Sunday, July 1, 2012

ಕಾಣದ ಲೋಕಕೆ ತೆರಳಿದಾಗ... ದರುಶನ ಭಾಗ್ಯ ಇಲ್ಲದಾಗ..!!


ಕಾರಣಾಂತರಗಳಿಂದ ೩ ವರ್ಷವಾದರೂ ಊರಿನ ಕಡೆ ತಲೆಹಾಕದವ ತನ್ನ "ಮಗ ಮತ್ತು ತಾಯಿ" ನೋಡಲು ಇತ್ತೀಚೆಗಷ್ಟೇ ಹೋಗಿ ಬಂದಿದ್ದ. ನೆಂಟರಿಷ್ಟರ ಒಡನಾಟ, ಊರೂರು ಸುತ್ತಾಟ, ಅಮ್ಮನ ಕೈ ಅಡುಗೆ ರುಚಿ ಇನ್ನೂ ತನ್ನ ನಾಲಿಗೆಯಲ್ಲೇ ಇದೆ.. ಇದೆಲ್ಲದರ ಜೊತೆ ತವರಿನ ನೆನಪು ಮಾಸೇ ಇಲ್ಲದಿರುವಂತಿರುವಾಗ ನೆನ್ನೆ..!! ಬೆಳ್ಳಂ ಬೆಳ್ಳಗ್ಗೆ ಏನೋ ಸಂಕಟ, ಮುಂಜಾವಿನ ನಿದ್ರೆಯೂ ತನ್ನತ್ತ ಸುಳಿಯದಂತೆ ಮಾಡಿದ್ದು ಆ ಒಂದು ದೂರವಾಣಿ ಕರೆ. ಆಂಧ್ರದ ಕಡೆಯಿಂದ ಕರೆ ಬಂದಿದ್ದೇ ತಡ ತನ್ನ ಕಿವಿ ತಾನೇ ನಂಬದಂತ ವಿಷಯವೊಂದು ಮುಟ್ಟಿತು. ಕಳೆದ ರಾತ್ರಿ ಅಮ್ಮನೊಟ್ಟಿಗೆ ಮಾತನಾಡಿದ್ದ ಮಗನಿಗೆ ಬೆಳ್ಳಿಗ್ಗೆ ಅಮ್ಮನಿಲ್ಲ ಎಂಬ ಸುದ್ದಿ ಆಘಾತ ನೀಡಿದ್ದಂತು ಸತ್ಯ.

ಅಮ್ಮನಂತೂ ಇಲ್ಲ, ಕೊನೆಯಲ್ಲಿ ಅಮ್ಮನ ಮುಖವಾದರೂ ನೋಡಬೇಕಲ್ಲಾ...!! ಓಹ್ ಏನು ಮಾಡುವುದು ಈಗಷ್ಟೇ ಊರಿಂದ ಬಂದಿದ್ದಾನೆ, ಇದ್ದಕ್ಕಿದ್ದ ಹಾಗೆ ಊರಿಗೆ ಮರಳೋದು ಎಂದರೆ ಅಷ್ಟು ಸುಲಭವೇ..?? ಕೈ ಎಲ್ಲಾ ಬರಿದಾಗಿದೆ ಕುವೈತಿನಲ್ಲಿ ನೆಲೆಸಬೇಕಾದರೆ ತನ್ನ ರೆಸಿಡೆನ್ಸಿ ಮಾಡಿಸಿಕೊಳ್ಳುವ ಸಲುವಾಗಿ ೧೦ ದಿನಗಳ ಮುಂದೆಯೇ ಕುವೈತಿ ವ್ಯಕ್ತಿಗೆ ಸುಮಾರು ೫೦ಸಾವಿರ ಹಣ ನೀಡಿ, ಒಂದು ವರ್ಷದ ಮಟ್ಟಿಗೆ ಕುವೈತಿನಲ್ಲಿ ನೆಲೆಸುವಂತೆ ಮಾಡಿಕೊಂಡಿದ್ದ. ತಾನು ದುಡಿಯೋ ಸಂಬಳ ಕೇವಲ ೧೦ ಸಾವಿರ ಇನ್ನು ಈಗ ಊರಿಗೆ ಹೋಗಲು ಸಾಲ ಯಾರು ನೀಡುತ್ತಾರೆ. ಹೇಗೆ ಊರಿಗೆ ಹೋಗೋದು ದೇವರೇ ...!!

