ಬದುಕುವ ಆಸೆ
ನೀಡದಿರಲಿ ನಿರಾಸೆ
ಅದಕೆ ಬಯಸಿ ಹೊರಟೆ
ದುಡಿಮೆಯೆಂಬ ಹೊಟ್ಟೆ ಪಾಡಿಗೆ ...
ಬಡತನಕೆ ನೂರು ಮಕ್ಕಳು
ಕೆಸರಿಗೆ ಸಾವಿರಾರು ಹುಳಗಳು
ಎಂಬಂತೆ ಬೆಳೆದು ನಿಂತ ಸಂಸಾರ
ದೂಡಬೇಕಿದೆ ದುಡಿದು ಗೇಣು ಬಟ್ಟೆಗೆ....
ಭುವಿಯ ಹಾಸಿಗೆಯಲಿ ನಿದ್ರೆ
ನೇಸರನ ಬಿಸಿಲೊಡಲೇ ಛತ್ರ
ಹರಿದು ಹೋದರವರ ಪಾದರರಕ್ಷೆ
ನಮ್ಮ ಬದುಕಿಗೆ ಶ್ರೀರಕ್ಷೆ...
ಬಡತನದ ಭಿಕ್ಷೆ
ಆ ದೈವ ಕೊಟ್ಟ ಶಿಕ್ಷೆ
ಅದನ ಮೆಟ್ಟಿ ನಿಂತರೇ
ಅದುವೆ ನಮ್ಮಗಳ ಸುಭೀಕ್ಷೆ...
@ಚಿತ್ರ ದಿಗ್ವಾಸ್
15 comments:
ನಮ್ಮ ಸಮಾಜವನ್ನು ಕಾಡುತ್ತಿರುವ ಬಡತನದ ವಾಸ್ತವತೆಯನ್ನು ಸರಿಯಾಗಿ ಚಿತ್ರಿಸಿದ್ದೀರಿ.
ಕಾಡುತ್ತಿರುವ ಬಡತನದ ಮಧ್ಯೆಯೂ, ತಾಯ್ತನದ ಎತ್ತುಗಡೆ...ಚೆನ್ನಾಗಿದೆ "ಮನಸು".. ಹೀಗೆ ಬರೆಯುತ್ತಿರಿ..
ಮಕ್ಕಳಿಗಾಗಿ ದುಡಿವ ತಾಯಿ ನೆನಪಾಗುತ್ತಾಳೆ.
ಬರೆಯುತ್ತಿರಿ
ಸ್ವರ್ಣಾ
ಬಡತನದ ಬವಣೆಗಳ ಮದ್ಯೆ ಅರಳುವ ಜೀವನೋತ್ಸಾಹದ ಬಗ್ಗೆ ಒಳ್ಳೆ ಕವನ....
ಸುಭೀಕ್ಷೆಗಾಗಿ ಹೋರಾಟ...ಚೆನ್ನಾಗಿದೆ...
ಬಡತನದ ಜೀವಗಳ ಬಗ್ಗೆ ನಿಮ್ಮಕರುಣೆಯ ತುಡಿತ , ನಿಮ್ಮ ಕವಿತೆಯಲ್ಲಿ ಕಂಡುಬರುತ್ತದೆ. ವಾಸ್ತವತೆಯ ಅರಿವು ಮೂಡಿಸುವ ಕವಿತೆ ಬರೆದ ನಿಮಗೆ ಅಭಿನಂದನೆಗಳು
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
ಬತ್ತಿದ ಕಣ್ಣೀರಲೂ ಆಸೆ ಇದೆ ಇನ್ನೇಕೊ..
ಬದುಕಬೇಕಾಗಿದೆ ಬದುಕುವೆವು ಹೀಗೇನೆ..
ಸಾಲ್ಗಳು ನೆನಪಾಗ್ತವೆ
ಬದುಕು ಆಗಲೇ ಬೇಕು ಸುಭಿಕ್ಷೆ! ಒಳ್ಳೆಯ ಆಶಯ...
ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಹುಮ್ಮಸ್ಸನ್ನು ಕೊಟ್ಟಿದ್ದೀರಿ.
ದಿಗ್ವಾಸ್ ಛಾಯಾಚಿತ್ರವೂ ಪ್ರಶಂಸನೀಯ.
(ನನ್ನ ಬ್ಲಾಗಿಗೂ ಬನ್ನಿ, ಕೆಲ ಹೊಸ ಕವನಗಳಿವೆ)
my face book profile:
Badarinath Palavalli
nimma sadaashaya chennagide,
baduku beleyuttirali
allave?
ಹುಟ್ಟು ನಮ್ಮ ಆಯ್ಕೆಯಲ್ಲ, ಜೀವನ ನಮ್ಮ ಹುಟ್ಟಿನ ಪರಿಸರವನ್ನೂ ಅವಲಂಬಿಸಿರುತ್ತದೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ, ಬಡತನದಲ್ಲೂ ಪ್ರಾಮಾಣಿಕವಾಗಿ ದುಡಿದು ಬದುಕಬೇಕು ಎಂಬ ಛಲ ಮನುಷ್ಯನನ್ನು ಒಳ್ಳೆಯತನಕ್ಕೆ ಹಚ್ಚುತ್ತದೆ. ಬಡಸ್ತಿಕೆಯ ಒಂದು ಮುಖವನ್ನು ತೆರೆದಿಟ್ಟಿದ್ದೀರಿ.
ಬದುಕು ಬವಣೆಗಳ ನಿತ್ಯದಾಟದ ಒಂದು ನಿದರ್ಶನದ ಸಂಕ್ಷಿಪ್ತ ಆದರೂ ಅರ್ಥಭರಿತ ಕವನರೂಪೀ ಪರಿಚಯ ಚನ್ನಾಗಿದೆ...ಹರಿದವರ ಪಾದರಕ್ಷೆ..ನಮಗೆ ಶ್ರೀರಕ್ಷೆ..ಈ ಅರ್ಥ ಸೂಪರ್
ಬಡತನದ ಒಂದು ಮಗ್ಗುಲನ್ನು ತುಂಬಾ ಸುಂದರವಾಗಿ ತೆರೆದಿಟ್ಟಿದ್ದೀರಿ...ಚೆನ್ನಾಗಿದೆ ಕವನ....
Good one!
ಬದುಕು ಆಗಲೇ ಬೇಕು ಸುಭಿಕ್ಷೆ! ಒಳ್ಳೆಯ ಆಶಯ...
ಸುಗುಣಕ್ಕ,
ಬದುಕಿಗಾಗಿ ತಾಯಿಯಾದವಳು ಎಷ್ಟೆಲ್ಲ ಕಷ್ಟಪಡಬೇಕು ಎನ್ನುವುದನ್ನು ಕವನದಲ್ಲಿ ಚೆನ್ನಾಗಿ ವಿವರಿಸಿದ್ದೀರಿ..
nice
Post a Comment