http://ittigecement.blogspot.com/2011/09/blog-post.html - ಇದು ಪ್ರಕಾಶಣ್ಣ ಬರೆದ ಕಥೆ...
ನೀತಿ..ಪ್ರೀತಿ..
ಅದೇ ಕಥೆಯನ್ನು ಮುಂದುವರಿಸಿ ಬರೆದಿದ್ದೇನೆ...
ನಾನು ಪ್ರಶ್ನೆ ಕೇಳುವುದು ಸಹಜ......!!!
ಯಾಕೆ ಅಂದರೆ.... ನಾನು ಜೀವನದಲ್ಲಿ ಎಂದೂ ಇವರನ್ನ ನೋಡೇ ಇಲ್ಲ, ಇವರ ಬಗ್ಗೆ ಕೇಳಿಲ್ಲ, ಬಹಳ ದಿನಗಳ ಪರಿಚಯವಿಲ್ಲ ಅಥವಾ ನಮ್ಮ ನೆಂಟರೂ ಅಲ್ಲ... ದಿಢೀರ್ ಎಂದು ೨ ತಿಂಗಳಲ್ಲಿ ನೋಡಿದ್ದು ಆಯ್ತು ಮದುವೆನೂ ಆಯ್ತು ಈ ಎರಡು ತಿಂಗಳಲ್ಲಿ ಗಂಡನಾಗುವನನ್ನು ಹೇಗೆ ಅರ್ಥ ಮಾಡಿಕೊಳ್ಳಲು ಸಾಧ್ಯ......
ಆ ಹುಡುಗಿಯನ್ನು ಇಷ್ಟ ಪಟ್ಟಿದ್ದರೆ ಹೂ ಎನ್ನಲಿ.... ಇಲ್ಲವಾ ಖಡಾಖಂಡಿತವಾಗಿ ಇಲ್ಲ ಎಂದು ವಾದಿಸಿ ನನ್ನನ್ನ ಗೆಲ್ಲ ಬೇಕಿತ್ತು ಅದು ಬಿಟ್ಟು.... ಕೆಟ್ಟ ಕೋಪ ತೋರಿಸಿ ಮುಖ ತಿರುಗಿಸಿ ಮಲಗುವುದೇನು...?????
ಇವರೊಬ್ಬರಿಗೇ ಕೋಪ ಬರುವುದ.... ನನಗೂ ಬರುತ್ತೆ..... ನನ್ನಲ್ಲೂ ಸ್ವಾಭಿಮಾನವೆನ್ನುವುದು ಇದೆ......
ಮದುವೆಯಾದರೆ ಈ ತರಹ ಕದನ, ಕೋಪ ಎಲ್ಲಾ ಇರುತ್ತಾ...ಅಬ್ಬಾ!!! ಭಯವಾಗುತ್ತೆ... ಅಪ್ಪ ಅಮ್ಮನಿಗೆ ಹೇಳಿದ್ದೆ, ಪ್ರೀತಿಸಿ ಮದುವೆವಾಗತೀನಿ ಎಂದು ಆದರೆ ಅಪ್ಪ,ಅಮ್ಮ ಅದೇ ಓಭಿರಾಯನ ಕಾಲದಲ್ಲೇ ಇದ್ದಾರೆ.... ಜಾತಿ,ಮತ, ಹಣ, ಅಂತಸ್ತು ಎಂದು ಏನೋ ಮನೆಯವರೆಲ್ಲಾ ನೋಡಿ ಮಾಡಿದ ಮದುವೆ ಸಂಬಂಧ ಭದ್ರವಾಗಿರುತ್ತೆ ಎನ್ನೋ ಇರಾದೆ ಇವರದು...... ಏನೋ ನನಗೆ ನನ್ನ ಜೀವನವೇ ಗೊಂದಲದಲ್ಲಿದೆ... ಈಗಲೇ ನನ್ನ ಗಂಡನಿಗೆ ಇಷ್ಟು ಕೋಪ... ಮುಂದೆ ಹೇಗೋ ದೇವರೇ ಬಲ್ಲ..!!!!!!!! ಈ ರೀತಿ ಯೋಚನೆ ಆ ಹೆಣ್ಣು ಮಗಳದು...
