ಸಿ.ಇ.ಓ ಕರೆ....
ಓ ಗಾಡ್, ಏನ್ ಕಾದಿದೆಯಪ್ಪೋ ಮೊದಲೇ ಕೊರೆಯುತ್ತೆ ಈ ಯಪ್ಪಾ... ಅಂದುಕೊಂಡು ಒಳಗೆ ಹೋದೆ..!! ಕರ್ಮ, ಅದೇನೋ ಹೇಳ್ತಾರಲ್ಲಪ್ಪಾ ಸಿಗಾರ್ ಸೇದಿರುವ ವಾಸನೆ ಗಬ್ಬ್ ಅಂತಾ ಇದೆ... ನನ್ಗೋ ಒಳಗೆ ಹೋಗ್ತಾ ಇದ್ದ ಹಾಗೆ ಕೆಮ್ಮೋ ಕೆಮ್ಮು... ಸಾರಿ... ಸ್ಮೋಕ್ ಮಾಡಿದ್ದೆ ಅಂದ್ರು ಬಾಸ್, ಆಯ್ತಪ್ಪಾ ಈಗ ಕರೆದಿದ್ದೇನು ಅಂದೇ..!!
ಯಾರು ಇದು ಸಯ್ಯದ್..?
ಯಾವ ಸಯ್ಯದ್, ಎಲ್ಲಿದ್ದಾರೆ ಏನು ಕಥೆ..? ಎಂದು ಮರು ಪ್ರಶ್ನೆ ಹಾಕಿದೆ...
ನೀವು ಮುಸ್ಲಿಮ್ಮಾ, ಐ ಥಿಂಕ್... ಹಿಂದು ಅಲ್ಲವಾ??... ನಿಮ್ಮಲ್ಲೂ ಸೈಯ್ಯದ್ ಅಂತಾ ಹೆಸರು ಇರುತ್ತಾ..?
ನಾನು ಮುಸ್ಲಿಮ್ ಅಲ್ಲಾ, ಈಗ ಏನು ವಿಷಯ ಹೇಳಿ...(ಸದ್ಯ ಅಲ್ಲಿಂದ ಓಡಿದ್ರೇ ಸಾಕಿತ್ತು. ಆ ವಾಸನೆಗ ನಿಲ್ಲೋಕ್ಕೆ ಆಗ್ತಿಲ್ಲ)
ಯಾವುದೋ ಪೇಪರ್ ಗಳನ್ನು ತಿರುವಿ ಹಾಕಿ. ನೋಡಿ, ಇಲ್ಲಿ ಯಾರು..? ಇದು ನಿನ್ನ ಹೆಸರಿನ ಜೊತೆ 'ಸಯ್ಯದ್ ಆಲಿಂಗಪ್ಪಾ' ಮತ್ತು ಮಫೂನ್ ಅಂತಾ ಇದೇ ನಿನ್ನ ಗಂಡನ ಹೆಸರು ಮಹೇಶ್ ಅಲ್ಲ್ವಾ? ಎಂದು ಕೇಳಿದರು
ಹೌದು ಮಹೇಶ್ ನನ್ನ ಗಂಡನ ಹೆಸರು... ಮನು ವಚನ್ ನನ್ನ ಮಗನ ಹೆಸರು..
ಹಾಗಾದ್ರೆ ಈ ಸೈಯ್ಯದ್ ಯಾರು..?
ಅದು ನನ್ನ ಗಂಡನ ಹೆಸರಿಗೆ ಇನ್ನೊಂದು ಹೆಸರು ಕೊಟ್ಟಿದ್ದಾರೆ ಈ ಕುವೈತಿಗೆ ಬಂದ ಮೇಲೆ..!! ಅಂತೇಳಿದೆ..
