Wednesday, September 21, 2011

ಫೇಸ್ ಬುಕ್ಕಾಯಣ... ಪೋನಾಯಣ.....ರಾಮಾಯಣ

ನಮ್ಮ ಕಛೇರಿಯಲ್ಲಿ ಒಬ್ಬರು ಒಂದು ವಾರದ ಮಟ್ಟಿಗೆ ತವರೂರಾದ ಭಾರತಕ್ಕೆ ತೆರಳಿದ್ದರು... ಅವರು ಊರು ತಲುಪಿದ ಕೆಲವೇ ಘಂಟೆಗಳಲ್ಲಿ ಸುಮಾರು ೪,೫ ಮಿಸ್ ಕಾಲುಗಳು ಬಂದವಂತೆ, ಆ ಕರೆಯನ್ನು ಸ್ವೀಕರಿಸಿದ್ದೇ ತಡ ಯಾರೂ ಮಾತನಾಡುತ್ತಲಿರಲಿಲ್ಲ... ಯಾವುದೇ ಮಾತಿಲ್ಲ ಕಥೆಯಿಲ್ಲ, ಹೀಗೆ ಸುಮಾರು ಸರಿ ಕರೆಮಾಡಿದ್ದರಿಂದ ಪೋನ್ ಸ್ವಿಚ್ ಆಫ್ ಮಾಡಿಬಿಟ್ಟಿದ್ದಾರೆ.

ಆ ಪೋನ್ ಸ್ವಿಚ್ ಆಫ್ ಆಗಿದ್ದೇ ತಡ ೧೦ ನಿಮಿಷಗಳ ನಂತರ ಅವರ ಹೆಂಡತಿಯ ಮೊಬೈಲ್ ಗೆ ಬೇನಾಮಿ ಕರೆಗಳು ಬರಲು ಪ್ರಾರಂಭವಾಯಿತು. ಕರೆ ಸ್ವೀಕರಿಸಿದರೆ ಮಾತಿಲ್ಲ ಮೌನದಲ್ಲೇ ಧ್ವನಿ ಕೇಳುವ ಖಯಾಲಿ ಆ ಜನರಿಗೆ... ಒಂದೇ ದಿನದಲ್ಲಿ ಸುಮಾರು ೧೦,೧೫ ಕರೆ ಬರುವುದು ಮಾತಿಲ್ಲದೇ ಧ್ವನಿ ಕೇಳುವುದು ಇದೇ ನೆಡೆಯುತ್ತಲಿತ್ತು. ಕೊನೆಗೆ ಆ ಫೋನ್ ಕೂಡ ಸ್ವಿಚ್ ಆಫ್ ಮಾಡಿ... ಮನೆಗೆ ಬಂದು ಇನ್ನೇನು ನೀರು ಕುಡಿಯ ಬೇಕು ಎನ್ನುವಾಗಲೇ ಮನೆಯಲ್ಲಿದ್ದ ದೂರವಾಣಿಗೆ ಮತ್ತೆ ಕರೆ ಬಂದು ಸ್ವೀಕರಿಸಿದರೆ ಮತ್ತದೇ ಮೌನ....... ಮಾತಿಲ್ಲ ಕಥೆ ಇಲ್ಲ... ಆ ದೂರವಾಣಿಗೂ ಸುಮಾರು ಸರಿ ಕರೆ ಬರುವುದು ಸ್ವೀಕರಿಸುವುದು ಇದೇ ನೆಡೆದಿತ್ತು....... ತಾಳ್ಮೆ ಕಳೆದುಕೊಂಡ ಇವರು ಫೋನ್ ಲೈನ್ ತೆಗೆದು ಬಿಟ್ಟರು....

