Sunday, September 30, 2012

ಹುಚ್ಚು ಹೆಚ್ಚಾಗಿದೆ..!!!


                       ಚಿತ್ರ ನೋಡಿ ಎಲೆ ಅಡಿಕೆ ಕಡ್ಡಿಪುಡಿ ತಿನ್ನೋ...ಹುಚ್ಚು ಹೆಚ್ಚಾಗಿದೆ...ಎಂದುಕೋ ಬೇಡಿ..!!


                                                                                     ಪೋಟೋ ಡಿ.ಜಿ ಮಲ್ಲಿಕಾರ್ಜುನ್ 


ಹೊರಗಡೆ ಹೋದ ಮಗ ಇನ್ನು ಬಂದಿಲ್ಲ ಎಂದು ಮನೆಯಿಂದ ಆಚೆ ಹೋಗಿ ಕಾಯಲು ನಿಂತೆ, ಇದ್ದಕ್ಕಿದ್ದಂತೆ  ನನ್ನ ಅಡ್ಡಗಟ್ಟಿ ಏನೋ ಮಾತನಾಡುತ್ತಲಿದ್ದಾಳೆ, ಅರ್ಥವಾಗುತ್ತಿಲ್ಲ, ಅಕ್ಷರಗಳನ್ನ ನುಂಗುತ್ತಲೇ ಇದ್ದಾಳೆ. ಇಪ್ಪತ್ತರ ಆಸುಪಾಸಿನ ಹುಡುಗಿ, ವಕ್ರ ಉಡುಗೆ, ಕೆದರಿದ ಗುಂಗುರು ಕೂದಲು, ಕೆಂಪು ಪಾಚಿ ಹಲ್ಲುಗಳು, ಕೈಕಾಲಲ್ಲಿ ನಿತ್ರಾಣವಿಲ್ಲ ಎನಿಸುತ್ತೆ... ಬಡಕಲು ದೇಹ.. ಕಣ್ಣುಗಳಲ್ಲಿನ ನಿರಾಶೆ ಎದ್ದು ಕಾಣುತ್ತಿದೆ ಅವಳ ಕೈಯಲ್ಲಿ ಏನೋ ಆಟದ ಕಡ್ಡಿ. ಹಾಗೆ ಸ್ವಲ್ಪ ಕಣ್ಣರಳಿಸಿ ಹಿಂದೆ ನೋಡಿದೆ ಅಲ್ಲೇ ಒಂದು ಪುಟ್ಟ ಮಗು ಆಟದ ಸಾಮಾನಿನೊಂದಿಗೆ ನಿಂತಿದೆ. ಮೊದಲ ಸಲ ನೋಡ್ತಾ ಇರೋ ಈ ಹುಡುಗಿ ಹತ್ತಿರ ನಾನು ಇಂಗ್ಲೀಷಿನಲ್ಲೇ ಮಾತನಾಡಿ ಏನು ಎಂದು ಕೇಳಿದೆ..!! ನೀನು(ನುವ್ವು) ಇಂಡಿಯಾ..?? ಅಂದಳು ಹೌದು, ಎಂದು ಸನ್ನೆ ಮಾಡಿದೆ. ಮತ್ತೆ ತೆಲುಗಿನವಳ ಅಂದಳು. ಇಲ್ಲ, ಏನು ಬೇಕು..? ಎಂದು ತೆಲುಗಿನಲ್ಲೇ ಮಾತನಾಡಿಸಿದೆ. 