ನನ್ನವರ ಹೆಸರು ಸಿದ್ದಲಿಂಗಪ್ಪ ಮಹೇಶ್ ಎಂದು ಅಪ್ಪನ ಹೆಸರಿನ ಜೊತೆ ಅವರ ಹೆಸರು ಇದೆ. ಕುವೈತಿಗೆ ಬಂದ ಹೊಸತರಲ್ಲಿ ನನ್ನವರ ಹೆಸರಿನಲ್ಲಿ ರೆಸಿಡೆನ್ಸಿ, ಸಿವಿಲ್ ಐಡಿ ಮಾಡಿಸುವಾಗ ಅವರ ಹೆಸರನ್ನು ಅರೆಬಿಕ್ ಗೆ ಬರೆಯುವ ಸಂದರ್ಭದಲ್ಲಿ ಹೀಗೆ ಮಾಡಿಬಿಟ್ಟಿದ್ದಾರೆ. ಮತ್ತೆ ಬದಲಿಸಲು ಹೋದಾಗ ಅರಬೀ ಭಾಷೆಯಲ್ಲಿ ಸಿದ್ದಲಿಂಗಪ್ಪ ಎಂಬ ಹೆಸರನ್ನು ಸೈಯ್ಯದ್ ಆಲಿಂಗಪ್ಪಾ ಎಂದೇ ಬರೆಯೋದು ಎಂದು ಸಮಜಾಯಿಶಿ ಕೊಟ್ಟರಂತೆ... :)
ಕೊನೆಗೆ ನನ್ನ ಮಾತು ಕೇಳಿಸಿಕೊಂಡು ನಮ್ಮ ಬಾಸ್ ಹಾಗು ಜೊತೆಯಲ್ಲೇ ಇದ್ದ ನಮ್ಮ ಕಛೇರಿಯವರು ನಗುತ್ತಲೇ... ಸೈಯ್ಯದ್ ಹೆಂಡತಿ ಎಂದು ರೇಗಿಸುತ್ತಲೇ ಇದ್ದರು.
ಮತ್ತೆ ಮಗನಿಗೂ ಹೀಗೇ ಆಗಿದ್ದಾ..? ಹೌದು ಅಂದೇಳಿದೆ
ಮನು ವಚನ್ ಹಿಂದಿ ಪಿಲ್ಮ್ ಆಕ್ಟರ್ ಇದಾರಲ್ಲಾ ಅಮಿತಾ ಬಚನ್ ಹಂಗಾ ಹೆಸರು ಅದೇ ಫ್ಯಾಮಿಲಿನಾ ಅಂದ್ರು... ಹೂ ಅದೇ ತರನೇ ಆದರೆ ನಾವು ಆ ಫ್ಯಾಮಿಲಿ ಅಲ್ಲ ಅಂದೇ..ಹಹಹ (ಹೇಗೋ ಈಜಿಪ್ಟ್ ಜನಕ್ಕೆ ನಮ್ಮ ಭಾರತದ ನಟರ ಬಗ್ಗೆ ಗೊತ್ತಲ್ಲಾ ಅಂತಾ ಖುಷಿ ಆಯ್ತು).
ಇದೊಂದೇ ಘಟನೆ ಅಲ್ಲಾ.... ಎಲ್ಲಿಗೇ ಹೋಗಲಿ ನನ್ನವರನ್ನು ಸೈಯ್ಯದ್ ಎಂದೇ ಕರೆಯುತ್ತಾರೆ.. ಮನೆಯ ವಾಚ್ ಮನ್ ಸಹಾ "ಹಾ..!! ಸೈಯ್ಯದ್... ಆ..!! ಸೈಯ್ಯದ್..." ಎನ್ನುತ್ತಲೇ ಕರೆಯುತ್ತಾನೆ ಜೊತೆಗೆ ಒಮ್ಮೆ ನಮಾಜ್ ಮಾಡೋಕ್ಕೆ ಬರೋಲ್ವಾ ಎಂದು ಕರೆದಿದ್ದಾ. ಇಲ್ಲ ನಾವು ನಮಾಜ್ ಮಾಡೋಲ್ಲಾ ಎಂದಾಗ ಸೈಯ್ಯದ್ ಎಂದು ಹೆಸರಿದೆ ಮತ್ತೆ..?? ಹೂ ಹೆಸರಿದೆ ಅದು ಕುವೈತ್ ಜನ ಬದಲಿಸಿರೋದು ಎಂದು ಹೇಳಿದ್ದರು. :) ಇನ್ನು ಮಾತ್ತಾರಾದರು ಅರಬೀ ಜನ ಅವರ ಸಿವಿಲ್ ಐಡಿ ನೋಡಿದರೆ ಸಾಕು ಸೈಯ್ಯದ್ ಎಂದೇ ಕರೆಯುವುದು.
