Thursday, June 7, 2012

ಬ್ಯೂಟಿ ಮತ್ತು ಪಾರ್ಲರ್

ಒಳಗೊಳಗೇ ಏನೋ ಕೌತುಕ...ಆಗಿನ್ನು ಕುವೈತ್ ನಗರ ಹೊಸದು. ಕುವೈತಿಗೆ ಬರುವ ಮೊದಲು ಬೇರೆ ಅರಬ್ ದೇಶ ನೋಡಿದ್ದರೂ, ಇಲ್ಲಿನ ವಾತಾವರಣ, ಜನ, ಸ್ಥಳ ಎಲ್ಲವೂ ಬೇರೆ ತರಹವೇ ಇದೇ ಎನ್ನಿಸಿತ್ತು.  ನಗರವನ್ನು ಒಮ್ಮೆ ಸುತ್ತಾಡಿದೊಡೆ ಕಣ್ಣಿಗೆ ಕಾಣೋದು ಹೆಚ್ಚುಕಡಿಮೆ ಒಂದೊಂದು ಅಪಾರ್ಟ್ ಮೆಂಟ್ಗಳಲ್ಲೂ ಒಂದು ಅಥವಾ ಎರಡು ಬ್ಯೂಟಿ ಪಾರ್ಲರ್ ಗಳೇ ಕಾಣ್ತಾವೇ... ಯಪ್ಪಾ..!!! ಕುವೈತ್ ಹೆಂಗಳೆಯರಿಗೆ ಸೌಂದರ್ಯ ಪ್ರಜ್ಞೆ ಹೆಚ್ಚೇ ಇರಬೇಕು ಅಂದುಕೊಂಡಿದ್ದೆ. ಬ್ಯೂಟಿ ಪಾರ್ಲರ್ ಜಾಸ್ತಿ ಆದಷ್ಟು ಅಲಂಕಾರ ಪ್ರಿಯರೂ ಜಾಸ್ತಿ ಆಗ್ತನೇ ಇರ್ತಾರೆ ಅಲ್ವಾ..??.



ಕುವೈತಿಗೆ ಹೊಸದಾಗಿ ಬಂದಾಗ ಬೆಂಗಳೂರಿನ ಸ್ನೇಹಿತ ಒಬ್ಬ ಕೇಳಿದ್ದ "ಕುವೈತಿ ಹುಡುಗೀರು ಹೇಗಿದ್ದಾರೆ. ಎಲ್ಲಾ ಹೇಳ್ತಾರೆ ಸಕತ್ ಬ್ಯೂಟಿಗಳಾಗಿರ್ತಾರೆ ಅಂತಾ ಹೌದಾ..?" ಎಂದಿದ್ದ. ನಾನು ಹೌದ..!! ನಾನು ಅಷ್ಟು ನೋಡೇ ಇಲ್ಲವೇ, ಎಂದು ಅಂದಿನಿಂದಲೇ ಕುವೈತಿ ಹೆಂಗಳೆಯರತ್ತ ಕಣ್ಣಾಯಿಸಿದೆ.... ವಾಹನ ಓಡಿಸುವಾಗ ಅವರ ಕರಗಳನ್ನು ನೋಡಿ ವಾಹ್ ಎಷ್ಟು ನುಣುಪಾಗಿದೆ ಕೈ. ಅವರ ಕೈಗಳೇ ಅಷ್ಟು ಚೆಂದವಿರುವಾಗ  ಇನ್ನು ಮುಖವೇಗೆ ಇರುತ್ತೆ ಎಂದುಕೊಳ್ಳುತ್ತಿದ್ದೆ.  

