ದಿನವೆಲ್ಲಾ ಸುತ್ತಿ
ಮೈಯ್ಯಿಕೈ ನೋಯಿಸ್ಕೊಂಡು
ಕೆಲಸ ಮಾಡಿದ್ದು ಸಾಕಾಯ್ತು
ಬೆಂಡಾಗಿ ಹೋಯ್ತು ಜೀವ...
ಮನಸ್ನಾಗಿನ ನೋವು
ದೇಹದಾಗಿನ ತಾಪ
ತಣಿಸೋಕೆ ಬೀಡಿ ಸೇದುತಾ
ಧಮ್ ಎಳಿದ್ರೆ ಸುಖವೋ ಸುಖ...
ಗಂಡುಸ್ರೋಬ್ಬ್ರೆ ಅಲ್ಲ
ಕುಡಿದು ಸೇದೋಕೆ
ನಾವೇನು ಕಮ್ಮಿ
ಬಾಟ್ಲಿ ಗೀಟ್ಲಿ
ಬೀಡಿ ಸಿಗರೇಟ್ ಸೇದೋಕೆ...
ಬೀಡಿಯ ಗಾಳಿ ದೇಹದಾಗೆ ಸೇರಿ
ಬೆಚ್ಚಗೇ ಮಾಡುಸ್ತಾದೆ ನೋಡಿ
ಮನಸನ್ನಾ ತಣಿಸ್ತಾದೇ ನೋಡಿ
ನಿಮ್ಗೂ ಬೇಕಾರೆ ಕೊಡ್ತೀನಿ ವಸಿ ತಗೊಳ್ಳಿ...
ಚಿತ್ರ ಕೃಪೆ: ಗಣಪತಿ ಹೆಗಡೆ
13 comments:
ಒಳ್ಳೆ ಚಿತ್ರ ಕವಿತೆ ಕಟ್ಟಿಕೊಟ್ಟಿದ್ದೀರಿ ಮೇಡಂ. ಬಹುಶಃ ಈ ಚಿತ್ರ ಲಮಾಣಿ ಹೆಣ್ಣು ಮಗಳದು ಅಂತ ಕಾಣುತ್ತೆ. ಅವರಲ್ಲಿ ಈ ಬೀಡಿ, ಸಿಗರೇಟು ಮತ್ತು ಸೆರೆ ಮಾಮೂಲು! ಕೆಲವು ಪಂಗಡಗಳಲ್ಲಿ ಹೆಸರುಗಳೇ ಬಲು ತಮಾಷಿ, ರಿಬ್ಬನ್ನು ಟೇಪು ಮತಾಪು ಹೀಗೆ...
sooper akka :)
ಗಂಡೇನು, ಹೆಣ್ಣೇನು ದಣಿದ ಶ್ರಮಿಕರಿಗೆ ಒಂದು ಗಳಿಗೆ ವಿಶ್ರಾಂತಿ ಬೇಕಾದಾಗ ದಮ್ ಎಳೆಯಲೇ ಬೇಕಲ್ಲ! ಅಪೂರ್ವ ಚಿತ್ರಕ್ಕೆ ಅಪೂರ್ವ ಕವನ!
ಮೇಡಂ;ಚಿತ್ರ,ಕವನ ಎರಡೂ ಚೆನ್ನಾಗಿದೆ.
ಮನಸು...
ಹಾಹ್ಹ..ಹ್ಹ್ಹಾ.. !!
ನನಗೂ ಒಂದು ಧಮ್ ಬೀಡಿ ಎಳೆಯಬೇಕು ಅಂತ ಅನ್ನಿಸ್ತ ಇದೆ...
ಕವನ ಚೆನ್ನಾಗಿದೆ...
ಫೋಟೊ ತೆಗೆದ ಗಣಪತಿಯವರಿಗೂ ಒಂದು ಬೀಡಿ ಕೊಡಿ...
ಹ್ಹಾ ಹ್ಹಾ !!
ಬೀಡಿ ಜಲೈಲೆ..ನಝರ್ ಸೇ ಪಿಯಾ....!!
ಜೈ ಹೋ !!
Nice
gud one manasu.....ದೀಪಾವಳಿಯ ಶುಭಾಶಯಗಳು
nice poem......
hahaha ದಂ ಮಾರೋ ದಮ್...ಹಿಂದಿ ಹಾಡು ನೆನಪಾಯ್ತು...ಚನಾಗೈತೆ ವರಸೆ...ಇಂಗೂ ಅನ್ನುತ್ತಾ ಮನ್ಸು..??
hindina mahileyaru
saha ee taraha havyaasa itkondiddarante.nice poem.
ha ha chennagide...
namage beedi beda.. No thanks ;)
ಮೇಡಂ,
ಚಿತ್ರ ಕವನ ಚೆನ್ನಾಗಿದೆ. ಸಂಧರ್ಭಕ್ಕೆ ಸೂಕ್ತವಾಗಿದೆ.
ಸಂದೇಶವ ತಿಳಿದು ಅನ್ವಯಿಸಿಕೊಳ್ಳಲು ಹೊರಡಬಾರದಷ್ಟೆ :) :)
~ಸುಷ್ಮ
ಬೀಡಿ ನಾವು ಎಳೆಯೋಣ... ಚೆನ್ನಾಗಿದೆ ಕವನ
Post a Comment