Tuesday, July 19, 2011

ಸಾರ್ಥಕ ಬದುಕು


@ಚಿತ್ರ ದಿಗ್ವಾಸ್
----------

ಬಿಸಿಲ ಕಾವು ರಾಚಿದರೇನು
ಧೂಳು ಮೈಯ್ಯನೆರಗಿದರೇನು
ರಾಶಿ ರಾಗಿ ತುಂಬಿ ತುಳುಕಿದರು
ಸ್ವಚ್ಚಗೊಳಿಸೋ ಕಾರ್ಯ ನಮ್ಮದಲ್ಲವೇನು..?

ದಿನದ ಹಸಿವು ಕಾಡದಿರದು
ಅದಕೆ ನೋಡಿ ನಮ್ಮ ದುಡಿಮೆ
ಏನು ಇರುವುದೋ ಅನ್ನದ ಮಹಿಮೆ
ನಮ್ಮ ಶ್ರಮದ ಹಿಂದೆ ಹಲವು ಭಾವ
ಮನುಜ ಅದನು ನೆನೆದರೆ ನಮ್ಮ ಬದುಕು ಸಾರ್ಥಕ...

ಕಷ್ಟ-ನಷ್ಟಗಳ ಆಗರ ರೈತ ಜೀವನ
ಧೀರ್ಘ ಮಳೆ, ಬರಗಾಲದ ಹೊಳೆ
ಅಧಿಕ ಕಳೆ, ಬೆಳೆದ ಬೆಳೆ
ಎಲ್ಲ ಎಣಿಸಿ ಶೃಂಗರಿಸಬೇಕಿದೆ ಈ ಕಣ...

ಮುಸುಕು ವೇಷ, ಮಸುಕು ನೋಟ
ಧೋ ಎನುವ ಧೂಳಿನ ಆರ್ಭಟ
ಮನೆ-ಹೊಲ ಕೆಲಸ ಸರಿದೂಗಿಸಿ ನಡೆಸುವ
ತೃಪ್ತಿ ಜೀವನ ಬಲ್ಲವನೇ ಬಲ್ಲ.....!!!


21 comments:

ಶಿವಪ್ರಕಾಶ್ said...

ಹೌದು ಅಕ್ಕ..
ನಿಜಕ್ಕೂ ಅವರ ಬದುಕು ಸಾರ್ಥಕ.
ಅದೊಂದು ಪುಣ್ಯದ ಕೆಲಸ.
ಚಿತ್ರ ಹಾಗು ಕವನ ಎರೆಡು ಇಷ್ಟವಾದವು

balasubramanya said...

ಗ್ರಾಮೀಣ ಬದುಕಿನ ಒಂದು ಸುಂದರ ಚಿತ್ರಣ ,ನಿಮ್ಮ ಕವಿತೆ ನನ್ನ ಬಾಲ್ಯದ ದಿನಗಳ ವ್ಯವಸಾಯದ ಚಿತ್ರಣ ಕಣ್ಣ ಮುಂದೆ ತಂದಿತು. ಬೆಳೆದ ಫಸಲು ಹಸನು ಮಾಡಲು ಕಣ ಸಿದ್ದ ಪಡಿಸುವ ಬಗ್ಗೆ ನಿಮ್ಮ ಕವಿತೆ ಮುದ ನೀಡಿತು.

--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

sunaath said...

ಚಿತ್ರಕ್ಕೆ ತುಂಬ ಸಮಂಜಸವಾದ ಕವನವನ್ನು ಬರೆದಿರುವಿರಿ.

ಜಲನಯನ said...

ಸುಗುಣ..ದಿಗ್ವಾಸ್ ಚಿತ್ರಭಾವಕ್ಕೆ ನಿಮ್ಮ ಕ-ವನಿತ ಭಾವ ಸೂಪರಾಗಿದೆ...

ಸೀತಾರಾಮ. ಕೆ. / SITARAM.K said...

ಚೆನ್ನಾಗಿದೆ ಕವನ

ಮನದಾಳದಿಂದ............ said...

ಅಕ್ಕಯ್ಯಾ..........
ಚಿತ್ರಕ್ಕೆ ಅರ್ಥಪೂರ್ಣ ಕವನ,
ರೈತನ ಬದುಕನ್ನು ಬಿಂಬಿಸುವ ಕವನ..........

ಗಿರೀಶ್.ಎಸ್ said...

ನಿಜ ರೈತರದು ಸಾರ್ಥಕ ಬದುಕು....ಹಳ್ಳಿಯ ಬದುಕಿನ ಬಗ್ಗೆ ನಿಮ್ಮ ಕವನದಲ್ಲಿ ತುಂಬ ಚೆನ್ನಾಗಿ ಚಿತ್ರಣ ವಾಗಿದೆ...

prabhamani nagaraja said...

ರೈತರ ಶ್ರಮಜೀವನವನ್ನು ಚಿತ್ರಿಸುವ ಸು೦ದರ ಕವನ. ಅಭಿನ೦ದನೆಗಳು ಸುಗುಣ, ಈಗ ಸಾಮಾನ್ಯವಾಗಿ ಟಾರ್ ರಸ್ತೆಗಳನ್ನೇ ಕಣವನ್ನಾಗಿಸುತ್ತಿದ್ದಾರೆ!

