ನನ್ನ ಪಕ್ಕದಲ್ಲಿ ಕುಳಿತವರು ನನ್ನ ಮಗನಿಗೆ ಐಸ್ ಕ್ರೀಂ ಕೊಡಿಸುವುದಾಗಿ ಬಲವಂತದಿ ಕರೆದೊಯ್ದಿದ್ದರು...ತುಮಕೂರಿನ ರೈಲ್ವೇ ನಿಲ್ದಾಣದಲ್ಲಿ ಕಿಟಿಕಿಯಾಚೆ ಕಣ್ಣಾಡಿಸಿದೆ ಮಗ ಐಸ್ ಕ್ರೀಂ ತಿನ್ನುತ್ತ ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದ, ಪಕ್ಕದಲ್ಲಿ ಕುಳಿತವರು ಸಹ ಅವನೊಟ್ಟಿಗೆ ಏನೋ ಬಾಯಾಡಿಸುತ್ತಿದ್ದರು ನಾನು ಇದ್ದಾನೇ ಕಣ್ಣಿನ ಆಸುಪಾಸಲ್ಲೇ ಎಂದು ಕೈನಲ್ಲಿದ್ದ ಗೀತಾ ಬಿ.ಯು ರವರ ಮಿಥ್ಯಾ ಪುಸ್ತಕವನ್ನು ಓದಲು ಮುಂದಾದೇ.. ತೀವ್ರ ಮೌನದಲ್ಲೇ ಒಂದು ಗಂಡಿಗೂ ತನ್ನದೇ ಆದ ಭಾವನೆಗಳು ಹೇಗಿರುತ್ತದೆ ಎಂದು ಕಥೆಯೊಟ್ಟಿಗೆ ನಾನೂ ಮೆಲುಕು ಹಾಕುತ್ತ ಹೊರಟೆ.... ಓದುವುದರಲ್ಲಿ ಮಗ್ನಳಾದವಳಿಗೆ ರೈಲು ತನ್ನ ಹಳಿ ಬಿಟ್ಟು ಸಾಗುವವರೆಗೂ ಗೊತ್ತೇ ಆಗಲಿಲ್ಲ ಮಗ ಇನ್ನೂ ರೈಲಿಗೆ ಬಂದಿಲ್ಲವೆಂದು..!! ತಕ್ಷಣ ಕಿಟಕಿಯತ್ತ ನೋಡಿದೆ ಅಮ್ಮಾ... ಅಮ್ಮಾ..!! ಎಂದು ಕಿರುಚುತ್ತ ಕೈನಲ್ಲಿದ್ದ ಐಸ್ ಕ್ಯಾಂಡಿಯನ್ನು ರಪ್ಪನೆ ಎಸೆದು ಓಡೋಡಿ ಬರುವ ಕಂದನ ಕಂಡು ಎದೆ ಝಲ್ ಎಂದಿತ್ತು... ಅಯ್ಯೋ ಕಂದಾ...ಅಯ್ಯೋ ಕಂದಾ...ಇನ್ನೂ ನೀನು ಹತ್ತಿಲ್ಲವೇ ಬೇಗ ಓಡಿ ಬಾ.. ಬಾಗಿಲಿನತ್ತ ಓಡಿದೆ.... ಮಗನನ್ನು ಕರೆದೊಯ್ದವರೂ ಓಡೋಡಿ ಬರುತ್ತಿದ್ದರು... ನನ್ನ ಮಗನನ್ನು ಕೈಹಿಡಿದು ಕರೆದುಕೊಂಡು ಬನ್ನಿ ನಾನು ಹತ್ತಿಸಿಕೊಳ್ಳುವೆ ಎಂದು ಕಿರುಚಿ ಹೇಳಿದರೂ ಅವರು ನನ್ನ ಮಾತು ಕೇಳುವುದರಲ್ಲೇ ಇರಲಿಲ್ಲ... ಓಡಿ ಬಂದವರು ಗಾಬರಿಯಲ್ಲಿ ರೈಲು ಹತ್ತಿಬಿಟ್ಟಿರು.....