ತನ್ನ ಇಷ್ಟೇಲ್ಲಾ ತೊಳಲಾಟವನ್ನು ನನ್ನ ಕಛೇರಿಯ "ಆಫೀಸ್ ಬಾಯ್"  ಹೇಳಿಕೊಳ್ಳದಿದ್ದರೂ ಅವನ ಕಣ್ಣುಗಳು ಮತ್ತು ಮುಖಭಾವ ಎಲ್ಲವನ್ನೂ ಬಿಚ್ಚಿಡುತ್ತಿತ್ತು. ನಾನು ಏನಾಗಿದೆ ಎಂದು ಪೂರ್ಣ ವಿಷಯ ತಿಳಿದಾಗ ಒಮ್ಮೆಲೇ ಮನಸ್ಸು ಕುಸಿದಂತಾಯಿತು. ಇಷ್ಟೆಲ್ಲಾ ಇದ್ದರೂ ಕೆಲಸಕ್ಕೆ ಬಂದಿದ್ದಾನೆ, ಜೊತೆಗೆ ಅವನು ಊರಿಗೆ ಹೋಗಬೇಕು ಎಂಬ ತುಡಿತವನ್ನೂ ಯಾರೊಂದಿಗೂ ಹೇಳಿಕೊಳ್ಳದೇ ತನ್ನ ಕೆಲಸದಲ್ಲೇ ಮಗ್ನನಾಗಿದ್ದಾನೆ... ಛೇ..!! ಎಂತಾ ವಿಪರ್ಯಾಸ, ತಾಯಿ ಮುಖ ನೋಡಲಾಗದೆ ಕೊರಗುತ್ತಾನಲ್ಲಾ ಎಂದೆನಿಸಿ ಕಛೇರಿಯಲ್ಲಿದ್ದವರೆಲ್ಲ ಯೋಚಿಸಿ ಅವನಿಗೆ ಟಿಕೆಟ್ ಕೊಡಿಸಿ ಕಳಿಸುವ ವ್ಯವಸ್ಥೆ ಮಾಡಲು ಮುಂದಾದೆವು.

ಹಣವನ್ನೆಲ್ಲಾ ಹೊಂದಿಸಿದೆವು, ಇದರ ಜೊತೆಗೆ ವಿಮಾನ ಟಿಕೆಟ್ ಬುಕ್ ಮಾಡುವ ಕೆಲಸ,ನಾನು ಇರೋಬರೋ ವಿಮಾನಗಳ ಬಗ್ಗೆ ವಿಚಾರಿ ನೋಡಿದೆ ಯಾವೊಂದು ವಿಮಾನಕ್ಕೂ ಟಿಕೆಟ್ ಸಿಗುತ್ತಿಲ್ಲ. ಕಾರಣ ಇಷ್ಟೇ.. ಇಲ್ಲಿ "ಜೂನ್, ಜುಲೈ,ಆಗಸ್ಟ್" ಈ ಮೂರು ತಿಂಗಳು ಬೇಸಿಗೆ ರಜೆಯಾದ್ದರಿಂದ ಎಲ್ಲಾ ವಿಮಾನಗಳ ಟಿಕೆಟ್ ಈ ಮೊದಲೇ ಬುಕ್ ಆಗಿಹೋಗಿದ್ದವು. ಕೊನೆಗೂ ಯಾವುದೇ ವಿಮಾನಕ್ಕೂ ಟಿಕೆಟ್ ಸಿಗಲಿಲ್ಲ ಅಮ್ಮನ ಮುಖ ನೋಡಲಾಗಲೂ ಇಲ್ಲ. ಊರಿಗೆ ಕರೆ ಮಾಡಿ ನಾನು ಬರುವುದಿಲ್ಲ ಉಳಿದ ಕಾರ್ಯಗಳನ್ನೆಲ್ಲ ಮುಗಿಸಿಬಿಡಿ ಎಂದು ತನ್ನವರಿಗೆ ಕರೆಮಾಡಿ ಕೈ ಚೆಲ್ಲಿ ಕುಳಿತುಬಿಟ್ಟ.

