Wednesday, September 14, 2011

ರಾಜಕೀಯ ಖೈದಿ

ಮನುಷ್ಯರ ಕಥೆ ಇಷ್ಟೆ ಅಲ್ಲವೇನು
ಯೋಚನೆ ಮಾಡಿ ಲಾಭಾ ಏನಿದೆ..!!??

ನೋಟಿಗೊಂದು ಓಟು ಗಿಟ್ಟಿಸಿ
ಜನರ ಆಯ್ಕೆಯಲ್ಲಿ ಸೀಟು ಪಡೆದು
ದೇವರೆಸರಲಿ ಪ್ರಮಾಣ ಮಾಡಿ
ಮಣ್ಣು ಮುಕ್ಕಿಸಲೊರಟ ಜನರ ಕಥೆ ಎಲ್ಲಿಗೆ ನಿಲ್ಲಿತು..!!

ಕೋಟಿಗಟ್ಟಳೆ ಹಣವ ದೋಚಿ
ಐಶಾರಾಮಿ ಜೀವನ ನಡೆಸಿ
ರಾಜ ಠೀವಿಯಲ್ಲಿ ಮೆರೆದ
ರಾಜಕೀಯ ಕೀಚಕರ ಕಥೆ ಎಲ್ಲಿಗೆ ಬಂದಿದೆ.!!

ಪೂಜೆಗೈವ ದೇವಗೂ ಸಿಡಿಮದ್ದು ಸಿಡಿಸಿ
ಬಡಪಾಯಿ ಜನರ ಕಣ್ಣುಬಾಯಿಗೆ ಮಣ್ಣ ಎರಚಿ
ವಜ್ರಕಚಿತ ಸಿಂಹಾಸನದಿ ದರ್ಬಾರು ನೆಡೆಸಿದರು
ಆದರಿಂದು ಎಲ್ಲ ಇದ್ದು ಕಲ್ಲ ಮಂಚದಿ ಮಲಗುವವನ ಜೀವನ ಎಲ್ಲಿದೆಯೋ.!!!

ಜೈಲ ಬಾಗಿಲು ತೆರೆದಿದೆ
ಹೊರಗೆ ತಿಂದು ತೇಗುತಿರುವ
ರಾಜಕೀಯ ಖೈದಿಗಳ ಒಳಗೆ ತಳ್ಳಲು
ಸದ್ಯಕಿರುವ ಕೋಣೆಗಳು ಸಾಲದಾಗಿದೆಯೇನೋ...!!

ಇಲ್ಲೇ ಇದ್ದು ಬಿಡುವರಂತೆ ಸಂಪಾದಿಸಿದರು
ಆಯುಷ್ಯ ಎಷ್ಟೋ ಏನೋ ತಿಳಿಯದವರು
ಸಾವಿನ ಬಾಗಿಲು ತಟ್ಟೋ ಮುನ್ನ ಜೈಲ ಬಾಗಿಲು ತೆರೆಯಿತು
ಏನಾದರೇನು ನಾ ಮಾಡಿದ ಕರ್ಮ ಕಾಡದೇ ಬಿಡುವುದೇನು..!!!

ಈ ಮನುಷ್ಯನ ಕಥೆ ಇಷ್ಟೆ ಎನಿಸಿದೆ
ಆಮಿಷಕೆ ಬಲಿಯಾದವನ ವ್ಯಥೆ ಕೇಳುವವ ಇಲ್ಲವೆನಿಸಿದೆ...

@ಫೋಟೋಗಳು- ಅಂತರ್ಜಾಲ

14 comments:

Badarinath Palavalli said...

ರಿಪಬ್ಲಿಕ್ ಆಫ್ ಬಳ್ಳಾರಿ ಬಗ್ಗೆ ಒಳ್ಳೆಯ ಸಾಂದರ್ಭಿಕ ವಿಡಂಬನಾತ್ಮಕ ಕವನ. ಇಷ್ಟವಾಯಿತು.

ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com

Face book Profile : Badarinath Palavalli

ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

ಜಲನಯನ said...