ನಿಜ ಕುವೈತಿನ ಹೆಣ್ಣು ಮಕ್ಕಳು ತುಂಬಾ ಚೆನ್ನಾಗಿರುತ್ತಾರೆ. ಇಲ್ಲಿನ ಹೆಂಗಳೆಯರು ಹೆಚ್ಚು ಸೌಂದರ್ಯಕ್ಕೆ ಒತ್ತು ಕೊಡ್ತಾರೆ ಎಂದೆನಿಸಿತು. ಮೊದಲೇ "ಹೆಣ್ಣು ಎಂದರೆ ಸೌಂದರ್ಯ" ಎಂಬಂತೆ ಪ್ರಪಂಚ ಬಿಂಬಿಸಿದೆ ಅದರೊಳಗೆ ಇಲ್ಲಿನ ಹೆಂಗಳೆಯರು ಇನ್ನೂ ವಿಭಿನ್ನ.   ಇಲ್ಲಿನವರು ಪಾಶ್ಚಿಮಾತ್ಯರ ರೀತಿಯೂ ಉಡುಗೆಗಳನ್ನು ತೊಡುವವರೂ ಇದ್ದಾರೆ, ಅಂತೆಯೇ ತಮ್ಮದೇ ಸಂಸ್ಕೃತಿಯ ಬುರುಕವನ್ನು ತೊಡುವವರೂ ಇದ್ದಾರೆ. ಬುರುಕವನ್ನು ತೊಟ್ಟಿರುವಂತ ಹೆಂಗಳೆಯರನ್ನು ನೋಡಿದ್ದೇನೆ. ಆಹಾ..!! ಏನು ಹೇಳ್ತೀರಾ ಕಣ್ಣಿಗೆ ತೀಡಿದ ದಟ್ಟನೆಯ ಕಾಡಿಗೆ ನಮ್ಮನ್ನ ಆಕರ್ಷಿಸುತ್ತವೆ. ಇನ್ನು ಇಲ್ಲಿನ ಹೆಂಗಳೆಯರು ಮೃದು ಕೋಮಲ ತ್ವಚೆಯ ಸ್ವಚ್ಚ ಬೆಳ್ಳನೆಯ ಚರ್ಮಕ್ಕೆ ಹೊಂದುವಂತಾ ಅಲಂಕಾರ ಜೊತೆಗೆ ಕೇಶರಾಶಿ... ನಾನು ಎಷ್ಟೋ ದಿನ ಯೋಚಿಸಿದ್ದೇನೆ, ಈ ಹೆಂಗಳೆಯರಿಗೆ ಸಮಯ ಎಲ್ಲಿ ಸಿಗುತ್ತೆ, ಯಾವಾಗ ಈ ರೀತಿ ಅಲಂಕಾರ ಮಾಡಿಕೊಳ್ಳುತ್ತಾರೆ ಎಂದು. ಕುವೈತಿನ ಇಂತಹ ಸುಡುಬಿಸಿಲಿನಲ್ಲೂ ಅವರ ಸೌಂದರ್ಯ ಸ್ವಲ್ಪವೂ ಮಾಸಿರುವುದಿಲ್ಲ ಆ ರೀತಿ ಅಲಂಕರಿಸಿರುತ್ತಾರೆ.

ಅಲಂಕಾರ ಎಂದರೆ ಬರಿ ಬಣ್ಣ ಬಳಿದುಕೊಳ್ಳುವುದಕ್ಕೆ ಅಷ್ಟೇ ಮೀಸಲಿಡದೆ, ತನ್ನ ರೂಪಕ್ಕೆ ತಕ್ಕಂತಹ ವಸ್ತ್ರಗಳನ್ನು ತೊಟ್ಟು, ಅದಕ್ಕೆ ಸೂಕ್ತವಾಗಿ ಬೆರಳುಗಳಿಗೆ ಉಂಗುರ, ಕಿವಿ ಓಲೆ, ಕೊರಳಿಗೆ ಸರ, ಚಪ್ಪಲಿ ಇವೆಲ್ಲಾ ಅಲ್ಲದೆ ತನ್ನ ಕೈಗಳಲ್ಲೂ ಮೇಕಪ್ ಗೆ ತಕ್ಕಂತ ಬ್ಯಾಗಳನ್ನೂ ಸಹ ದಿನದಿನಕ್ಕೂ ಬದಲಿಸಿ ಬರ್ತಾರೆ. ಈ ಸೌಂದರ್ಯ ಸುಗಂಧವಾಗಿಸಲು ಅವರು ಬಳಸೋ ಸುಗಂಧ ದ್ರವ್ಯಗಳಂತೂ ಹೇಳತೀರದು ಸದಾ ಘಮಘಮಿಸುತ್ತಲೇ ಇರ್ತಾರೆ. ಇವೆಲ್ಲವುಗಳ ಜೊತೆ ಕೆಲವು ಹೆಣ್ಣು ಮಕ್ಕಳು ವಿವಿಧ  ಕಾರುಗಳು ಅದು ಹೆಸರಾಂತ  ಐಷಾರಾಮಿ ಕಾರುಗಳನ್ನ ಆಗಾಗ ಬದಲಿಸುತ್ತಾ ಓಡಾಡುವುದನ್ನ ಕಂಡಿದ್ದೇವೆ.