ನೀನು ಮಾಲ್ಯಾ(MALYA)(ಕುವೈತಿನ ಒಂದು ಸಿಟಿ)ಗೆ ಹೋಗ್ತಾ ಇದ್ದೀಯಾ ಅಂದಳು, ಇಲ್ಲ..!! ನಾನು ಅಲ್ಲಿಗೆ ಹೋಗೋದಿಲ್ಲ ಅಂದೆ, ಹೋಗು ಒಂದು ಸರಿ ಅಂದಳು.. ಯಾಕೆ ಎಂದು ಕೇಳಿದ್ರೇ.. ನನಗೆ ಕಡ್ಡಿಪುಡಿ ಅಥವಾ ಹನ್ಸ್ ಬೇಕು ತಂದು ಕೊಡ್ತೀಯಾ.....? ನಿನಗೆ ಯಾಕೆ ಬೇಕು ಅದೆಲ್ಲಾ ಅಚ್ಚುಕಟ್ಟಾಗಿ ಊಟ ಮಾಡಿಕೊಂಡಿರು ಎಂದೇಳ್ತಾ ಇದ್ದ ಹಾಗೇ ಏನೋ ಮುಖಭಾವ ಕೋಪಕ್ಕೆ ತಿರುಗಿದಂತಾಗಿತ್ತು.. ನನಗೇ ಅದು ತಿಂದಿಲ್ಲಾ ಅಂದ್ರೇ ಹುಚ್ಚು ಹಿಡಿಯುತ್ತೇ... ತಂದುಕೊಡು ಇಲ್ಲಾ ಅಂದ್ರೇ "ನಿಮ್ಮ ಯಜಮಾನ ಇದಾರಲ್ಲಾ ಅವರಿಗೆ ಹೇಳಿ ತರಿಸಿಕೊಡು" ಎಂದ ಕೂಡಲೇ... "ನಾನು ದಂಗಾಗಿ ಹೋದೆ......!!!". ಸಾವರುಸಿಕೊಳ್ಳುತ್ತಲೇ............ ನೀನು ಕೆಲಸ ಮಾಡ್ತೀಯಲ್ಲಾ ಆ ಮನೆಯ ಯಜಮಾನರಿಗೆ ಹೇಳು.. ತರಿಸಿಕೊಡುವರು, ಅಯ್ಯೋ.. ಅದು ಯಾವ್ ಭಾಷೆ ತೂ.. ಬರೋದೇ ಇಲ್ಲ ನನ್ಗೆ ಅಂದಳು.. ಭಾಷೆ ಬರದೆ ಅರಬೀ ಮನೆಯಲ್ಲಿ ಆ ಮಗು ಜೊತೆ ಒಡನಾಟ, ಮನೆಮಂದಿಯೊಂದಿಗೆ ಮಾತುಕತೆ ಹೇಗಿರಬೇಕು ದೇವರೇ..!! ಇವಳು, ಎಂದು ಯೋಚಿಸ್ತಾ ನಿಂತೆ..!! 

ಏನು.... ಏನು ತಂದು ಕೊಡ್ತೀಯಾ..!!? ಎಂದು ಕೈ ಅಲ್ಲಾಡಿಸಿ ಕೇಳಿದರೆ ನನಗೆ ಉತ್ತರಿಸಲು ತೋಚಲೇ ಇಲ್ಲ..!! ಮನಸಲ್ಲೇ ನೂರಾರು ದ್ವಂದ್ವಗಳು.. ಅವಳ ನೋಡಿದರೆ ಪಾಪ ಎನಿಸುತ್ತೇ ಆದರೆ ಛೇ..!! ಈ ಕೆಟ್ಟ ಅಭ್ಯಾಸ ಎಲ್ಲಾ ಯಾಕೆ ಈ ಹುಡುಗೀಗೇ ಅಚ್ಚುಕಟ್ಟಾಗಿ ತಿಂದುಕೊಂಡಿರಬಾರದ ಅಥವಾ ಆ ಮನೆಯಲ್ಲಿ ಅವಳ ಹುಚ್ಚು ಹೆಚ್ಚಿಸುವಂತಾ ಘಟನೆಗಳು ನೆಡೆಯುತ್ತಾ ?. ಹೀಗೇ ಏನೇನೋ ಪ್ರಶ್ನೆಗಳು ನನ್ನೊಳಗೆ. ಒಬ್ಬ ಮನುಷ್ಯನನ್ನು ನೋಡಿ ಅವರು ಹೇಗೆ, ಏನೂ, ಎಂತವರು ಎಂದು ತೀರ್ಮಾನಿಸುವುದು ಬಹಳ ಕಷ್ಟದ ಕೆಲಸ. ಆದರೂ ನಾನು ಕೊನೆಗೂ ಅವಳ ಪ್ರಶ್ನೆಗೆ ಉತ್ತರಿಸಲೇ ಇಲ್ಲ ಮೌನವಾಗೇ ನಿಂತು ಬಿಟ್ಟೆ....!!!

