರದಂತೆ
ಬಂಧಿಸಿಟ್ಟ ಈ ಮನುಷ್ಯ ಜೀವಕೆ
ಸಡ್ಡೆ ಹೊಡೆದು ನಿಂತಿಹೆವು ನಾವು...!!!

ಬೇರು ಭದ್ರಿಸಿ
ಹಸಿರ ರಕ್ಷಿಸಿ
ನಾನು ನನ್ನೊಡನೆ
ಎಳೆ ಕೂಸು ಬಂದಿಹೆವು ನೋಡಿ....!!!

ಭಾಸ್ಕರನು ಮೆಚ್ಚಿಹನು
ಎಳೆ ಎಳೆಯ ಬೆಳಕ ಚೆಲ್ಲಿಹನು
ಉಸಿರು ಉಳಿಯುವುದು
ದಾರಿ ಹೋಕರು ತುಳಿಯದಿದ್ದರೆ....!!!!

ಭಯವು ಮೂಡುತಿದೆ
ಬೆಂಕಿ ಚೆಂಡಿನಂತ
ವಾಹನಗಳು ಸಾಗುವುದೆಂದು
ಇರುವರೆಗು ನಮ್ಮನ್ನೇ ನಾವು ರಕ್ಷಿಸಿಕೊಳ್ಳಬೇಕಿದೆ...!!!

ಎಳೆ ಉಸಿರು ಚಿಗುರಿದೆ
ಬುಡ ಮೇಲು ಮಾಡದಿರಿ
ಹೇ ಮನುಜ ಮಿತ್ರರೇ
ನಿಮ್ಮಂತೆಹೇ ನಮ್ಮುಸಿರು...!!!

21 comments:

ಪ್ರವರ ಕೊಟ್ಟೂರು said...

ನಿಮ್ಮ ಕವನ ಹಸಿ-ಹಸಿರಾಗಿದೆ......

Subrahmanya said...

ಚಿತ್ರಕ್ಕೆ ತಕ್ಕುದಾದ, ಅರ್ಥಪೂರ್ಣ ಕವನ. ಕಳಕಳಿಯಿಂದ ಬರೆದಿರುವಿರಿ, ಫಲ ಸಿಗುವುದೇ ? ನೋಡೋಣ !

ಮನಸು said...

ಪ್ರವರ,
ಮೆಚ್ಚುಗೆಯ ಅನಿಸಿಕೆಗಳಿಗೆ ಧನ್ಯವಾದಗಳು ...... ಹೀಗೆ ಬರುತ್ತಲಿರಿ

ಮನಸು said...

ಸುಬ್ರಮಣ್ಯ ಸರ್..
ಏನು ಫಲ ಕೋಡುವುದಿಲ್ಲ ಅನ್ನಿಸುತ್ತೆ... ಆ ಹಸಿರು ನಲುಗಿ ಹೋಗುತ್ತೆ ಎನಿಸುತ್ತೆ.... ಯಾವುದಾದರು ವಾಹನ ಬಂದು ನುಂಗಿಬಿಡುತ್ತೆ ಅಷ್ಟೆ...

ಗಿರೀಶ್.ಎಸ್ said...

ಹಸಿರಿನ ನಾಶ..
ಮನುಷ್ಯನ ವಿನಾಶಕ್ಕೆ ಮೊದಲು ಮಾಡಿದಂತೆ !!!
Nice lines !!!

UMESH VASHIST H K. said...

ಈ ಬೆಂಗಳೂರಿನಲ್ಲಿ ರಸ್ತೆ ಅಗಲಿ ಕರಣಕ್ಕೆ ದಿನವೂ ನೂರಾರು ಮರಗಳು ನಾಶ ವಾಗುತ್ತಿವೆ.....

ನೋಡಿತ್ತಿದ್ದರೆ/ ಕೇಳುತ್ತಿದ್ದರೆ ಮನಸ್ಸು ಮುದುಡಿ ಹೋಗುತ್ತದೆ ........ ಇದರ ಮಧ್ಯೆ ಈ ಸಾಹಿತ್ಯ .......!!

ಸುಮ said...

ಚೆನ್ನಾಗಿದೆ ಕವನ ಮತ್ತು ಅದರ ಆಶಯ , ಇಷ್ಟ ಆಯ್ತು.

HegdeG said...

Hasirina kavana, nice :-)

ಮನಮುಕ್ತಾ said...

kavana chennaagide.

sunaath said...

ಚಿತ್ರಕ್ಕೆ ಸಮಂಜಸವಾದ, ಸೊಗಸಾದ ಕವನ.

ಮನಸು said...

ಗಿರೀಶ್,
ಧನ್ಯವಾದಗಳು ಕವನ ಮೆಚ್ಚುಗೆಗೆ... ಹಸಿರು ದಿನೇ ದಿನೇ ಹೋಗುತ್ತದೆ ಅಷ್ಟೆ ನಾವುಗಳು ಮರುಕ ಪಟ್ಟುಕೊಳ್ಳುವ ಬದಲು ನಮ್ಮಗಳ ಮನೆಯ ಮುಂದೊಂದು ಗಿಡ ನೆಟ್ಟು ನಮ್ಮ ಉಸಿರನ್ನ ನಾವೇ ಉಳಿಸಿಕೊಳ್ಳೋಣ ಅಲ್ಲವೇ?

ಮನಸು said...

ಉಮೇಶ್ ಸರ್,
ನಿಮ್ಮ ಮಾತು ನಿಜ, ಊರು ಉದ್ದಾರಕ್ಕೆ ದಾರಿ ಮರಗಳು ಹಾಳಾಗುತ್ತಲೇ ಬರುತ್ತಿವೆ. ಇದನ್ನು ತಪ್ಪಿಸಲು ಸಾಧ್ಯವೇ ಇಲ್ಲವೇನೋ ಆದರೆ ಸ್ವಲ್ಪ ಮಟ್ಟಿಗೆ ನಾವುಗಳು ನಮಗೆ ಸಾಧ್ಯವಾದೆಡೆ ಗಿಡ ನೆಟ್ಟರೆ ಒಳ್ಳೆಯದು ಅನ್ನಿಸುತ್ತೆ....
ಬೇಸರದ ನಡುವೆಯೇ ಈ ಸಾಹಿತ್ಯ ಏಕೆ ಗೊತ್ತಾ ಆ ಹಸಿರೂ ಕೂಡ ನೊಂದುಕೊಳ್ಳುತ್ತಿರಬಹುದಲ್ಲವೇ ಎಂದನಿಸುತ್ತೆ ಇದು ನನ್ನಲ್ಲಿ ಸದಾ ಕಾಡುವ ಚಿಂತೆ...

ಮನಸು said...

ಸುಮ,
ಧನ್ಯವಾದಗಳು ಆ ಹಸಿರು ನೊಂದುಕೊಳ್ಳುತ್ತಿರಬಹುದಲ್ಲವೇ?? ಎಂದೆನಿಸಿತು.

ಮನಸು said...

ಗಣಪತಿ ಹೆಗಡೆ,
ನೀವುಗಳೆಲ್ಲ ಅಷ್ಟು ಸುಂದರ, ವಿಭಿನ್ನ ಫೋಟೋಗಳು ತೆಗೆದರೆ ಈ ರೀತಿ ಸಾಲುಗಳು ಹುಟ್ಟುತ್ತವೆ. ನಿಮ್ಮಗಳಿಗೆಲ್ಲ ಧನ್ಯವಾದಗಳು ನಮಗೆ ಸ್ಪೂರ್ತಿ ನೀಡುವಂತೆ ಮಾಡಿದ್ದೀರಿ.

ಮನಸು said...

ಮನಮುಕ್ತಾ
ಧನ್ಯವಾದಗಳು ಕವನ ಮೆಚ್ಚಿದ್ದಕ್ಕೆ

ಸುನಾಥ್ ಕಾಕ
ಧನ್ಯವಾದಗಳು ಹಸಿರು ತನ್ನ ಉಸಿರು ಉಳಿಸಿಕೊಳ್ಳಲು ಆಲಾಪಿಸುತ್ತಿದೆ ಮುಂದೊಂದು ದಿನ ಕಷ್ಟ ಸಾಧ್ಯ... ಯಾವಾಗ ಹಸಿರು ಪೂರ್ಣ ಪ್ರಮಾಣದಲ್ಲಿ ನಾಶ ಮಾಡುತ್ತೇವೋ ನಮಗೇ ಗೊತ್ತಿಲ್ಲ... ಅಲ್ಲವೇ

ಜಲನಯನ said...

ಡಾಂಬರಲಿ ಎದೆ ಸೆಟೆದು ನಿಂತ ಪುಟ್ಟ ಗಿಡದ ಮನದ ಮಾತು...ಗಿಡಮನವರಿಯದ ಮನುಮನಕೆ ತಿಳಿಹೇಳುವಂತಿದೆ ನಿಮ್ಮ ಕವನ...ದಿಗ್ವಾಸರ ಕ್ಯಾಮರಾಕಣ್ಣಿನ ಫಲಕ್ಕೆ ನಿಮ್ಮ ಭಾವಭಾಷಾನುವಾದ ಚನ್ನಾಗಿದೆ..

Kirti said...

ಆಡಂಬರದ ಡಾಂಬರೀಕರಣ
ಅದರಲ್ಲಿ ಬೆಳೆದ ಹಸಿರು ಜೀವ
ಬಯಕೆಯಿಂದ ಬಯಕೆಗಾಗಿ ಜೀವಿಸುವ
ಚಿಗುರಿದ ಸಣ್ಣ ಸಣ್ಣ ಬೀಜ
ಭಾವನೆಗಳ ತಿಳಿದ ಮ್ರದು ಮನಸು
ಕರಗಿದೆ ಮಳೆ ಹನಿಯಾಗಿ
ಬಿಸಿಲಿನಲ್ಲಿ ಕೊರಗಿದ ಜೀವಕೆ
ಹನಿಯನ್ನು ನೀಡಿದೆ
ಎಷ್ಟು ಸುಂದರ ಕವಿತೆ
ಈ ಮನಸಿನದು
ಎಲ್ಲರ ಮನಸ್ಸೀಗ ಬೆಳೆಯುವ
ಬಳ್ಳಿಯ ಕಡೆಗೆ ಓಡುವುದು
ಅತಿ ಸುಂದರ ಕವಿತೆ

ಓ ಮನಸೇ, ನೀನೇಕೆ ಹೀಗೆ...? said...

chandada kavana Suguna..very nice.

Anonymous said...

Nice one...

Anonymous said...

ಫೋಟೋಗೆ ತಕ್ಕನಾದ ಕವನ
-ಸಾಕ್ಷಿ

Raghu said...

Photo da jotege kavanau hasiragide..
Nimmava,
Raghu.