ನನಗೋ ಈ ಮನುಷ್ಯ ಹತ್ತಿ ಬಂದನಲ್ಲ ನನ್ನ ಮಗನನ್ನು ಕರೆತರಲಿಲ್ಲ... ಎಂದುಕೊಳ್ಳುವಷ್ಟರಲ್ಲಿ ರೈಲು ರಭಸಕ್ಕೆ ತಿರುಗಿತು ಹೋ..!! ಜನರೆಲ್ಲಾ ಜೋರು ಧ್ವನಿಯಲ್ಲಿ ಅಯ್ಯೋ ಮಗು, ಅಯ್ಯೋ ಮಗು ಎನ್ನುತ್ತಿದ್ದಾರೆ...ಇನ್ನು "ಮಗ ಕೈ ತಪ್ಪಿದ" ಎಂಬ ಗಾಬರಿಯಲ್ಲಿ ನಾನು ರೈಲಿಂದ ಆಚೆ ಹಾರಲು ಯತ್ನಿಸುವಷ್ಟರಲ್ಲೇ.. ಹಿಂದಿನಿಂದ ಯಾರೋ ನನ್ನ ತೋಳನೆಳೆದರು, ಮಗ ಓಡಿ ಬರುತ್ತಿದ್ದ ರಭಸವನ್ನೇ ದಿಟ್ಟಿಸುತ್ತಿದ್ದೇ... ರೈಲ್ವೇ ನಿಲ್ದಾಣದ ಆಸುಪಾಸು ಬಿಟ್ಟು ಮಗ ಆಗಲೇ ಮುಂದೆ ಬಂದಿದ್ದ, ಜಲ್ಲಿ ಕಲ್ಲುಗಳ ಮೇಲೆಯೇ ಓಡಿ ಬರುವುದು ಕಾಣುತ್ತಿದೆ... ಕಾಂಗ್ರೆಸ್ ಗಿಡಗಳು ಸುತ್ತುವರಿದಿವೆ ಅವನ ಅರುಚಿವಿಕೆ ನನ್ನ ಕಿವಿಗೆ ಕೇಳುತ್ತಿಲ್ಲ.. ನನ್ನ ಕಣ್ಣು ಒಂದೇ ಸಮನೇ ಜೋಗ್ ಜಲಪಾತವಾಗಿಬಿಟ್ಟಿದೆ.... ಈ ಮನುಷ್ಯ ಕರೆದುಕೊಂಡೋದವ ಕರೆತರುವುದ ಬಿಟ್ಟು ಎಂತಾ ಕೆಲಸ ಮಾಡಿದ, ಈಗ ಏನು ಮಾಡಲಿ, ಹೇಗೆ ಮಗನನ್ನ ಮತ್ತೆ ಸೇರಲಿ.. ಎಷ್ಟು ಭಯ ಪಟ್ಟಿದೆಯೋ ನನ್ನ ಕೂಸು, ಮುಂದೇನು ಮಾಡುವನೋ ದೇವರೇ ಕಾಪಾಡಪ್ಪ.....
ನನ್ನನ್ನೇ ನೋಡುತ್ತಿದ್ದ ಬೋಗಿಯ ಜನ... ಆ ಮನುಷ್ಯನನ್ನೇ ನಿಂದಿಸುತ್ತಿದ್ದರು.. ಇತ್ತ ಆ ಮನುಷ್ಯ ನನ್ನ ಪಾದವಿಡಿದು ನನ್ನನ್ನು ಕ್ಷಮಿಸಿ ನಿಮ್ಮ ಮಗ ನನ್ನಲ್ಲಿ ಎಷ್ಟು ಬೇಗ ಹೊಂದುಕೊಂಡುಬಿಟ್ಟ ನನಗೆ ಮಕ್ಕಳಿದಿದ್ದರಿಂದ ಪ್ರೀತಿ ಹೆಚ್ಚಾಗಿ ಅವನಿಗೆ ತಿಂಡಿ ಕೊಡಿಸಲು ಕರೆದುಕೊಂಡೋದೆ. ಕ್ಷಮಿಸಿ ಮೇಡಮ್.. ಕ್ಷಮಿಸಿ ಮೇಡಮ್... ಎಂದು ಒಂದೇ ಸಮನೆ ರೋಧಿಸುತ್ತಿದ್ದಾನೆ.. ನಾನು ಹೇಳುವುದಿನ್ನೇನು.."