ನಾನು ಈ ಹುಡುಗಿ ನೋಡಿದ್ದು ಆಗಷ್ಟೇ..?? ಯಾವುದೋ ಅರಬೀ ಮಗುವನ್ನು ಅಪಾರ್ಟ್ಮೆಂಟ್ ಮುಂದೆ ಆಟವಾಡಿಸುತ್ತಾ ಇದ್ದಳು. ನಾವಿರುವ ಅಪಾರ್ಟ್ಮೆಂಟ್ ನಲ್ಲಿ ಯಾರೂ ಪರಿಚಯ ಇಲ್ಲ, ಪಕ್ಕದ ಮನೆಯಲ್ಲಿ ಯಾರಿದ್ದಾರೋ ಎಂಬುದು ೬ ವರ್ಷ ಕಳೆದರೂ ಇನ್ನೂ ಗೊತ್ತಾಗಿಲ್ಲ. ಅಂತಹದರಲ್ಲಿ ಮಹಡಿ ಮೇಲೆ ಯಾವುದೋ ಮನೆ ಕೆಲಸದ ಹುಡುಗಿ ಇಷ್ಟು ಜೋರು ಮಾಡಿ ನಿನ್ನ ಗಂಡನಿಗೆ ಹೇಳಿ ತರಿಸಿಕೊಡು ಎಂದು ಹೇಳಬೇಕಾದರೆ "ಈ ಕಡ್ಡಿಪುಡಿಯೋ ಅಥವಾ ಆ ಮನೆಮಂದಿಯೋ ಎಷ್ಟು ಹುಚ್ಚು ಹಿಡಿಸಿರಬೇಡ....!!!???"


ನಿತ್ರಾಣದ ಆ ಕಣ್ಣುಗಳು ಹಂಬಲಿಸುತ್ತಿರುವುದು ಕಾಣುತ್ತಿದೆ...ಆದರೆ ತಂದುಕೊಡಲು ನನ್ನ ಮನಸ್ಸು ಒಪ್ಪುತ್ತಿಲ್ಲ..!! 

19 comments:

Roopa said...

suguana nangoo artha agtilla . aake ashtu joru maadodu hege ?

Roopa said...

suguana nangoo artha agtilla . hege aake ashtu joru madtaale anta. eno huccu manasu

sunaath said...

Addictions are so debasing!

balasubramanya said...

ಸುಗುಣ ಮೇಡಂ ನಿಮ್ಮ ಲೇಖನ ಓದಿ ಮನ ಕರಗಿತು., ತನ್ನ ಬಂಧು ಭಾನ್ದವರನ್ನು ಬಿಟ್ಟು ಗೊತ್ತು ಗುರಿ ಇಲ್ಲದ ದೇಶದಲ್ಲಿ ಯಾರೋ ಅರಬಿಯವರ ಮನೆಯ ಊಳಿಗ ಮಾಡುವ ಆಕೆಗೆ ಸಹಜವಾಗಿ ಈ ದುರಭ್ಯಾಸ ಕಲಿತಿದ್ದಾಳೆ. ಕಡ್ಡಿ ಪುಡಿ ಸೇವನೆ ಗ್ರಾಮೀಣ ಹೆಂಗಸರಲ್ಲಿ ಜಾಸ್ತಿ , ಇದು ಹೊಗೆ ಸೊಪ್ಪಿನ ಉಪ ತಯಾರಿಕೆ. ಬಾಯಿಯಲ್ಲಿ ಕಾನ್ಸರ್ ಬರುವ ಸಾಧ್ಯತೆ ಜಾಸ್ತಿ ಇದರಿಂದ. ಅದರ ಸೇವನೆಯಲ್ಲಿ ತನ್ನ ನೋವನ್ನು ಮರೆಯುತ್ತಿದ್ದಾಳೆ ಆ ಯುವತಿ. ಅಂದ ಹಾಗೆ ಮತ್ತೊಂದು ವಿಚಾರ ದಯವಿಟ್ಟು ನಿಮ್ಮ ಬ್ಲಾಗಿನಲ್ಲಿ ಕಾಮೆಂಟ್ ಹಾಕಲು ಇರುವ ಅಡಚಣೆ ನಿವಾರಿಸಿ, ನಿಮ್ಮ ಬ್ಲಾಗಿನ ಹಲವು ಲೇಖನಗಳಿಗೆ ಕಾಮೆಂಟ್ ಹಾಕಲು ಬಹಳ ಶ್ರಮ ಆಗುತ್ತದೆ. ಕಿರಿ ಕಿರಿ ಜಾಸ್ತಿ ಅದನ್ನು ಸರಳೀಕರಣ ಗೊಳಿಸಿ .
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

Ittigecement said...