ಎಲ್ಲರಿಗೂ ಚಿಂತೆ ಕಾಡಲು ಪ್ರಾರಂಭವಾಯಿತು ಯಾರು ಮಾಡುತ್ತಿದ್ದಾರೆ ಏಕೆ ಹೀಗೆ ಎಂದು.... ಕೊನೆಗೆ ಮನೆಯಲ್ಲಿದ್ದ ಅವರ ಅಮ್ಮನ ಹತ್ತಿರ ವಿಚಾರಿಸುವಾಗ ಹೇಳಿದರು ನೀವುಗಳು ಭಾರತಕ್ಕೆ ಬರುವ ಸ್ವಲ್ಪ ಘಂಟೆಗಳ ಒಳಗೆ ಯಾರೋ ಕರೆ ಮಾಡಿದರು... ಬಂದಿದ್ದಾರ ಎಂದು, ಇನ್ನು ಬಂದಿಲ್ಲ ಎಂದೆ. ಸ್ವಲ್ಪ ಸಮಯದ ನಂತರ ಮತ್ತೂ ಕರೆ ಮಾಡಿ ಕೇಳಿದರು ಏನೋ ವಿಷಯವಿರಬೇಕೆಂದು ನಿಮ್ಮಗಳ ಮೊಬೈಲ್ ನಂಬರ್ ಕೊಟ್ಟೆ ಎಂದರು..... ಈ ಲ್ಯಾಂಡ್ ಲೈನ್ ನಂಬರ್ ಹೇಗೆ ಸಿಕ್ಕಿತು ಎಂದು ಯೋಚಿಸುವಾಗ ನೆನಪಾಗಿದ್ದು "ಫೇಸ್ ಬುಕ್", ಕುವೈತಿನಿಂದ ಭಾರತಕ್ಕೆ ಹೊರಡುವ ಮುನ್ನ ತಮ್ಮ ಫೇಸ್ ಬುಕ್ಕಿನಲ್ಲಿ ಅವರ ಮನೆಯ ದೂರವಾಣಿ ಸಂಖ್ಯೆಯನ್ನು ಹಾಕಿದ್ದಾರೆ ಅದರಿಂದಲೇ ಈ ಕೆಲಸವಾಗಿರಬಹುದು ಎಂದು ಊಹಿಸಿಕೊಂಡಿದ್ದಾರೆ.

ಇನ್ನು ಪೋಲೀಸಿಗೆ ತಿಳಿಸೋಣ ಎಂದರೆ ಅಲ್ಲಿ ಒಮ್ಮೆ ಹೋಗಿ ಸೇರಿಕೊಂಡರೆ ಮುಗಿಯಿತು ಮತ್ತೆ ಹೊರಗೆ ಬರೋಕ್ಕೆ ಆಗೋಲ್ಲ.... ೧ ವಾರ ಮಾತ್ರ ರಜೆಯಲ್ಲಿರುವುದು ಎಂದು ಯೋಚಿಸಿ ಸುಮ್ಮನಾಗಿದ್ದಾರೆ. ನಂತರ ಇಷ್ಟೂ ಕರೆಗಳು ಬಂದಿದ್ದ ದೂರವಾಣಿ ಸಂಖ್ಯೆಗಳನ್ನೆಲ್ಲವನ್ನೂ ಬರೆದಿಟ್ಟುಕೊಂಡು ಅವರ ಸ್ನೇಹಿತರೊಬ್ಬರಿಗೆ ಕೊಟ್ಟು ಬಂದಿದ್ದಾರೆ. ಈ ವಿಷಯವೆಲ್ಲವನ್ನೂ ಒಮ್ಮೆ ಪರಿಶೀಲಿಸುವಂತೆ ಹೇಳಿ ಬಂದಿದ್ದಾರೆ...

ಇದು ನಿಜವೇ ಎಂದು ನನಗೆ ಆಶ್ಚರ್ಯವಾಗಿ..!!! ಮತ್ತೊಮ್ಮೆ ಅವರನ್ನೇ ಕೇಳಿದೆ. ಹೌದು!!! ನಾನು ಊರಿಗೆ ಹೋಗಬೇಕೆಂದು ತೀರ್ಮಾನಿಸಿದ್ದೇ ಹೊರಡುವ ಹಿಂದಿನ ದಿನ ನಂತರ ಟಿಕೆಟ್, ಪ್ಯಾಕಿಂಕ್ ಹೀಗೆ ಬ್ಯುಸಿ ಇದ್ದೆ.. ಯಾರಿಗೂ ಹೇಳೇ ಇರಲಿಲ್ಲ... ಅಮ್ಮನಿಗೆ ಹೇಳಿದ್ದೇ ನಾನು ವಿಮಾನ ಹತ್ತುವ ೧ಗಂಟೆಯ ಮುನ್ನ, ಸ್ನೇಹಿತರಾಗಲಿ, ಸಂಬಂಧಿಕರಿಗಾಗಲಿ ಯಾರಿಗೂ ಹೇಳೇ ಇರಲಿಲ್ಲ ನಾನು ಬರುತ್ತೇನೆಂದು... ಇನ್ನು ನನ್ನ ಎರಡೂ ಹೊಸ ಸಿಮ್ ಗಳು ಸ್ನೇಹಿತ ವಿಮಾನ ನಿಲ್ದಾಣಕ್ಕೆ ತಂದು ಕೊಟ್ಟಿದ್ದು... ಆ ಸ್ನೇಹಿತ ಹೀಗೆ ಮಾಡುವವನೇ ಅಲ್ಲ... ಆದರೆ ನನಗೆ ಅನುಮಾನವಿರುವುದು ಈ ಫೇಸ್ ಬುಕ್ ಮಾತ್ರ... ಇದರಿಂದ ಹಲವು ಅನಾಹುತ ನೆಡೆದಿವೆ ಎಂದು ಕೇಳಿದ್ದೇನೆ ಎಂದರು. ನನ್ನ ಅನುಮಾನ ಖಂಡಿತಾವಾಗಿಯೂ ಸುಳ್ಳಾಗಲು ಸಾಧ್ಯವಿಲ್ಲ ಎನ್ನುತ್ತಾರೆ...!!