ಕ್ಷಮಿಸಲೇನಿದೇ ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ" ಎಂದು ಕೋಪದ ಜೊತೆಗೆ ನನ್ನ ಮೇಲೆ ಬೇಸರವಾಗುತಿತ್ತು. ಈ ಪುಸ್ತಕ ಆಮೇಲೆ ಓದಿದ್ದರೇ ಸಾಕಾಗಿತ್ತು ಇಲ್ಲವೇ ಮಗ ಒಳಗೆ ಬಂದ ಮೇಲೆ ಓದಿದ್ದರೆ ಆಗುತ್ತಿತ್ತು.... ಎಂದು ನನ್ನನ್ನು ನಾನೇ ಶಪಿಸಿಕೊಳ್ಳುತ್ತ ಅಲ್ಲೇ ನೆಲದ ಮೇಲೆ ಕುಸಿದುಬಿದ್ದೆ... ಯಾರೋ ಏನೋ ಹೇಳಿದ್ದು ಕೇಳಿಸಿತು "ಮುಂದಿನ ನಿಲ್ದಾಣದಲ್ಲಿ ಇಳಿದು ತುಮಕೂರಿಗೆ ಹೋಗಿ ನೋಡಿ", ಇನ್ನೊಬ್ಬರು ಇಲ್ಲೇ "ರೈಲ್ವೇ ಕ್ರಾಸಿಂಗ್ ಇರುತ್ತೆ ಸ್ವಲ್ಪ ಹೊತ್ತು ನಿಲ್ಲಿಸಿರುತ್ತಾರೆ ಇಲ್ಲಿಯೇ ಇಳಿದು ಹೋಗಿ" ಎಂದರು.... ನನಗೆ ಆಗ ಸ್ವಲ್ಪ ಧೈರ್ಯ ಬಂದಂತಾಗಿತ್ತು.. ಹತ್ತಿರವೇ ಕ್ರಾಸಿಂಗ್ ಇರೋದರಿಂದ ಇಳಿದು ಹೋಗೋಣ ಎಂದುಕೊಳ್ಳುವಷ್ಟರಲ್ಲಿ ಮತ್ತೊಬ್ಬರು ಇಲ್ಲಾ... ಈ ರೈಲು ಮುಂದೆ ಬೆಂಗಳೂರಿನ "ಯಶವಂತಪುರ" ಬಿಡುವವರೆಗೂ ನಿಲ್ಲಿಸುವುದೇ ಇಲ್ಲಾ... "ಧಸಕ್ ಎಂದಿತು ಜೀವ"..!!!
ಮತ್ತೇನು ಮಾಡುವುದು ಹಳಿ ತಪ್ಪಿಸಲೇ, ರೈಲಿಂದ ಹಾರಲೇ.. ಈಗಾಗಲೇ ನನ್ನ ಕರುಳ ಬಳ್ಳಿ ಹಳಿ ತಪ್ಪಿದೇ, ಇಷ್ಟು ಜನರು ಇದ್ದಾರೆ ಅವರಿಗೆಲ್ಲಾ ಯಾವ ಯಾವ ಕೆಲಸಗಳು ಇದ್ದಾವೋ ಏನು ಕಥೆಯೋ ಮತ್ತಾವ ಹಳಿ ತಪ್ಪಿಸಲಿ.. ದೇವರೇ ನನಗೆ ಯಾವುದಾದರೊಂದು ದಾರಿ ತೋರಿಸಪ್ಪ ನನ್ನೊಳಗಿನ ನಿಟ್ಟುಸಿರೆಲ್ಲ ಕಂಬನಿಯಧಾರೆಯಾಗಿತ್ತು. ನಾನು ಜೀವಂತ ಇರುವ ಹಾಗಿದೆಯೇ, ಇರುವ ಒಬ್ಬ ಮಗನನ್ನು ಬಿಟ್ಟು ಮತ್ತೇನು ಮಾಡಲಿ, ಮುಂದಿನ ಬದುಕು ಹೇಗೆ.. ಮಗ ಅಷ್ಟು ದೂರ ಓಡೋಡಿ ಬಂದ.. ತಿರುಗಿ ನಿಲ್ದಾಣಕ್ಕೆ ಹೋದನೋ ಇಲ್ಲವೋ... ಯಾರಾದರು ಕರೆದುಕೊಂಡು ಹೋಗಿಬಿಟ್ಟರೆ ಏನು ಮಾಡಲಿ ತಂದೆ..!! ದೇವರಲ್ಲಿ ಅಂಗಾಲಾಚಿ ಬೇಡುತ್ತಿದ್ದನ್ನು ಕಂಡ ರೈಲಿನ ಜನ... ಎಲ್ಲರೂ ಮಮ್ಮಲ ಮರುಗಿದರು ಎಲ್ಲರೂ ನನ್ನೊಟ್ಟಿಗೆ ಅವರೂ ದುಃಖಿಸಿದರು... ತೋಚದಾಯಿತು...!!?? ಮತ್ತೆ ಬಾಗಿಲ ಹತ್ತಿರ ಹೋಗಿ ದಿಟ್ಟಿಸಿ ನೋಡುತ್ತಲೇ ಇದ್ದೇ... ಓಡುವ ರೈಲಿನಿಂದ ಹಾರಿ ಬಿಟ್ಟಾಳು ಎಂದು ಒಂದಿಬ್ಬರು ನನ್ನ ಹಿಡಿದಿದ್ದರು.... ಇತ್ತ ಯಾವುದೋ ಶಬ್ದ ಟ್ರ್ ಣ್ ಟ್ರ್ ಣ್ ಎನ್ನುತ್ತಿದೆ... ಓಹೋ..! ದೇವರು ದಾರಿಬಿಟ್ಟ.. ಈಗ ರೈಲು ಯಾವುದೋ ಕಾರಣಕ್ಕೆ ನಿಲ್ಲಿಸುತ್ತಾರೇನೋ ಎಂದು ಮಗ್ಗುಲು ಬದಲಿಸುತ್ತ ಕಣ್ಣು ತೆರೆದು ನೋಡಿದರೆ ಬೆಳಗಿನ ಜಾವ ೫.೩೦ ಆಗಿತ್ತು..!!
ಚಿತ್ರ @ ಶಿವುಲೋಕ..
18 comments:
adbhutakathanaka. onde usiralli odibitte....
uff shock kotri
maayadanta kanasu
usiru bigi hididu odide... shocking... en kanaso eno.. hedrisibidatte
ಇದ್ಯಾವಾಗಪ್ಪಾ ಆಗಿದ್ದು...???!!! ನನಗೇ ಗೊತ್ತಿಲ್ಲದೇ ನಿಮ್ಮ ಶೀರ್ಷಿಕೆ ನೋಡಿ ಹೊರಬಿದ್ದ ಪಿಸುನುಡಿ... ಹಹಹ ಕನಸಲ್ಲೂ ಹೀಗಾಗಬಾರದು.... ಚಶ್ಮೆ ಬದ್ದೂರ್. ಚನ್ನಾಗಿದೆ ಶೈಲಿ...ಸುಗುಣ
oh my god. suguna tumbaa bhaya, bejaaru ellaa ottige aagtaa ittu. sadhya kanasashte.. eega manasu haguraaytu
ಸ್ವಲ್ಪ ದಿನ ಮೊದಲಷ್ಟೇ ನೀವು ಇಲ್ಲಿಗೆ ಬಂದಿದ್ದರಲ್ಲಾ..? ಆವಾಗಿನ ಘಟನೆ ಎಂದು ಕುತೂಹಲದಿಂದ ಓದಲು ಶುರು ಮಾಡಿದೆ....ಓದುತ್ತಾ ಹೋದಂತೆ ಭಯ ಆಯ್ತು..... ಅಬ್ಭಾ...ಕನಸಲ್ವಾ ನಗು ಬಂತು....ಚೆನ್ನಾಗಿದೆ ..ನಮ್ಮನ್ನು ಏಮಾರಿಸಿದ ರೀತಿ....
ಸ್ವಲ್ಪ ದಿನ ಮೊದಲಷ್ಟೇ ನೀವು ಇಲ್ಲಿಗೆ ಬಂದಿದ್ದರಲ್ಲಾ..? ಆವಾಗಿನ ಘಟನೆ ಎಂದು ಕುತೂಹಲದಿಂದ ಓದಲು ಶುರು ಮಾಡಿದೆ....ಓದುತ್ತಾ ಹೋದಂತೆ ಭಯ ಆಯ್ತು..... ಅಬ್ಭಾ...ಕನಸಲ್ವಾ ನಗು ಬಂತು....ಚೆನ್ನಾಗಿದೆ ..ನಮ್ಮನ್ನು ಏಮಾರಿಸಿದ ರೀತಿ....
