Monday, October 31, 2011

ನನ್ನ ಪಾ(ಹಾ)ಡು..


ಎಲ್ಲಿದ್ದರೂ ಸರಿ ಹೇಗಿದ್ದರೂ ಸರಿ
ಕನ್ನಡಭಾಷೆ ಮಾತನಾಡಿದರೆ ಸೈ..

ನಾ ಮುಟ್ಟುವ ನೆಲ ಅದೇ ಮರುಭೂಮಿ
ನಾನಿರುವ ಸ್ಥಳ ಅದೇ ಕುವೈತ್
ನಾ ನೋಡುವ ಮರ ಅದೇ ಖರ್ಜೂರದ ಮರ
ಅರಬರ ನಾಡಲಿ ಜೀವನ ನೆಡೆಸುತಿರುವುದು ಸತ್ಯ
ಕಡಲ ತೀರದ ಮನೆಯಲಿ ನೆಲೆಸಿರುವುದು ನಿತ್ಯ
ಎಲ್ಲೇ ಇದ್ದರೂ ನಾ ಹೇಗೇ ಇದ್ದರು ನಾ
ಮಾತೃಭಾಷೆ ಕನ್ನಡವೇ ಸದಾ....

ಒಂಟೆಗಳ ನಾಡಲಿ ಕುಳಿತಿರುವಾ ಮನ
ತೈಲದ ಸಿರಿಯನು ಕಣ್ಣಲಿ ನೋಡುತಾ
ಕಡಲ ಉಪ್ಪಿನ ವಾಸನೆ ಸೇವಿಸುತಾ
ಕನ್ನಡದ ಕೂಗನು ಮನದಲೇ ಹೇಳುತಾ
ಕನ್ನಡ ನಾಡಲಿ ದೇಹವ ನೀಡಿದ
ಆ ನನ್ನ ತಾಯಿ ಹೃದಯಕೆ ವಂದನೆ...

ಕಚೇರಿಗಳಲಿ ಅರಬಿ, ಇಂಗ್ಲೀಷಿನದೇ ಸಾಮ್ರಾಜ್ಯ
ಆದರೂ ಆಗೊಮ್ಮೆ ಈಗೊಮ್ಮೆ ಸಿಗುವ
ಕನ್ನಡಿಗರೊಡನೆ ಭಾಷಾ ಭಾಂದವ್ಯ
ಸದಾ ಹಸಿರಾಗಿಸುವುದು ನಮ್ಮ ಆಂತರ್ಯ

ಎಲ್ಲಿದ್ದರೂ ಸರಿ ಹೇಗಿದ್ದರೂ ಸರಿ
ಕನ್ನಡಭಾಷೆ ಮಾತನಾಡಿದರೆ ಸೈ..

ಚಿತ್ರ:ಅಂತರ್ಜಾಲ

16 comments:

Unknown said...

sooper aagide akka :)

ವನಿತಾ / Vanitha said...

ಸೂಪರ್..:)
ಶುಭಾಶಯಗಳು.

Ittigecement said...

ಮನಸು...

ಕನ್ನಡದ ರಾಜ್ಯೋತ್ಸವದ ಶುಭಾಶಯಗಳು...

ಸುಂದರ ಕವನಕ್ಕಾಗಿ ಅಭಿನಂದನೆಗಳು...

sunaath said...

ಮನಸು,
ನಿಮ್ಮ ಕನ್ನಡಪ್ರೇಮಕ್ಕೆ ತಲೆ ಬಾಗುತ್ತೇನೆ. ಶುಭಾಶಯಗಳು.

balasubramanya said...

ಕನ್ನಡ ಹಬ್ಬದ ಶುಭಾಶಯಗಳು ನಿಮಗೆ ಕವನ ಚೆನ್ನಾಗಿದೆ. ಈ ಭೂಮಿಯಲ್ಲಿ ,ಎಲ್ಲಿದ್ದರೇನು ಹೇಗಿದ್ದರೇನು ಮನದಲ್ಲಿ ಕನ್ನಡ ನಂದಾದೀಪ ಬೆಳಗಿದರೆ ಸಾಕಲ್ಲವೇನು. ನಿಮ್ಮ ಆಶಯಕ್ಕೆ ಜೈ ಹೋ.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

ಗಿರೀಶ್.ಎಸ್ said...