ಕುವೈತ್ ಹೆಂಗಳೆಯರು ಬರಿ ಸೌಂದರ್ಯಕ್ಕಷ್ಟೇ ಮೀಸಲಿಡದೆ, ಅವರುಗಳಲ್ಲಿ ಬಹಳಷ್ಟು ವಿದ್ಯಾವಂತೆಯರು ಸಹ ಇದ್ದಾರೆ. ಹಲವು ಪ್ರತಿಷ್ಠಿತ ಕಂಪನಿಗಳಲ್ಲಿ ಒಳ್ಳೊಳ್ಳೆ ಹುದ್ದೆಗಳನ್ನು ಅಲಂಕರಿಸಿ ಸದಾ ಎಲ್ಲಾ ಕಾರ್ಯಗಳಲ್ಲಿ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಇರುವುದು ಹೆಮ್ಮೆಯ ವಿಷಯ. 

ಐಷಾರಾಮಿ ಕುವೈತ್ ನಗರಿಯಲ್ಲಿ ಹೆಂಗಳೆಯರ ಪಾರ್ಲರ್ ಎಷ್ಟು ಐಷಾರಾಮಿಯಿಂದ ಕೂಡಿರುತ್ತದೋ ಅಷ್ಟೇ ಐಷಾರಾಮಿಯಿಂದ ಗಂಡಸರ ಪಾರ್ಲರ್ ಗಳೂ ಸಹ ಇರುತ್ತವೆ (ಗಂಡಸರೇನು ಕಮ್ಮಿ ಮೇಕಪ್ ಮಾಡ್ತಾರೇ ಅಂದುಕೋ ಬೇಡಿ).  ಜಗಮಗಿಸೋ ದೀಪಗಳು, ಅದ್ಧೂರಿ ಆಸನಗಳು, ವಿಭಿನ್ನ ರೀತಿಯ ಕನ್ನಡಿಗಳ ಶೃಂಗಾರ ನೋಡೋಕ್ಕೆ ಎರಡು ಕಣ್ಣು ಸಾಲದೆ ಕೃತಕ ಎರಡು ಕಣ್ಣುಗಳನ್ನ(ಕನ್ನಡಕ) ತೆಗೆದುಕೊಂಡಿದ್ದೇನೆ. ನಾನು ಹೇಳುವುದಕ್ಕಿಂತ ನೀವೆಲ್ಲಾ ಒಮ್ಮೆ ಬಂದು ನೋಡಿದರೆ ಚೆನ್ನಾಗಿರುತ್ತೆ. ಬೆಂಗಳೂರಲ್ಲಿ ಚಿಲ್ಲರೆ ಅಂಗಡಿಗಳು ಇದ್ದ ಹಾಗೆ ಈ ಪಾರ್ಲರ್ ಗಳು ಇವೆ ಎಂದರೆ ನೀವು ನಂಬಲೇ ಬೇಕು.

ಕುವೈತಿನ ಪ್ರತಿ ಅಪಾರ್ಟ್ ಮೆಂಟ್ ಗಳಲ್ಲಿ ಕಾಣಿಸೋ ಬ್ಯೂಟಿ ಪಾರ್ಲರ್ ನೋಡಿದ್ರೇ ಇವರು ವಾರಕ್ಕೆ ಅದೆಷ್ಟು ಬಾರಿ ಕುಳಿತು ಶೃಂಗಾರಕ್ಕೆ ಹೆಚ್ಚು ಮಹತ್ವ ಕೊಡುತ್ತಾರೋ ಎನಿಸುತ್ತದೆ. ಒಟ್ಟಲ್ಲಿ ಏನೇ ಹೇಳಿ ಕುವೈತಿನ ಹೆಂಗಳೆಯರಲ್ಲಿ ಸೌಂದರ್ಯ ಪ್ರಜ್ಞೆ ಮೆಚ್ಚಲೇ ಬೇಕು ಜೊತೆಗೆ ಆ ಸೌಂದರ್ಯ ವರ್ಧಕಗಳ ಜೊತೆಗೆ ಸಮಯ ತಳ್ಳುತ್ತ ಸಮಯ ಮೀಸಲಿಡುವ ಅವರ ತಾಳ್ಮೆಗೆ ಜೈ ಎನ್ನಲೇ ಬೇಕು.

ಚಿತ್ರಗಳು: ನೆಟ್ ಲೋಕ

12 comments:

Badarinath Palavalli said...

ಕುವೈತ್ ಪ್ರಸಾದನ ಅಂಗಡಿಗಳ ಬಗೆಗೆ ಬಹಳ ಒಳ್ಳೆಯ ಬರಹ.

