Sunday, September 29, 2013

ತನು ಕರಗದವರಲ್ಲಿ ...

ಚಿತ್ರ: ಅಂತರ್ಜಾಲ

"ಕಿತ್ತೂರು ಚೆನ್ನಮ್ಮ " ಚಿತ್ರದಲ್ಲಿ ಬರುವ ವಚನ - ಈ ವಚನ ಕೇಳಲು ಈ ಲಿಂಕ್ ಗೆ ಭೇಟಿ ನೀಡಿ

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು
ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು
ಭಾವ ಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು
ತ್ರಿಕರಣ ಶುದ್ಧವಿಲ್ಲದವರಲಿ ತಾಂಬೂಲವನೊಲ್ಲೆಯಯ್ಯಾ ನೀನು
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ..?
 -ಅಕ್ಕಮಹಾದೇವಿ
---------------
ಯಾವ ದೇಹ ನಮ್ರತೆಯಿಲ್ಲದೆ ಇರುವುದೋ..? ಅಂತಹವರಿಂದ ನೀನು ಅಭಿಷೇಕ ಮಾಡಿಸಿಕೊಳ್ಳಲು ಬಯಸುವುದಿಲ್ಲ.
ಕಠೋರತೆಯಿಂದಿರುವ ಮನಸ್ಸುಳ್ಳವರಿಂದ ನೀನೆಂದೂ ಪುಷ್ಪಗಳನ್ನೂ ಸ್ವೀಕರಿಸುವುದಿಲ್ಲ..!! 
ಯಾರು ಸಂತಸದಿಂದ ಸುಖಿ ನಾನು ಎಂದು ಭಾವಿಸುವುದಿಲ್ಲವೋ?? ಅವನಿಂದ ನೀನು ಅರಿಸಿನ ಚಂದನದಕ್ಕಿಯನೂ ಪಡೆಯಲಾರೆ...!!
ಯಾರು ತಿಳುವಳಿಕೆಯಿಲ್ಲದೆ ವರ್ತಿಸುತ್ತಾರೋ..? ಅಂತಹವರಿಂದ ಕರ್ಪೂರದ ಆರತಿಯನ್ನೂ ಸಹ ಮಾಡಿಸಿಕೊಳ್ಳುಲು ಒಪ್ಪದವ ನೀನು..!
ತನ್ನ ಅಂತರ್ಗತವನ್ನು ಶುದ್ಧವಾಗಿರಿಸಿಕೊಳ್ಳದವ ನೀಡುವ ಧೂಪವನ್ನು ನೀನು ನಿರಾಕರಿಸುವೆ...!!
ತನ್ನಲ್ಲಿರುವುದರಲ್ಲೇ ತೃಪ್ತಿಕಾಣದವನ ಕೈಯಲ್ಲಿ ನೈವೇದ್ಯವನ್ನೂ ಬೇಡ ಎನ್ನುವವನು ನೀನು.
ಕಾಯ,ವಾಚ,ಮನಸ್ಸು ಎಂಬ ಮೂರು ಅಂಗಗಳು  ಶುದ್ಧಿ ಇಲ್ಲದವನಲ್ಲಿ ಅಡಕೆ ವೀಳೆಯದೆಲೆಯನ್ನೆಂದೂ ತೆಗೆದುಕೊಳ್ಳುದವ ನೀನು.
ಕರುಣಾಮಯಿಗಳಲ್ಲದವರ ಹೃದಯದಲ್ಲಿ ನೀನೆಂದೂ ನೆಲೆಸಲು ಸಾಧ್ಯವಿಲ್ಲ.
ಇಂತಹ ಎಲ್ಲಾ ನಿರಾಕರಣೆಗಳಲ್ಲಿಯೂ ನನ್ನಲ್ಲಿ ಏನು ಕಂಡೆ, ನನ್ನಲ್ಲಿ ಏನಿದೆ ಎಂದು ನೀನು
ನನ್ನ ಕರಸ್ಥಲ, ನನ್ನ ಅಂಗೈಯಲ್ಲಿ ಬಂದು ನೆಲೆಸಿರುವೆ ದೇವಾ ಹೇಳು ಚೆನ್ನ ಮಲ್ಲಿಕಾರ್ಜುನ??.
---------
You never accept Ablution from those who are not in Humility.
You always refuse the offers of flowers from those who are not humble.
You always refuse the offering of sandalwood and saffron rice from those with rigid minds. 
You always refuse the offering of lamps or camphor from those whose eyes have not opened
by self-awareness.
You always refuse the offering of allspice (sandalwood) aroma from those emotionally who are not pure.
You always refuse the offering of food from those who refuse to change for better.
You never reside in those who don’t have a benevolent heart.
 How come you find in me that you choose to stay on my palm?
Oh Lord..!! Please express me..!!  Chenna Mallikarjuna .


