Tuesday, January 22, 2013

ಮನಸು-ಕನಸು ಇವೆರಡರ ನಡುವೆ

ನನ್ನ ಪ್ರೀತಿಯ ತಮ್ಮ ಡಾ.ಲೋಹಿತ್ ತೆಗೆದ ಕೆಲವು ಚಿತ್ರಗಳಿಗೆ ನನ್ನ ಸಾಲುಗಳು :)

-ಮುಗ್ಧ ಮನಸು-


ಛಳಿಯಲಿ ಬೆಚ್ಚಗೆ ಮಲಗಿದ್ದೆ
ಅಮ್ಮನೋ ಬಿಡದೆ ಮುದ್ದಿಸಿ
ನನ್ನ ಎಬ್ಬಿಸಿ ಬುತ್ತಿ ಕಟ್ಟಿ
ಶಾಲೆಗೆ ಕಳುಹಿಸಿಹಳು....

ಬೆನ್ನಿಗೆ ಬಿದ್ದ 
ಪುಸ್ತಕದ ಹೊರೆ ಹೊತ್ತು
ಮನೆ ಬಿಟ್ಟು ದೂರ ನೆಡೆದರೂ 
ತೂಗಡಿಕೆ ಏಕೋ ಕಾಡಿದೆ ...

ಬಿಸಿಲು ಎಳಸಾಗಿ
ಕಾಲುವೆಯು ಹೊಳಪಾಗಿ
ಗಾಳಿಯು ತಂಪೆರಗಿ
ನನ್ನ ಚುಂಬಿಸುತಿವೆ
ಎಳೆ ಮನಸಿಗೆ ಸುಖವೆನಿಸಿದೆ...

ರಸ್ತೆ ಬದಿ, ಸೇತುವೆ, ಯಾವುದಾದರೇನು
ಕೊಂಚ ವಿಶ್ರಮಿಸುವ 
ಆಸೆಯಲಿ ಹೊಟ್ಟೆ ತುಂಬುವ
ಬುತ್ತಿ ಆಶ್ರಯಿಸಿ 
ಮಂಪರಿಗೆ ಜಾರಿರುವೆ 

-------------

-ಭವಿಷ್ಯದ ಕನಸು-


ಬುತ್ತಿಗಿಂತ ಅತಿ ಹೆಚ್ಚು
ಕನಸುಗಳನು ಹೊತ್ತು
ಭವಿಷ್ಯ ಹುಡುಕ ಹೊರಟ
ಕೂಸು ಯಾ ಒಡಲ ಮುತ್ತು


ಹಾದಿ ಸವೆಸಿದ ಹೆಜ್ಜೆಗಳು
ಸದಾ ನವಿರಾದ ಗೆಜ್ಜೆಗಳಲಿ
ಮುಂಬರುವ ಬದುಕಿಗೆ
ಹೊಸ ಭಾಷ್ಯ ಬರೆಯಲಿದೆ.. 

ನೇಸರ ಬೆಳಕಿಗೆ
ಹೊಳೆವ ಕಣ್ಣು
ಯಶಸ್ಸಿನ ಆಗರ
ಬೆಳೆಸುವಳು ಈ ಹೆಣ್ಣು...

18 comments:

ಜಲನಯನ said...

ಬಾಲ್ಯದ ಕನಸುಗಳ (ಪುಸ್ತಕ ಚೀಲ ಅಲ್ಲ) ಹೊತ್ತ ಎಳೆ ಮನಸಿನ ತುಡಿತದ ಅಕ್ಷರಾಂತರ ತುಂಬಾ ಚನ್ನಾಗಿದೆ ಸುಗುಣ. ಆ ಕಣ್ಣಿನ ಕನಸಿಗೆ ಎಲ್ಲೆಯಿರುವುದಿಲ್ಲ

ಸಂಧ್ಯಾ ಶ್ರೀಧರ್ ಭಟ್ said...

Both are soooopppeeerrr...

ಶಿವಪ್ರಕಾಶ್ said...

Nice one akkayya :)

Suresh said...

ಮುಗ್ಧ ಮೃದುಮನಸಿನ ಸವಿಗನಸುಗಳ ಬುತ್ತಿಯ ಎಳೆಯ ಎಳೆಗಳು ಸೊಗಸಿನ ಕಬ್ಬದಲೆ ಅಲೆಗಳಾಗಿ ಬಿತ್ತರಗೊಂಡಿವೆ... :)

ಗಿರೀಶ್.ಎಸ್ said...

'ಭವಿಷ್ಯದ ಕನಸು' ಹೊತ್ತ 'ಮುಗ್ಧ ಮನಸ್ಸಿನ' ಬಗ್ಗೆ 'ಮೃದು ಮನಸು' ಬರೆದ ಕವಿತೆಗಳು ತುಂಬಾ ಚೆನ್ನಾಗಿವೆ.... ಚಿತ್ರಕ್ಕೆ ತಕ್ಕ ಸಾಲುಗಳು...

prashasti said...