ಕುವೈತ್ ಹೆಂಗೆಳೆಯರ ಬಗೆಗೆ, ಅವರ ಸೌಂದರ್ಯ ಪ್ರಜ್ಞೆ ಮತ್ತು ಜೀವನ ವಿಧಾನದ ಬಗ್ಗೆ ಸವಿಸ್ತಾರ ವಿವರಣೆ. ಒಂದೆರಡು ನಾರಿಯರ ಚಿತ್ರಗಳನ್ನು ಹಾಕ್ಕಿದ್ದರೆ ಭಾರತೀಯ ಮನಸ್ಸುಗಳಿಗೆ ತಂಪೆರೆಯುತ್ತಿತ್ತು ಅಲ್ವಾ?

ರೂಪಾ said...

suguna
Olle information. Nange Eega nemmadhi aaytu. Nan husband yavagloo registirthaare nan Jotege irodakkintha jaasti hottu kannadi jotene( edurugade) irteeya antha. :)

ಚುಕ್ಕಿಚಿತ್ತಾರ said...

ಚ೦ದ ಬರೆದಿದ್ದೀರಿ..ಸುಗುಣ

ನನಗೂ ಕುತೂಹಲ.. ಮುಚ್ಚಿಟ್ಕೊಳ್ಳೊದಕ್ಕೆ ಮೇಕಪ್ ಯಾಕೆ ಬೇಕು.. ಅ೦ತ ಚ೦ದ ಇರ್ತಾರೆ ಅ೦ತ ನಾನೂ ಕೇಳಿದ್ದೀನಿ ಆಗಾಗ ನಾನೂ ಬುರ್ಕಾದಾರಿಗಳು ಕ೦ಡರೆ ಚ೦ದ ಎಲ್ಲಾದರೂ ಕಾಣುತ್ತ ಅ೦ತ ಹುಡುಕುತ್ತಿರುತ್ತೇನೆ..!! ಚ೦ದದ ಪಾದರಕ್ಶೆಗಳು ಮಾತ್ರ ಆಗಾಗ ಹಣುಕಿ ತಮ್ಮ ಮುಖ ತೋರಿಸಿವೆ ಇಲ್ಲೀವರೆಗೆ...:))

sunaath said...

ಕುವೈತಿನಲ್ಲಿ tolerance ಇದೆ ಎಂದಾಯಿತು.ಅಲ್ಲದೆ ದುಡ್ಡಿನಂತಹ ಸೌಂದರ್ಯವರ್ಧಕ ಇನ್ನೊಂದಿಲ್ಲ! ನಿಮ್ಮ ಲೇಖನ ಓದಿ, ಕುವೈತಿನ ಬಗೆಗಿದ್ದ ನನ್ನ ವಿಚಾರಗಳನ್ನು ಸರಿಪಡಿಸಿಕೊಂಡೆ.

balasubrahmanya k.s. balu said...

ಲೇಖನ ಚೆನ್ನಾಗಿದೆ. ಕುವೈತ್ ದೇಶದ ಬ್ಯೂಟಿ ಪಾರ್ಲರ್ ಗಳ ಬಗ್ಗೆ ಅಲ್ಲಿನ ಸುಂದರಿಯರ ಬಗ್ಗೆ ಮಾಹಿತಿ ನೀಡಿದ್ದು ಸರಿ.ಮಾಹಿತಿಪೂರ್ಣ ಲೇಖನ.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

Dr.D.T.Krishna Murthy. said...

ಚೆಂದದ ಬಗ್ಗೆ ಅಂದದ ಲೇಖನ.ಹೊರಗಿನ ಚೆನ್ದಕ್ಕಿಂತ ಒಳಗಿನ ಚೆಂದವೇ ಚೆಂದವಲ್ಲವೇ?

Subrahmanya said...

ಲೇಖನದಿಂದ ಕುವೈತಿನ ಮತ್ತು ಅಲ್ಲಿನ ಜನಜೀವನದ ಅಂಶಗಳನ್ನು ತಿಳಿದಂತಾಯಿತು. ಒಳ್ಳೆಯ ಬರಹ.

Subrahmanya said...

ಕುವೈತಿನ ಮತ್ತು ಅಲ್ಲಿಯ ಜನಜೀವನದ ಬಗೆಗೆ ತಿಳಿದುಕೊಂಡಂತಾಯಿತು. ಒಳ್ಳೆಯ ಬರಹ

Subrahmanya said...