ಸುಗುಣ ನನಗೆ ಭಕ್ತಿ ಭಾಂಡಾರಿ ಬಸವಣ್ನನವರ ವಚನ ನೆನ್ಪಾಯ್ತು...ಎರಡು ಲೋಕಗಳಿಲ್ಲ ಏನೇ ಇದ್ದ್ರೂ ಎಲ್ಲಾ ಇಲ್ಲೇ..ಪಾಪ ಮಾಡಿದವ ಇಲ್ಲೇ ಅನುಭವಿಸುತ್ತಾನೆ ಎನ್ನುವುದಕ್ಕೆ ನಿಮ್ಮ ಕವನ ಮತ್ತು ಅದರ ಹಿನ್ನೆಲೆ ಉದಾಹರಣೆ....ನಿಜ,, ಇವರಿಗೆಲ್ಲಾ ಈ ದಿನಗಳು ಹೆಚ್ಚಾಗಬೇಕು..ಜುಟ್ಟು ನೆಟ್ಟಗಾದರೆ ಕೂದಲೆಳೆಯನ್ನು ಸರಿಪಡಿಸೋದು ಕಷ್ಟ ಅಲ್ಲ...ಹೀಗೇ ಕಲ್ಮಾಡಿಗಳು, ರಾಜಾಗಳು, ಎಡ್ಡಿ, ರೆಡ್ಡಿ ಮಡ್ಡಿಗಳು ಜೈಲುಪಾಲಾದ್ರೆ ಜನಸಾಮಾನ್ಯನ ಮಾತಿಗೆ ಸ್ವಲ್ಪ ಬೆಲೆ ಬರಬಹುದು...

ದಿನಕರ ಮೊಗೇರ said...

nija maDam...

tumbaa chennaagide... reDDy odidre oLLeyadittu...........

Ittigecement said...

ಮನಸು...

ನಮ್ಮೆಲ್ಲರ ಮನದ ಇಂಗಿತ ಕವನದ ರೂಪದಲ್ಲಿದೆ..
ಸಂತೋಷದಿಂದ ಬದುಕಲು ಎಷ್ಟು ಹಣ ಬೇಕು..?

ಇವರೆಲ್ಲ ತಮ್ಮ ಪುಟ್ಟ ಪುಟ್ಟ ಮಕ್ಕಳಿಗೆ ಏನನ್ನುತ್ತಾರೆ?
ಯಾವ ಬಾಯಿಯಿಂದ ತಮ್ಮ ವರ್ತನೆಯನ್ನು ಸಮರ್ಥಿಸಿಕೊಳ್ಳುತ್ತಾರೆ...?

ಮನದಾಳದಿಂದ............ said...

ಅಕ್ಕಾ..............
ದೇಶವನ್ನು ದೋಚುವ ಕಾರ್ಯ ರಾಜಕೀಯದವರ ಜನ್ಮಸಿದ್ಧ ಹಕ್ಕೇನೋ!
ರಾಜಕೀಯಕ್ಕಿಳಿದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಂಪಾದನೆ ಎಷ್ಟು ಏರಿಸಿಕೊಲ್ಲಬಹುದು ಎಂಬುವುದರತ್ತಲೇ ಯೋಚಿಸುತ್ತಿರುತ್ತಾನೆ. ಈ ಮೂರು ದಿನದ ಬದುಕಿಗಾಗಿ ಎಷ್ಟು ಬೇಕು?

shivu.k said...

ಸುಗುಣಕ್ಕ,

ಇದನ್ನು ರೆಡ್ಡಿಗಳು ಓದಬೇಕು. ಆದ್ರೆ ಜೈಲಲ್ಲಿ ಅವರೇನೋ ಕಾಲಜ್ಞಾನ ಓದುತ್ತಿದ್ದಾರಂತೆ...ಹಟ್ಟ ಮೇಲೆ ಒಲೆ ಉರಿದರೂ ಇವರಿಗೆ ಕೆಟ್ಟ ಮೇಲೂ ಬುದ್ದಿ ಬರುವುದಿಲ್ಲ..ಚೆನ್ನಾಗಿ ಕವನ ಬರೆದಿದ್ದೀರಿ..

ಮನಸು said...