ಪಾಪ ಅವರು ರಜೆಯನ್ನು ಈ ಪೋನಿನ ರಾಮಾಯಣದಲ್ಲೇ ದಿನ ಕಳೆದು ಬಂದಿದ್ದಾರೆ.... ಇದು ಫೇಸ್ ಬುಕ್ ರಾಮಾಯಣವೋ..ಫೋನ್ ರಾಮಾಯಣವೋ... ಏನೋ ಒಂದು ತಿಳಿದಿಲ್ಲ ಆದರೆ ಈಗ ಮಾತ್ರ ಅವರು ಕರೆಗಳನ್ನು ಸ್ವೀಕರಿಸಿದ್ದರಲ್ಲ ಅಷ್ಟೂ ಸಂಖ್ಯೆಗಳನ್ನು ನೋಡುತ್ತ ನಂಬರಾಯಣದಲ್ಲಿ ಮುಳುಗಿದ್ದಾರೆ... (ಅವರು ಊರಿಂದ ಬಂದು ೩ ದಿನವಾಯಿತು ದಿನಕ್ಕೆ ಎರಡು ಬಾರಿಯಾದರೂ ಬರೆದಿಟ್ಟಿರುವ ಫೋನ್ ನಂಬರ್ ಗಳನ್ನು ಮಾತ್ರ ನೋಡುತ್ತಲೇ ಇದ್ದಾರೆ... ಯಾರು ಇರಬಹುದು, ಏಕೆ ಕರೆ ಮಾಡಿದರು ಎಂಬ ಪ್ರಶ್ನೆಗಳನ್ನು ಮನಸ್ಸಲ್ಲೇ ಹಾಕಿಕೊಂಡು ಗೊಣಗುತ್ತಲಿದ್ದಾರೆ).

ಆದರೆ ಇನ್ನೊಂದು ವಿಷಯವೆಂದರೆ ಅವರು ಊರು ಬಿಟ್ಟು ಕುವೈಟಿಗೆ ಬಂದ ನಂತರ ಅಲ್ಲಿ ಮನೆ ನಂಬರಿಗೆ ಮತ್ತಾವು ಬೇನಾಮಿ ಕರೆಗಳು ಬರುಲ್ಲಿಲ್ಲವೆಂದು ಹೇಳಿದ ಮೇಲೆ ಫೇಸ್ ಬುಕ್ಕಿನ ಮೇಲೆ ಹೆಚ್ಚು ಅನುಮಾನ ಪ್ರಾರಂಭವಾಗಿದೆ

ಇದು ನಿಜವೋ ಏನೋ ಗೊತ್ತಿಲ್ಲ ಆದರೆ ಆದಷ್ಟು ಮುಖ್ಯ ವಿಷಯಗಳನ್ನು ಮಾತ್ರ BUZZ , Google+, FACEBOOK, twitter ಇತ್ಯಾದಿ.... ಎಲ್ಲಿಯೂ ಬಿತ್ತರಿಸದೇ ಇರುವುದು ಒಳ್ಳೆಯದು.... ಅಲ್ಲವೇ..?

@ಫೋಟೋ - ಅಂತರ್ಜಾಲ

21 comments:

Badarinath Palavalli said...