ಕುವೈತಿನ ಮತ್ತು ಅಲ್ಲಿಯ ಜನಜೀವನದ ಬಗೆಗೆ ತಿಳಿದುಕೊಂಡಂತಾಯಿತು. ಒಳ್ಳೆಯ ಬರಹ

ಮನಸು said...

ಬದರಿ ಸರ್,
ಧನ್ಯವಾದಗಳು, ನೇರವಾಗೇ ನಿಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿವಿರಂಟೆ ಬನ್ನಿ ಇಲ್ಲಿಗೆ.

ರೂಪ,
ಹಹಹ ಎಲ್ಲಾರು ಅಲಂಕಾರ ಮಾಡಿಕೊಳ್ಳುತ್ತಾರೆ ಬಿಡಿ ನೀವು ಚಿಂತಿಸಬೇಡಿ. ನಿಮ್ಮವರಿಗೆ ಹೇಳಿ ಕನ್ನಡ ನಾ ಹೇಗಿದ್ದೀನಿ ಎಲ್ಲಿ ಬಣ್ಣ ಎಲ್ಲಿ ಹೆಚ್ಚಾಯ್ತು ಅದು ಇದು ಎಲ್ಲ ಹೇಳುತ್ತೇ ನೀವು ಏನು ಕಾಮೆಂಟ್ ಕೊಡೋಲ್ಲ ಅದಕ್ಕೆ ಹೆಚ್ಚು ಕನ್ನಡಿ ಜೊತೆ ಇರ್ತೀನಿ ಅಂತ ಹೇಳಿ :)

ವಿಜಯ,
ಹಹ ಅವರ ಗುಂಪು ಸೇರಿದಾಗ ಅವರವರ ಅಲಂಕಾರ ವಿಮರ್ಶೆಗಳು ನೆಡೆಯುತ್ತೆ. ಅಲಂಕಾರ ಮಾಸದಿರಲು ಬುರುಕ ಸಹಾಯವಾಗಿರಬೇಕು ಅಲ್ವಾ..?

ಸುನಾಥ್ ಕಾಕ,
ಧನ್ಯವಾದಗಳು ಎಲ್ಲರಲ್ಲೂ ಒಂದೊಂದು ಒಳ್ಳೆಯದು ಕೆಟ್ಟದ್ದು ಇದ್ದೇ ಇರುತ್ತೆ. ಅದರಂತೆ ಇಲ್ಲಿ ಜನ ಸೌಂದರ್ಯವನ್ನು ಮಾಡಿಕೊಳ್ಳಲು ತಮ್ಮ ಸಮಯ ಮತ್ತು ಸಂಯಮ ಎಲ್ಲವನ್ನೂ ನೀಡುತ್ತಾರೆ ಅವರ ಈ ಗುಣ ಒಂದು ರೀತಿ ಭೇಶ್ ಎನಿಸುತ್ತೆ.

ಮನಸು said...

ಬಾಲು ಸರ್,
ಧನ್ಯವಾದಗಳು... ಹೆಂಗಳೆಯರು ಇರುವ ಸೌಂದರ್ಯಕ್ಕಿಂತಲೂ ಮತ್ತಷ್ಟು ಸೌಂದರ್ಯವನ್ನು ಬಯಸಿ ಬಯಸಿ ಬಣ್ಣದ ಲೇಪನ ಮಾಡಿಕೊಳ್ಳುತ್ತಾರೆ.

ಡಾ.ಕೃಷ್ಣಮೂರ್ತಿ ಸರ್,
ನಿಜ ನೀವು ಹೇಳುವುದು ಒಳ ಚೆಂದವೇ ಸರಿ... ಆದರೆ ಇಲ್ಲಿನ ಜನ ಅದನ್ನೆಲ್ಲಾ ನೋಡುತ್ತಾರೋ ಇಲ್ಲವೋ ಗೊತ್ತಿಲ್ಲ ಹೊರಗಂತೂ ಅಲಂಕಾರ ಪ್ರಿಯರು.

ಸುಬ್ರಮಣ್ಯ ಸರ್,
ಇಲ್ಲಿನ ಜನ ಜೀವನ ವಿಭಿನ್ನವಾಗಿರುತ್ತೆ ನಮ್ಮ ಶೈಲಿಗೂ ಅವರಿಗೂ ಬಹಳ ವಿಭಿನ್ನತೆ ಇದೆ.

ದಿನಕರ ಮೊಗೇರ said...

avarU saha alankaarapriyarE..?

bareda riti ishTa aaytu.....