ಸೂಚನೆ : ತಪ್ಪುಗಳಿದ್ದಲ್ಲಿ ತಿದ್ದಿ ಸರಿಪಡಿಸಿ.

9 comments:

Badarinath Palavalli said...

"ಯಾರು ಸಂತಸದಿಂದ ಸುಖಿ ನಾನು ಎಂದು ಭಾವಿಸುವುದಿಲ್ಲವೋ ಅವನಿಂದ ನೀನು ಆರತಿಯನ್ನೂ ಮಾಡಿಸಿಕೊಳ್ಳುವುದಿಲ್ಲ" ಎನ್ನುವ ಅಕ್ಕನ ಮಾತು ದೇವ ಭಿಕ್ಷೆಯಂತಿರುವ ಈ ಬದುಕಿನ ಸರಳ ಸ್ವೀಕಾರ. ಒಳ್ಳೆಯ ವಚನ ನೆನಪಿಸಿದ ನಿಮಗೆ ಶರಣು.

sunaath said...

ನಿಜವಾದ ಅರ್ಚನೆ ಏನೆಂದು ಅಕ್ಕ ಹೇಳಿದ್ದಾಳೆ. ಸುಂದರವಾದ ವಚನ. ನಿಮ್ಮ ಅನುವಾದ ಸಹ ಸುಂದರವಾಗಿದೆ. ಲಿಂಕ್ ಕೊಟ್ಟದ್ದಕ್ಕಾಗಿ ಧನ್ಯವಾದಗಳು.

Swarna said...

ನೀನೊಂದು ಸಾಗರ
ನಾನದರ ಬಿಂದು ಮಾತ್ರ
ಎಂಬುದು ಭಕ್ತಿ ಮತ್ತು ಪ್ರೇಮ ಎರಡರ ಸಂಗಮ
ಅಕ್ಕನಿಗಿಂತ ಇದನ್ನರಿತವರು ಬೇಕೇ ?
“ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ.”
ಸುಂದರ ವಚನವನ್ನು ಮತ್ತೆ ನೆನಪಿಸಿದ್ದಕ್ಕಾಗಿ ವಂದನೆಗಳು

ಚುಕ್ಕಿಚಿತ್ತಾರ said...

ತುಂಬಾ ಚೆನ್ನಾಗಿ ಅರ್ಥೈಸಿದ್ದೀರಿ ಸುಗುಣ..


ಕಿತೂರು ಚನ್ನಮ್ಮ ಸಿನಿಮಾದಲ್ಲಿ ಈ ವಚನ ಕೇಳ್ತಾ ಇದ್ರೆ ಅದರಲ್ಲೇ ಮುಳುಗಿ ಹೋಗ್ತೀವಿ.. ನೂರಾರು ಸಲ ಕೇಳಿದ್ದೀನಿ... ಥ್ಯಾಂಕ್ಸ್ ಥ್ಯಾಂಕ್ಸ್ ...

Subrahmanya said...

ಮನಸ್ಸು ರಿಫ್ರೆಶ್ ಆಯ್ತು.

Pradeep Rao said...

tumba olle vacahna.. thanks for the expalantion..

Ittigecement said...

ವಚನ ಸಾಹಿತ್ಯವನ್ನು ನಮ್ಮ ಮೇಷ್ಟ್ರು ತುಂಬಾ ಚೆನ್ನಾಗಿ ವಿವರಿಸಿ ಹೇಳುತ್ತಿದ್ದರು..

ಎಷ್ಟು ಸರಳವಾಗಿದೆ..!
ಹಾಗಾಗಿಯೆ ಜನಮನದಲ್ಲಿ ಇಂದಿಗೂ ಇವೆ...

ಮತ್ತೊಮ್ಮೆ ಆ ಎಲ್ಲ ವಚನಗಳನ್ನು ಓದುವ ಆಸೆ ಆಯ್ತು.. ಧನ್ಯವಾದಗಳು..

Anonymous said...

vachana sahitya manava janangadhalli kanabaruva nyunathegalannu vistharisuvudhashte alladhe... aa nyunathegalannu yava margadhalli padedhukollabeku embudhannu spashti karisuttade. Akkana ee vachana kevala bahirangadha nyunathe alladhe antharangadha nyunatheyannu pariharisuttade

KalavathiMadhusudan said...

uttamavada vachanada saralavaada vivaranegaagi dhanyavaadagalu.