ನಾನು ಸಹ ನನ್ನವರು ಎಲ್ಲಿಗಾದರು ಹೊರಟರೆ ಸೈಯ್ಯದ್ ಅಲಿಂಗಪ್ಪಾ ಎಂಬುದನ್ನು ಸ್ವಲ್ಪ ಬದಲಿಸಿ ಸೈಯ್ಯದ್ ಎಲ್ಲಿಗಪ್ಪಾ..?? ಎಂದು ಕೇಳುತ್ತೇನೆ.
ಇನ್ನು ನನ್ನ ಮಗನ ಹೆಸರು ಮನುವಚನ್ ಇರುವುದು ಮಫೂನ್ ಮಾಡಿದ್ದಾರೆ ಒಂದು ರೀತಿ ಬಫೂನ್ ಆದಂಗೆ ಆಯ್ತು ನೋಡಿ..:)
ಈ ರೀತಿ ಇರುವ ಹೆಸರೇ ಬದಲಾದರೆ ತಮಾಷೆ ಜೊತೆಗೆ ಮುಜುಗರವೂ ಇರುತ್ತದೆ ಅಲ್ಲವೇ..???:) :)
20 comments:
ಹ್ಹಾ... ಹ್ಹಾ.... !!
ಆಲಿಂಗಪ್ಪಾ ಮಸ್ತಾಗಿದೆ !!
ಹೆಸರನ್ನು ಅನ್ವರ್ಥ ಮಾಡಿಕೊಂಡ್ರೆ ಕಷ್ಟ ತಂಗ್ಯವ್ವಾ... ಹುಷಾರು !
ಮಸ್ತಾಗಿದೆ ನಿಮ್ಮ ಅನುಭವ ಕಥನ.... ಹ್ಹಾ ಹ್ಹಾ
ಸುಗುಣ ...ನಗು ಉಕ್ಕಿ ಹರಿತಾ ಇದೆ... ನಿಜ..ಏನೆಲ್ಲಾ ಎಡವಟ್ಟು ಆಗತ್ತೆ ಕೆಲವೊಮ್ಮೆ... 'ಆಲಿಂಗಪ್ಪ', 'ಮಫೂನ ' ಎಲ್ಲಾ ಸೂಪರ.... ನಾನಂತೂ ಎಂಜಾಯ್ ಮಾಡ್ದೆ.. :)
ಹೆಸರಿನ ಬದಲಾವಣೆ ತುಂಬಾ ಮಜವಾಗಿದೆ ಸುಗುಣಕ್ಕ ..
enjoy ಮಾಡಿದೆ ...
ಅದರೂ ಮನು ವಚನ್ ಅನ್ನೋ ಚಂದದ ಹೆಸರನ್ನು ಹಾಳು ಮಾಡಿದ್ದು ಮಾತ್ರ ಬೇಸರ ಮೂಡಿಸಿತು
hahahha suguna , hesaru badalaavane chennaagide. pajeethi, mujugara nimage , maja Odhtiro namage :)
ಸಂದಾಕೈತೆ ಈ ಕತೆ :-)
ಹೆಸರನ್ನು ಟೇಬಲ್ ಮೇಲೆ ಇಟ್ಟು ತರಕಾರಿ ಹೆಚ್ಚಿದ ಹಾಗೇ ಹೆಚ್ಚಿ ಮಿಕ್ಸರ್ ಗೇ ಹಾಕಿ ಕಲೆಸಿದಂತಾಯಿತು..ಭಾಷೆಯಲ್ಲಿನ ಗೊಂದಲ ಧರ್ಮವನ್ನೆ ಬದಲಾಯಿಸಿಬಿಡುತ್ತೆ..ಹಹಃ...ಸುಂದರವಾಗಿದೆ..ನಗಲು ಅಡ್ಡಿಯಿಲ್ಲವಾದರೂ ಕೆಲವೊಮ್ಮೆ ಅದು ತರುವ ಮುಜುಗರ...!...ಸುಂದರ ಲೇಖನ ಮೇಡಂ..