ಮನುಜನಿಗೆ ಆಮ್ಲಜನಕದ ಅವಶ್ಯಕತೆ ಕಾದದಿರುವುದು ಇಂತಹ ಸಮಯದಲ್ಲಿ...ಉಸಿರು ಬೇಡ ಅನ್ನಿಸುತ್ತೆ..ಒಂದೇ ಓಟದಲ್ಲಿ ಪೂರ ಓದಿಬಿಡೋಣ..ಪಕ್ಕದಲ್ಲೇ ಪ್ರಳಯವಾದರು ಸರಿಯೇ...
ಲೇಖನದ ಓಟದ ಶೈಲಿಗೆ ಒಂದು ಸಲಾಂ..ಮಸ್ತ್ ಇದೆ....ತುಂಬಾ ಸೊಗಸಾದ ಬರವಣಿಗೆ..
(ದೇವರಲ್ಲಿ ಪ್ರಾರ್ಥನೆ..ಇಂತಹ ಉಗಿಬಂಡಿ ಪ್ರಸಂಗ ಎಲ್ಲೂ ಬಾರದಿರಲಿ)..
hai akka tumbane cannagide nanu nijavenu anta andukundidde, abba ondu nimisha bhayane agittu ma....
from
nandu
ಎದೆ ಗಟ್ಟಿ ಇದ್ದದ್ದಕ್ಕೆ ಒಳ್ಳೇದ್ ಆಯಿತು....ಇಲ್ಲ ಅಂದ್ರೆ ಹಾರ್ಟ್ ಫೈಲ್ ಆಗ್ತಾ ಇತ್ತೇನೋ.....ಏನ್ರೀ ನೀವು ಈ ತರ ಎಲ್ಲಾ ಕನಸು ಕಾಣ್ತೀರ? ನಮ್ನೆಲ್ಲಾ ಹೆದಿರಿಸಿ ಬಿಟ್ರಲ್ರೀ.....ಚೆನ್ನಾಗಿತ್ತು ಬರಹ......
ಛೇ... ಹೀಗೆಲ್ಲಾ ಕನಸು ಕಾಣೋದೆ..
ಕೆಟ್ಟ ಕನಸು. ದೇವರೇ ಇದು ಯಾರ ಬಾಳಲ್ಲೂ ಸಮ್ಭವಿಸದೇ ಇರಲಿ. ಶತ್ರುವಿನ ಪಾಲಿಗೂ.
ನಿಮ್ಮ ನಿರೂಪಣಾ ಶೈಲಿಯ ಶಕ್ತಿಯು ಅಚ್ಚರಿಗೊಳಿಸುತ್ತದೆ. ಅದು ಸಾದೃಶ್ಯ ಕಾವ್ಯ.
ವಾವ್...ಸಖತ್ ಟ್ವಿಸ್ಟ್ ಕೊಟ್ರಿ...ಕೊನೆಯಲ್ಲಿ....ತುಂಬಾ ಚೆನ್ನಾಗಿದೆ...ಸುಗುಣ.. :)
ಇಷ್ಟೊಂದು ಹೆದರಬೇಡಿ (ಹೆದರಿಸಬೇಡಿ)! ನಿಮ್ಮ ಮಗನಿಗೆ ನೀವು ತಪ್ಪಿಸಿಕೊಂಡರೂ ಹುಡುಕಿ ಮನೆಗೆ ಕರೆತರುವ ಛಾತಿ ಇದೆ. ಆದರೂ ತಾಯಿ ಮತ್ತು ಕುಡಿಯನ್ನಲಗಿಸುವ ಯಾವುದೇ ಪ್ರಸಂಗ ಕನಸಲ್ಲಾದರೂ ಕೂಡ ನೋವು ತರುವಂತಹುದೇ. ಬೇಗ ಬೆಳಗಾಗಿ ನಿಮ್ಮ ಅಲಾರಂ ಟ್ರಿಂಕರಿಸಿದ್ದು ನಮಗೂ ಕೂಡ ನಿರಾಳ ತಂದಿತು. :)
ಅಬ್ಬಬ್ಬಾ ಏನ್ರೀ ಮೇಡಂ ನಮ್ಮನ್ನು ಬೇಸ್ತು ಬೀಳಿಸಿ ಬಿಟ್ಟಿರಿ , ಒಂದೇ ಉಸಿರಿನಲ್ಲಿ ಓದಿದ ನಾನು ಕೊನೆಗೆ ಇದು ನಿಮ್ಮ ಕನಸೆಂದು ತಿಳಿದು ನಿಟ್ಟುಸಿರು ಬಿಟ್ಟೆ. ಒಳ್ಳೆಯ ನಿರೂಪಣೆ.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
ನಿಮ್ಮ ಈ ಕಥೆ ಮೊದಮೊದಲಿಗೆ ಓದುತ್ತಾ ಒದಹಾಗೆ ಆ ಹಳಿ ತಪ್ಪಿದ ಮಗ ಮತ್ತೆ ಸಿಗಬಹುದಾ..?