Chennagide :-)

Sudeepa ಸುದೀಪ said...

chitrakke honduva chandada saalugaLu....

Badarinath Palavalli said...

ವಾವ್,

ಮತ್ತೊಮ್ಮೆ ನಮ್ಮನ್ನು ಬಾಲ್ಯಕ್ಕೆ ರವಾನಸಿ, ಮುದಗೊಳಿಸಿದ ನಿಮ್ಮ ಕಾವ್ಯ ಸೃಷ್ಟಿಗೆ ಶರಣು.

ಹೃದಯ -ಹೇಳಿತು said...

super lins

Srikanth Manjunath said...

ಚಿತ್ರಗಳಿಗೆ ಬಣ್ಣ ತುಂಬುವುದು ಒಂದು ರೀತಿಯ ಕಲೆ...
ಚಿತ್ರಗಳಿಗೆ ಪದ ತುಂಬುವುದು ಇನ್ನೊಂದು ಕಲೆ
ಪದಗಳಿಂದಲೇ ಚಿತ್ರಗಳಿಗೆ ಜೀವ ತುಂಬಾ ಈ ಪ್ರಯತ್ನ ಸೂಪರ್..
ಸುಂದರ ಸಾಲುಗಳಿಗೆ ಸುಂದರ ಚಿತ್ರ...ಸುಂದರ ಚಿತ್ರಗಳಿಗೆ ಸುಂದರ ಪದಗಳು..
ಯಾವುದು ಮೊದಲು...ಯಾವುದು ನಂತರ..ಗೊಂದಲ...ಆದ್ರೆ ಎರಡು ಸೂಪರ್...

sunaath said...

ಮೋಹಕ ಚಿತ್ರಗಳಿಗೆ ಮೋಹಕ ಸಾಲುಗಳು!

Dr.D.T.Krishna Murthy. said...

ಮನಸು ಮೇಡಂ;ಎರಡೂ ಸುಂದರ ಕವನಗಳು.ನನ್ನ ಬ್ಲಾಗಿಗೂ ಬನ್ನಿ.ನಮಸ್ಕಾರ.

Santhoshkumar LM said...

Superb ri....Keep writing.

Santhoshkumar LM

ಮಂಜಿನ ಹನಿ said...

ಮುಗ್ಧತೆ ಕಾವ್ಯವಾಗಿ ಮಾತನಾಡಿದೆ. ಆ ಪುಟ್ಟ ಕಂದಮ್ಮಗಳ ಮುಗ್ಧತೆಯನ್ನೊಂದಷ್ಟು ಎರವಲು ಪಡೆಯುವ ಮನಸಾಗಿದೆ. ಎರಡೂ ಕವನಗಳೂ ಹಿಡಿಸಿದವು. :)

ಸುಮ said...

ಸುಂದರವಾದ ಚಿತ್ರಗಳಿಗೆ ಅರ್ಥಗರ್ಭಿತವಾದ ಸಾಲುಗಳು...ಇಷ್ಟವಾಯ್ತು ಸುಗುಣ :)

ಮನಮುಕ್ತಾ said...

ಚಿತ್ರಗಳೂ, ಸಾಲುಗಳೂ..ತು೦ಬಾ ಚೆನ್ನಾಗಿವೆ.

ದಿನಕರ ಮೊಗೇರ said...

ತುಂಬಾ ಸುಂದರ ಕವನ... ಚಿತ್ರವಿಲ್ಲದೇ ಹೋದರೂ ಈ ಕವನ ಓದಿದರೆ ಇದೇ ಚಿತ್ರ ಮನಸ್ಸಿಗೆ ಬರತ್ತೆ..ಕಣ್ಣಿಗೆ ಕಟ್ಟುವ ಹಾಗಿದೆ... ತುಂಬಾ ಇಷ್ಟ ಆಯ್ತು....

VENKATESHANEKAL said...

ಮೃದುವಾದ ಮುದ್ದಿನ ಮನಸು ಬೆಚ್ಚನೆಯ ತೇಲುವಾದ ಕನಸು..
ಚಿಕ್ಕ ಚಿಕ್ಕ ಸಾಲುಗಳಲ್ಲಿ ದೊಡ್ಡದಾದ ಬರಹಗಳು

ತಾಯಿಯೇ ಕೈಯಿಡಿದು ಕರೆಯುವ ಮುಕ್ತವಾದ ಕವಿತೆ.,.,

ತುಂಬ ಚೆನ್ನಾಗಿದೆ ನಿಮ್ಮ ಈ ಕಲ್ಪನೆಯ ಕವನವು