ಛೇ...

ಬಹಳ ಬೇಸರವಾಯಿತು....

ಕುತೂಹಲ ಚಟವಾದರೆ ಕಷ್ಟ...

ಚಟ ಬೆಳೆಸಿದರೆ ಮಾನಸಿಕವಾಗಿ ದುರ್ಬಲರಾಗಿ ತೆಪ್ಪಗೆ ಕೆಲಸ ಮಾಡಿಕೊಂಡಿರುತ್ತಾರೆ ಎನ್ನುವ ಭಾವನೆ..

ನಾನು ಕತಾರಿನಲ್ಲಿರುವಾಗ ಇಂಥಾದ್ದೊಂದು ವ್ಯಕ್ತಿಯನ್ನು ಭೇಟಿಯಾಗಿದ್ದೆ...

ಕೆಟ್ಟ ಜನಗಳು....

Swarna said...

ಚಟ ಚಟ್ಟದವರೆಗೂ ಬಿಡಲ್ಲ ಅಂತಾರಲ್ಲ ಹಾಗಾಯ್ತು.
ಕಾರಣಗಳೂ, ಅವಳ ಅಸಹಾಯಕತೆ ಏನೇ ಇದ್ದರೂ ಚಟವೆನ್ನುವುದು ವಿಚಿತ್ರ
ನೀವು ಬರೆದ ರೀತಿ ಚೆನ್ನಾಗಿದೆ
ಸ್ವರ್ಣಾ

ವಿ.ರಾ.ಹೆ. said...

ಸಂದಿಗ್ದದ ಪರಿಸ್ತಿತಿ ! ನಿಮ್ಮೂರಲ್ಲೇ ಸಿಗಲ್ವಾ ಅದು?

Srikanth Manjunath said...

ಅಮೇರಿಕಾ ದೇಶದ ಕೆಲವೆಡೆ (ಅಥವಾ ಹಲವೆಡೆ) "give me a dollar...!" ಅಂತ ಕೇಳ್ತಾರಂತೆ..ಕೊಟ್ಟರೆ ಸರಿ..ಇಲ್ಲದಿದ್ದರೆ..ಪಿಸ್ತೂಲ್ನಿಂದ ಟಪಕ್ ಅಂತ ಗುಂಡು ಹಾರಿಸಿಯೇ ಬಿಡ್ತಾರೆ..ಇದು ನನ್ನ ಸಹೋದ್ಯೋಗಿ ಅಮೇರಿಕ ದೇಶದಲ್ಲಿ ಕೆಲಸ ಮಾಡುವಾಗ ನೋಡಿದ್ದ..ಕೇಳಿದ್ದ ದೃಶ್ಯಗಳು ..ಒಂದು ಡಾಲರಿಗೆ ಎಂತಹ ಮಟ್ಟಕ್ಕೆ ಬೇಕಾದರೂ ಹೋಗುತ್ತಾರಂತೆ..ಇದಕ್ಕೆ ಕಾರಣ ಅವರ ಹವ್ಯಾಸ(ಅಭ್ಯಾಸ, ಚಟ)
ಚಟ ಚಟ್ಟ ಹತ್ತುವ ತನಕ ಹೋಗೋಲ್ಲ ಅಂತಾರೆ..ಅದಕ್ಕೆ ಅವರದೇ ಕಾರಣ ಇರುತ್ತೆ..ತಿಳಿದರೆ ನಮಗೆ ಕ್ಷುಲ್ಲಕ ಅನ್ನಿಸುತ್ತೆ..ಆದ್ರೆ ಅವರಿಗೆ ಗೊತ್ತು ಅದರ ಆಳ..ನಿಮ್ಮ ಬರಹಗಳು ಮನವನ್ನು ಹಾಗೆ ಒಮ್ಮೆ ಕಲಕಿ..ಗಾಡವಾದ ಛಾಪನ್ನು ಒತ್ತುತ್ತದೆ...!!!

