Wednesday, September 28, 2011

ನೀರವ ಮೌನ


ಆ ಬದಿಯಿಂದ ಈ ಬದಿಗೆ
ಭದ್ರವಾಗಿ ನಿಂತಿಹೆನು
ದಡ ಸೇರ ಬಯಸುವವಗೆ
ದಾರಿ ತೋರುವೆ ನಾನು

ಯಾರು ಬಂದು ಹೋದ ಕುರುಹಿಲ್ಲ
ಹೆಜ್ಜೆಗಳ ಸಪ್ಪಳ ಕೇಳುತಿಲ್ಲ
ಬರುವರೆಂಬ ನಿರೀಕ್ಷೆಯಲಿ ನಿಂತಿಹೆನು
ಬಾಯ್ತೆರದ ಬಕ ಪಕ್ಷಿಯಂತೆ.....

ಹೆಜ್ಜೆಗಳು ನಲುಗವು
ಆಯ ತಪ್ಪಿ ಬೀಳಿಸೆನು
ಸುತ್ತಲೂ ಕಬ್ಬಿಣ ಸಲಾಕೆ ಹೊಂದಿಹೆನು
ಇನ್ನೇಕೆ ಭಯವು ನೆಡೆದಾಡಲು...!!??

ಹೆಜ್ಜೆ ಮೂಡುವವರೆಗೂ
ಗೆಜ್ಜೆ ಸಪ್ಪಳ ಕೇಳುವವರೆಗೂ
ಈ ನೀರವ ಮೌನದಲಿರುವ
ಹಾದಿಗೆ ಮಾತು ಕಲಿಸ ಬನ್ನಿ..!!!

-----------

@ಚಿತ್ರ: ಮನುವಚನ್

15 comments:

Unknown said...

nice ona :)

sunaath said...

ಸೇತುವೆಯೂ ಕೂಡ ಹೆಜ್ಜೆಗಳಿಗಾಗಿ ಹಾತೊರೆಯಬಹುದೆನ್ನುವ ಕಲ್ಪನೆ ಸುಂದರವಾಗಿದೆ. ಉತ್ತಮ ಕವನ.

ಚುಕ್ಕಿಚಿತ್ತಾರ said...

ಚನ್ನಾಗಿದೆ..ಕವಿತೆ ಮತ್ತು ಚಿತ್ರ...

Subrahmanya said...

ಚೆನ್ನಾಗಿದೆ. ನಿರೀಕ್ಷೆ ಎನ್ನುವುದು ಸೇತುವೆಯನ್ನೂ ಬಿಡದೇ ? !. ನಿಮ್ಮ ಕಲ್ಪನೆ ಸೊಗಸಾಗಿದೆ, ಚಿತ್ರವೂ ಸಹ.

ಮನದಾಳದಿಂದ............ said...

ಸೇತುವೆಯೂ ನಿರೀಕ್ಷೆಯಲ್ಲಿರುವುದೇ?
ಕಲ್ಪನೆ ಸೊಗಸಾಗಿದೆ, ಚಂದದ ಕವನ...........

ಸಾಗರದಾಚೆಯ ಇಂಚರ said...

ಕಲ್ಪನೆ ಸೊಗಸಾಗಿದೆ

ಕಲ್ಪನೆಯಲ್ಲಿ ಎಲ್ಲವನ್ನು ಕಟ್ಟಬಹುದಲ್ಲ

ಸುಂದರ ಕವನ

ವನಿತಾ / Vanitha said...

Nice..:)

& photo is superb!! ellidu? Kudos to chintu..Hugs :)

ಗಿರೀಶ್.ಎಸ್ said...

Good one..both snap and lines...

ದಿನಕರ ಮೊಗೇರ said...

ಮನಸು ಮೇಡಮ್,
ನಿಮ್ಮ ಕವನಕ್ಕಿಂತ ನನಗೆ ಮನು ಫೋಟೊ ಇಷ್ಟ ಆಯ್ತು...... ಚೆನ್ನಾಗಿ ತೆಗೆದಿದ್ದಾನೆ.....

Dr.D.T.Krishna Murthy. said...

ಹಾಂ!ಇಲ್ಲಿದೆ ಆ ಸೇತುವೆ!!ಭವ ಸಾಗರವ ದಾಟಿಸುವ ಭಗವನ್ನಾಮ ಸ್ಮರಣೆಯ ಸೇತುವೆ!!ಕವಿತೆ ತುಂಬಾ ಚೆನ್ನಾಗಿದೆ.

Badarinath Palavalli said...

ಎಲ್ಲ ಸೇತುವೆಗಳಿಗೂ ಬಾಯಿದ್ದರೆ, ತಮ್ಮದೇ ಕಥೆ ಹೇಳುತ್ತಿದ್ದವೇನೋ?

ಪದಗಳ ಬಳಕೆಯಲ್ಲೂ, ಭಾವನೆಗಳನ್ನು ಕವನವಾಗಿಸುವುದರಲ್ಲೂ ಅಚ್ಚುಕಟ್ಟುತನವಿದೆ.

ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com

Face book Profile : Badarinath Palavalli

ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

shivu.k said...

ಸುಗುಣಕ್ಕ,
ಸೇತುವೆ ಮಾತಾಡಿದ ರೀತಿ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ಪೋಟೊ ಕೂಡ...

prabhamani nagaraja said...

ಮಗನ ಛಾಯಾ ಚಿತ್ರ ಕೌಶಲ್ಯಕ್ಕೆ ಅಮ್ಮನ ಸು೦ದರ ಕವನದ ಮೆರುಗು! ಕವನ ಬಹಳ ಚೆನ್ನಾಗಿ ಮೂಡಿ ಬ೦ದಿದೆ ಸುಗುಣ ಅವರೇ, ಇಬ್ಬರಿಗೂ ಅಭಿನ೦ದನೆಗಳು.

Ittigecement said...

ಮನಸು....

ಮೊದಲಿಗೆ ಮನುವಚನ್ ಗೆ ಅಭಿನಂದನೆ...

ಆ ಪುಟ್ಟನಲ್ಲಿ ಕಲೆ ಇದೆ...

ಆ ದೈವಿದತ್ತವಾದ ಕಲೆಯನ್ನು ನೀವು ಹುಡುಕಿದ್ದಕ್ಕೆ ನಿಮಗೂ ಅಭಿನಂದನೆ..

ಕವನ ಮಸ್ತ್ !! ಸರಳ ಸಾಲುಗಳಲ್ಲಿಯ ಭಾವ ಇಷ್ಟವಾಯಿತು....

ಮೌನರಾಗ said...

wondrful...