ಮೌನ ಆವರಿಸಿದೆ ಆ ಬದಿ ಅವನು ಈ ಬದಿ ಇವಳು...... ನೀರವ ಮೌನ .... ಇಲ್ಲಿ ತಪ್ಪುನೆಪ್ಪುಗಳ ಪ್ರಶ್ನೆ ಇಲ್ಲ...... ಹುಸಿಮುನಿಸು ಮನೆ ಮಾಡಿದೆ.... ಆ ಮುನಿಸಲ್ಲೇ ಕಣ್ಣ ಕಂಬನಿಗಳು ತಲೆದಿಂಬನ್ನ ಒದ್ದೆಗೊಳಿಸುತ್ತಿತ್ತು ಇದು "ಮೌನದಿ ಕಣ್ಣೀರ ರಾಗ".........
--
ತನ್ನೆಲ್ಲಾ ಆಸೆ, ಪ್ರೀತಿ, ಬದುಕು, ನಂಬಿಕೆ, ನನ್ನವನೇ ಇವನು.. ಇವಳು ನನ್ನವಳು ಎಂದು ಒಬರಿಗೊಬ್ಬರಿದ್ದೇವೆ..... ಒಲವಿನ ಆಸರೆಯಾಗಿ ಹೊಸ ಬದುಕು ಪ್ರಾರಂಭಿಸುವ ದಿನ ಈ ಮೊದಲ ರಾತ್ರಿ ಇಂತಹದರಲ್ಲಿ ಎಲ್ಲವೂ ಅನುಮಾನದಲ್ಲಿ ದೂಡಿಬಿಡುತ್ತಾಳಲ್ಲ ಇವಳು... ಕನಸು ಕಟ್ಟಿದ್ದ ಮೊದಲ ರಾತ್ರಿ ಕನಸಾಗೇ ಉಳಿದು ಬಿಟ್ಟಂತಾಯ್ತು............ -ಈ ರೀತಿ ಇರಾದೆ ಗಂಡನದು
ಮತ್ತದೇ ನೀರವ ಮೌನ ಮಗ್ಗುಲು ಬದಲಿಸದೇ ಯೋಚಿಸಿದ್ದವನಿಗೆ ನಿದ್ರೆ ಆವರಿಸಿತ್ತು....
ಮಧ್ಯರಾತ್ರಿ....
ಏಕೋ ಗಂಟಲು ಒಣಗಿದೆ.... ಗಂಡನ ಮೇಲಿನ ಕೋಪ...ಕಣ್ಣಲ್ಲಿ ನೀರನ್ನು ತರಿಸಿತ್ತು... ಕಣ್ಣಲ್ಲಿ ಹೋದ ನೀರು ಬಾಯಾರಿಕೆಯನ್ನ ಎಳೆತಂದಿತು.. ಅಯ್ಯೋ ದೇವರೆ.. ಈಗಲೇ ಗಂಟಲು ಒಣಗಬೇಕೆ.... ಅತ್ತು ಅತ್ತು... ಗಂಟಲ್ಲಿಂದ ಕೆಮ್ಮು ಪಕ್ಕದಲ್ಲಿದ್ದ ಗಂಡನನ್ನ ಎಬ್ಬಿಸಿತು.....