Badarinath Palavalli said...

ಎರಡು ಕೋನಗಳಲ್ಲಿ ನೋಡ ಬೇಕಾದ ಬರಹ.
೧. ದುಶ್ಚಟಗಳು ನಮ್ಮನ್ನು ತುಂಬಾ ಕೆಳ ಮಟ್ಟಕ್ಕೆ ಇಳಿಸುತ್ತವೆ, ದೇಹಿಯಾಗಿಸುತ್ತವೆ. ನಾನೇ ಎಷ್ಟೋ ಬಾರಿ ದೂರದ ಊರುಗಳಿಗೆ ಹೋದಾಗ ಸಿಗರೇಟ್ ಸಿಗದೆ, ಹಾದಿ ಬದಿಯ ಮುದುಕನ ಬಳಿ ಬೀಡಿಯನ್ನು ಕಾಡೀ ಬೇಡಿ ಪಡೆದಿದ್ದೇನೆ!

೨. ಬಡತನದ ದೆಸೆಯಿಂದ ತಮ್ಮ ಮಕ್ಕಳನ್ನು ಮನೆಗೆಲಸಕ್ಕೋ, ಮೀಸಲುಗಾರ್ತಿಯರಾಗಿಯೋ ಮಾರುವ ತಂದೆ ತಾಯಿಗಳು ನನಗೆ ಅಸಹ್ಯ ತರಿಸುತ್ತಾರೆ. ನೋಡಿಕೊಳ್ಳಲು ಆಗದವರು ಹಡೆಯಲೇ ಬಾರದು! ಇನ್ನು ಮಾರಾಟವಾಗಿ ಹೀಗೆ ಹೊರ ದೇಶದ ಭಾಷೆಯೂ ಗೊತ್ತಿರದ ಮನೆಗಳಿಗೆ ಕೆಲಸಕ್ಕೆ ಹೋಗುವ ಹುಡುಗಿಯರ ’ಗುರುತು’ ಉಳಿಯುವುದೇ ಇಲ್ಲ.

ಒಳ್ಳೆಯ ಚಿಂತನಾರ್ಹ ಬರಹ.

ಮನಸು said...

ರೂಪ, ಹುಚ್ಚು ಮನಸ್ಸು ತನ್ನದು ಯಾವುದೋ ಬೇಸರದಲ್ಲಿ ಅವಳು ಹೀಗಾಗಿದ್ದಾಳೆ ಅಂದನಿಸುತ್ತೆ..

ಕಾಕ, ಚಟ ಅಧಃಪತನಕ್ಕೆ ತಂದು ಬಿಡುತ್ತೆ ಅಲ್ಲ್ವಾ..?

ಬಾಲು ಸರ್, ನಿಜ ಅದು ಯಾಕೆ ಜನ ಇಷ್ಟು ಚಿಕ್ಕವಯಸ್ಸಿಗೆ ಕಳುಹಿಸುತ್ತಾರೋ ಗೊತ್ತಿಲ್ಲ ಹೋಗಲಿ ಕಳುಹಿಸಿದರೂ ಸ್ವಲ್ಪ ವಿದ್ಯೆಯನ್ನಾದರು ಕಲಿಸಿದ್ದರೆ ಚೆನ್ನ. ಬ್ಲಾಗ್ ಕಾಮೆಂಟಿಸುವುದನ್ನು ಸರಿಪಡಿಸುವೆ.

ಮನಸು said...

ಪ್ರಕಾಶಣ್ಣ, ನಿಜಕ್ಕೂ ಬೇಜಾರಾಗುತ್ತೆ.. ಯಾಕೆ ಹೀಗೆ ದೇವರು ಎಲ್ಲರನ್ನೂ ಒಂದೇ ತರ ನೋಡುವುದಿಲ್ಲ .. ಸಮಾನತೆ ಕಾಪಾಡಿದ್ದರೆ ಹೀಗೆಲ್ಲಾ ಆಗುತ್ತಿತ್ತೆ..!!