ಹಹಹ್ಹಹ
ಸಕತ್ ಆಗಿದೆ ಸೈಯದ್ ಕತೆ.......
ನಕ್ಕು ನಕ್ಕು ಸಾಕಾಯ್ತು ಸುಗುಣ......
ಮಹೇಶನಿಗೆ ಇನ್ಮೇಲೆ ಸೈಯ್ಯದ್ ಅಂತಾನೆ ಕರೆಯೋದು ನಾನು....
ಹಹಹ್ಹಹ
ಸಕತ್ ಆಗಿದೆ ಸೈಯದ್ ಕತೆ.......
ನಕ್ಕು ನಕ್ಕು ಸಾಕಾಯ್ತು ಸುಗುಣ......
ಮಹೇಶನಿಗೆ ಇನ್ಮೇಲೆ ಸೈಯ್ಯದ್ ಅಂತಾನೆ ಕರೆಯೋದು ನಾನು....
ಹ್ಹ..ಹ್ಹ.. ಸುಗುಣಾ ಚನ್ನಾಗಿದೆ ಹೆಸರಿನ ಅವಾ೦ತರ..:)
ಹೆಸರಲ್ಲೇನಿದೆ ಬಿಡ್ರೀ ಅನ್ನೋರಿಗೆಲ್ಲ... ಹೆಸರಲ್ಲಿ ಏನೇನೆಲ್ಲಾ ಇಲ್ಲಾ ಅನ್ನೋದನ್ನ ತೋರಿಸ ಬಹುದಾದಂಥ ಬರಹ. ವಿಥ್ ಫುಲ್ ಆಫ್ ಲಾಫ್... ಇಷ್ಟ ಆಯಿತು.. :) :)
ಮಹೇಶರನ್ನು ನೀವು ‘ಸಯ್ಯದ ಆಲಿಂಗಿಸಪ್ಪಾ!’ ಎಂದೇ ಕರೆಯಬಹುದು!
ಹೆಸರಿನ ಅಂತರ ’ಆವಾಂತರ’... ಸಯ್ಯದ್ ಥರಾನೆ ನಿಮಗೂ ಒಂದು ಹೆಸರು ಇದ್ದರೆ ಜೋಡಿ ಒಳ್ಳೆಯದಾಗ್ತಿತ್ತು ಅಲ್ವಾ...? ಮಜವಾಗಿದೆ ಬರೆದ ರೀತಿ.... ಎದುರಿಗೆ ಕುಳಿತು ಮಾತನಾಡಿದ ಹಾಗಿತ್ತು..... ಸುಪರ್...
Suguna Mahesh ಸೈಯ್ಯದ್ ಆಲಿಂಗಪ್ಪಾ.
ಪ್ರಸಿದ್ಧ ಬರಹಗಾರ, ‘ಆಕಾಶವಾಣಿ’ಯ ಡಾ||ಹೆಚ್.ಕೆ.ರಂಗನಾಥ್ ಅವರು ಒಮ್ಮೆ ಕೊಲ್ಲಿ ರಾಷ್ಟ್ರಗಳಿಗೆ ಹೋದಾಗ, ಬ್ಯಾಂಕೊಂದರಲ್ಲಿ ಅವರಿಗಿಂತ ಮೂದೆ ಕ್ಯೂನಿಂತವರನ್ನು ನೂಕಿ, ವಿಪರೀತ ಮರ್ಯಾದೆಯಿಂದ ಫಾರಿನ್ ಎಕ್ಸ್ಚೇಂಜ್ ಕೊಟ್ಟಿದ್ರಂತೆ. (ಆಗೆಲ್ಲಾ ಫಾರಿನ್ ಎಕ್ಸ್ಚೇಂಜ್ ಪಡೆಯುವುದೇ ದೊಡ್ಡ ಸಾಹಸವಾಗುತ್ತಿತ್ತು, ವಿದೀಶಿ ಪಯಣಿಗರಿಗೆ). ಕಾರಣ, ಹಾಸನ ಕೆ. ರಂಗನಾಥ್ (ಹಾಗೆಂದು ಪಾಸ್ಪೋರ್ಟಿನಲ್ಲಿ ಬರೆದದ್ದನ್ನು) ಬ್ಯಾಂಕಿನವರು ಹಸನ್ ಕೆ.ರಂಗನಾಥ್ ಎಂದು ಓದಿಕೊಂಡಿದ್ದರು. ಹಸನ್ಜೀ ಎಂದು ಆದರಿಸಿದ್ದರು. ಅವರ ಪುಸ್ತಕವೊಂದರಲ್ಲಿ ಈ ಪ್ರಸಂಗವನ್ನು ಬರೆದುಕೊಂಡಿದ್ದಾರೆ.