ಬದರಿನಾಥ್ ಸರ್..
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ, ಬಳ್ಳಾರಿ ದಿನಕ್ರಮೇಣ ರಾಜ್ಯವಾಗಿಬಿಡುತಿತ್ತೋ ಏನೋ ಗೊತ್ತಿಲ್ಲ...

ಅಜಾದ್ ಸರ್.
ಹೌದು ಪಾಪ ಮಾಡಿದವ ಇಲ್ಲೇ ಅನುಭವಿಸಿ ಹೋಗಲೇ ಬೇಕು... ಇಷ್ಟೆಲ್ಲಾ ಆದರು ಈ ಜನ ಬುದ್ಧಿ ಕಲಿಯುತ್ತಾರೋ ಇಲ್ಲವೋ ಗೊತ್ತಿಲ್ಲ.
ಧನ್ಯವಾದಗಳು

ಮನಸು said...

ದಿನಕರ್ ಸರ್
ಧನ್ಯವಾದಗಳು ಸರ್.. ಓದಲಿ ಜನರ ಮನಸ್ಥಿತಿ ತಿಳಿಯಲಿ

ಪ್ರಕಾಶಣ್ಣ
ಮನುಷ್ಯ ಗಳಿಸಿದಷ್ಟು ಮತ್ತೂ ಬೇಕೆಂಬ ಆಸೆ.. ಎಷ್ಟಿದ್ದರೂ ಸಾಲದು... ಅವರ ತಪ್ಪು ಸಮರ್ಥಿಸಿಕೊಳ್ಳುವುದು ಆ ದುಡ್ಡೇ ಕಲಿಸಿರಬೇಕು.. ಅಲ್ಲವೇ?

ಮನಸು said...

ಪ್ರವೀಣ್,
ಹೋಗುವಾಗ ಎಲ್ಲ ಹೊತ್ತುಕೊಂಡು ಹೋಗುತ್ತಾರೆ ಅನ್ನಿಸುತ್ತೆ ಹಹಹ ಅಲ್ಲವೇ.. ಆಗೇನಾದರು ಇದ್ದಿದ್ದರೆ ಅಷ್ಟೆ.. ಜನ ಒಬ್ಬರಿಗೂ ಒಂದು ಬಿಡಿಗಾಸು ತೋರಿಸ್ತಾ ಇರಲಿಲ್ಲ ಹಹ ಅಲ್ಲವೇ ಪ್ರವೀಣ್. ಧನ್ಯವಾದಗಳು ಕಾಮೆಂಟಿಸಿದ್ದಕ್ಕೆ

ಶಿವು,
ರೆಡ್ಡಿ ಓದಿದರೂ ಅಷ್ಟೆ ಬಿಟ್ಟರೂ ಅಷ್ಟೆ ಬದಲಾಗೋಲ್ಲ... ಧನ್ಯವಾದಗಳು

ಸಾಗರದಾಚೆಯ ಇಂಚರ said...

tumbaa chennagide kavana

ganiya melina prema mannanne nungi bidtu

sunaath said...

ಸುಗುಣಾ,
ಒಳ್ಳೇ ವಿಡಂಬನೆಯಿಂದ ಕೂಡಿದ ಸುಂದರ ಕವನ.

ಸೀತಾರಾಮ. ಕೆ. / SITARAM.K said...

ಕವನ ಚೆನ್ನಾಗಿದೆ. ಆದರೆ ಫೋಟೋ ಎಲ್ಲಿಯದು?

ಮನಸು said...

ಧನ್ಯವಾದಗಳು ಗುರು, ಸುನಾಥ್ ಕಾಕ

ಸೀತಾರಾಮ್ ಸರ್.. ಧನ್ಯವಾದಗಳು ಕ್ಷಮಿಸಿ ಅಂತರ್ಜಾಲ ಮೂಲಕ ತೆಗೆದುಕೊಂಡಿದ್ದು ಮರೆತಿದ್ದೆ ಅದನ್ನು ಸೂಚಿಸುವುದು.. ಥಾಂಕ್ಯೂ

ಗಿರೀಶ್.ಎಸ್ said...

Madam,very very nice which suits current situation perfectly....