ತಟ್ಟನೆ ಎದ್ದವನು ಒಂದು ಲೋಟದಲ್ಲಿ ನೀರನ್ನಿಡಿದು ಕೈಚಾಚಿದನು... ಕುಳಿತು ಕೆಮ್ಮುತ್ತಿದ್ದವಳು ಮಾತನಾಡಲಿಲ್ಲ... ಬೇಡವೆಂಬಂತೆ ಮುಖ ತಿರುಗಿಸಿದಳು... ಆದರು ಅವಳ ಮುಖ ತಿರುಗಿಸಿ ನೀರನ್ನ ಇವನೇ ಕುಡಿಸಿದ.... ಅವನ ಆ ಸೇವೆ ಇಷ್ಟವಾಯ್ತು.. ನನ್ನ ಮೇಲೂ ಕಾಳಜಿ ಇದೆ ಎನಿಸಿತು... ಆದರು ಯಾಕೋ ಆ ಕೋಪವಿಡಿಸಲಿಲ್ಲ....ಎಂದೆಲ್ಲಾ ಮನಸಿನಲ್ಲಂದುಕೊಂಡಳು
ಲೋಟದಿಂದ ನೀರು ಕುಡಿಸುತ್ತ ಅವಳ ಸೌಂದರ್ಯವನ್ನೇ ಸವಿಯಬೇಕೆನಿಸಿತು..... ಆದರೂ ಅವಳು ನನ್ನನೇ ಪ್ರಶ್ನಿಸಿದಳು... ನನ್ಗೆ ಕೋಪ ಬಂದಿದೆ ಈ ರೀತಿ ಅನುಮಾನ ಪಡುತ್ತಾಳಲ್ಲ ನನ್ನ ಮೇಲೆ... ಛೇ..!! ಬಿಡು ಮಾತ್ಯಾಕೆ ಈಗ..ಮಾತನಾಡೋದು ಎಂದುಕೊಂಡು ಮಲಗಿದನು....
ಗಂಟಲಿಗೆ ಧಣಿವಾರಿತು.... ಆದರೆ ಕೋಪ ಶಮನವಾಗಲಿಲ್ಲ..... ಮಬ್ಬು ಬೆಳಕಲ್ಲಿ ಒಬ್ಬರ ಮುಖ ಒಬ್ಬರು ನೋಡಿದರು ಮೌನ ಕರಗಿಲ್ಲ.... ಅವನ ಕಣ್ಣ ಭಾಷೆ ಅರ್ಥ ಮಾಡಿಕೊಳ್ಳಲಾಗಿಲ್ಲ ಇವಳಿಗೆ...... ಪ್ರೀತಿ ಇದೆ... ಅದನ್ನ ಕೋಪದಲ್ಲಿ ಕಳೆಯೋ ಮನಸ್ಸಿಲ್ಲ ಇಬ್ಬರಿಗೂ....... ಆದರೂ ಏನೋ ಸ್ವಾಭಿಮಾನ....
ಮುಖ ತಿರುವಿ ಮಲಗಿದ್ದ ಅವಳೀಗ ಗಂಡನತ್ತ ಮುಖ ಮಾಡಿ ಮಲಗಿದ್ದಳು ಆದರೆ ಅಂತರ ಮಾತ್ರ ಮುಂದುವರಿಸಿದ್ದಳು......
ಇತ್ತ ಇವನೂ ಅವಳ ಮೌನ ಮುರಿಯಲು ಸಾಧ್ಯವಾಗಲಿಲ್ಲ ತನ್ನಲಿದ್ದ ಕೋಪ ಸಹ ಕಡಿಮೆಯಾಗಿರಲಿಲ್ಲ..... ಮುಖ ತಿರುಗಿಸಿ ಮಲಗಿಬಿಟ್ಟಿದ್ದ...... ಒಂದೇ ಮಗ್ಗುಲಲಿ ಮಲಗಿದ್ದವಗೆ ಕೈ ಹಿಡಿದಂತೆ ನೋವಾಗಿದೆ......... ಇತ್ತ ಒರಳುತ್ತಾನೆ.... ಒಮ್ಮೆಲೇ ಬದಲಿಸಿದ ಕೈ ಪಕ್ಕದಲ್ಲೇ ಇದ್ದ ಮೃದು ತೋಳು ಅವನನ್ನ ಆಕರ್ಷಿಸಿದೆ........ ಮೆಲ್ಲಗೆ ನೇವರಿಸಿ.....ತಲೆದಡವಿದೊಡೆ....... ಅದೇನೋ ಮೋಹಕ ಭಾವ ಮನದಲ್ಲೇ ಅರಳುತ್ತದೆ.....