ಹಹ್ಹಹ್ಹಾ...
ಬಿದ್ದು ಬಿದ್ದು ನಕ್ಕೆ.
ನಾನು ನನ್ನ ಹೆಂಡತಿ ಚುನಾವಣಾ ಗುರುತಿನ ಚೀಟಿ ಮಾಡಿಸಲು ಹೋದಾಗ, ನನ್ನ ಕೈಗೆ ಬಂದ ಚೀಟಿಯಲ್ಲಿ ಹೀಗಿತ್ತು.
ಹೆಸರು: ಬದರಿನಾಥ್ ಪಿ.ಎನ್
ತಂದೆ: ಅಬ್ದುಲ್ ಗಫೂರ್ ಸಾಬ್
ಲಿಂಗ: ಸ್ತ್ರೀ
ಹಾ ಹಾ...
ಏನೆಂದು ಸಂಭೋಧಿಸಲಿ?ಬೇಡ ಬಿಡಿ ಹೋಗ್ಲಿ॒!!!ಹೆಸರಲ್ಲೇನಿದೆ..
ಒಮ್ಮೆ ನಕ್ಕು ಹಗುರಾದೆ..
ಚೆನಾಗಿತ್ತು..
ಈಗಷ್ಟೇ ಒಂದು ಪರೀಕ್ಷೆ ಮುಗಿಸಿ ಓದಿದ್ದು..
ಬರೆಯುತ್ತಿರಿ...
ಹಾಂ ಬದರಿ ಸರ್ ಕಮೆಂಟು ನೋಡಿದ ಮೇಲೆ ನೆನಪಾಯ್ತು..
ಮತದಾರರ ಗುರುತಿನ ಚೀಟಿಯಲ್ಲಿ ನನ್ನ ಹೆಸರು ಹಿಂಗಿದೆ..
ಹೆಸರು:ಚಿನ್ಮಯ ಭಟ್ಟ
name: chinmay hegde !!!!!
ಕನ್ನಡ ಇಂಗ್ಲೀಷಿಗೇ ಇಷ್ಟು ವ್ಯತ್ಯಾಸ..ಇನ್ನು ನಿಮ್ಮದು ಅಷ್ಟು ಬದಲಾಗಲೇಬೇಕು ಬಿಡಿ ಹಾ ಹಾ..
ನಮಸ್ತೆ...
ಹಾ ಹಾ...
ಏನೆಂದು ಸಂಭೋಧಿಸಲಿ?ಬೇಡ ಬಿಡಿ ಹೋಗ್ಲಿ॒!!!ಹೆಸರಲ್ಲೇನಿದೆ..
ಒಮ್ಮೆ ನಕ್ಕು ಹಗುರಾದೆ..
ಚೆನಾಗಿತ್ತು..
ಈಗಷ್ಟೇ ಒಂದು ಪರೀಕ್ಷೆ ಮುಗಿಸಿ ಓದಿದ್ದು..
ಬರೆಯುತ್ತಿರಿ...
ಹಾಂ ಬದರಿ ಸರ್ ಕಮೆಂಟು ನೋಡಿದ ಮೇಲೆ ನೆನಪಾಯ್ತು..
ಮತದಾರರ ಗುರುತಿನ ಚೀಟಿಯಲ್ಲಿ ನನ್ನ ಹೆಸರು ಹಿಂಗಿದೆ..