ಸ್ವರ, ಅಸಹಾಯಕತೆಯಲ್ಲೂ ಆ ಚಟ ಮುಂದುವರಿಸಿರೋದು ಹೆಚ್ಚು ಅಲ್ವಾ..?

ಮನಸು said...

ವಿ.ರಾ.ಹ(ವಿಕಾಸ್) ಇಂತಹವನ್ನೆಲ್ಲ ಕುವೈತ್ ದೇಶದಲ್ಲಿ ಮಾರುವಹಾಗಿಲ್ಲ ಅದನ್ನೆಲ್ಲಾ ಕದ್ದುಮುಚ್ಚಿ ಮಾರುತ್ತಾರೆ. ಅಂತೆಯೇ ಎಲ್ಲಾ ಕಡೆ ಸಿಗೋಲ್ಲ.. ಇನ್ನೊಂದು ಎಂದರೆ ಆ ಮಾಲ್ಯಾ ಸಿಟಿಯಲ್ಲಿರುವ ಅಂಗಡಿಗಳಲ್ಲಿ ತೆಲುಗಿನ ಜನರೇ ಇದ್ದಾರೆ ಅವರೆಲ್ಲಾ ಹೇಗೋ ಸಂಗ್ರಹಿಸಿಟ್ಟಿರುತ್ತಾರೆ. ಸಂದಿಗ್ಧ ಪರಿಸ್ಥಿತಿ ಅಲ್ಲವೇ... ನಾನು ತರಿಸಿಕೊಟ್ಟರೂ ಅದು ಒಳ್ಳೆಯದೇ.. ಆ ಮನೆಯಲ್ಲಿ ಅವಳು ನೆಮ್ಮದಿಯಾಗಿದ್ದಾಳೋ ಇಲ್ಲವೋ ಗೊತ್ತಿಲ್ಲ ಅವಳು ಇದ್ದಿದ್ದು ನೋಡಿದ್ರೇ ಬೇಸರವಾಗುತ್ತೆ ಎಷ್ಟು ದಿನವಾಗಿತ್ತೋ ತಿಂದು ಎನ್ನುವಂತಿದ್ದಳು.

ಮನಸು said...

ಶ್ರೀಕಾಂತ್ ಹೌದು ಅಮೇರಿಕಾದಲ್ಲಿ ಹಾಗೆ ನೆಡೆಯುತ್ತೆ ಎಂದು ಕೇಳಿದ್ದೇ.. ನನ್ನ ಮನಸ್ಸಲ್ಲೂ ಒಂದು ರೀತಿ ಗೊಂದಲ, ಕೋಪ ಯಾಕೆ ಜನ ಹಿಂಗೆಲ್ಲಾ ಬರ್ತಾರೆ ಹೊರದೇಶಕ್ಕೆ ಅನ್ನಿಸುತ್ತೆ. ಆದರೆ ಅವರ ಪರಿಸ್ಥಿತಿ ಹೇಗಿತ್ತೋ ಗೊತ್ತಿಲ್ಲ.

ಮನಸು said...

ಬದರಿ ಸರ್, ತುಂಬಾ ಗಹನವಾದ ವಿಷಯ ಸರ್.. ಚಿಕ್ಕ ಹುಡುಗಿಯರನ್ನು ಅದೆಷ್ಟು ಬೇಗ ಹೊರದೇಶಕ್ಕೆ ಕಳುಹಿಸುತ್ತಾರೆ. ಯಾಕೆ ಹೀಗೆಲ್ಲಾ ನೆಡೆಯುತ್ತೆ ನನ್ನ ಮನದಲ್ಲಿ ಕಾಡುತ್ತಿರುವ ಸಂಗತಿ.. ಇದು ಯಾವಾಗ ಮುಗಿಯುತ್ತೆ ಗೊತ್ತಿಲ್ಲ..:(

ಮನಸು said...

ಬದರಿ ಸರ್, ತುಂಬಾ ಗಹನವಾದ ವಿಷಯ ಸರ್.. ಚಿಕ್ಕ ಹುಡುಗಿಯರನ್ನು ಅದೆಷ್ಟು ಬೇಗ ಹೊರದೇಶಕ್ಕೆ ಕಳುಹಿಸುತ್ತಾರೆ. ಯಾಕೆ ಹೀಗೆಲ್ಲಾ ನೆಡೆಯುತ್ತೆ ನನ್ನ ಮನದಲ್ಲಿ ಕಾಡುತ್ತಿರುವ ಸಂಗತಿ.. ಇದು ಯಾವಾಗ ಮುಗಿಯುತ್ತೆ ಗೊತ್ತಿಲ್ಲ..:(

ಪುಷ್ಪರಾಜ್ ಚೌಟ said...