ಮಬ್ಬುಗತ್ತಲಲಿ ಕಣ್ಣು ಬಿಟ್ಟವಗೆ ಆ ಕೆಂಬಣ್ಣದ ತುಟಿಗಳು ಆಹ್ವಾನಿಸಿವೆ...... ಅವಳ ಮುಗ್ಧ ಮೊಗ ಅವಳತ್ತ ಸೆಳೆದಿದೆ......ಇತ್ತ ನಿದ್ರೆಯಲ್ಲಿರುವಂತೆ ನಟಿಸುತ್ತಿದ್ದವಳಿಗೆ... ಅವನ ಘಾಡ ಚುಂಬನ ಅವನನ್ನೇ ಬಾಚಿ ತಬ್ಬುವಂತೆ ಮಾಡಿದೆ...... ಆ ಕತ್ತಲ ರಾತ್ರಿ... ಇಬ್ಬರೂ ಮಾತಿಲ್ಲ ಕಥೆ ಇಲ್ಲ.... ನೀರವ ಮೌನದಲ್ಲೇ ಒಬ್ಬರಿಗೊಬ್ಬರು ಕ್ಷಮಾಪಣೆ ಸಲ್ಲಿಸಿ.........ಮಿಲನ ಮಹೋತ್ಸವದಲ್ಲಿ ತೇಲಿಬಿಡುತ್ತಾರೆ.... ಈ ಸಮ್ಮಿಲನ ಅವರಿಬ್ಬರಿಗೂ ಅರಿವೇ ಇಲ್ಲದೇ ಒಂದು ಮಾಡಿಸಿಬಿಟ್ಟಿದೆ...
ಒಬ್ಬರಿಗೊಬ್ಬರ ಪ್ರಶ್ನೆ ಅದು ಘಾಡವಾದ ವಿಷಯವೇನಲ್ಲ....... ಮಾತು ಸಹಜ... ಪ್ರೀತಿಯ ಬಂಧನ ಎಲ್ಲ ತಪ್ಪು ಮಾತುಗಳನ್ನ ಮುಚ್ಚಾಕಿ ಬಿಡುವಂತೆ ಎರಡು ಜೀವಗಳು ಪ್ರೀತಿಯಲ್ಲಿ ಇಬ್ಬರೂ ಬಂಧಿಯಾಗಿದ್ದರು......
ಆ ಕೋಪದ ರಾತ್ರಿ ಇಬ್ಬರಿಗೂ ಅರಿವಿಲ್ಲದೇ ಒಂದು ಮಾಡಿಸಿತ್ತು.........ಕೋಪ, ಮುನಿಸು.... ಮುಖ ತಿರುಗಿಸಿ ಮಲಗಿದ್ದೂ ಯಾವೊಂದು ವ್ಯತ್ಯಾಸ ಅರಿಯದೇ ಬೆಳಗಿನ ಸೂರ್ಯ ಕಿಟಕಿಯಲ್ಲಿ ನಾಚುತ್ತ ಇವರಿಬ್ಬರ ಮುಖಕ್ಕೆ ಬೆಳಕು ಚೆಲ್ಲಿದ್ದ......
ರೀತಿ: ಈ ರೀತಿನು ಇರುತ್ತಾರೆ ಜನ ಎಂಬುದು ಪ್ರಕಾಶಣ್ಣನ ಕಥೆ
ನೀತಿ: ಗಂಡ ಹೆಂಡಿರು ಜಗಳ ತಿಂದು ಮಲಗೋವರೆಗಷ್ಟೇ
ಪ್ರೀತಿ: ಗಂಡು ಹೆಣ್ಣು ಪ್ರೀತಿಯಲ್ಲಿ ಎಲ್ಲವನ್ನೂ ಮರೆಮಾಚಬಹುದು...
