Tuesday, January 21, 2014

ಬಂಧನ


ಅವನೊಳಗೆ ಬಂಧಿಯಾಗುವ ಇಚ್ಛೆ
ಬಲವಾದ ಬಂಧನದ ಬಿಸಿಯೂ ಹಿತ
ಸ್ವರ್ಗ ಕಾಣ್ಪೆನೆಂಬ ತುಡಿತದ ಈ ಮನ
ಹುಡುಕುತಿದೆ ಬಾಹುಗಳ ಸ್ಪಂದನ

ಆಯ್ಕೆಯ ಸುರಕ್ಷೆ ನಂಬಿಕೆಯೊಳಿರಲು
ಬಿಗುಮಾನದ ಅಂಚು ದಾಟಿರುವೆ
ಪಲ್ಲವಿಗಳ ಜೋಡಿಸಿ ಹಾಡು ಹೆಣೆದು
ರಾಗಾಲಾಪದಿ ತೋಳುಗಳ ಸಂಧಿಸುವೆ

ನಿಶ್ಚಿತ ಬದುಕು ಅವನೊಟ್ಟಿಗೆ
ಎಂದು ಬರೆದ ಅಕ್ಷತೆಗಳ ದೀಕ್ಷೆ
ಬಯಕೆ ಬಳ್ಳಿಯಲಿ ತೇಲುವ ಸಮೀಕ್ಷೆ
ಪ್ರಫುಲ್ಲತೆಯಲಿ ಹಾರೈಸಿತು ಮನದ ಒಟ್ಟಿಗೆ 

ಬಂಧನ ಅದು ಪ್ರೀತಿ ಸಂಕೋಲೆ
ಬದುಕಿರುವವರೆಗೂ ಸ್ವರ್ಣಗೃಹ
ಆಪ್ತತೆ ಮಿಂಚು ಬೆಳಕಿನ ನೆಲೆ
ಅವನ ಹೃದಯ ಒಲವಿನ ಕಾರಾಗೃಹ

10 comments:

Unknown said...

ಬಂಧನ ಅದು ಪ್ರೀತಿ ಸಂಕೋಲೆ
ಬದುಕಿರುವವರೆಗೂ ಸ್ವರ್ಣಗೃಹ (y) (y) (y)

ಜೋಡಿ ಹೆಜ್ಜೆಯ ಬಾಳ ಯಾನ ಸಾಗುತಿರಲಿ ಹೀಗೆ ನೂರ್ಕಾಲ....

ಮೌನರಾಗ said...

ಸುಗುಣಾಕ್ಕ ..
ಮೃದು ಮನಸ್ಸಿನ ಮೃದು ಆಲಾಪನೆ ತುಂಬಾ ಅನ್ನುವಷ್ಟು ಇಷ್ಟವಾಯಿತು..

ಶ್ರೀವತ್ಸ ಕಂಚೀಮನೆ. said...

ಒಲವಿನ ಕಾರಾಗೃಹದೆಡೆಗಿನ ಒಲವು ನವಿರಾಗಿ ಮನವ ತಾಕಿತು...
ಚಂದದ ಸಾಲುಗಳು...

sunaath said...

ಈ ಬಂಧನ ನಿಮಗೆ ಚಿರಕಾಲವಿರಲಿ!

Badarinath Palavalli said...

ಒಲವಿನ ಕಾರಾಗೃಹ ಒಳ್ಳೆಯ ಕಲ್ಪನೆ ಮೇಡಂ. ಹೀಗೇ ಇದ್ದು ಬಿಡಿ ಮಾದರಿಯಾಗಿ.

Pradeep Rao said...

ಪ್ರೀತಿಯ ಬಂಧನದಲ್ಲೂ ಸುಖವ ಕಾಣುವ ಮಧುರ ಸಾಲುಗಳ ಕವನ ಬಹಳ ಹಿಡಿಸಿತು.

ಚಿನ್ಮಯ ಭಟ್ said...

:) )

ಪದ್ಮಾ ಭಟ್ said...

ತುಂಬಾನೇ ಇಷ್ಟವಾಯ್ತು :)

Unknown said...

chanda chanda...

Unknown said...

chanda chanda