ಎಂಬ ಕುತೂಹಲ ಮೂಡುತ್ತಲೇ ನಮ್ಮನ್ನ ಕಥೆಯ ಒಟ್ಟಿಗೆ ಕರೆದೊಯ್ಯುತ್ತದೆ.
ಕೊನೆಯ ಗಟ್ಟ ತಲುಪಿದ ಸಹೃದಯ ಓದುಗರಿಗೆ ಅಬ್ಬ...! ಇದೊಂದು ಬೆಳಗಿನ ಜಾವದ ರೈಲು ಪ್ರಯಾಣದ "ಕನಸು" ಎಂಬ
ನಿರ್ಮಲತೆಯ ಭಾವ ಮೂಡಿ, ಮನಸ್ಸು ಹಗುರಾಗಿ ನಗೆಯ ಗಡಲಲ್ಲಿ ನಮ್ಮನ್ನೆಲ್ಲ ಹೊತ್ತೊಯ್ಯುತ್ತದೆ.
ನಿಮ್ಮ ಈ ಕುತೊಹಳವನ್ನ ಸೆಳೆದಿಡುವ "ಹಳಿ ತಪ್ಪಿದ ರೈಲು ಮಗ" ನಿಜಕ್ಕೂ ಸುಂದರವಾಗಿದೆ.
ಕತೆಕಟ್ಟುವಿಕೆಯ ಶೈಲಿ ತುಂಬಾ ಸೊಗಸುಗಾರಿಕೆಯಿಂದ ಕೂಡಿದೆ.
ಶುಭವಾಗಲಿ ನಿಮ್ಮ ಮುಂದಿನ ಬರಹಕ್ಕೆ. ಕಿರಿಯನಾಗಿ ಶುಭ ಕೋರುವೆ.
ನಿಮ್ಮ ಈ ಕಥೆ ಮೊದಮೊದಲಿಗೆ ಓದುತ್ತಾ ಒದಹಾಗೆ ಆ ಹಳಿ ತಪ್ಪಿದ ಮಗ ಮತ್ತೆ ಸಿಗಬಹುದಾ..?
ಎಂಬ ಕುತೂಹಲ ಮೂಡುತ್ತಲೇ ನಮ್ಮನ್ನ ಕಥೆಯ ಒಟ್ಟಿಗೆ ಕರೆದೊಯ್ಯುತ್ತದೆ.
ಕೊನೆಯ ಗಟ್ಟ ತಲುಪಿದ ಸಹೃದಯ ಓದುಗರಿಗೆ ಅಬ್ಬ...! ಇದೊಂದು ಬೆಳಗಿನ ಜಾವದ ರೈಲು ಪ್ರಯಾಣದ "ಕನಸು" ಎಂಬ
ನಿರ್ಮಲತೆಯ ಭಾವ ಮೂಡಿ, ಮನಸ್ಸು ಹಗುರಾಗಿ ನಗೆಯ ಗಡಲಲ್ಲಿ ನಮ್ಮನ್ನೆಲ್ಲ ಹೊತ್ತೊಯ್ಯುತ್ತದೆ.
ನಿಮ್ಮ ಈ ಕುತೊಹಳವನ್ನ ಸೆಳೆದಿಡುವ "ಹಳಿ ತಪ್ಪಿದ ರೈಲು ಮಗ" ನಿಜಕ್ಕೂ ಸುಂದರವಾಗಿದೆ.
ಕತೆಕಟ್ಟುವಿಕೆಯ ಶೈಲಿ ತುಂಬಾ ಸೊಗಸುಗಾರಿಕೆಯಿಂದ ಕೂಡಿದೆ.
ಶುಭವಾಗಲಿ ನಿಮ್ಮ ಮುಂದಿನ ಬರಹಕ್ಕೆ. ಕಿರಿಯನಾಗಿ ಶುಭ ಕೋರುವೆ.
Post a Comment