ಮನಸು said...

ಶಿವು,
ಥಾಂಕ್ಯೂ, ರೈತ ಜೀವನ ಹಿಂದಿನಂತಿಲ್ಲ, ಈಗ ಬದಲಾಗಿದೆ ಎಲ್ಲರೂ ದುಡ್ಡು ಎಣಿಸಿಕೊಂಡು ಕಾರುಗಳಲ್ಲಿ ಓಡಾಡುತ್ತಿದ್ದಾರೆ. ಹಳ್ಳಿ ಸೊಗಡು ಮಾಯವಾಗುತ್ತಿದೆ.

ಮನಸು said...

ಬಾಲು ಸರ್,
ಗ್ರಾಮೀಣ ಬದುಕು ಎಲ್ಲೋ ಮಾಯವಾಗುತ್ತಿದೆ ಎನಿಸುತ್ತೆ ಅಲ್ಲವೇ... ಈ ಪುಟ್ಟ ಸಾಲುಗಳ ಮೆಚ್ಚುಗೆಗೆ ಧನ್ಯವಾದಗಳು.

ಸುನಾಥ್ ಕಾಕ,
ಆ ಫೋಟೋ ಹಾಕಿದೆ ಇದಕ್ಕೆ ದಿಗ್ವಾಸ್ ಅವರಿಗೆ ಧನ್ಯವಾದ ಹೇಳಲೇ ಬೇಕು...

ಮನಸು said...

ಅಜಾದ್ ಸರ್,
ಥ್ಯಾಂಕ್ಯೂ ಸರ್... ಹಳ್ಳಿಯ ಸೊಗಡು ನಮ್ಮಲ್ಲೂ ಸ್ವಲ್ಪ ಇದ್ದದ್ದರಿಂದ ಇದು ಸಾಧ್ಯವಾಯಿತು.

ಸೀತಾರಾಮ್ ಸರ್..
ಧನ್ಯವಾದಗಳು ಕವನ ಮೆಚ್ಚಿದ್ದಕ್ಕೆ

ಮನಸು said...

ಪ್ರವೀಣ್,
ರೈತನ ಬದುಕು ಒಂದು ರೀತಿ ಸಾರ್ಥಕ ಬದುಕು ಅಲ್ಲವೇ..? ಅವರಿಂದಲೇ ನಮಗೆ ಅನ್ನ... ಥಾಂಕ್ಯೂ

ಗಿರೀಶ್,
ಧನ್ಯವಾದಗಳು, ಹಳ್ಳಿಯ ಬದುಕೇ ಹಾಗೇ ಅಲ್ಲವೇ ಅವರು ಜೀವನವನ್ನು ವ್ಯವಸಾಯದಲ್ಲೇ ದೂಡಬೇಕು..

ಮನಸು said...

ಪ್ರಭಾಮಣಿ,
ಧನ್ಯವಾದಗಳು, ನಿಜ ಈಗ ಊರುಗಳ ಕಡೆ ಕಣ ಬಿಟ್ಟು ರಸ್ತೆಗೆ ಬಂದಿದ್ದಾರೆ... ಶ್ರಮ ಬೇಡ ಕಾರು ಬಸ್ಸು ಓಡಾಡಿ ಕಣ ಮಾಡಲಿ ಎಂದಿದ್ದಾರೆ

ತೇಜಸ್ವಿನಿ ಹೆಗಡೆ said...

Nice poem.

V.R.BHAT said...

Nice !

www.kumararaitha.com said...

ಕೃಷಿಕರ ಬದುಕಿನ ಉತ್ತಮ ಚಿತ್ರಣ...ಕವನ ಕಟ್ಟಿರುವ ಬಗೆಯೂ ಚೆನ್ನಾಗಿದೆ

Sushma Sindhu said...

ಸುಗುಣ ಮೇಡ೦,
ದ್ರಶ್ಯದ ಸಾರವನ್ನು ನಿಮ್ಮ ಕಾವ್ಯ ತೆರೆದಿಡುವ೦ತಿದೆ :)

ಸಾಗರದಾಚೆಯ ಇಂಚರ said...

Suguna madam,
sundara kavana,
avara badukina shrama namge siguva anna

KalavathiMadhusudan said...

saarthaka baduku, arthapoorna kavana,pratinitya aahaara sevisuvaaga,raitanige dhanyavaada arpisuvude..krutaghnate.

shivu.k said...

ಸುಗುಣಕ್ಕ,

ರೈತ ಬದುಕಿನ ಮೇಲೆ ಕವನದ ಮೂಲಕ ಬೆಳಕು ಚೆಲ್ಲಿದ್ದೀರಿ. ಅವರ ಕಷ್ಟದ ಬದುಕು ನಿತ್ಯವಲ್ಲವೇ..

prabhamani nagaraja said...

ನಿಮ್ಮ ಬ್ಲಾಗ್ ನಲ್ಲಿ ಹೊಸತನ್ನು ಅರಸಿ ಬ೦ದಿದ್ದೆ ಸುಗುಣ ಅವರೇ, ವ೦ದನೆಗಳು.