ಸಾಮಾಜಿಕ ತಾಣಗಳು ದುರ್ಭಳಕೆ ಆಗುತ್ತಿರುವುದಕ್ಕೆ ಇದೂ ಉದಾಹರಣೆ.
ಅಬದ್ಧ ಹೆಸರುಗಳಲ್ಲಿ ಖಾತೆ ತೆರೆದು ಯಾಮಾರಿಸುವವರು, ಜಾಹೀರಾತು ಮಾಡುವವರು ಹೆಚ್ಚಾಗುತ್ತಿದ್ದಾರೆ.
ನಾವು ಹುಷಾರಾಗಿರಬೇಕು.

ಜಲನಯನ said...

ಬೆಕ್ಕಿಗೆ ಚಲ್ಲಾಟ ಇಲಿಗೆ ಪ್ರಾಣ ಸಂಕಟ ಅನ್ನೋ ಹಾಗಾಯ್ತಲ್ಲ ಸುಗುಣ ಇದು... ಫೇಸ್ ಬುಕ್ ಒಮ್ದು ಮೆಜೆಸ್ಟಿಕ್ ಅಂತ ಪ್ರಕಾಶ್ ಹೇಳಿದ್ದು ನಿಜ ಆಯ್ತು...ಮೆಜೆಸ್ಟಿಕಲ್ಲಿ ಖಾಸಗಿ ವಿಷಯ ಹೇಳ್ಕೊಳ್ಳೇ ಬೇಡಿ,,,ಅಷ್ಟು ಕಿವಿ ಮಾತು ಹೇಳಭುದು ಅಷ್ಟೆ...

Badarinath Palavalli said...

Pl. Visit my blogs too :)
www.badari-poems.blogspot.com
www.badari-notes.blogspot.com
www.badaripoems.wordpress.com

ಸೀತಾರಾಮ. ಕೆ. / SITARAM.K said...

ನಿಜ ತಮ್ಮ ವಿಚಾರ. ಎಲ್ಲರು ಎಚ್ಚರಿಕೆ ವಹಿಸಬೇಕು

ವಾಣಿಶ್ರೀ ಭಟ್ said...

houdu.. social network galu durbhalike aguttidde.. yarado heasarinalli account create maadi, ashllela chitragalannu haaki hudugeeyarige tag maduvavara sankhye kood ahechhuttide..

sunaath said...

ನೀಚ ಆನಂದವನ್ನು ಹೊಂದುವ ಕಿಡಿಗೇಡಿಗಳು ಇದ್ದೇ ಇರುತ್ತಾರೆ. ಸೋಶಲ್ ನೆಟ್‍ವರ್ಕ್‌ಗಳಲ್ಲಿ ಯಾವುದೇ ಖಾಸಗಿ ಮಾಹಿತಿ ಕೊಡಲೇಬಾರದು!

ಮನದಾಳದಿಂದ............ said...

ಅಕ್ಕಾ..
ಸೋಶಿಯಲ್ ನೆಟ್ ವರ್ಕುಗಳಲ್ಲಿ ದೊರೆಯುವ ಮಾಹಿತಿಯನ್ನು ದುರುಪಯೋಗ ಪಡಿಸಿಕೊಳ್ಳುವ ದುರ್ಬುದ್ಧಿಯ ಜನರು ಇರುವವರೆಗೆ ಯಾವುದೇ ಖಾಸಗಿ ಮಾಹಿತಿಗಳನ್ನು ನೀಡಲೇಬಾರದು................
ನಿಮ್ಮ ಸ್ನೇಹಿತರ ರಜೆಯನ್ನು ಸಜೆ ಮಾಡಿದ ಅಂತಹ ಜನರಿಗೆ ದಿಕ್ಕಾರವಿರಲಿ!

Dr.D.T.Krishna Murthy. said...

ಮೇಡಂ;ಓದಿ ಬೇಸರವಾಯಿತು.ಈ ರೀತಿಯ ವಿಘ್ನ ಸಂತೋಷಿಗಳನ್ನು ಹಿಡಿದು ಅವರಿಗೆ ಶಿಕ್ಷಿಸುವಂತಾಗ ಬೇಕು.

Manasa said...

Never share your home address, contact phone number in social networking sites... We may trust people whome we know, we can't trust social networking websites, like facebook... Be aware n take care

balasubramanya said...

ಹೌದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ತಾಣಗಳು ದುರ್ಬಳಕೆಯಾಗುತ್ತಿವೆ. ಅದರಲ್ಲೂ ಕೆಲವು ಗುಳ್ಳೆನರಿಗಳು, ಸೇರಿಕೊಂಡು ಸಾಮಾನ್ಯಜನರ ನೆಮ್ಮದಿ ಹಾಳುಮಾಡುತ್ತಿದ್ದಾರೆ. ಇಂತಹ ಜನರಿಗೆ ನನ್ನ ಧಿಕ್ಕಾರ ಇದೆ.ದಯಮಾಡಿ ನಿಮ್ಮ ವಯಕ್ತಿಕ ವಿಚಾರಗಳ ಮಾಹಿತಿ ಸಾಮಾಜಿಕ ತಾಣಗಳಲ್ಲಿ ಹಾಕಬೇಡಿ . ಹೊಲಸು ಮನಸಿನವರು ಅದರ ದುರ್ಬಳಕೆ ಮಾಡುತ್ತಾರೆ.

ಓ ಮನಸೇ, ನೀನೇಕೆ ಹೀಗೆ...? said...

ನಿಜಕ್ಕೂ ಈ ಸಾಮಾಜಿಕ ತಾಣಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಕೆಲವೊಮ್ಮೆ ಪ್ರೊಫೈಲ್ ನ್ನು ಹ್ಯಾಕ್ ಮಾಡಿ ಅಸಹ್ಯಕರ ಪೋಸ್ಟ್ ಗಳನ್ನು ಹಾಕುತ್ತಾರೆ. ಇಂಥದ್ದನ್ನೆಲ್ಲ ಮಾಡಿ ಅವರಿಗೆ ಅದೇನು ಸಂತೋಷ ಸಿಗುತ್ತೋ ಆ ದೇವರೇ ಬಲ್ಲ...!!
ಒಳ್ಳೆಯ ಬರಹ ಸುಗುಣ.

Pradeep Rao said...

Very Very True... Dont post anything in public website that gives others an idea of your home or office location, your office hours, your outing plans etc

ದಿನಕರ ಮೊಗೇರ said...

houdu teeraa phone number facebook nalli haakodu sari allaa anisatte...
tamage bekaadavarige SMS kalisi naave tiLisidare oLLEyadu..

Subrahmanya said...

ಈ ಸಾಮಾಜಿಕ ತಾಣಗಳು ಸಾರ್ವಜನಿಕ ಶವುಚಾಲಗಳಿದ್ದಂತೆ!. ಅಲ್ಲಿ ಶುಚಿತ್ವವನ್ನು ನಿರೀಕ್ಷಿಸುವುದು ಕಷ್ಟವೇ ಸರಿ. ಎಚ್ಚರಿಕೆಯಿಂದ ಇರುವುದು ತುಂಬಾ ಒಳ್ಳೆಯದು.

ಸಾಗರದಾಚೆಯ ಇಂಚರ said...

Its a warning for everyone, usually we would like to add more n more about us in these social networking sites.
Good information.
Naavu tilkobeku next :)

ಚುಕ್ಕಿಚಿತ್ತಾರ said...

nija suguna

namma bagegina maahitiyannu aadashtu antarjaaladalli haakadiruvude lesu..

Ittigecement said...

ಮನಸು...

ಸೋಶಿಯಲ್ ನೆಟ್ ವರ್ಕ್ಕುಗಳನ್ನು ದುರುಪಯೋಗ ಪಡಿಸಿಕೊಳ್ಳುವದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ..

ಒಳ್ಳೆಯ ಸ್ನೇಹಿತರು ಸಿಕ್ಕ ಹಾಗೆ ಒಂದೆರಡು ಕೆಟ್ತವರೂ ಸಿಕ್ಕಿಬಿಡುತ್ತಾರೆ..

ನಮ್ಮ ವಿವರಗಳನ್ನು ಆದಷ್ಟು ಕೊಡಬಾರದು..
ಅದರಲ್ಲೂ ಹೆಣ್ಣು ಮಕ್ಕಳಿಗೆ ಕೀಟಲೆ ಮಾಡುವವರು ಜಾಸ್ತಿ..

Shashi jois said...

olle mahiti suguna...innu melaadaru ellaru echharikeyinda irode olledu alva!!!!!!!!!!!

ತೇಜಸ್ವಿನಿ ಹೆಗಡೆ said...

Yes Sugunaavare.. nivu hELiddu nija... Prevention is better than Cure! Thanks for the info.

KalavathiMadhusudan said...

paristiti bahala
suukshmavaagide
sugunaravare.
abhinandanegalu.

Anonymous said...

Nice article on facebook

http://networkedblogs.com/NoG5H