Sunday, September 8, 2013

-ಹಬ್ಬದ ತವರು-


ಗೌರಿ ನೆಪದಲಿ ನಮಗೆ ಔತಣ
ತವರ ಉಸಿರು ಸೆಳೆವ
ಸಂಬಂಧ ಬೆಸುಗೆ ಬೆಸೆವ
ಅನುಬಂಧವೇ ಈ ಹಬ್ಬದ ಚಿತ್ರಣ 

ಗಂಡ ಮನೆ ಮಕ್ಕಳು
ಸಿರಿವಂತ ಬಾಂಧವ್ಯದಲೂ 
ತವರು ಬಡತನದಲಿದ್ದರೂ 
ಸೆಳೆತ ಮಾತ್ರ ರೋಮಾಂಚನ

ಹುಟ್ಟಿದ ಮನೆ ಜನನಿ ಮಾತೆ
ಅದು ಬಿಡಿಸದ ಕರುಳ ಕೊಂಡಿ
ಕುಂಕುಮಾರಿಶಿನ ಹಸಿರು ಬಳೆ
ಇದು ಭಾವ ತುಂಬಿದ ಬಾಗಿಣ

ಭಾಗ್ಯದ ಮಳೆ ತವರು ಮನೆ
ಅಂಬಲಿಯ ಒಲೆ ಉರಿಸಿ
ರಕ್ತ ಸಂಬಂಧಿಗಳ ಬೆರೆತು
ತುತ್ತು ಹಂಚಿಕೊಂಡ ಅರಮನೆ

 ಕಾಂತಿ ಕೊಟ್ಟ ತವರ ಮಡಿಲು
ಹರುಷ ತುಂಬುವ ಹಬ್ಬ ಹರಿದಿನ
ಪ್ರತಿಮನಕೆ ಬರಲಿ ಅನುದಿನ
ತಣಿಸುತಿರಲಿ ಹೆತ್ತಮ್ಮನ ಒಡಲು


ಎಲ್ಲರಿಗೂ ಗೌರೀ ಮತ್ತು ಗಣೇಶ ಹಬ್ಬದ ಶುಭಾಶಯಗಳು... 


7 comments:

ಚಿನ್ಮಯ ಭಟ್ said...

chenagide :-)..bhavapoorna salugalu..
nimagoo habbada shubhashaya :-)

sunaath said...

ಭಾವಪೂರ್ಣ ಕವನ. ನಿಮಗೂ ಸಹ ಗಣೇಶನ ಹಬ್ಬದ ಶುಭಾಶಯಗಳು.

ಚುಕ್ಕಿಚಿತ್ತಾರ said...

ಸುಗುಣ ಚಂದದ ಸಾಲುಗಳು
ನಿಮಗೆಲ್ಲರಿಗೂ ಒಳಿತಾಗಲಿ. ಶುಭಾಶಯಗಳು

Badarinath Palavalli said...

ನನಗೆ ಇದೀಗ ಸಖತ್ ಹಿಡಿಸಿದ ಮೇಡಂ ಈ ಸಾಂದರ್ಭಿಕ ಕವನ.
ತವರು ಬಡತನದಲೇ ಸೊರಗಿದರು - ಅದು ಹೃದಯ ವೈಶಾಲ್ಯದ ಅರಮನೆ.

ನಿಮಗೂ Mahesh Siddalingappa ಅವರಿಗೂ ಹಬ್ಬದ ಶುಭಾಶಯಗಳು.

ಹಿರನಾಡ ಕನ್ನಡಿಗರ ಕನ್ನಡ ಪ್ರೀತಿಗೆ ಉಧೋ ಉಧೋ...

ಸಂಧ್ಯಾ ಶ್ರೀಧರ್ ಭಟ್ said...

wow... super sugunakka...

ಪದ್ಮಾ ಭಟ್ said...

thumbaaa channaagide.....ishta aaytu

ಪದ್ಮಾ ಭಟ್ said...

thumbaaaaa channaagide........ishta aaytu..