ತಪ್ಪುಗಳಿದ್ದರೆ ಕ್ಷಮೆ ಇರಲಿ...
14 comments:
chennagide suguna kate...
ಸುಗುಣ ನನ್ನ ನಿಮ್ಮ ಭಾವನೆಗಳಿಗೆ ಅಂತ್ಯ ಒಂದೇ ಗೊತ್ತಿರೋದು..ಏನೇ ಆದರೂ ..ಎಲ್ಲರೂ ನಗು ನಗುತಾ ಸಾಗಬೇಕು...ಹಹಹಹ...ನೀವು ಬೆಳಗಿನವರೆಗೂ ಕಾಯದೇ ಮಧ್ಯರಾತ್ರಿಗೇ ಮುಗ್ಸಿದ್ರಿ ..ಮುನಿಸಿನ ಕಥೆ...ಬೆಳಗಾಗಿ..ಎಲ್ಲಾ ಫೈನ್...!!! ಸೂಪರ್ ನನಗಂತೂ...ಯಾರೆಲ್ಲಾರಾ ಹೋಗ್ಲಿ...ಹಹಹಹ
ಮನಸು....
ನಾವು ಗಂಡಸರು ಎಷ್ಟೇ ತಿಪ್ಪರ ಲಾಗ ಹಾಗಿದರೂ ಹೆಣ್ಣಿನ ಮನಸ್ಸನ್ನು..
ಹೆಣ್ಣಾಗಿ ಬರೆಯಲು ಅಸಾಧ್ಯ...
ಅವಳ ಭಾವನೆಗಳನ್ನು ಚಿತ್ರಿಸಲು ಬಲು ಕಷ್ಟ...
ನಿಮ್ಮ ಕಥೆ ಓದಿ ನನಗನ್ನಿಸಿದ್ದು ಹೀಗೆ..
ತುಂಬಾ ನೈಜವಾಗಿ ಹೆಣ್ಣಿನ ಮನದಾಳವನ್ನು ತಿಳಿಸಿದ್ದೀರಿ..
ನಾಯಕಿಯ ನಿರ್ಣಯ ಅತ್ಯಂತ ಸಹಜ..
ಎಲ್ಲರೂ ಬಯಸುವಂಥಹ ಅಂತ್ಯ...
ನನ್ನ ಪ್ರೀತಿಯ ಸಹೋದರಿಗೆ ಅಭಿನಂದನೆಗಳು...
ಜೈ ಜೈ ಜೈ ಹೋ !!
ಹೆಣ್ಣಿನ ಮನಸು ಹೆಣ್ಣಿಗಲ್ಲದೆ, ಅರ್ಥವಾಗುವುದೇ?
ಕಥನ ಚೆನ್ನಾಗಿದೆ.
ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ....ಚೆನ್ನಾಗಿದೆ
ಆದರೆ ಕಥೆ ಕಥೆಯ೦ತಿಲ್ಲ....!!!!
ಸುಗುಣ ಮೇಡಂ ಕಥೆ ಚೆನ್ನಾಗಿ ಮೂಡಿಬಂದಿದೆ. ದಾಂಪತ್ಯದ ಬಗ್ಗೆ ಇರುವ ಗಾದೆಯನ್ನು ನಿಜ ಮಾಡಿದ್ದೀರಿ.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
ಸುಗುಣಕ್ಕ,
ಸತ್ಯ ಸತ್ಯ ಸತ್ಯ...ಹೆಣ್ಣಿನ ಮನಸ್ಸನ್ನು ಅರಿಯಲು ಅಥವ ಬರೆಯಲು ಗಂಡಿಗೆ ಸಾಧ್ಯವೇ...ಹೆಣ್ಣಿನ ಮನಸ್ಸಿನ ತುಮಲಗಳು ಚೆನ್ನಾಗಿ ಮೂಡಿಬಂದಿವೆ.
