ಇತ್ತೀಚೆಗೆ ಕನ್ನಡ ಸಂಪದದಲ್ಲಿ ಬಂದಿದ್ದ ದ.ರಾ ಬೇಂದ್ರೆಯವರ "ನಾನು ಬಡವಿ ಆತ ಬಡವ" ಸಾಹಿತ್ಯಕ್ಕೆ ಸೂಕ್ತವಾಗಿ ಈ ಚಿತ್ರ ಬಳಸಿದ್ದರು.. ಆ ಮಾಹಿತಿಯನ್ನು ಸ್ನೇಹಿತೆಯೊಬ್ಬರು ಮುಖಪುಟದ ಗೋಡೆಯ ಮೇಲೆ ಹಂಚಿಕೊಂಡಿದ್ದರು, ಆಗ ನನ್ನನ್ನು ಈ ಜೋಡಿಗಳ ಚಿತ್ರ ಹೆಚ್ಚು ಆಕರ್ಷಿಸಿ ಚಿತ್ರ ಬಿಡಿಸುವಂತಾಯಿತು. ಕೊನೆಗೆ ಚಿತ್ರವೊಂದೇ ಇದ್ದರೆ ಸಾಕೇ ಸಾಲುಗಳನು ಗೀಚಿಬಿಟ್ಟೆ.. ಸೂಕ್ತವಾಗಿದೆಯೋ ಇಲ್ಲವೋ ಗೊತ್ತಿಲ್ಲ ಆದರು ನನ್ನ ಭಾವಗಳ ಸಾಲು ನಿಮ್ಮೊಂದಿಗೆ
ಬಿಡಿಸಿದ್ದು-ಗೀಚಿದ್ದು.. ನಾನೇ..!!
ನಲ್ಲೆ, ಮೌನದ ಮುಂಗುರುಳು
ನಿನ್ನ ನಯನಗಳ ತಬ್ಬಿರಲು
ನನ್ನಾಸರೆಯ ಹೆಗಲು ಹುಡುಕುತಿದೆ
ಆ ಮಿಂಚು ಕಣ್ ಗಳ ಹೊಂಬೆಳಕು
ನಲ್ಲೆ, ನಿನ್ನ ಸ್ಪರ್ಶದ ಒನಪು
ಮಿರ ಮಿರ ಮಿರುಗಿ
ಎನ್ನ ಹೃದಯದೊಳು
ಮೂಡಿದೆ ಒಲವ ಹೊಳಪು
ಬಾಹು ಬಂಧನದ ಸೆರೆ
ನೀ ಬಯಸಿ ಬಂದರೆ
ಒಂದು ನವಿರು ಚುಂಬನ
ನನ್ನ ಸೆಳೆವ ಈ ಕಿರುನೋಟಕೆ