ಕೊನೆಯಲ್ಲಿ ಅವನ ಮಾತು ಮೇಡಮ್, "ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲುದ್ದ ನೀರು" ಎಂಬಂತೆ ನನ್ನ ಪರಿಸ್ಥಿತಿ, ನೀವೆಲ್ಲ ಹಣ ನೀಡಿ ಇಷ್ಟು ನನಗಾಗಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಿಲ್ಲ.. ಈಗೊಂದೇ ದಾರಿ ಅಮ್ಮನ ಆತ್ಮಕ್ಕೆ ಕ್ಷಮೆಕೋರಿ ಇಲ್ಲಿಂದಲೇ ಕೈಮುಗಿದು ಬಿಡುವೇ..!!

"ಅಮ್ಮಾ..!! ನನ್ನನ್ನು ಕ್ಷಮಿಸಿಬಿಡು ನಿನ್ನ ಮುಖ ನೋಡಲು ಬರಲಾಗದು" ಸತ್ತ ಜೀವಕೆ ಕೇಳಿತೆ ಈ ಮಗನ ಮಾತು...!!???


14 comments:

umesh desai said...

the Lifes reality has been shown in your post my heart cried

ಜಲನಯನ said...

ಅಮ್ಮಾ- ಅಂತ ಒಂದೇ ಒಂದು ಕೂಗು ಸಾಕು ಆ ಆತ್ಮ ಎಲ್ಲಿದ್ದರೂ ಓಗೊಡುತ್ತ್ರ್...ಬೇಡ ಕಂದ ನಾನು ಹೋಗಿ ಆಯಿತು ನೀನು ಬಂದರೂ ನಾನು ಮರಳಿ ಬರಲಾರದ ಸ್ತಿತಿಯಲ್ಲಿದ್ದೇನೆ...ಅದಕ್ಕಾಗಿ ಏಕೆ ಋಣಭಾರ ಹೊರುವೆ...ನನ್ನ ಆಶೀರ್ವಾದ ಯಾವತ್ತೂ ನಿನಗಿದೆ.. ಇದೋ ಇಲ್ಲಿಂದಲೇ ಹರಸುವೆ ಎನ್ನುತ್ತಾಳೆ ಅದೇ ತಾಯಿ ಹೃದಯ. ಮನೋಜ್ಞವಾಗಿದೆ ಹುಡುಗನ ಅಸಹಾಯಕ ಸ್ಥಿತಿ.

ವನಿತಾ / Vanitha said...

Totally agree with Azad Sirs comment..Experienced this 3 yrs back, When I cudn't see Dad..Amma said " avaru chennagiddaga nodidyalla, adu nenapu yaavagloo irli" anta..You made me into tears..May be this is my first comment without a smiley..May that Amma's soul rest in peace..

Badarinath Palavalli said...

ಇದೊಂದು ಬರಹ ನನ್ನನ್ನು ಕದಲಿಸಿ ಹಾಕಿತು.

ಅಮ್ಮನ ಮುಖವನ್ನೂ ನೋಡಲಾರದ ಆತ ಎಷ್ಟು ನೊಂದುಕೊಂಡನೋ ಏನೋ?

ಆತನ ಕಷ್ಟಕ್ಕೆ ಸ್ಪಂದಿಸಿದ ನಿಮ್ಮೆಲ್ಲರ ಸಹೃದಯತೆಗೂ ಶರಣು. ಇಂತಹ ಮಾನವೀಯತೆಯ ಪಾಠ ನಿಮ್ಮಿಂದಲೇ ಕಲಿತೆ. ಮೊದಲು ನಮ್ಮ ಮನೆಯಲ್ಲಿರುವ ತಾಯಿಯರ ನಾವು ಚೆನ್ನಾಗಿ ನೋಡಿಕೊಳ್ಳಬೇಕು.

ಪ್ರಾಪ್ತಿ ಇಲ್ಲದಿದ್ದರೆ, ಏನೂದಕ್ಕದು ನಮಗೆ ನಿಜ ನಿಜ...