ನಿಮ್ಮೆಲ್ಲರನ್ನು ನೋಡಿ ನಾನು ಬರೆಯಬೇಕೆನಿಸಿದೆ. ನನ್ನ ಬರಹಕ್ಕೆ ಎಳೆ ಸಿಕ್ಕಿದೆ. ಕೂತು ಬರಯಲಾಗುತ್ತಿಲ್ಲ. ಇವತ್ತು ಬರೆಯಬೇಕಿಂದಿದ್ದೆ. ಅನಿರೀಕ್ಷಿತವಾಗಿ ಇಡೀ ದಿನ ಮನೆಯಲ್ಲಿರಲಿಲ್ಲ. ಒಂದೆರಡು ದಿನದಲ್ಲ ಸಾಧ್ಯವಾಗಬಹುದು. ಬಹುಶಃ ಕತೆಗೆ ಇನ್ನೂ ಪ್ರಸವ ವೇದನೆಯ ವೇಗ ಬಂದಿಲ್ಲವೇನೋ ಅನ್ನಿಸುತ್ತೆ...
ಅಷ್ಟರಲ್ಲಿ ಇನ್ಯಾರಾದರೂ ಒಂದು ಖೋ ಕೊಡುತ್ತಾರ..?
madam..tumbaa ishta aytu kathe....chennagide..
ಸುಗುಣ ಮೇಡಂ.
ಒಳ್ಳೆಯ ಅಂತ್ಯ. ಮಾಡಿದ್ದೀರಾ.... ಹೌದು,,, ಕೋಪ ಸಹಜ... ಆದರೆ ಪ್ರೀತಿಗೆ ಆ ಕೋಪನ ಕರಗಿಸುವ ಶಕ್ತಿ ಇದೆ.... ಹೆಣ್ಣಿನ ಭಾವನೆಗಳನ್ನು ಚೆನ್ನಾಗಿ ಬರೆದಿದ್ದೀರ.....
ಗುರು
ಸುಗುಣಾ,
ಅಂತ್ಯವನ್ನು ತುಂಬ ಮಧುರವಾಗಿ ಚಿತ್ರಿಸಿದ್ದೀರಿ.
ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವುದು ಸತ್ಯದ ಮಾತು. ಕಥೆ ಚೆನ್ನಾಗಿ ಮೂಡಿ ಬಂದಿದೆ. ಕಥೆಯ ಶೈಲಿ ಇಷ್ಟವಾಯ್ತು ಸುಗುಣ.
ಮುಕ್ತಾಯ ಇಷ್ಟವಾಯಿತು.
ಮನಸ್ಸು ಯಾವಾಗಲೂ ಸಂತಸವನ್ನು ಬಯಸುತ್ತದೆ.
ಧನ್ಯವಾದಗಳು.
ಅತ್ಮೀಯ ಸ೦ಬ೦ಧದಲ್ಲಿ ಪರಸ್ಪರ ಉ೦ಟಾಗುವ ಘರ್ಷಣೆಗಳು ಯಾವ ಮಟ್ಟದ್ದಾದರೂ, ಅದರ ಅ೦ತ್ಯ ಮಾತ್ರಾ ಧನಾತ್ಮಕವಾಗಿರಬೇಕು ಎನ್ನುವ ಲೇಖಕರ ಅಭಿಪ್ರಾಯವನ್ನು ನಾನೂ ಅನುಮೋದಿಸುತ್ತೇನೆ. ಅಭಿನ೦ದನೆಗಳು, ಮನಸು ಅವರಿಗೆ.
ಅನ೦ತ್
manassige sukha beku, dukha manassige beda,
hradayakke samatolana beku
iveradannu nibhaayisuvudu namge bittaddu allave?
olleya antya
Post a Comment