ಕನ್ನಡ ರಾಜ್ಯೋತ್ಸವದ ಶುಭಾಶಯಗಳು...
ಕವನ ಚೆನ್ನಾಗಿದೆ......

ಚುಕ್ಕಿಚಿತ್ತಾರ said...

ಕನ್ನಡದ ರಾಜ್ಯೋತ್ಸವದ ಶುಭಾಶಯಗಳು

ಸೀತಾರಾಮ. ಕೆ. / SITARAM.K said...

chennaagide marubhoomiya kannadageete!!!

V.R.BHAT said...

ಕನ್ನಡದ ರಾಜ್ಯೋತ್ಸವದ ಶುಭಾಶಯಗಳು

ಮನಮುಕ್ತಾ said...

ಕನ್ನಡ ರಾಜ್ಯೋತ್ಸವದ ಶುಭಾಶಯಗಳು. :)

Badarinath Palavalli said...

ಮೊದಲು ಸಾಷ್ಟಾಂಗ ವಂದನೆ. ಹೊರ ನಾಡಿನ ಕನ್ನಡದ ಅಪರೂಪ ಕುಸುಮ ನೀವು. ನಮ್ಮ ಬೆಂಗಳೂರಿನಲ್ಲೇ ’ಎನ್ನಡ’ ’ಎಕ್ಕಡ’ ಕನ್ನಡ ಆಗುತ್ತಿರುವಾಗ. ನಿಮ್ಮ ನೆಲದಲ್ಲೇ ನೀವು ಕನ್ನಡವನ್ನು ಕನ್ನಡಿಯಾಗಿ ನೋಡಿದ್ದು ಸಂತಸದ ವಿಷಯ.

ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ನನ್ನ ಬ್ಲಾಗಿಗೂ ಬನ್ನಿರಿ.

my face book profile :
Badarinath Palavalli

Pradeep Rao said...

ವಾಹ್! ನಾಡಿನ ರಾಜಧಾನಿ ಬೆಂಗಳೂರಿನಲ್ಲಿದ್ದುಕೊಂಡೇ ಕನ್ನಡಕ್ಕೆ ದ್ರೋಹ ಬಗೆಯುವಂಥವರ ಮಧ್ಯೆ ಇರುವ ನನಗೆ ನಿಮ್ಮೆ ಕವನ ನೋಡಿ ಬಹಳ ಹೆಮ್ಮೆಯಾಯಿತು! ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಜಲನಯನ said...

ಹೊರಗಿರುವ ನಾವು ನಾಡಿಗರಿಗೆ ಕೋರಲೇ ಬೇಕು ನಾಡಹಬ್ಬಕ್ಕೆ ಶುಭಾಶಯ....
ನಾವಿಲ್ಲೇ ನಮ್ಮಲ್ಲೇ ಹೀಗೂ ಶುಭಾಶಯ...
ನಿಮ್ಮೆಲ್ಲರಿಗೂ ಸುಗುಣ, ಮಹೇಶ್, ಮನು...

ಮೌನರಾಗ said...

ಚೆನ್ನಾಗಿ ಹೇಳಿದಿರಿ ಮನಸು...superb

Subrahmanya said...

ಮನಸಿನ ಭಾವನೆಗಳನ್ನು ಇದ್ದಂತಯೇ ವ್ಯಕ್ತಪಡಿಸಿದ್ದೀರಿ. ನಿಮ್ಮ ಕನ್ನಡ ಪ್ರೇಮಕ್ಕೆ ತಲೆಬಾಗುತ್ತೇನೆ. ಉತ್ತಮ ಆಶಯದ ಕವಿತೆ..

prabhamani nagaraja said...

ಕುವೈತ್ ನಲ್ಲಿದ್ದೂ ಕನ್ನಡ ಪ್ರೇಮದ ಜ್ಯೋತಿ ಬೆಳಗಿದ್ದೀರಿ. ನಿಮ್ಮ ಅ೦ತರ೦ಗದಿ೦ದ ಮೂಡಿದ ಕವನ ಸು೦ದರವಾಗಿದೆ ಸುಗುಣಅವರೇ , ಅಭಿನ೦ದನೆಗಳು ,