ಹೆಸರು:ಚಿನ್ಮಯ ಭಟ್ಟ
name: chinmay hegde !!!!!
ಕನ್ನಡ ಇಂಗ್ಲೀಷಿಗೇ ಇಷ್ಟು ವ್ಯತ್ಯಾಸ..ಇನ್ನು ನಿಮ್ಮದು ಅಷ್ಟು ಬದಲಾಗಲೇಬೇಕು ಬಿಡಿ ಹಾ ಹಾ..
ನಮಸ್ತೆ...
ಹಾ ಹಾ...
ಏನೆಂದು ಸಂಭೋಧಿಸಲಿ?ಬೇಡ ಬಿಡಿ ಹೋಗ್ಲಿ॒!!!ಹೆಸರಲ್ಲೇನಿದೆ..
ಒಮ್ಮೆ ನಕ್ಕು ಹಗುರಾದೆ..
ಚೆನಾಗಿತ್ತು..
ಈಗಷ್ಟೇ ಒಂದು ಪರೀಕ್ಷೆ ಮುಗಿಸಿ ಓದಿದ್ದು..
ಬರೆಯುತ್ತಿರಿ...
ಹಾಂ ಬದರಿ ಸರ್ ಕಮೆಂಟು ನೋಡಿದ ಮೇಲೆ ನೆನಪಾಯ್ತು..
ಮತದಾರರ ಗುರುತಿನ ಚೀಟಿಯಲ್ಲಿ ನನ್ನ ಹೆಸರು ಹಿಂಗಿದೆ..
ಹೆಸರು:ಚಿನ್ಮಯ ಭಟ್ಟ
name: chinmay hegde !!!!!
ಕನ್ನಡ ಇಂಗ್ಲೀಷಿಗೇ ಇಷ್ಟು ವ್ಯತ್ಯಾಸ..ಇನ್ನು ನಿಮ್ಮದು ಅಷ್ಟು ಬದಲಾಗಲೇಬೇಕು ಬಿಡಿ ಹಾ ಹಾ..
ನಮಸ್ತೆ...
ಹಹಹ .... ತಡೆಯಲಾಗಲಿಲ್ಲ...ಹೆಸರಲ್ಲೇನಿದೆ ಎಂದು ಸುಲಭವಾಗಿ ಹೇಳಬಹುದಾದರೂ ಹೇ ಇರುವ ಹೆಸರನ್ನು ಈ ರೀತಿ ಬದಲಿಸಿದಾಗ ಮುಜುಗರ ಉಂಟಾಗುವುದು ಸಹಜ...
ಹಃ ಹಹ್ಹ ನಮ್ಮ ಕಡೆನೂ ಹಾಗೆ ಸುಗುಣ ,ನನ್ನ ಅಕ್ಕನ ಇಲ್ಲಿಗೆ ಕರಿಸಿದಾಗ ಅವಳ ವೀಸಾ ಮೇಲೆ ಅಜ್ಯಾಲಿ (azaali) antha ..avali anjali , innu ammana visa male hesaru soudha sharbat ( sudha sarnobat ) , nanna maganige avana calsinali arabic teacher mohet (ಮೊಹೆತ್),ಅವನು ಮೋಹಿತ್ ಆದರೆ ಅಂತ ಕರೆದು ಸ್ವಪ್ಲ ನಾ ಇಟ್ಟಿರೋ ಹೆಸರಿಗೆ ಮುಸ್ಲಿಂ ಹೆಸರ ಘಮ ತಂದ್ದಿರು :) ತುಂಬಾ ಚನ್ನಾಗಿದೆ ನಿಮ್ಮ ಅನುಭವ ..
ಅರೆರೆ ಮೊನ್ನೆ ನಾನು ಓದಿ ನಕ್ಕಿದ್ದೆ....ಅದು ಮಾಯ..!!! ಮಾಯನ್ ಕ್ಯಾಲಂಡರ್ ಮಾಯ ಆಗೋ ಹೊತ್ಗೆ ಇದೂ ಮಾಯವೇ... ಸಯ್ಯದಾ ಆಲಿಂಗಪ್ಪಾ...ಹಹಹಹ
Post a Comment