Srikanth Manjunath said...

ತಾಯಿ ತಂದೆಯ ಬಾಂಧವ್ಯವೆ ಹಾಗೆ...ತೋಡಿದಷ್ಟು ಬರುತ್ತಲೇ ಇರುತ್ತದೆ...ಆ ಸಂಕಟ ಹೇಳತೀರದು...ಹಾಗು ಪ್ರತಿಬಾರಿ ನೆನೆದಾಗಳು ಕಣ್ಣು ತುಂಬಿ ಬರುತ್ತದೆ..ಸುಂದರ ಬರಹ...ಪ್ರತಿಕ್ರಿಯೆ ನೀಡುವಾಗ ಕಣ್ಣಲ್ಲಿ ಕಂಬನಿ ಹರಿಯುತಿತ್ತು...

minchulli said...

nice suguna... really liked the way its narrated.

ಸಂಧ್ಯಾ ಶ್ರೀಧರ್ ಭಟ್ said...

:( :(

Anuradha said...

ಇದನ್ನು ಅಸಹಾಯಕತೆ ಎಂತಲೇ ಹೇಳಬೇಕು ...ದುಡಿಯಬೇಕು ಎನ್ನುವ ಬಯಕೆ ..ಸಹಜ ..ಆದರೆ ತಾಯಿಯನ್ನು ನೋಡಲೂ ಬರಲಾಗಲಿಲ್ಲ ,ಎನ್ನುವುದು ತುಂಬಾ ನೋವಿನ ಸಂಗತಿ ...ಸಹಾಯ ದೊರೆತರೂ ಪ್ರಯೋಜನ ವಾಗದಿದ್ದುದು ವಿಪರ್ಯಾಸ ..
ನನ್ನ ಗೆಳತಿಯ ಗಂಡ ತೀರಿಹೋದಾಗ ಅವಳ ಮಗ ಅಮೆರಿಕದಿಂದ ಬಂದ ,ಮುಂಬೈ ಯಿಂದ ಬೆಂಗಳೂರು ತಲುಪಲು ವಿಮಾನ ಸಿಗಲಿಲ್ಲ , ಮೈದುನ ಅಂತ್ಯಕ್ರಿಯೆ ಮಾಡಿದ ..ಇದು ಜೀವನ ,ಇದುವೇ ಜೀವನ .

Anonymous said...

ಖಂಡಿತ ಆ ಮಾತು ಅಮ್ಮನನಿಗೆ ತಲುಪಿರಬೇಕು ... ದುರ್ವಿಧಿ ಅಂತಲೇ ಹೇಳಬೇಕು ಆ ಮನಸ್ಸು ಅದೆಷ್ಟು ನೊಂದಿರಬೇಕು ?

ಸುಂದರ ಬರಹ .. ಕಣ್ಣಾಲಿಗಳು ತುಂಬಿ ಬಂದವು
ಹುಸೇನ್

sunaath said...

Very tragic. You have shown another face of the Indian workers abroad.

Anonymous said...

ಬಿಡಿ ! ಇನ್ನು ನೂರೆಂಟು ಜನುಮ ಹೊತ್ತರೂ ತಾಯಿಯ ರುಣ ತೀರಿಸಲಾಗದು

Mamata said...

You touched my heart by this article..i almost broke into tears after reading this..thanks a lot for this sir..keep writing..:-)

ಸೀತಾರಾಮ. ಕೆ. / SITARAM.K said...

paradeshadalli paradeshi paadu bavane teevra antaryadalli heliddiraaa..

Ashok.V.Shetty, Kodlady said...

ಸುಗುಣ ಮೇಡಂ,

'ದೇವರು ಕೊಟ್ಟರೂ ಪೂಜಾರಿ ಬಿಡ' ಎಂಬಂತೆ ಆಯಿತು ಪಾಪ ಆತನ ಪರಿಸ್ಥಿತಿ....ಓದಿ ಬೇಸರವಾಯಿತು.....ಜೊತೆಗೆ ನಿಮ್ಮೆಲ್ಲರ ಕರುಣಾಭಾವನೆ ಇಷ್ಟ ಆಯಿತು....