ಈ ದೇಹ ಕೆಲವೊಮ್ಮೆ ಒಗ್ಗಿಬಿಡುತ್ತದೆ ದಿನದ 'ಹವ್ಯಾಸ'ಗಳಿಗೆ ಪೂರಣಗಳಿಲ್ಲದಿದ್ದಲ್ಲಿ ಕೆಲವೊಮ್ಮೆ ಮನಸ್ಸಿನಲ್ಲಿ ಏರುಪೇರು ಸಹಜ. ಸಿಗಬೇಕಾದುದು ಸಮಯಕ್ಕೆ ಸರಿಯಾಗಿ ಒಳಹೊಕ್ಕದ್ದಿದ್ದಲ್ಲಿ ಒಳಗೊಳಗೆ ಗೊಂದಲ.ತಾಕಲಾಟ. ಏನು ಮಾಡುತ್ತಿದ್ದೇವೆ ಎನ್ನುವುದನ್ನು ಮರೆಯುವುದು ಸಹಜ ಸಿಗುವ ತನಕ. ಈ ಲೇಖನದಲ್ಲಿನ ಆ ಹುಡುಗಿಯ ದುಶ್ಚಟ ಒಂದು ಉದಾಹರಣೆ ನಮಗೆಲ್ಲ. ಆ ಬಾಲೆಯ ಪಾತ್ರದಲ್ಲಿ ಕೆಲವೊಮ್ಮೆ ನಾವೇ ನಿಲ್ಲುತ್ತೇವೆ ಎನ್ನುವುದನ್ನು ಅಲ್ಲಗಳೆಯಲಾಗದು. ಸಮಯಕ್ಕೆ ಸರಿಯಾದ ಅರಿವು ನಮಗಿರಬೇಕು.

shivu.k said...

ಸುಗುಣಕ್ಕ:
ಲೇಖನವನ್ನು ಓದಿ ಗೊಂದಲಕ್ಕೆ ಒಳಗಾದೆ. ಏಕೆಂದರೆ ಚಟಕ್ಕೆ ಸಿಕ್ಕಿಹಾಕಿಕೊಂಡರೆ ಅದರಿಂದ ಬಿಡಿಸಿಕೊಳ್ಳುವುದು ತುಂಬಾ ಕಷ್ಟ. ಆದ್ರೆ ಮತ್ತೊಂದು ಕೋನದಲ್ಲಿ ಅದಿಲ್ಲದಿದ್ದಲ್ಲಿ ಅವಳಿಗೆ ಕಷ್ಟವೆನ್ನುವಂತಹ ಸ್ಥಿತಿಯುಂಟಾಗಿರುವುದು ತಿಳಿದು ಮತ್ತಷ್ಟು ಬೇಸರವಾಯ್ತು...

Manjula said...

ನೂರೆಂಟು ಯೋಚನೆಗಳಿಗೆ ಹಚ್ಚೋ ಬರಹ.. ಒಂದು ಚಿಕ್ಕ ಘಟನೆ ಅದೆಷ್ಟು ಪ್ರಭಾವ ಬೀರುತ್ತಲ್ವಾ ನಮ್ಮ ಮೇಲೆ? ಬದುಕಿನ ಲೀಲೆ!!!

ಜಲನಯನ said...

ಕಡ್ಡಿ ಪುಡಿ ನನ್ನಜ್ಜಿನೂ ಜಗೀತಿದ್ರು...ಆದರೆ ಅವರಿಗೆ ಯಾವುದೇ ಅಂತಹ ಖಾಯಿಲೆ ಇರಲಿಲ್ಲ ಎನ್ನುವುದು ನನಗೂ ಅಚ್ಚರಿ ತಂದಿದ್ದು ನಿಜ...ಚನ್ನಾಗಿದೆ ಕಥೆ ಸುಗುಣ...