ಡೈಸಿ ಬೆಳೆದು ನಿಂತಿಹಳು
ಮರುಧರೆಯ ಒಡಲೊಳು
ಯಾರ ಬಿತ್ತನೆಯಿಲ್ಲ
ನಿಸರ್ಗ ಕೃಪೆಗೆ
ಬೆಳೆದು ನಗುತಿಹಳು
ಬಯಸಿ ತಂದನವನು
ಗುಲಾಬಿಯೊಂದೇ ಪ್ರೇವವಲ್ಲ ಗೆಳತಿ
ಭಾವ ತುಂಬಿ ನೀಡುವ
ಹೂ ಯಾವುದಾದರೂ
ಪ್ರೀತಿ ಉಸಿರು ನನ್ನೊಡತಿ
ಎಂಬವನ ಒಲುಮೆ
ತುಂಬಿ ನಗುತಿಹುದು
ನನ್ನ ಮನೆ-ಮನದ ಹೂದಾನಿಯಲಿ
ನನ್ನೂರ ರಸ್ತೆ ಬದಿ
ಹಾದು ಹೋದರೆ
ನನ್ನೊಳಗೊಂದು ಆಶ್ಚರ್ಯ
ತನ್ ತಾನೆ ಬೆಳೆವ
ಈ ಹೂಗಳ ನಾಟಿ ಮಾಡಿ
ಕಳೆ ಕಿತ್ತವರಾರು..?
ಮರುಳುಗಾಡಲೂ
ಹಸಿರ ಗರ್ಭಕೆ ಪ್ರಸವವುಂಟೆ..??
ಡೈಸಿ, ಲ್ಯಾವೆಂಡರ್ ಹೆಸರಿನ
ಕೂಸುಗಳು ಈ ಮಾಸದಲಿ
ಬಂದು ಹೋಗುವವರ
ನೋಡಿ ಮರುಳಾಗದವರುಂಟೆ..??
ಈ ಹೂಗಳು ಮರುಭೂಮಿಯಲ್ಲಿ ಬೆಳೆದು ನಿಂತಿವೆ.. ಕಣ್ಣು ಹಾಯ್ದಡೆಲ್ಲಾ ಈ ಹೂಗಳೇ ಕಾಣುತಿವೆ.
3 comments:
ಡೈಸಿ ಲ್ಯಾವೆಂಡರ್ ಹಾಗು ಕವನ ಸಹ ತುಂಬಾ ಚೆನ್ನಾಗಿದೆ! ಇಷ್ಟವಾಯ್ತು!
ಮರಳ ಹೂಗಳಿಗೆ ಹಾಗು ಹೂ-ಕವನಕ್ಕೆ ಮನ ಮರುಳಾಯಿತು.
ಕವನ ಬಲು ಇಷ್ಟವಾಗಲು 2 ಕಾರಣಗಳು:
1. ಹೇಳ ಹೆಸರಿಲ್ಲದೆ ಅರಳು ಇಂತಹ ಅದೆಷ್ಟೋ ಹೂವುಗಳೂ, ಹರಿ ಪಾದಕೂ ಎಲ್ಲದರ, ನಾರಿ ಮುಡಿಗೂ ಏರದೆ ಬಾಡಿ ಹೋಗುವವು ಇಳಿ ಸಂಜೆಯಲ್ಲಿ. ಅಂತಹ ಅನಾಮಿಕ ಬಾಳುಮೆಗೆ ನಿಮ್ಮ ಗುರುತಿಸುವ ಮೃದು ಮನಸಿಗೆ ಶರಣು.
2. ಪ್ರೇಮಿಗಳ ಪಾಲಿಗೆ ರೋಜಾ, ದಂಪತಿಗಳಿಗೆ ಮಾರು ಮಲ್ಲಿಗೆ ದಂಡು ಇವಕ್ಕೆ ಹೊರತಾಗಿ ಹಿತ್ತಲ ಹೂಗಳಿಗೂ ಸಲ್ಲಬೇಕು ನ್ಯಾಯವಾದ ಬೆಲೆ ಎನ್ನುವ ನಿಮ್ಮ ಮಾತಿನಿಂದ.
ಚಿತ್ರಗಳೂ ಚೆನ್ನಾಗಿವೆ.
Post a Comment